Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಮಧುಮೇಹಿಗಳು ಭಯಪಡದೆ ತಿನ್ನಬಹುದಾದ 10 ಫ್ರೂಟ್ಸ್
ಮಧುಮೇಹಿಗಳು ಇಲ್ಲದ ಮನೆಯೇ ಇಲ್ಲವೆಂಬಂತಿದೆ ಈಗೀನ ಪರಿಸ್ಥಿತಿ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ನಂ 1 ತಲುಪಿದೆ, ಅಷ್ಟರಮಟ್ಟಿಗೆ ಈ ಮಧುಮೇಹ ಎಂಬ ಸಮಸ್ಯೆ ಜನರನ್ನು ಕಾಡುತ್ತಿದೆ, ಅದರಲ್ಲೂ ಮಳೆಗಾಲದ ಸಮಯದಲ್ಲಿ ಮಧುಮೇಹಿಗಳು ತುಂಬಾನೇ ಎಚ್ಚರಿಕೆವಹಿಸಬೇಕು.
ಇನ್ನು ಮಧುಮೇಹಿಗಳು ಬಹು ಮುಖ್ಯವಾಗಿ ಮಾಡಬೇಕಾಗಿರುವುದು ಆಹಾರಕ್ರಮದ ಕಡೆಗೆ ಗಮನಹರಿಸಬೇಕಾಗಿರುವುದು. ಹಾಗಂತ ನೀವು ಹಣ್ಣುಗಳನ್ನು ತಿನ್ನಲೇಬಾರದು ಎಂದೇನಿಲ್ಲ, ಮಳೆಗಾಲದಲ್ಲಿ ಈ ಹಣ್ಣುಗಳನ್ನು ತಿಂದರೆ ನಿಮ್ಮ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಾಯವಾಗುವುದು:

ಪೀಚ್: ಮಧುಮೇಹಿಗಳು ಸಕ್ಕರೆಯಂಶ ಹೆಚ್ಚಾಗುತ್ತದೆ ಎಂಬ ಭಯವಿಲ್ಲದೆ ಈ ಹಣ್ಣುಗಳನ್ನು ತಿ0ನ್ನಬಹುದು. ಇದರಲ್ಲಿ ವಿಟಮಿನ್ ಸಿ, ಪೊಟಾಷ್ಯಿಯಂ, ಕಬ್ಬಿಣದಂಶವಿದೆ. ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ತುಂಬಾನೇ ಒಳ್ಳೆಯದು.
ಪ್ಲಮ್: ಪ್ಲಮ್‌ನಲ್ಲಿ ಗ್ಲೈಸೆಮಿಕ್ ಇಂಟೆಕ್ಸ್ ಕಡಿಮೆ ಇದ್ದು, ಕಾರ್ಬ್ಸ್ ಕೂಡ ಕಡಿಮೆ ಇರುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ. ನೀವು ಪ್ಲಮ್ ಹಣ್ಣನ್ನು ಮಿತಿಯಲ್ಲಿ ಸವಿಯಿರಿ. ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.
ಚೆರ್ರಿ: ಚೆರ್ರಿ ಮಳೆಗಾಲ ಅಂತಲ್ಲ ಎಲ್ಲಾ ಸಮಯದಲ್ಲೂ ತಿನ್ನಬಹುದು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಅಲ್ಲದೆ ಇವುಗಳಲ್ಲಿ ವಿಟಮಿನ್ ಸಿ ಅದಕ್ಕೆ ಇರುವುದರಿಂದ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ.
ಪಿಯರ್ಸ್
ಪಿಯರ್ಸ್ ಕೂಡ ಮಳೆಗಾಲದಲ್ಲಿ ಮಧುಮೇಹಿಗಳು ಧೈರ್ಯವಾಗಿ ಸವಿಯಬಹುದಾದ ಹಣ್ಣಾಗಿದೆ. ಇದರಲ್ಲಿ ನಾರಿನಂಶ ಅಧಿಕವಿರಲಿದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು ನಾರಿನಂಶ ಅಧಿಕವಿರುವುದರಿಂದ ತುಂಬಾನೇ ಒಳ್ಳೆಯದು.
ನೇರಳೆಹಣ್ಣು
ಈ ಸೀಸನ್‌ನಲ್ಲಿ ನೇರಳೆಹಣ್ಣು ತುಂಬಾ ಸಿಗುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಅಲ್ಲದೆ ತೂಕ ಇಳಿಕೆಗೆ ತುಂಬಾನೇ ಸಹಕಾರಿ.
ಮೂಸಂಬಿ
ಮೂಸಂಬಿಯಲ್ಲಿ ನಾರಿನಂಶ ಹಾಗೂ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮಧುಮೇಹಿಗಳು ಮೂಸಂಬಿಯನ್ನು ತಿನ್ನಬಹುದು.
ರೋಸ್ ಆಪಲ್:
ಇದು ಕೂಡ ಮಳೆಗಾಲದಲ್ಲಿ ಸಿಗುವ ಹಣ್ಣುಗಳಲ್ಲಿ ಒಂದಾಗಿದೆ. ಕೆಲವು ಕಡೆ ಬೇಸಿಗೆಯಲ್ಲಾದರೆ ಇನ್ನು ಕೆಲವು ಕಡೆ ಮಳೆಗಾಲದಲ್ಲಿ ಉಂಟಾಗುವುದು. ಈ ಹಣ್ಣು ಸಿಕ್ಕರೆ ತಿನ್ನಲು ಮಿಸ್ ಮಾಡದಿರಿ.
ಬೆಣ್ಣೆಹಣ್ಣು
ಬೆಣ್ಣೆಹಣ್ಣು ಕೂಡ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿ 20ಕ್ಕೂ ಅಧಿಕ ವಿಟಮಿನ್‌ಗಳಿವೆ. ಇದನ್ನು ತಿನ್ನುವುದರಿಂದ ಶರೀರಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ, ಆರೋಗ್ಯಕರ ಕೊಬ್ಬಿನಂಶವಿದೆ.
ಪಪ್ಪಾಯಿ
ಪಪ್ಪಾಯಿ ಕೂಡ ಮಧುಮೇಹಿಗಳಿಗೂ ತುಂಬಾ ಒಳ್ಳೆಯದು. ಪಪ್ಪಾಯಿಯಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ತುಂಬಾ ಒಳ್ಳೆಯದು.
ಕಿವಿ
ಕಿವಿಯಲ್ಲಿ ವಿಟಮಿನ್ ಸಿ ಅಧಿಕವಿರಲಿದೆ. ಇದರಲ್ಲಿ ವಿಟಮಿನ್ ಇ, ಕೆ, ಪೊಟಾಷ್ಯಿಯಂ ಇರುವುದರಿಂದ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
