Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಳೆಗಾಲದಲ್ಲಿ ಪತ್ರೊಡೆ ಸವಿಯಲು ಮಿಸ್ ಮಾಡಬಾರದು ಎನ್ನುವುದು ಈ ಕಾರಣಕ್ಕೆ ನೋಡಿ
ಕೆಲವು ಕಡೆ ಮಳೆಯ ಅಭಾವ, ಇನ್ನು ಕೆಲವು ಕಡೆ ವಿಪರೀತ ಮಳೆ, ಇನ್ನು ಕೆಲವು ಕಡೆ ಪ್ರವಾಹದ ರುದ್ರ ನರ್ತನ ಒಟ್ಟಾರೆ ಈ ವರ್ಷ ಮಳೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದೆ.
ಮಳೆಗಾಲದಲ್ಲಿ ಆರೋಗ್ಯ ವೃದ್ಧಿಸಲು ಕೆಲವೊಂದು ಆಹಾರಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು, ಅದರಲ್ಲೊಂದು ಕೆಸುವಿನ ಎಲೆ. ಮಳೆಗಾಲದಲ್ಲಿ ದೇಹದ ಉಷ್ಣಾಂಶ ಕಾಪಾಡುವಲ್ಲಿ ಕೆಸುವಿನ ಎಲೆ ತುಂಬಾ ಸಹಕಾರಿ. ಕೆಸುವಿನ ಎಲೆ ಹಾಗೂ ದಂಟು ಹಾಕಿ ಗೊಜ್ಜು, ಕೆಸುವಿನ ಎಲೆಯಿಂದ ಪತ್ರೊಡೆ ಮುಂತಾದ ಅಡುಗೆ ಮಾಡಿ ಸವಿಯಬೇಕು.

ಮಳೆಗಾಲದಲ್ಲಿ ಕೆಸುವಿನ ಎಲೆ ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ ನೋಡಿ:
- ಕೆಸುವಿನ ದಂಟಿನಲ್ಲಿ ಕ್ಯಾಲ್ಸಿಯಂ, ನಾರಿನಂಶ, ರಂಜಕ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳಿವೆ, ಆದ್ದರಿಂದ ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.
- ಅಲ್ಲದೆ ಮಳೆಗಾಲದಲ್ಲಿ ಹಸಿವನ್ನು ನಿಯಂತ್ರಿಸಲು ಈ ಕೆಸುವಿನ ಎಲೆ ಸಹಕಾರಿಯಾಗಿದೆ. ಹಸಿವು ನಿಯಂತ್ರಿಸುವುದರಿಂದ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ.
- ದೇಹವನ್ನು ಶುದ್ಧ ಮಾಡುತ್ತದೆ: ಅಂದರೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ನಮ್ಮ ದೇಹವನ್ನು ಇದು ಡಿಟಾಕ್ಸ್ ಮಾಡುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ ಅಲ್ಲದೆ ಅನೇಕ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
- ಸಂಧಿವಾತದ ಸಮಸ್ಯೆ ತಡೆಗಟ್ಟುತ್ತದೆ: ಮಳೆಗಾಲದಲ್ಲಿ ತಂಪು ಹೆಚ್ಚಾಗಿರುವುದರಿಂದ ಸಂಧಿವಾತದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಕೆಸುವಿನ ಎಲೆಯಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಸಂಧಿವಾತದ ಸಮಸ್ಯೆ ತಡೆಗಟ್ಟಲು ಸಹಕಾರಿ. ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ.
- ರಕ್ತಸಂಚಾರ ಉತ್ತಮವಾಗಿಸುತ್ತದೆ: ಚಳಿ ಹೆಚ್ಚಾದಾಗ ರಕ್ತ ಹೆಪ್ಪುಗಟ್ಟಿ ನೋವುಂಟಾಗುವುದು. ಕೆಸುವಿನ ಎಲೆ ಸೇವಿಸಿದಾಗ ಚಳಿಯಲ್ಲಿ ಮೈ ಉಷ್ಣಾಂಶ ಹೆಚ್ಚಾಗುವುದು, ಇದರಿಂದ ರಕ್ತ ಸಂಚಾರ ಉತ್ತಮವಾಗಿ ನಡೆಯುವುದು.
- ತ್ವಚೆಗೂ ಒಳ್ಳೆಯದು: ಕೆಸುವಿನ ಎಲೆ ಸೇವನೆಯಿಂದ ತ್ವಚೆಗೂ ತುಂಬಾ ಒಳ್ಳೆಯದು.
ಮಳೆಗಾಲದಲ್ಲಿ ಪತ್ರೊಡೆ ಎಂದರೆ ಎಲ್ಲರ ಹಾಟ್ ಫೇವರೆಟ್
ಮಳೆಗಾಲದಲ್ಲಿ ಪತ್ರೊಡೆ ತಿನ್ನುವುದರಲ್ಲಿ ಸಿಗುವ ಖುಷಿ ಇದೆಯಲ್ಲಾ, ಅದನ್ನು ವರ್ಣಿಸಲು ಸಾಧ್ಯವಿಲ್ಲ. ಅಯುಷ್ ಇಲಾಖೆ ಕೂಡ ಪತ್ರೊಡೆಯನ್ನು ಔಷಧೀಯ ಆಹಾರವೆಂದು ಹೇಳಿದೆ.
- ಪತ್ರೊಡೆ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
- ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
- ಹೃದಯದ ಆರೋಗ್ಯಕ್ಕೆ ಒಳ್ಳೆಯದು
- ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗುವುದ, ಪತ್ರೊಡೆ ತಿನ್ನುವುದರಿಂದ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು.
- ಕೆಸುವಿನ ಎಲೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಇಷ್ಟೆಲ್ಲಾ ಗುಣಗಳ ಜೊತೆಗೆ ಬಾಯಿಗೂ ತುಂಬಾನೇ ರುಚಿಯಾಗಿರುವುದರಿಂದ ಪತ್ರೊಡೆ ನಮ್ಮೆಲ್ಲರ ಅಚ್ಚುಮೆಚ್ಚು ಆಗಿದೆ ಅಲ್ವಾ?
ನೀವು ಪತ್ರೊಡೆ ಸ್ನ್ಯಾಕ್ಸ್ ಟ್ರೈ ಮಾಡುವುದಾದರೆ ಈ ರೆಸಿಪಿ ಟ್ರೈ ಮಾಡಿ:
- ಕೆಸದ ಎಲೆ 50 (ದೊಡ್ಡ ಗಾತ್ರದ ಎಲೆಯಿಂದ ಚಿಕ್ಕ ಗಾತ್ರದ ಎಲೆಯವರೆಗೂ ಬಳಸಬಹುದು)
- ಅಕ್ಕಿ 1 ಕಪ್
- ಒಂದು ಹಿಡಿಯಷ್ಟು ಅವಲಕ್ಕಿ
- ಬ್ಯಾಡಗಿ ಮೆಣಸು 10-12
- 1 ಕಪ್ ತೆಂಗಿನತುರಿ
- ಇಂಗು(ಪೇಸ್ಟ್ ಬಳಸಿ,ಇಂಗು ಬೇಕೇಬೇಕು)
- ದೊಡ್ಡ ನಿಂಬೆಹಣ್ಣು ಗಾತ್ರದಷ್ಟು ಹುಣಸೆಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
- ಅಕ್ಕಿಯನ್ನು 1 ತಾಸು ನೆನೆ ಹಾಕಿ
- ಎಲೆಯನ್ನು ತೊಳೆದು ಅದರ ತೊಟ್ಟು ತೆಗೆಯಿರಿ
- ಈಗ ತೆಂಗಿನತುರಿಗೆ ಒಣಮೆಣಸು (ಸುಟ್ಟು ಹಾಕಿ,ರುಚಿ ಹೆಚ್ಚುತ್ತೆ), ಹುಣಸೆಹಣ್ಣು, ಅವಲಕ್ಕಿ ಹಾಕಿ ನುಣ್ಣನೆ ರುಬ್ಬಿ
- ನಂತರ ಅಕ್ಕಿಯನ್ನು ಸೋಸಿ ತರಿತರಿಯಾಗಿ ರುಬ್ಬಿ
- ತೆಂಗಿನಕಾಯಿ ಪೇಸ್ಟ್ ಅಕ್ಕಿ ತುರಿ ಮಿಕ್ಸ್ ಮಾಡಿ
- ಈಗ ದೊಡ್ಡ ತಟ್ಟೆಯನ್ನು ಮಗುಚಿ ಹಾಕಿ ಅಥವಾ ಟೇಬಲ್ ಮೇಲೆಯೂ ಇಡಬಹುದು, ನಂತರ ಕೆಸದ ಎಲೆಯ ಕೆಳಭಾಗಕ್ಕೆ ರುಬ್ಬುದ ಪೇಸ್ಟ್ ಹಚ್ಚಿ, ಮೊದಲಿಗೆ ದೊಡ್ಡ ಎಲೆಯ ಮೇಲೆ ಹಚ್ಚಿ, ಅದರ ಮೇಲೆ ಮತ್ತೊಂದು ಎಲೆ ಇಟ್ಟು ರುಬ್ಬಿದ ಮಿಶ್ರಣ ಹಚ್ಚಿ, ಹೀಗೆ ಎಲ್ಲಾ ಎಲೆಯ ಮೇಲೆ ಹಚ್ಚಿ ನಂತರ ಅದನ್ನು ಸುತ್ತಿ ರೋಲ್ ಮಾಡಿ , ನೂಲು ಅಥವಾ ತೆಂಗಿನನಾರಿನಿಂದ ಕಟ್ಟಿ ಹಬೆಯಲ್ಲಿ ಬೇಯಿಸಿ.
- ನಂತರ ರೌಂಡ್-ರೌಂಡಾಗಿ ಕತ್ತರಿಸಿ ತವಾಗೆ ಸ್ವಲ್ಪ ತೆಂಗಿನೆಣ್ಣೆ ಅಥವಾ ತುಪ್ಪ ಹಾಕಿ ಫ್ರೈ ಮಾಡಿದರೆ ಪತ್ರೊಡೆ ಸ್ನ್ಯಾಕ್ಸ್ ರೆಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications