For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಲೇಬೇಡಿ!

|

ನೀವು ಏನು ತಿನ್ನುತ್ತಿದ್ದೀರಿ ಎಂಬುದು ಎಷ್ಟು ಮುಖ್ಯವೋ, ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುದೂ ಸಹ ಅಷ್ಟೇ ಮುಖ್ಯವಾಗಿದೆ. ಪೌಷ್ಠಿಕಾಂಶವೆಂದು ಪರಿಗಣಿಸಲ್ಪಟ್ಟ ಅನೇಕ ಆಹಾರ ಪದಾರ್ಥಗಳನ್ನು ನೀವು ತಪ್ಪಾದ ಸಮಯದಲ್ಲಿ ಸೇವಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಮಲಗುವ ಸ್ವಲ್ಪ ಮುಂಚೆ ಕೆಲವೊಂದು ಆಹಾರಗಳನ್ನು ಸೇವಿಸವುದು ನಿಮ್ಮ ನಿದ್ದೆಯನ್ನು ಹಾಳುಮಾಡುವುದಲ್ಲದೇ, ಗ್ಯಾಸ್ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಅಂತಹ ಆಹಾರಗಳನ್ನು ದೂರವಿಡುವುದು ಉತ್ತಮ. ಹಾಗಾದರೆ ಆ ಆಹಾರಗಳಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ರಾತ್ರಿ ನೀವು ತಿನ್ನುವುದನ್ನು ತಪ್ಪಿಸಬೇಕಾದ ಕೆಲವು ಆಹಾರ ಪದಾರ್ಥಗಳನ್ನು ಕೆಳಗೆ ನೀಡಲಾಗಿದೆ:

ನೀರಿನಾಂಶ ಹೆಚ್ಚಿರುವ ಆಹಾರಗಳು:

ನೀರಿನಾಂಶ ಹೆಚ್ಚಿರುವ ಆಹಾರಗಳು:

ಕಲ್ಲಂಗಡಿ ಮತ್ತು ಸೌತೆಕಾಯಿಗಳಂತಹ ನೀರಿನಾಂಶ ಹೆಚ್ಚಿರುವ ಆಹಾರವನ್ನು ತಪ್ಪಿಸಲು ಪ್ರಯತ್ನಿಸಿ. ಈ ಆಹಾರವನ್ನು ಮಲಗುವ ಮೊದಲು ತಿನ್ನುವುದರಿಂದ ಎಂದರೆ ನಿಮ್ಮ ಮೂತ್ರಕೋಶ ತುಂಬಿಕೊಳ್ಳುತ್ತದೆ. ಇದರಿಂದಾಗಿ ನೀವು ಮಧ್ಯರಾತ್ರಿಯಲ್ಲಿ ಟಾಯ್ಲೆಟ್ ಗೆ ಹೋಗಲು ಎದ್ದೇಳಬೇಕಾಗುತ್ತದೆ. ಇದು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಮಸಾಲೆಯುಕ್ತ ಆಹಾರಗಳು:

ಮಸಾಲೆಯುಕ್ತ ಆಹಾರಗಳು:

ಹಾಸಿಗೆಗೆ ಹೋಗುವ ಮೊದಲು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಅಜೀರ್ಣ ಉಂಟಾಗುತ್ತದೆ ಜೊತೆಗೆ ಎದೆಯುರಿಯೂ ಸಂಭವಿಸಬಹುದು. ಮಸಾಲೆಯುಕ್ತ ಆಹಾರಗಳಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು.

ಬಾಳೆಹಣ್ಣುಗಳು:

ಬಾಳೆಹಣ್ಣುಗಳು:

ನಿಮ್ಮ ಶಕ್ತಿಯನ್ನು ಹೆಚ್ಚಿಸಲು ದೈನಂದಿನ ಜೀವನ ಶುರುವಾಗುವ ಮೊದಲು ಬಾಳೆಹಣ್ಣನ್ನು ಸೇವಿಸಿ ಆದರೆ ರಾತ್ರಿಯಲ್ಲಿ ತಪ್ಪಿಸಿ. ಹೆಚ್ಚಿನ ಪೊಟ್ಯಾಸಿಯಮ್ ಹೊಂದಿರುವ ಬಾಳೆಹಣ್ಣುಗಳು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಊಟಕ್ಕೆ ಹಣ್ಣು ತಿನ್ನುವುದು, ಅಥವಾ ಊಟದ ನಂತರ ಸೇವಿಸುವುದರಿಂದ ಲೋಳೆಯ ರಚನೆ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.

ಸೇಬುಗಳು:

ಸೇಬುಗಳು:

ಸೇಬುಗಳಲ್ಲಿ ಕಂಡುಬರುವ ಒಂದು ರೀತಿಯ ಫೈಬರ್ ಆದ ಪೆಕ್ಟಿನ್ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ರಾತ್ರಿಯಲ್ಲಿ ಜೀರ್ಣವಾಗುವುದು ಕಷ್ಟ ಮತ್ತು ಆದ್ದರಿಂದ ಇದು ಗ್ಯಾಸ್ ಟ್ರಬಲ್ ಗೆ ಕಾರಣವಾಗಬಹುದು. ಪೌಷ್ಠಿಕಾಂಶ ತಜ್ಞರು ನಿಮ್ಮ ರಾತ್ರಿ ಊಟದಲ್ಲಿ ಹಣ್ಣುಗಳನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸುವಂತೆ ಶಿಫಾರಸ್ಸು ಮಾಡುತ್ತಾರೆ.

ಕ್ರೂಸಿಫೆರಸ್ ತರಕಾರಿಗಳು:

ಕ್ರೂಸಿಫೆರಸ್ ತರಕಾರಿಗಳು:

ಕ್ರೂಸಿಫೆರಸ್ ತರಕಾರಿಗಳಾದ ಕೋಸು ಮತ್ತು ಹೂಕೋಸು ಜೀವಸತ್ವಗಳಿಂದ ತುಂಬಿರುತ್ತವೆ, ಆದರೆ ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗದ ನಾರಿನಂಶವಿದೆ, ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ತರಕಾರಿಗಳನ್ನು ಮಲಗುವ ಮೊದಲು ತಿನ್ನುವುದು, ಅಂದರೆ ನಿಮ್ಮ ದೇಹವು ನಿದ್ದೆ ಮಾಡುವಾಗ ಅವುಗಳನ್ನು ಜೀರ್ಣಿಸಿಕೊಳ್ಳಲು ಕೆಲಸ ಮಾಡಬೇಕಾಗಬಹುದು. ಇದು ನಿಮಗೆ ಉತ್ತಮ ನಿದ್ರೆ ಬರದಂತೆ ಮಾಡುತ್ತದೆ.

ನಟ್ಸ:

ನಟ್ಸ:

ಬಾದಾಮಿ, ಪಿಸ್ತಾ ಮತ್ತು ವಾಲ್ನಟ್ಸ್ ನಂತಹ ಬೀಜಗಳು ನಿಮ್ಮ ರಕ್ತದೊತ್ತಡವನ್ನು ಸಾಮಾನ್ಯವಾಗಿಸಲು ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಆದರೆ ಅವುಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳು ಅಧಿಕವಾಗಿರುವುದರಿಂದ, ಈ ಪೌಷ್ಠಿಕ ಆಹಾರ ಪದಾರ್ಥಗಳನ್ನು ಊಟದ ನಂತರ ಸೇವಿಸಿದರೆ ತೂಕ ಹೆಚ್ಚಾಗಬಹುದು.

ಡಾರ್ಕ್ ಚಾಕೊಲೇಟ್:

ಡಾರ್ಕ್ ಚಾಕೊಲೇಟ್:

ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ಡಾರ್ಕ್ ಚಾಕೊಲೇಟ್ ವಯಸ್ಸಾದಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಹೃದ್ರೋಗಗಳ ಅಪಾಯವನ್ನೂ ಸಹ ಹೊಂದಿದೆ. ಆದರೆ ಇದು ಕೆಫೀನ್ ಮತ್ತು ಅಮೈನೊ ಆಮ್ಲವನ್ನೂ ಸಹ ಒಳಗೊಂಡಿದೆ. ಆದ್ದರಿಂದ, ಮಲಗುವ ಮುನ್ನ ಡಾರ್ಕ್ ಚಾಕೊಲೇಟ್ ತಿನ್ನುವುದು ನಿಮ್ಮನ್ನು ರಾತ್ರಿಯಲ್ಲಿ ಎಚ್ಚರವಾಗಿರುವಂತೆ ಮಾಡಬಹುದು.

English summary

List of Food Items You Should Avoid Eating at Night in Kannada

Here we talking about List of Food Items You Should Avoid Eating at Night in Kannada, read on
Story first published: Thursday, April 29, 2021, 17:42 [IST]
X
Desktop Bottom Promotion