For Quick Alerts
ALLOW NOTIFICATIONS  
For Daily Alerts

ಅವಧಿ ಮುಗಿದ ಮೊಟ್ಟೆ ಸೇವಿಸಬಹುದೇ? ಇಲ್ಲಿದೆ ಉತ್ತರ

|

ಕೆಲವೊಮ್ಮೆ ನಾವು ಆಹಾರ ಪದಾರ್ಥಗಳ ಅವಧಿ ನೋಡದೇ ಖರೀದಿಸಿ ಬಿಡುತ್ತೇವೆ. ಖರೀದಿಸಿದ ಮೇಲೆ ತಿಳಿಯುತ್ತೆ ಅದರ ಅವಧೀ ಮುಗಿಯುವ ದಿನಾಂಕವು ಹತ್ತಿರದಲ್ಲಿದೆ ಎಂದು. ಆಗ ಮನಸ್ಸಿಗೆ ಬರುವ ಮೊದಲ ಪ್ರಶ್ನೆ, ನಾನು ಅದನ್ನು ಬಳಸಬೇಕೇ ಅಥವಾ ಎಸೆಯಬೇಕೇ ಎಂಬುದು.

ಕೆಲವು ನೈಸರ್ಗಿಕ ಆಹಾರ ಪದಾರ್ಥಗಳು ಬಳಕೆಗೆ ಯೋಗ್ಯಗಿರುತ್ತವೆ. ಆದರೆ ಯಾವಾಗಲೂ ಅವಧಿ ಮೀರಿದ ಆಹಾರವನ್ನು ಬಳಸುವುದನ್ನು ತಪ್ಪಿಸಲು ಸೂಚಿಸಲಾಗುತ್ತದೆ. ನಾವಿಂದು ಹೇಳಲು ಹೊರಟಿರುವ ಅಂತಹ ಒಂದು ಆಹಾರ ಪದಾರ್ಥವೆಂದರೆ ಮೊಟ್ಟೆ. ಒಂದು ವೇಳೆ ಮೊಟ್ಟೆಯ ಪೆಟ್ಟಿಗೆಯ ಮೇಲೆ ಅವಧಿ ಮುಗಿದಿದೆ ಎಂದು ತೋರಿಸಿದರೆ, ಹೆಚ್ಚು ಚಿಂತಿಸಬೇಕಾಗಿಲ್ಲ. ಆ ದಿನಾಂಕದ ನಿಜವಾದ ಅರ್ಥವೇನು ಎಂದು ತಿಳಿಯಲು ಈ ಕೆಳಗೆ ನೋಡಿ.

ಮೊಟ್ಟೆಗಳ ಡಬ್ಬದಲ್ಲಿರುವ ಮುಕ್ತಾಯ ದಿನಾಂಕ ಎಂದರೇನು?:

ಮೊಟ್ಟೆಗಳ ಡಬ್ಬದಲ್ಲಿರುವ ಮುಕ್ತಾಯ ದಿನಾಂಕ ಎಂದರೇನು?:

ಮೊದಲನೆಯದಾಗಿ, ಮೊಟ್ಟೆಯ ಡಬ್ಬದಲ್ಲಿ ನಮೂದಿಸಿದ ದಿನಾಂಕವು ಮಾರಾಟ ಮಾಡುವ ಅವಧಿ. ಅಂದರೆ ಕಿರಾಣಿ ಅಂಗಡಿಯಿಂದ ಡಬ್ಬಿಯನ್ನು ಮಾರಾಟ ಮಾಡಬೇಕಾದ ದಿನ. ಸುರಕ್ಷತೆಗಿಂತ ಗುಣಮಟ್ಟ ಮತ್ತು ತಾಜಾತನವನ್ನು ನಿಯಂತ್ರಿಸುವುದು ಈ ದಿನಾಂಕದ ಹಿಂದಿನ ಆಲೋಚನೆ. ಪೆಟ್ಟಿಗೆಯಲ್ಲಿ ಉಲ್ಲೇಖಿಸಲಾದ ಇತರ ದಿನಾಂಕವು ಮೊಟ್ಟೆಗಳನ್ನು ಪೆಟ್ಟಿಗೆಗೆ ಹಾಕಿದ ದಿನಾಂಕದ ಬಗ್ಗೆ ಹೇಳುತ್ತದೆ. ಮತ್ತೆ, ಈ ದಿನಾಂಕವು ತಾಜಾತನವನ್ನು ಪರಿಶೀಲಿಸುವುದು ಮತ್ತು ಸುರಕ್ಷತೆಗೆ ಹೆಚ್ಚಿನ ಸಂಬಂಧವನ್ನು ಹೊಂದಿಲ್ಲ.

ಮೊಟ್ಟೆಗಳು ತಾಜಾವಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ?:

ಮೊಟ್ಟೆಗಳು ತಾಜಾವಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ?:

ಇದನ್ನು ಫ್ಲೋಟ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು, ಒಂದು ಗ್ಲಾಸ್ ನಲ್ಲಿ ನೀರು ತುಂಬಿಸಿ ಮತ್ತು ಅದರಲ್ಲಿ ಮೊಟ್ಟೆಯನ್ನು ಬಿಡಿ. ಮೊಟ್ಟೆ ತೇಲುತ್ತಿದ್ದರೆ, ಅದು ಕೊಳೆತು ಹೋಗಿದೆ ಎಂದರ್ಥ. ಆಗ ನೀವು ಅದನ್ನು ಬಳಸುವುದನ್ನು ತಪ್ಪಿಸಬೇಕು.

ನೀವು ಅಂತಹ ಮೊಟ್ಟೆಗಳನ್ನು ಬಳಸಬಹುದೇ?:

ನೀವು ಅಂತಹ ಮೊಟ್ಟೆಗಳನ್ನು ಬಳಸಬಹುದೇ?:

ಫ್ಲೋಟ್ ಪರೀಕ್ಷೆಯು ಮೊಟ್ಟೆಯು ಬಳಕೆಗೆ ಯೋಗ್ಯವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ, ಆದರೆ ಮಾರಾಟ ದಿನಾಂಕಕ್ಕಿಂತ ಮೂರು ಮತ್ತು ಐದು ವಾರಗಳ ನಡುವೆ ಮೊಟ್ಟೆಗಳು ತಾಜಾವಾ ಸಂಭವಿಸುವುದಿಲ್ಲ.

English summary

Is It Safe to Eat Expired Eggs? Explained in Kannada

Here we talking about Is It Safe to Eat Expired Eggs? Explained in Kannada, read on
X
Desktop Bottom Promotion