Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಳೆಗಾಲದಲ್ಲಿ ಈ ಕಷಾಯಗಳನ್ನ ಕುಡಿದರೆ ಕಾಯಿಲೆ ಬೀಳುವುದು ತಪ್ಪುತ್ತೆ
ಮುಂಗಾರಿನ ಆಗಮನ ನಿಧಾನವಾದರೂ ಅದರ ರಭಸ ಮಾತ್ರ ಜೋರಾಗಿಯೇ ಇದೆ. ಮಳೆಯಿಂದಾಗಿ ಬತ್ತಿದ ಹಳ್ಳ-ಕೊಳ್ಳಲು ತುಂಬಿ ಹರಿಯುತ್ತಿದೆ, ಶಾಲಾ ಮಕ್ಕಳಿಗೆ ರಜೆ ಕೂಡ ಘೋಷಿಸಲಾಗಿದೆ, ಕೆಲವು ಕಡೆ ಮಳೆ ಅವಾಂತಾರದಿಂದಾಗಿ ಪ್ರವಾಹದ ಪರಿಸ್ಥಿತಿ ಬಂದೊಗಿದೆ. ಇದರ ಜೊತೆಗೆ ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಮಳೆಗಾಲದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು, ನೆಗಡಿ ಈ ಬಗೆಯ ಸಮಸ್ಯೆ ಕಾಡುತ್ತಿದೆ.
ಈ ಸಮಯದಲ್ಲಿ ನೀವು ಆರೋಗ್ಯ ಕಾಪಾಡಲು ಕಷಾಯದ ಮೊರೆ ಹೋಗುವುದು ಅತ್ಯುತ್ತಮವಾದ ಆಯ್ಕೆಯಾಗಿದೆ.

ನೀವು ಈ ಬಗೆಯ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು
* ತುಳಸಿ, ಶುಂಠಿ, ಜೇನು
ಬೇಕಾಗುವ ಸಾಮಗ್ರಿ
4-5 ಎಸಳು ತುಳಸಿ ಎಲೆ
1 ಇಂಚಿನಷ್ಟು ದೊಡ್ಡದಿರುವ ಶುಂಠಿ
1/2 ಚಮಚ ಕಾಳು ಮೆಣಸಿನ ಪುಡಿ
1/4 ಚಮಚ ಅರಿಶಿಣ ಪುಡಿ
ಜೇನು
ಮಾಡುವ ವಿಧಾನ: ನೀವು ಜೇನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಯನ್ನು 2 ಲೋಟ ನೀರಿಗೆ ಹಾಕಿ ಕುದಿಸಿ, ಆ ನೀರು ಒಂದು ಲೋಟಕ್ಕೆ ಬಂದಾಗ ಜೇನು ಸೇರಿಸಿ ಕುಡಿಯಿರಿ.
ಚಕ್ಕೆ, ಶುಂಠಿ, ಜೇನಿನ ಟೀ
ಮಳೆಗಾಲದಲ್ಲಿ ಮಾಮೂಲಿ ಟೀಗೆ ಬದಲಿಗೆ ಈ ಬಗೆಯ ಟೀ ಒಳ್ಳೆಯದು
* ನೀರಿಗೆ ಶುಂಠಿ, ಚಕ್ಕೆ ಹಾಕಿ ಕುದಿಸಿ ಅದಕ್ಕೆ ಜೇನು ಸೇರಿಸಿ ಕುಡಿಯಿರಿ.
ಬ್ರಾಹ್ಮಿ ಜ್ಯೂಸ್
ಒಂದು ಮುಷ್ಠಿ ಬ್ರಾಹ್ಮಿ ಎಲೆ
1 ಚಮಚ ಚಮಚ ಪುಡಿ ಮಾಡಿದ ಜೀರಿಗೆ
1/2 ಚಮಚ ಕಾಳು ಮೆಣಸಿನ ಪುಡಿ
ಕಲ್ಲುಪ್ಪು
ಮಾಡುವ ವಿಧಾನ
ಬ್ರಾಹ್ಮಿ ಎಲೆಯನ್ನು ತೊಳೆದು ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ
* ಅದರ ರಸ ಹಿಂಡಿ ತೆಗೆಯಿರಿ
* ಆ ರಸಕ್ಕೆ ಸ್ವಲ್ಪ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಅದಕ್ಕೆ ಬಿಸಿ ನೀರು ಸೇರಿಸಿ ಹಸಿ ಬಿಸಿ ಇರುವಾಗ ಕುಡಿಯಿರಿ.
ಮಸಾಲೆ ಟೀ
ಇನ್ನು ನೀವು ಟೀ ಮಾಡಿ ಕುಡಿಯುವಾಗ ಅಷ್ಟೇ ಟೀ ಪುಡಿ ಜೊತೆಗೆ ಸ್ವಲ್ಪ ಶುಂಠಿ ಅಥವಾ ಚಕ್ಕೆ ಹಾಕಿ ಆ ಟೀ ಕುಡಿಯುವುದು ಕೂಡ ಒಳ್ಳೆಯದು.
ಪುದೀನಾ ಟೀ
ಬ್ಲ್ಯಾಕ್ ಟೀ ಮಾಡಿ ಅದಕ್ಕೆ ಒಂದು ಎಸಳು ಪುದೀನಾ ಹಾಗೂ ಸ್ವಲ್ಪ ನಿಂಬೆ ರಸ ಹಾಕಿ ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
