ಮಳೆ ಹೆಚ್ಚಾದಾಗ ಪ್ರವಾಹಕ್ಕೆ ಮುನ್ನವೇ ಈ ಬಗೆ ಮುನ್ನೆಚ್ಚರಿಕೆಯಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದು

ಮಾನ್ಸೂನ್ ಅಥವಾ ಮಳೆಗಾಲ ಬಂತು ಅಂದ್ರೆ ಒಂದು ಕಡೆ ಖುಷಿಯಾಗುತ್ತೆ ಇನ್ನೊಂದು ಕಡೆ ಸಾಕಷ್ಟು ಜನ ಅತಿಯಾದ ಮಳೆಯಿಂದ ಪ್ರವಾಹದಂಥ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಜನರ ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತೆ.

ಹಲವರು ಮನೆ ಆಸ್ತಿ ಪಾಸ್ತಿ ಕಳೆದುಕೊಳ್ಳುತ್ತಾರೆ ಇದರ ಜೊತೆಗೆ ಸಾಕಷ್ಟು ಜನ ಅನಾರೋಗ್ಯಕ್ಕೂ ಒಳಗಾಗುತ್ತಾರೆ. ಇಂತಹ ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ ಆದರೆ, ಸ್ವಲ್ಪ ಮುಂಜಾಗ್ರತೆ ವಹಿಸಿದರೆ ಉಂಟಾಗುವ ಸಾವು- ನೋವು, ನಷ್ಟ, ಅನಾರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.

Heavy Rainy : These Precaution Helps To Save Life During Flood

ನೀರಿನಿಂದ ಸಾಕಷ್ಟು ರೋಗಗಳು ಹರಡುತ್ತವೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಶಿಲೀಂಧ್ರಗಳು ಸೊಳ್ಳೆ ಮೊದಲಾದ ಕೀಟಗಳು ಹುಟ್ಟಿಕೊಳ್ಳುತ್ತವೆ. ಮನುಷ್ಯರಿಗೆ ಸೋಂಕು ಹರಡುತ್ತವೆ. ನೀರು ಕಲುಷಿತಗೊಂಡರೆ ಕಾಲರಾ, ಟೈಫಾಯಿಡ್, ಹೆಪಟೈಟಿಸ್ ಇ ಮತ್ತು ಎ, ಮಲೇರಿಯಾ ಹೀಗೆ ಮೊದಲಾದ ರೋಗಗಳು ಕಾಣಿಸಿಕೊಳ್ಳಬಹುದು.

ಅದರಲ್ಲೂ ಡೆಂಗ್ಯೂ, ಮಲೇರಿಯಾ, ಜ್ವರ ಮೊದಲಾದವು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ ಯಾಕೆಂದರೆ ಇದರಲ್ಲಿ ಪರಾವಲಂಬಿ ಬ್ಯಾಕ್ಟೀರಿಯಾ ಗಳು ಹಾಗೂ ವೈರಸ್ ಗಳು ಇರುತ್ತವೆ. ಅದರಲ್ಲೂ ಇಂಥ ಖಾಯಿಲೆಗಳು ಸಣ್ಣಪುಟ್ಟ ಮಕ್ಕಳಲ್ಲಿ ಬರುವುದು ಹೆಚ್ಚು ಇದರಿಂದ ಇನ್ನಷ್ಟು ಸಮಸ್ಯೆ. ಹಾಗಾಗಿ ಮಳೆಗಾಲ ಬಂತು ಅಂದ್ರೆ ನಾವು ತೆಗೆದುಕೊಳ್ಳುವ ಕೆಲವು ಮುಂಜಾಗ್ರತಾ ಕ್ರಮಗಳು ಇಂತಹ ಸಮಸ್ಯೆಯಿಂದ ನಮ್ಮನ್ನು ದೂರ ಇಡಬಹುದು.

ಮುನ್ನೆಚ್ಚರಿಕ ಕ್ರಮಗಳು

  • ಮಳೆಗಾಲದಲ್ಲಿ ಯಾವ ಭಾಗದಲ್ಲಿ ಪ್ರವಾಹದ ಅಪಾಯವಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯಿಂದ ಅಥವಾ ಸರ್ಕಾರದಿಂದ ಮಾಹಿತಿ ಲಭ್ಯವಾಗುತ್ತದೆ ಹಾಗಾಗಿ ಇದನ್ನು ಕೇಳಿ ತಿಳಿದು ನೀವು ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು.
  • ಮಳೆಗಾಲ ಆರಂಭವಾಗುತ್ತಿದ್ದ ಹಾಗೆ ನೀವು ಪ್ರವಾಹ ಬರುವಂತಹ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಮನೆಯಲ್ಲಿ ಇರುವಂತಹ ವಸ್ತುಗಳ ಜೋಪಾನ ಮಾಡಿ. ಆದಷ್ಟು ಮನೆಯಲ್ಲಿ ಇರುವ ವಸ್ತುಗಳನ್ನು ಅಥವಾ ಹಾಳಾಗುವಂತಹ ವಸ್ತುಗಳನ್ನು ಎತ್ತರದಲ್ಲಿ ಇಡಿ.
  • ಪ್ರವಾಹ ಬಂದಾಗ ಕೆಲವೊಮ್ಮೆ ಆಹಾರ ಸಿಗುವುದು ಕಷ್ಟವಾಗುತ್ತದೆ. ಅದರಿಂದ ಹಾಳಾಗದೆ ಇರುವಂತಹ ಕೆಲವು ಆಹಾರ ಪದಾರ್ಥಗಳನ್ನು ತಂದು ಮನೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು. ಇದಕ್ಕೆ ನೀರು ತಗುಲದಂತೆ ಕವರ್ ಗಳಲ್ಲಿ ಹಾಕಿ ಭದ್ರವಾಗಿ ಇಡಿ.
  • ನಿರಂತರವಾಗಿ ಒಂದೆರಡು ದಿನ ಮಳೆ ಸುರಿಯುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ದೂರದ ಪ್ರಯಾಣವನ್ನು ಮಾಡಬೇಡಿ. ರಸ್ತೆಯಲ್ಲಿ ಮಳೆ ಬರುತ್ತಿರುವಾಗ ಪ್ರಯಾಣಿಸುವುದು ಕೂಡ ಅಪಾಯಕಾರಿಯೇ.
  • ಪ್ರವಾಹದ ಸೂಚನೆ ಸಿಗುತ್ತಿದ್ದ ಹಾಗೆ ಆ ಸ್ಥಳದಿಂದ ಸ್ಥಳಾಂತರಗೊಳ್ಳುವುದು ಒಳ್ಳೆಯದು. ಇದರ ಬಗ್ಗೆ ಸರ್ಕಾರ ಮಾಹಿತಿಯನ್ನು ಕೂಡ ನೀಡುತ್ತದೆ. ಎಷ್ಟೋ ಬಾರಿ ಪ್ರವಾಹದ ನೀರು ನಮ್ಮ ಮನೆಗೆ ನುಗ್ಗುವುದಿಲ್ಲ ಎನ್ನುವ ಭ್ರಮೆಯಲ್ಲಿ ಕೆಲವರು ಕಾಲ ಕಳೆಯುತ್ತಾರೆ. ಇದರಿಂದ ಪ್ರವಾಹ ಬಂದು ಸಾಕಷ್ಟು ಸಮಸ್ಯೆ ಕೂಡ ಉಂಟಾಗಬಹುದು. ಹಾಗಾಗಿ ಮುಂಜಾಗ್ರತಾ ಕ್ರಮ ಎನ್ನುವಂತೆ ನೀವು ಪ್ರವಾಹದ ಸಮಯದಲ್ಲಿ ಮನೆಯನ್ನು ಬಿಡುವುದೇ ಒಳ್ಳೆಯದು.
  • ಮಳೆ ಜಾಸ್ತಿಯಾಗಿ ಪ್ರವಾಹ ಬರುತ್ತಿದೆ ಎನಿಸಿದಾಗ ಮನೆಯಲ್ಲಿ ಇರುವ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಆ ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರ ಹೊಂದಬಹುದು. ಮತ್ತೆ ಪ್ರವಾಹ ಕಡಿಮೆಯಾದಾಗ ನಿಮ್ಮ ವಾಸ ಸ್ಥಳಕ್ಕೆ ಹಿಂತಿರುಗಬಹುದು.
  • ಮಕ್ಕಳ ಪಠ್ಯ ಪುಸ್ತಕ ಹಾಗೂ ಶಾಲಾ ವಸ್ತುಗಳ ಬಗ್ಗೆ ಗಮನ ಇರಲಿ ಅವುಗಳು ನೀರು ತಗುಲದಂತೆ ಒಂದು ಭದ್ರವಾದ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಡಿ. ಪ್ರವಾಹದ ಸಮಯದಲ್ಲಿ ಮಗುವಿಗೆ ಯಾವುದೇ ತೊಂದರೆ ಆದರೂ ಅದು ಆ ಒಂದು ವರ್ಷದ ಭವಿಷ್ಯಕ್ಕೆ ತೊಂದರೆ ಉಂಟು ಮಾಡಬಹುದು.
  • ಮಳೆಗಾಲ ಆರಂಭವಾಗುತ್ತಿದ್ದಂತೆ ಆಹಾರ ಧಾನ್ಯಗಳಾನ್ನು ಹಾಳಾಗದಂತಹ ತರಕಾರಿಗಳನ್ನು ತಂದಿಡಿ. ಪ್ರವಾಹ ಬಂದ ತಕ್ಷಣ ಅಥವಾ ಅತಿಯಾದ ಮಳೆ ಸುರಿಯುತ್ತಿರುವಾಗ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.
  • ಮನೆಯಲ್ಲಿ ದ್ವಿಚಕ್ರ ವಾಹನಗಳು ಅಥವಾ ಕಾರು ಇರಬಹುದು. ಪ್ರವಾಹದಿಂದ ನೀರು ವಾಹನಗಳ ಒಳಗೆ ಹೋದರೆ ಅದನ್ನು ಸರಿಪಡಿಸುವುದಕ್ಕೆ ಇನ್ನಷ್ಟು ದುಡ್ಡು. ಹಾಗಾಗಿ ಸೇಫ್ ಎನಿಸುವ ಜಾಗದಲ್ಲಿ ನಿಮ್ಮ ವಾಹನವನ್ನು ಇಟ್ಟುಬರುವುದು ಒಳ್ಳೆಯದು.
  • ಇನ್ನು ಮಳೆಯ ನೀರು ಮನೆಯಲ್ಲಿ ತುಂಬಿದರೆ ಅಥವಾ ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿದರೆ ಅನಾರೋಗ್ಯ ಕೂಡ ಭಾದಿಸಬಹುದು. ಅತಿಯಾದ ತೇವ ವಾತಾವರಣದಿಂದ ಮಕ್ಕಳಿಗೆ, ವಯಸ್ಸಾದವರಿಗೆ ಕೂಡಲೇ ಸೋಂಕು ತಗುಲಬಹುದು. ಹಾಗಾಗಿ ಪ್ರವಾಹ ಬಂದಾಗ ತಕ್ಷಣ ಹೊರಗೆ ಹೋಗಲು ಸಾಧ್ಯವಿಲ್ಲ, ಮೊದಲೇ ಅಗತ್ಯ ಮೆಡಿಸಿನ್, ಬ್ಯಾಂಡೇಜ್ ಮೊದಲಾದವುಗಳನ್ನು ಒಳಗೊಂಡ ಮೆಡಿಕಲ್ ಕಿಟ್ ಒಂದನ್ನು ಇಟ್ಟುಕೊಳ್ಳಿ. ಇದು ತಕ್ಷಣದ ಜ್ವರ, ಶೀತ ಸೋಂಕು ನಿಯಂತ್ರಿಸಲು ಸಹಾಯಕವಾಗುತ್ತದೆ.
  • ಮನೆಯಲ್ಲಿ ಗರ್ಭಿಣಿ ಸ್ತ್ರಿ ಅಥವಾ ನವಜಾತ ಶಿಶು ಇದ್ದರೆ ಸ್ವಲ್ಪ ಪ್ರವಾಹದ ಸುಳಿವು ಸಿಕ್ಕರೂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ.
  • ನೀರು ಹಾಗೂ ವಿದ್ಯುತ್ ಎರಡೂ ಸೇರಿದರೆ ಅಪಾಯ ಇದ್ದಿದ್ದೆ. ಹಾಗಾಗಿ ಮನೆಯ ಟಿವಿ, ಫ್ರಿಡ್ಜ್ ಇತರ ಎಲೆಕ್ಟ್ರಾನಿಕ್ ವಸ್ತುಗಳ ಪ್ಲಗ್ ತಪ್ಪಿಸಿ ಇಡಿ. ಇಲ್ಲವಾದರೆ ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ.

ಕೆಲವೊಮ್ಮೆ ಪ್ರವಾಹದ ಅರಿವು ಇರೋದಿಲ್ಲ. ಆದರೆ ಮಳೆ ನೀರು ಮನೆಗೆ ನುಗ್ಗಬಹುದು ಎನ್ನುವ ಸೂಚನೆ ಇದ್ದರೆ ಈ ಮುಖ್ಯವಾದ ಮುಂಜಾಗೃತಾ ಕೃಮಗಳನ್ನು ಕೈಗೊಳ್ಳುವುದು ಬಹಳ ಒಳ್ಳೆಯದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Heavy Rainy : These Precaution Helps To Save Life During Flood

Heavy Rainy: If you take these precaution will help to save life during flood, have a look.
Story first published: Sunday, July 16, 2023, 19:00 [IST]
X
Desktop Bottom Promotion