For Quick Alerts
ALLOW NOTIFICATIONS  
For Daily Alerts

Coriander Seeds : ಕೊತ್ತಂಬರಿ ಬೀಜದ ಕಷಾಯ ಈ ಕಾಯಿಲೆಗಳಿಗೆ ರಾಮಬಾಣ

|

ಹಸಿರು ಕೊತ್ತುಂಬರಿ ಸೊಪ್ಪು ಮತ್ತು ಬೀಜಗಳು ಆಹಾರದ ರುಚಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಕೊತ್ತುಂಬರಿ ಸೊಪ್ಪಿನಿಂದ ಆಹಾರವನ್ನು ಅಲಂಕರಿಸುವುದರಿಂದಾಗಿ ಆಹಾರದ ಸೌಂದರ್ಯವೂ ಕೂಡ ಅಧಿಕವಾಗುತ್ತದೆ. ಆದರೆ ಇದಿಷ್ಟೇ ಅಲ್ಲ, ಕೇವಲ ಸೌಂದರ್ಯ ಹೆಚ್ಚಿಸುವುದಕ್ಕೋ , ಆಹಾರದ ರುಚಿಯನ್ನು ಅಧಿಕಗೊಳಿಸುವುದಕ್ಕೆ ಮಾತ್ರವಲ್ಲದೆ ಕೊತ್ತುಂಬರಿಯ ನೀರಿನಿಂದ ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳುವುದಕ್ಕೂ ಕೂಡ ಇದು ಪ್ರಯೋಜನಕಾರಿ ಎಂಬ ಸಂಗತಿ ನಿಮಗೆ ತಿಳಿದಿದೆಯಾ?

coriander

ಭಾರತೀಯರು ತಮ್ಮ ಅಡುಗೆ ಮನೆಯಲ್ಲಿ ಕೊತ್ತುಂಬರಿ ಸೊಪ್ಪನ್ನು ಅನೇಕ ವರ್ಷಗಳಿಂದ ಬಳಸುತ್ತಿದ್ದು ಮಧುಮೇಹಿದಂತಹ ಕಾಯಿಲೆಯ ವಿರುದ್ಧ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಪೊಟಾಷಿಯಂ, ಕ್ಯಾಲ್ಸಿಯಂ,ವಿಟಮಿನ್ ಸಿ,ಮೆಗ್ನೇಷಿಯಂ ಸೇರಿದಂತೆ ಅನೇಕ ಪೋಷಕಾಂಶವನ್ನು ಕೊತ್ತುಂಬರಿ ನೀರು ಹೊಂದಿರುತ್ತದೆ. ಇವೆಲ್ಲವೂ ಅನೇಕ ರೋಗಗಳನ್ನು ನಿಮ್ಮಿಂದ ದೂರವಿಡುತ್ತದೆ. ಕೊತ್ತುಂಬರಿ ನೀರಿನಿಂದ ಅನೇಕ ರೀತಿಯ ಪ್ರಯೋಜನಗಳಿದ್ದು ಅವುಗಳಲ್ಲಿ ಕೆಲವನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
ಮಧುಮೇಹಕ್ಕೆ ಔಷಧಿ

ಮಧುಮೇಹಕ್ಕೆ ಔಷಧಿ

ಕೊತ್ತುಂಬರಿಯನ್ನು ಮಧುಮೇಹ ನಿವಾರಿಣಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಮಧುಮೇಹವನ್ನು ಹೋಗಲಾಡಿಸುವ ಸಾಮರ್ಥ್ಯವಿದೆ. ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಕೊತ್ತುಂಬರಿ ನೀರು ಕುಡಿಯುವ ಮೂಲಕ ನಿಯಂತ್ರಿಸಿಕೊಳ್ಳಬಹುದು.

ಕೊತ್ತುಂಬರಿ ಸೊಪ್ಪು ಅಥವಾ ಬೀಜವನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಕುಡಿಯರಿ. ಕೊತ್ತಂಬರಿಯು ಆಂಟಿ ಆಕ್ಸಿಡೆಂಟ್ ಆಗಿದ್ದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಸೈನ್ಸ್ ನಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ. ಕೊತ್ತಂಬರಿಯಲ್ಲಿ ಎಥೆನಾಲ್ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಸಿರಮ್ ಗ್ಲೋಕೋಸ್ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ನಂಬಲಾಗಿದೆ.

ತೂಕವನ್ನು ಕಡಿಮೆ ಮಾಡಲು ಸಹಕಾರಿ

ತೂಕವನ್ನು ಕಡಿಮೆ ಮಾಡಲು ಸಹಕಾರಿ

ತೂಕ ಇಳಿಸಿಕೊಳ್ಳುವುದಕ್ಕೆ ನೀವು ಬಯಸುತ್ತಿದ್ದರೆ ಕೊತ್ತುಂಬರಿ ಬೀಜವನ್ನು ಬಳಸುವುದರಿಂದ ಉಪಯೋಗವಾಗುತ್ತದೆ. ಇದಕ್ಕಾಗಿ ನೀವು ಮೂರು ಚಮಚ ಕೊತ್ತುಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ನಂತರ ಫಿಲ್ಟರ್ ಮಾಡಿ ನಂತರ ಸೇವಿಸಿ. ಹೀಗೆ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಜೀರ್ಣಕ್ರಿಯೆ ಸುಧಾರಿಸುತ್ತದೆ

ಹಸಿರು ಕೊತ್ತುಂಬರಿ ಸೊಪ್ಪು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಜ್ಜಿಗೆಯೊಂದಿಗೆ ಬೆರೆಸಿದ ಕೊತ್ತುಂಬರಿಯ ತಾಜಾ ಎಲೆಗಳನ್ನು ಕುಡಿಯುವುದರಿಂದಾಗಿ ಅಜೀರ್ಣ,ವಾಕರಿಕೆ,ಭೇದಿ ಮತ್ತು ಕೊಲೈಟಿಸ್ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು.

ರಕ್ತಸ್ರಾವಕ್ಕೆ ಔಷಧಿ

ರಕ್ತಸ್ರಾವಕ್ಕೆ ಔಷಧಿ

ಹಸಿರಾಗಿರುವ ತಾಜಾ ಕೊತ್ತಂಬರಿಯೊಂದಿಗೆ ಒಂದು ಪಿಂಚ್ ಕರ್ಪೂರವನ್ನು ಪುಡಿ ಮಾಡಿ ಸೇರಿಸಿ ರಸವನ್ನು ಜರಡಿ ಹಿಡಿಯಿರಿ. ನಂತರ ಈ ರಸದ ಎರಡು ಹನಿಗಳನ್ನು ಮೂಗಿನ ಎರಡೂ ಬದಿಗಳಲ್ಲಿ ಮತ್ತು ಹಣೆಯ ಮೇಲೆ ಲಘುವಾಗಿ ಹಚ್ಚಿಕೊಳ್ಳುವ ಮೂಲಕ ಮೂಗಿನಿಂದ ಸುರಿಯುವ ರಕ್ತಸ್ರಾವವನ್ನು ತಡೆಯಬಹುದು.

ಮುಟ್ಟಿನ ಹೆಚ್ಚಿನ ರಕ್ತಸ್ರಾವವನ್ನು ತಡೆಗಟ್ಟಬಹುದು

ಮುಟ್ಟಿನ ಹೆಚ್ಚಿನ ರಕ್ತಸ್ರಾವವನ್ನು ತಡೆಗಟ್ಟಬಹುದು

ಮಹಿಳೆಯರ ತಿಂಗಳ ಸಮಸ್ಯೆಯಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ಮುಟ್ಟಿನಲ್ಲಿ ಅಧಿಕವಾಗಿ ರಕ್ತಸ್ರಾವವಾಗುತ್ತಿದ್ದಲ್ಲಿ 6 ಗ್ರಾಮ್ ನಷ್ಟು ದನಿಯಾ ಬೀಜವನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ ಸಕ್ಕರೆ ಸೇರಿಸಿ ಕುಡಿಯುವುದರಿಂದಾಗಿ ಪ್ರಯೋಜನವಾಗುತ್ತದೆ.

English summary

Health Benefits of Coriander Seeds

Being one of the common spice used in all the Indian curries is coriander. here we are going to tell you about coriander seeds health benefits. Read more
X
Desktop Bottom Promotion