Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾನ್ಸೂನ್‌ನಲ್ಲಿ ಈ 5 ಕಾರಣಕ್ಕೆ ಮೀನು ಒಳ್ಳೆಯದು ಅಲ್ವೇ ಅಲ್ಲ
ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯಾದ ಆಯ್ಕೆ ಅಲ್ವೇ ಅಲ್ಲ. ಮೀನು ಬದಲಿಗೆ ಚಿಕನ್, ಮಟನ್, ಮತ್ತಿತರ ಮಾಂಸಾಹಾರ ಸೇವನೆ ಒಳ್ಳೆಯದು. ಮಳೆಗಾಲದಲ್ಲಿ ಮೀನನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಪರಿಸರಕ್ಕೂ ಒಳ್ಳೆಯದಲ್ಲ, ಈ 5 ಕಾರಣಗಳಿಂದ ಮಳೆಗಾಲದಲ್ಲಿ ಮೀನು ಸೇವಿಸದಿರುವುದು ಒಳ್ಳೆಯದು.
ಮೀನುಗಳು ಮೊಟ್ಟೆ ಹಾಕುವ ಸಮಯ
ನೀವು ಮೀನು ಪ್ರಿಯರಾದರೆ ಗಮನಿಸಿರಬಹುದು, ಜೂನ್-ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಫ್ರೆಷ್ ಮೀನುಗಳು ಬರಲ್ಲ. ಈಗಾಗಲೇ ಫ್ರೀಝರ್‌ನಲ್ಲಿಟ್ಟ ಮೀನುಗಳನ್ನು ತಂದು ಮಾರಲಾಗುವುದು. ಮುಂಗಾರಿನ ಸಮಯದಲ್ಲಿ ಮೀನುಗಳು ಮೊಟ್ಟೆ ಹಾಕಿ ಮರಿ ಮಾಡುವ ಸಮಯ, ಈ ಕಾರಣದಿಂದಾಗಿ ಸಮುದ್ರದಲ್ಲಿ ಮೀನು ಹಿಡಿಯಲು ಬಿಡುವುದಿಲ್ಲ, ಅಲ್ಲದೆ ಮಳೆ-ಗಾಳಿ ಅಧಿಕವಿದ್ದಾಗಲೂ ಮೀನುಗಾರರಿಗೆ ಬೋಟ್ ತೆಗೆದುಕೊಂಡು ಹೋಗಲು ಕಷ್ಟವಾಗಿರುವುದರಿಂದ ತಾಜಾ ಮೀನುಗಳು ಮಾರುಕಟ್ಟೆಗೆ ಬರುವುದಿಲ್ಲ, ಈಗಾಗಲೇ ಸಂಗ್ರಹಿಸಿಟ್ಟ ಮೀನುಗಳನ್ನು ಮಾರುತ್ತಿರುತ್ತಾರೆ. ಅವುಗಳಲ್ಲಿ ರಾಸಾಯನಿಕಗಳನ್ನು ಬಳಸಿರುತ್ತಾರೆ. ಅಲ್ಲದೆ ಮೊಟ್ಟೆಯಿರುವ ಮೀನುಗಳನ್ನು ತಿನ್ನುವುದರಿಂದ ಫುಡ್ ಪಾಯಿಸನ್, ಹೊಟ್ಟೆ ನೋವು, ವಾಂತಿ-ಬೇಧಿ ಉಂಟಾಗುವುದು.

ಮೀನುಗಳು ಬೇಗನೆ ಕೊಳೆಯಲಾರಂಭಿಸುತ್ತದೆ
ಮೊಟ್ಟೆ ಇರುವ ಮೀನುಗಳು ಬೇಗನೆ ಕೊಳೆಯಲಾರಂಭಿಸುತ್ತದೆ, ಮಾರಾಟಗಾರರು ತಮ್ಮ ಲಾಭಕ್ಕಾಗಿ ಮೀನು ತಾಜಾವಾಗಿ ಕಾಣಲು ಕೆಮಿಕಲ್ ಬಳಸುತ್ತಾರೆ. ಇಂಥ ಮೀನುಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು. ಆದ್ದರಿಂದ ಈ ಸಮಯದಲ್ಲಿ ಚಿಕನ್ ಬೆಸ್ಟ್.
ರುಚಿ ಕಡಿಮೆ
ತುಂಬಾ ಸಮಯ ಫ್ರೀಝರ್‌ನಲ್ಲಿಟ್ಟ ಮೀನು ಬಳಸಿದರೆ ರುಚಿಯೂ ಇರುವುದಿಲ್ಲ, ಮೀನಿನ ಗುಣಮಟ್ಟ ಕಳಪೆಯಾಗುವುದು. ಇಂಥ ಮೀನು ಬಾಯಿಗೆ ರುಚಿ ನೀಡುವುದಿಲ್ಲ. ಮೀನು ತಾಜಾವಾಗಿದ್ದರೆ ಮಾತ್ರ ರುಚಿ, ಅಲ್ಲದೆ ಕೆಮಿಕಲ್ ಅಧಿಕ ಹಾಕಿರುವ ಮೀನು ತಿನ್ನುವಾಗಲೇ ರುಚಿ ಇಷ್ಟವಾಗಲ್ಲ.
ಕಾಯಿಲೆ ಬೇಗನೆ ಹರಡುತ್ತದೆ
ಮಳೆಗಾಲದಲ್ಲಿ ಕಲುಷಿತ ನೀರು ಕೂಡ ನದಿ, ಸಮುದ್ರವನ್ನು ಸೇರುತ್ತದೆ. ಈ ನೀರಿನಲ್ಲಿ ಮೀನುಗಳು ಮೊಟ್ಟೆ ಹಾಕುತ್ತವೆ, ಈ ಕಲುಷಿತ ನೀರಿನಲ್ಲಿರುವ ಮೀನುಗಳನ್ನು ಹಿಡಿದು ತಿನ್ನುವುದರಿಂದ ಟೈಫಾಯ್ಡ್, ಅರಿಶಿಣ ಕಾಮಲೆ, ಬೇಧಿ ಮುಂತಾದ ಕಾಯಿಲೆ ಹರಡುವುದು. ಮಕ್ಕಳಿಗಂತು ನೀಡಲೇಬೇಡಿ.
ಸಲ್ಫೇಟ್, ಪಾಲಿಫಾಸ್ಪೇಟ್ಸ್ ರಾಸಾಯನಿಕ ಬಳಸಲಾಗುವುದು
ಮಾರುಕಟ್ಟೆಯಲ್ಲಿ ಹಳೆಯ ಮೀನುಗಳು ತಾಜಾವಾಗಿ ಕಾಣಬೇಕೆಂದು ಸಲ್ಫೇಟ್, ಪಾಲಿಫಾಸ್ಪೇಟ್ಸ್ (sulphates and polyphosphates ) ಬಳಸುತ್ತಾರೆ. ಇ
ಈ ಕಾರಣಗಳಿಂದ ಮಾನ್ಸೂನ್‌ನಲ್ಲಿ ಮೀನು ಬದಲಿಗೆ ಮಾಂಸಾಹಾರ ಬೆಸ್ಟ್.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
