For Quick Alerts
ALLOW NOTIFICATIONS  
For Daily Alerts

ಮಳೆಗಾಲ: ಆರೋಗ್ಯಕ್ಕಾಗಿ ಏನು ಮಾಡಬೇಕು, ಏನು ಮಾಡಬಾರದು?

|

ಇದೀಗ ಅಶ್ಲೇಷ ಮಳೆ (ಆಗಸ್ಟ್‌ 2ರಿಂದ ಆಗಸ್ಟ್‌ 15ರವರೆಗೆ), ಅಶ್ಲೇಷ ಮಳೆ ಈಸಲಾರದ ಹೊಳೆ ಎಂಬ ಗಾದೆ ಮಾತಿದೆ. ಈ ಸಮಯದಲ್ಲಿ ಹಳ್ಳ-ಕೊಳ್ಳಗಳು, ಹೊಳೆ ಉಕ್ಕಿ ಹರಿಯುವುದು, ಅಷ್ಟೊಂದು ಮಳೆ ಸುರಿಯುವುದು. ಇದಾದ ಮೇಲೆ ಮಘಾ ಮಳೆ... ಮಗೆ ಮಳೆ ಮಗೆ ಗಾತ್ರ ಬೀಳುತ್ತದೆ .. ಹೀಗೆ ಪುರ್ವಾಷಢ, -ಉತ್ತರಾಷಢವರೆಗೆ ಮಳೆ ಬಗ್ಗೆ ಅನೇಕ ಗಾದೆಗಳಿವೆ.

ಮಳೆಗಾಲ ಬಂದರೆ ಪ್ರಕೃತ್ತಿಯ ಚಿತ್ರವೇ ಬದಲಾಗುವುದು. ಎಲ್ಲೆಲ್ಲಿಯೂ ಹಸಿರು, ಕೊಳ, ನದಿಗಳು ತುಂಬಿ ಹರಿಯುವುದು. ಇನ್ನು ಆರೋಗ್ಯದಲ್ಲೂ ಅನೇಕ ಬದಲಾವಣೆಗಳಾಗುತ್ತವೆ. ನಮ್ಮ ಜೀರ್ಣಶಕ್ತಿ ಸಾಮರ್ಥ್ಯ ಮಳೆಗಾಲದಲ್ಲಿ ಸ್ವಲ್ಪ ಕಡಿಮೆಯೇ ಇರುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುವುದು, ಹಾಗಾಗಿ ಮಳೆಗಾಲದಲ್ಲಿ ಸೋಂಕು, ಬ್ಯಾಕ್ಟರಿಯಾಗಳು ತಾಗಿದಾಗ ಕಾಯಿಲೆ ಬೀಳುವುದು ಅಧಿಕ.

ಮಳೆಗಾಲದಲ್ಲಿ ನಮ್ಮ ಆರೋಗ್ಯ ಕಾಪಾಡಲು ಏನು ಮಾಡಬಾರದು? ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಏನು ಮಾಡಬೇಕು?

ಏನು ಮಾಡಬೇಕು?

* ಸೊಳ್ಳೆ ಕಚ್ಚದಂತೆ ಎಚ್ಚರಿಕೆವಹಿಸಬೇಕು. ಬೆಳಗ್ಗೆ ಹಾಗೂ ಸಂಜೆ ಹೊತ್ತು ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಬೇಡಿ.

* ಸೊಳ್ಳೆ ನಾಶಕಗಳನ್ನು , ರೆಪ್ಲೆಂಟ್ಸ್‌ ಬಳಸಿ ( ಪರದೆ ಹಿಂದೆ , ಬೆಡ್‌ನ ಕೆಳಗಡೆ

* ಮನೆಯ ಸುತ್ತ-ಮುತ್ತ ಸೊಳ್ಳೆ ಮೊಟ್ಟೆ ಹಾಕಿ ಮರಿ ಮಾಡಲು ಅವಕಾಶವಿದೆಯೇ ಎಂದು ನೋಡಬೇಕು.. ಅಂದ್ರೆ ತೆಂಗಿನ ಚಿಪ್ಪು, ಟೈರ್, ಪ್ಲಾಸ್ಟಿಕ್‌ ಬಾಟಲಿ ಇವುಗಳಲ್ಲಿ ನೀರು ನಿಂತರೆ ಸೊಳ್ಳೆ ಅದರಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತವೆ. ನೀರು ಹರಿದು ಹೀಗುವಂತಿರಬೇಕು, ಎಲ್ಲಿಯೂ ನೀರು ನಿಲ್ಲುವಂತೆ ಇರಬಾರದು.

ಬಟ್ಟೆ

ಬಟ್ಟೆ

ತೆಳು ಬಣ್ಣದ ಬಟ್ಟೆ ಧರಿಸಿ

ಬೆಳಗ್ಗೆ ಮತ್ತು ಸಂಜೆ ತೆಳು ಬಣ್ಣದ ತುಂಬು ತೋಳಿನ ಬಟ್ಟೆ ಧರಿಸಿ. ಕಪ್ಪು ಹಾಗೂ ಇತರ ಕಡು ಬಣ್ಣದ ಬಟ್ಟೆ ಸೊಳ್ಳೆಗಳನ್ನು ಬೇಗನೆ ಆಕರ್ಷಿಸುತ್ತದೆ. ಆದ್ದರಿಂದ ತೆಳು ಬಣ್ಣದ ಬಟ್ಟೆ ಧರಿಸಿ. ಮಕ್ಕಳಿಗೆ ತುಂಬು ತೋಳಿನ ಬಟ್ಟೆ ಹಾಕಿ ಕೊಡಿ.

* ಗರ್ಭಿಣಿಯರು ಸೊಳ್ಳೆ ಕಚ್ಚದಮತೆ ತುಂಬಾನೇ ಜಾಗ್ರತೆವಹಿಸಿ.. ಕಾಲು, ಕೈ ಮುಚ್ಚಿರುವ ಸಡಿಲವಾದ ಬಟ್ಟೆಯನ್ನು ಬೆಳಗ್ಗೆ ಹಾಗೂ ಸಂಜೆ ಹೊತ್ತು ಧರಿಸಿ.

* ಬಿಸಿ-ಬಿಸಿಯಾದ ನೀರು ಕುಡಿಯಿರಿ, ಮಕ್ಕಳಿಗೂ ಕುದಿಸಿ ಆರಿಸಿದ ನೀರನ್ನಷ್ಟೇ ಕೊಡಿ.

* ಟಾಯ್ಲೆಟ್‌ಗೆ ಹೋಗಿ ಬಂದ ಮೇಲೆ ಕೈಗಳನ್ನು ಸೋಪು ಹಚ್ಚಿ ತೊಳೆಯಿರಿ.

* ಮಕ್ಕಳಿಗೆ ಹಲ್ಲುಜ್ಜಲು ಕೂಡ ಹದ ಬಿಸಿ ನೀರನ್ನೇ ಕೊಡಿ.

* ಬೆಚ್ಚಗಿನ ನೀರು ಸ್ನಾನಕ್ಕೆ ಬಳಸಿ.

* ಮಳೆ ನೀರಿನಲ್ಲಿ ಮೈ ಒದ್ದೆಯಾದರೆ ಕೂಡಲೇ ಬಂದು ಸ್ನಾನ ಮಾಡಿ.

ಆಹಾರ

ಆಹಾರ

* ಮಳೆಗಾಲದಲ್ಲೂ ಬೆಚ್ಚಗಿನ ನೀರು ಕುಡಿಯಿರಿ. ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ.

* ದ್ರವರೂಪದ ಆಹಾರ(ಸೂಪ್), ನಾರಿನಂಶವಿರುವ ಆಹಾರ ಹೆಚ್ಚಾಗಿ ಸೇವಿಸಿ. ಹಸಿ ತರಕಾರಿ ಸೇವಿಸಬೇಡಿ. ಸೊಪ್ಪುಗಳನ್ನು ತುಂಬಾ ಚೆನ್ನಾಗಿ ತೊಳೆದ ಬಳಿಕವಷ್ಟೇ ಸೇವಿಸಿ.

ಏನು ಮಾಡಬಾರದು?

ಏನು ಮಾಡಬಾರದು?

* ಮನೆಯ ಸುತ್ತ ತ್ಯಾಜ್ಯ ವಸ್ತುಗಳನ್ನು ಹಾಕಬೇಡಿ. ನೀರು ನಿಂತು ಅದರಲ್ಲಿ ಸೊಳ್ಳೆಗಳು ಮೊಟ್ಟೆ ಹಾಕಲು ಅವಕಾಶ ನೀಡಬಾರದು.

* ಮಕ್ಕಳನ್ನು ಗಲೀಜು ನೀರಿನಲ್ಲಿ ಆಡಲು ಬಿಡಬೇಡಿ.

* ಹೊರಗಿನ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.

* ಹೊರಗಡೆ ಸಿಪ್ಪೆ ಸುಲಿದು ಸಿಗುವ ಹಣ್ಣುಗಳನ್ನು ಕೊಂಡು ತಿನ್ನಬೇಡಿ.

* ಹೊರಗಡೆ ಪಾನಿ ಪುಡಿ, ಮಸಾಲಪುಡಿ, ಐಸ್‌ಕ್ರೀಮ್ ಈ ರೀತಿಯ ಆಹಾರ ವಸ್ತುಗಳನ್ನು ಸೇವಿಸಬೇಡಿ.

* ಜ್ವರ, ಮೈಕೈ ನೋವು ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

* ಸ್ವಚಿಕಿತ್ಸೆ ಮಾಡಬೇಡಿ.. ಸೂಪ್, ಮನೆಮದ್ದು ಮಾಡಿ ಕಮ್ಮಿಯಾಗದಿದ್ದರೆ ತುಂಬಾ ದಿನ ಕಾಯಬೇಡಿ ಕೂಡಲೇ ವೈದ್ಯರನ್ನು ಭೇಟಿಯಾಗಿ.

English summary

Dos and Don'ts To Take Care of Health During Monsoon in Kannada

Dos and Don'ts to Take Care of Health during Monsoon in Kannada....
Story first published: Wednesday, August 4, 2021, 18:06 [IST]
X
Desktop Bottom Promotion