Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮಳೆಗಾಲ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ-ಅಶ್ವಗಂಧ ಹೇಗೆ ಬಳಸಬೇಕು?
ಕೊರೊನಾ ಸಮಯದಲ್ಲಿ ಎಲ್ಲರೂ ಮನೆಮದ್ದುಗಳನ್ನು ತಿಳಿಯಲು ತುಂಬಾನೇ ಆಸಕ್ತಿ ತೋರುತ್ತಿದ್ದರು. ಅಜ್ಜಿ ಕಾಲದ ಚಿಕ್ಕ ಪುಟ್ಟ ಮನೆಮದ್ದುಗಳು ತುಂಬಾ ಜನರಿಗೆ ಗೊತ್ತೇ ಇರಲಿಲ್ಲ, ಆ ಮದ್ದುಗಳನ್ನು ಆ ಸಮಯದಲ್ಲಿ ಹೆಚ್ಚಾಗಿ ಬಳಸಲಾಯಿತು. ಅದರಲ್ಲೂ ಜನರ ಆರೋಗ್ಯ ಕಾಪಾಡುವಲ್ಲಿ ಕಷಾಯ, ಕೆಲವೊಂದು ಆಯುರ್ವೇದ ಹರ್ಬ್ಸ್ ಪ್ರಮುಖ ಪಾತ್ರವಹಿಸಿದೆವು.

ಇದೀಗ ಮಳೆಗಾಲ ಶುರುವಾಗಿ, ಈ ಸಮಯದಲ್ಲಿ ನೀವು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅದಕ್ಕೆ ಮನೆಮದ್ದುಗಳು ಸಹಾಯ ಮಾಡುತ್ತದೆ, ಅದರಲ್ಲೂ ಆಯುರ್ವೇದಲ್ಲಿ ಬಳಸುವ ಕೆಲವೊಂದು ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿಯಾಗಿದೆ. ನಾವು ಈ ಲೇಖನದಲ್ಲಿ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಹಾಗೂ ಅಶ್ವಗಂಧ ಬಳಸುವುದು ಹೇಗೆ ಎಂದು ಹೇಳಲಾಗಿದೆ ನೋಡಿ:
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಹಾಗೂ ಅಶ್ವಗಂಧದ ಕಷಾಯ
1 ಚಮಚ ಅಶ್ವಗಂಧ ಪುಡಿ, 5-6 ತುಳಸಿ ಇವುಗಳನ್ನು ಒಂದು ಲೋಟ ಕುದಿಯುವ ನೀರಿಗೆ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನೀವು ಈ ಕಷಾಯ ದಿನಾ ಒಂದು ಲೋಟ ಅಥವಾ ಎರಡು ದಿನಕ್ಕೊಮ್ಮೆ ಕುಡಿದರೆ ಕೆಮ್ಮು, ನೆಗಡಿ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.
ಅಶ್ವಗಂಧ-ತುಳಸಿ ಕಷಾಯ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು
ಅಶ್ವಗಂಧ -ತುಳಸಿ ಕಷಾಯ ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಇದು ಸೋಂಕಾಣು ವಿರುದ್ಧ ಹೋರಾಡುವಂತೆ ದೇಹವನ್ನು ಬಲಪಡಿಸುತ್ತದೆ. ಮಳೆಗಾಲದಲ್ಲಿ ಸೋಂಕು ತಗುಲಿ ಕಾಯಿಲೆ ಬೀಳುವುದು ಸಹಜ, ಇದನ್ನು ತಡೆಗಟ್ಟುವಲ್ಲಿ ಈ ಕಷಾಯ ಸಹಕಾರಿಯಾಗಿದೆ.
2. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಅಶ್ವಗಂಧಕ್ಕೆ ಮಾನಸಿಕ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯವಿದೆ. ಅತಿಯಾದ ಮಾನಸಿಕ ಒತ್ತಡ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವುದು.
3. ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತದ ಸಮಸ್ಯೆ ಕಡಿಮೆ ಮಾಡುವುದು'
ನೀವು ತುಳಸಿ ಹಾಗೂ ಅಶ್ವಗಂಧದ ಕಷಾಯ ಕುಡಿಯುವುದರಿಂದ ಇದರಲ್ಲಿರುವ ಪ್ರತಿರೋಧಕ ಹಾಗೂ ಉರಿಯೂತ ಕಡಿಮೆ ಮಾಡುವ ಗುಣದಿಂದ ಮೈಕೈ ನೋವು, ಸಂಧಿವಾತ ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
