Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರೇ...ಮಳೆಗಾಲದಲ್ಲಿ ಆ ಭಾಗದಲ್ಲಿ ತುರಿಕೆಯೇ? 7 ರಾತ್ರಿಯಲ್ಲಿ ಗುಣಪಡಿಸಬಹುದು
ಮಳೆಗಾಲದಲ್ಲಿ ಮಹಿಳೆಯರಲ್ಲಿಆ ಭಾಗದಲ್ಲಿ ತುರಿಕೆ ಸಮಸ್ಯೆ ಕಂಡು ಬರುವುದು ಸರ್ವೇ ಸಾಮಾನ್ಯ. ಮಳೆಗಾಲದಲ್ಲಿ ಒದ್ದೆಯಾದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಮಳೆಗಾಲದಲ್ಲಿ ಒಳ ಉಡುಪುಗಳು ಬಿಸಿಲಿನಲ್ಲಿ ಒಣಗಿದಂತೆ ಒಣಗುವುದಿಲ್ಲ, ಎಷ್ಟೇ ದಿನ ಒಣಗಿಸಿದರೂ ತೇವಾಂಶವಿದ್ದಂತೆ ಅನಿಸುವುದು. ಅಲ್ಲದೆ ಮಳೆಯಲ್ಲಿ ಕೆಲಸ-ಕಾರ್ಯಗಳಿಗೆ ಓಡಾಡುವಾಗ ಸ್ವಲ್ಪ ಒದ್ದೆಯಾಗುತ್ತೇವೆ, ಈ ರೀತಿ ಒದ್ದೆಯಾದಾಗ ಒಳ ಉಡುಪು ಒದ್ದೆಯಾದರೆ ಜನನೇಂದ್ರೀಯ ಭಾಗದಲ್ಲಿ ತುರಿಕೆ ಉಂಟಾಗುವುದು.
ಇನ್ನು ಮಳೆಗಾಲದಲ್ಲಿ ಮುಟ್ಟಿನ ಸಮಯದಲ್ಲಿ ಅಥವಾ ಮುಟ್ಟಾದ ಬಳಿಕ ಈ ಬಗೆಯ ಈ ಕಿರಿಕಿರಿ ತುಂಬಾನೇ ಇರುತ್ತದೆ. ಬಿಳುಪು ಹೋದಾಗ ಒಳ ಉಡುಪು ಮತ್ತಷ್ಟು ಒದ್ದೆಯಾಗುವುದರಿಂದ ತುಂಬಾನೇ ಹಿಂಸೆ ಅನಿಸುವುದು.

ಈ ಬಗೆಯ ಸಮಸ್ಯೆ ತಡೆಗಟ್ಟಲು ನೀವು ಮಳೆಗಾಲದಲ್ಲಿ ಈ ಬಗೆಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು
- ಸಡಿಲವಾದ ಹಾಗೂ ಕಾಟನ್ ಒಫ ಉಡುಪು ಧರಿಸಿ
- ತೇವಾಂಶವಿರುವ ಒಳಉಡುಪು ಧರಿಸಬೇಡಿ
- ಒದ್ದೆಯಾದ ಬಟ್ಟೆಗಳನ್ನು ತಕ್ಷಣ ಬದಲಾಯಿಸಿ.
- ನಿಮ್ಮ ಆಹಾರದಲ್ಲಿ ಪ್ರೊಬಯೋಟಿಕ್ ಆಹಾರಗಳನ್ನು ಸೇರಿಸಿ, ವಿಟಮಿನ್ ಸಿ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಒಳ್ಳೆಯದು.
- ಕಾರ್ಬ್ಸ್ ಅತಿ ಹೆಚ್ಚಾಗಿ ಸೇವಿಸಬೇಡಿ
ಜನನೇಂದ್ರೀಯದಲ್ಲಿ ತುರಿಕೆ ತಡೆಗಟ್ಟಲು ಒಳಉಡುಪು ಬಗ್ಗೆ ತುಂಬಾನೇ ಗಮನಹರಿಸಿ
ನೀವು ಬಿಗಿಯಾದ ಅಥವಾ ಸಿಂಥೆಟಿಕ್ ಒಳಉಡುಪು ಧರಿಸಿದಾಗ ಸರಿಯಾಗಿ ಗಾಳಿಯಾಡದೆ ಈ ರೀತಿಯ ತುರಿಕೆ ಸಮಸ್ಯೆ ಹೆಚ್ಚಾಗುವುದು, ಅದೇ ಕಾಟನ್ ಹಾಗೂ ಸಂಪೂರ್ಣ ಒಣಗಿರುವ ಒಳುಡುಪು ಧರಿಸಿದರೆ ತುಂಬಾ ಒಳ್ಳೆಯದು, ಈ ಬಗೆಯ ಒಳಉಡುಪು ತುರಿಕೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಇದಕ್ಕೆ ಚಿಕಿತ್ಸೆ ಮಾಡಲು 7 ರಾತ್ರಿ ಸಾಕು
ನಿಮಗೆ ಈ ರೀತಿ ತುರಿಕೆ ಸಮಸ್ಯೆ ಉಂಟಾದಾಗ ಈ ಸಮಸ್ಯೆ ಹೋಗಲಾಡಿಸಲು 7 ರಾತ್ರಿ ಚಿಕಿತ್ಸೆ ಪಡೆಯಬೇಕು. ಆದರೆ ಈ ಚಿಕಿತ್ಸೆಯನ್ನು ಮುಟ್ಟಿನ ಸಮಯದಲ್ಲಿ ಮಾಡಬೇಡಿ. ಇಲ್ಲಿ ನೀವು ಸಂಗಾತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಇದನ್ನು ಬಳಸಬೇಡಿ, ಲೈಂಗಿಕಕ್ರಿಯೆ ಬಳಿಕ ಹದ ಬಿಸಿ ನೀರಿನಲ್ಲಿ ಆ ಭಾಗವನ್ನು ತೊಳೆದು ನಂತರ ಚಿಕಿತ್ಸೆ ಮಾಡಿ.
ಜನನೇಂದ್ರೀಯದಲ್ಲಿ ತುರಿಕೆ ಕಡಿಮೆ ಮಾಡಲು ಆ್ಯಂಟಿಫಂಗಲ್ ಔಷಧ ಹಾಗೂ ಆ್ಯಟಿಬಯೋಟಿಕ್ ಸಪೋಸಿಟರಿ ಬಳಸಿ. ಇದನ್ನು ರಾತ್ರಿಯಲ್ಲಿ ಇಡಿ. ಒಂದೇ ವೇಳೆ ತುರಿಕೆ ತುಂಬಾ ಹೆಚ್ಚಾಗಿದ್ದರೆ ಓರಲ್ ಆ್ಯಂಟಿಬಯೋಟಿಕ್ (ಆ್ಯಂಟಿಬಯೋಟಿಕ್ ಮಾತ್ರೆ) ತೆಗೆದುಕೊಳ್ಖಬೇಕಾಗುತ್ತದೆ.
ಯಾರಲ್ಲಿ ಜನನೇಂದ್ರೀಯ ತುರಿಕೆ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು?
- ಯಾರಲ್ಲಿ ಮಧುಮೇಹದ ಸಮಸ್ಯೆವಿರುತ್ತದೋ ಅವರಲ್ಲಿ ಹೆಚ್ಚಾಗಿ ಕಂಡು ಬರುವುದು. ನಿಮಗೆ ಮಧುಮೇಹದ ಸಮಸ್ಯೆ ಇದ್ದರೆ ಮಳೆಗಾಲದಲ್ಲಿ ಈ ಫಂಗಲ್ ಸೋಂಕು ಬಗ್ಗೆ ತುಂಬಾ ಎಚ್ಚರಿಕೆವಹಿಸಿ.
- ಮಾನಸಿಕ ಒತ್ತಡ ಹೆಚ್ಚಾಗಿದ್ದಾಗ ಅಥವಾ ಜ್ವರ, ಮತ್ತಿತರ ಆರೋಗ್ಯ ಸಮಸ್ಯೆ ಹೊಂದಿದ್ದರೆ ಈ ರೀತಿ ತುರಿಕೆ ಸಮಸ್ಯೆ ಕಂಡು ಬರುವುದು.
- ಆ್ಯಂಟಿಬಯೋಟಿಕ್ ಚಿಕಿತ್ಸೆ ಪಡೆಯುತ್ತಿದ್ದರೆ ಜನನೇಂದ್ರೀಯದಲ್ಲಿ pH ಪ್ರಮಾಣದಲ್ಲಿ ವ್ಯತ್ಯಾಸವಾಗಿದ್ದರೆ ಈ ರೀತಿ ತುರಿಕೆ ಕಂಡು ಬರುವುದು.
- ಸೋಂಕು ಇರುವ ಸಂಗಾತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದಾಗ ಈ ರೀತಿ ಸೋಂಕು ಸಮಸ್ಯೆ ಉಂಟಾಗುವುದು. ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಿದರೆ ಈ ಬಗೆಯ ಸೋಂಕು ತಡೆಗಟ್ಟಬಹುದು.
- ಗರ್ಭಿಣಿಯರಲ್ಲಿ ಈ ಬಗೆಯ ಸೋಂಕು ಹೆಚ್ಚಾಗಿ ಕಂಡು ಬರುವುದು.
- ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಜನನೇಂದ್ರೀಯದಲ್ಲಿ ತುರಿಕೆ ಸಮಸ್ಯೆ ಕಂಡು ಬರುವುದು.
- ಆ ಭಾಗದ ಶುಚಿತ್ವ ಕಡೆ ಗಮನ ಕೊಡಿ.
ಈ ರೀತಿ ಮಾಡುವುದರಿಂದ ಜನನೇಂದ್ರೀಯದಲ್ಲಿ, ತೊಡೆ ಭಾಗದಲ್ಲಿ ತುರಿಕೆ ಉಂಟಾಗುವುದನ್ನು ತಡೆಗಟ್ಟಬಹುದು.
ಮಲಗುವಾಗ ಒಳ ಉಡುಪು ತೆಗೆದು ಮಲಗಿ
ಇನ್ನು ಮಲಗುವಾಗ ಒಳ ಉಡುಪು ತೆಗೆದು ಸಡಿಲವಾದ ಉಡುಪು ಧರಿಸಿ ಮಲಗಿ, ಇದರಿಂದ ಆ ಭಾಗದಲ್ಲಿ ತೇವಾಂಶ ಉಂಟಾಗುವುದನ್ನು ತಡೆಗಟ್ಟಬಹುದು, ಜೊತೆಗೆ ಆ್ಯಂಟಿಬಯೋಟಿಕ್ ಸಪೋಸಿಟರಿ ಅಥವಾ ಕ್ರೀಮ್ ಬಲಸುವುದರಿಂದ ಬೇಗನೆ ಗುಣಮುಖರಾಗುವಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications