For Quick Alerts
ALLOW NOTIFICATIONS  
For Daily Alerts

ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!

|

ಮೂತ್ರಪಿಂಡವು ದೇಹದ ಅತ್ಯಂತ ಸೂಕ್ಷ್ಮವಾದ ಅಂಗ. ಹೆಚ್ಚಿನವರು ಈ ಅಂಗದ ಬಗ್ಗೆ ಹೆಚ್ಚು ಕಾಳಜಿವಸುವುದಿಲ್ಲ. ಆದರೆ ನಮ್ಮನ್ನು ಆರೋಗ್ಯವಂತರಾಗಿಡುವ ಅನೇಕ ಕಾರ್ಯಗಳನ್ನು ಕಿಡ್ನಿ ಮಾಡುತ್ತದೆ. ಇದರ ಆರೈಕೆಗೆ ಒತ್ತು ನೀಡದಿದ್ದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

Chronic Kidney

ಇತ್ತೀಚಿನ ಜೀವನಶೈಲಿಯಿಂದ ಮೂತ್ರಪಿಂಡದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಜಾಸ್ತಿಯಾಗುತ್ತಿದೆ. ನಿಮಗೊಂದು ತಿಳಿದಿರಲಿ ನಮ್ಮ ಮೂತ್ರಪಿಂಡ ಅಪಾಯದ ಸ್ಥಿಯಲ್ಲಿದೆ ಎಂದರೆ ನಮ್ಮ ದೇಹವೂ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಈ ಬಗ್ಗೆ ಗಮನವಹಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ನಮಗೆ ತಿಳಿಯದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಇದು ಎಡೆಮಾಡಿಕೊಡುತ್ತದೆ. ಅನೇಕರಿಗೆ ಇದು ತಿಳಿಯೋದೆ ಇಲ್ಲ.

ಹಾಗಾದರೆ ಯಾವೆಲ್ಲ ಸೂಚನೆಗಳನ್ನು ದೇಹ ನಮಗೆ ನೀಡುತ್ತದೆ ಎನ್ನುವುದನ್ನು ನೋಡೋಣ ಬನ್ನಿ:

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಕಾರಣಗಳು ಯಾವುವು?

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಕಾರಣಗಳು ಯಾವುವು?

ಇತ್ತೀಚಿನ ಜೀವನಶೈಲಿಯಿಂದ ಕಂಡು ಬರುವ ಮಧುಮೇಹ, ಸ್ಥೂಲಕಾಯತೆ ಮತ್ತು ರಕ್ತದೊತ್ತಡದ ಸಮಸ್ಯೆಗಳಿಂದ ಮೂತ್ರಪಿಂಡದ ಕಾಯಿಲೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಜೀವನ ಶೈಲಿ, ಆಹಾರ ಕ್ರಮಗಳು ಇಂತಹ ಅಪಾಯವನ್ನು ಹೆಚ್ಚಿಸುತ್ತದೆ. ಈ ಕೆಳಗೆ ನೀಡುವ ಕಾಯಿಲೆಗಳು ಕಿಡ್ನಿಯ ಡ್ಯಾಮೇಜ್ ಗೆ ಕಾರಣವಾಗಿದೆ. ಇವುಗಳಿಂದ ಕಿಡ್ನಿಯ ಸಮಸ್ಯೆಗಳು ಮನುಷ್ಯನಿಗೆ ಕಾಡಬಹುದು.

1.ಮಧುಮೇಹ

2.ಅಧಿಕ ರಕ್ತದೊತ್ತಡದ

3.ಹೃದಯ ಸಂಬಂಧಿ ಕಾಯಿಲೆ

4.ತೀವ್ರತರದ ಧೂಮಪಾನ

5.ಸ್ಥೂಲಕಾಯತೆ

6.ಕೌಟುಂಬಿಕ ಹಿನ್ನಲೆಯಿಂದ

7.ಅಸಹಜ ಮೂತ್ರಪಿಂಡ ರಚನೆ

ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂಬ ಸೂಚನೆಗಳು ಯಾವುವು?

ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂಬ ಸೂಚನೆಗಳು ಯಾವುವು?

ಆಗಲೇ ಹೇಳಿದ ಹಾಗೇ ನಮ್ಮ ಕಿಡ್ನಿ ಅಥವಾ ಮೂತ್ರಪಿಂಡ ಅಪಾಯದಲ್ಲಿದೆ ಎಂದು ಕೆಲವೊಂದು ದೇಹದಲ್ಲಿನ ಆರೋಗ್ಯದ ಏರುಪೇರಿನಲ್ಲಿ ನಮಗೆ ತಿಳಿಯುತ್ತದೆ. ಆದರೆ ಈ ಬಗ್ಗೆ ನಮಗೆ ಅರಿವಿಲ್ಲದಿದ್ದರೆ ಅಪಾಯ ಹೆಚ್ಚುತ್ತಲೇ ಹೋಗುತ್ತದೆ. ಕಿಡ್ನಿಯ ತೀವ್ರ ಸಮಸ್ಯೆಗೂ ಇದು ಕಾರಣವಾಗುತ್ತದೆ. ಎಷ್ಟರಪಟ್ಟಿಗೆ ಅಂದರೆ ಕಿಡ್ನಿ ನಿಷ್ಕ್ತಿಯವಾಗೋದು, ಅದರ ಕೆಲಸವನ್ನು ಅದು ಸರಿಯಾಗಿ ಮಾಡದೇ ಇರುವಂತಹ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ಯಾವೆಲ್ಲ ಲಕ್ಷಣಗಳು ನಮಗೆ ಕಾಣುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ನಿರಂತರ ಮೂತ್ರ ವಿಸರ್ಜನೆ!

ನಿರಂತರ ಮೂತ್ರ ವಿಸರ್ಜನೆ!

ಆಗೊಮ್ಮೆ ಈಗೊಮ್ಮೆ ಮೂತ್ರ ಮಾಡುವುದು ಅಥವಾ ಸಾಮಾನ್ಯಕ್ಕಿಂತ ನಿರಂತರವಾಗಿ ಮೂತ್ರ ಮಾಡುವುದು ಮೂತ್ರಪಿಂಡದ ಸಮಸ್ಯೆ ಮೊದಲ ಹಾಗೂ ಸಾಮಾನ್ಯ ಲಕ್ಷಣವಾಗಿದೆ. ಈ ರೀತಿ ಇದ್ದರೆ ನಿಮಗೆ ಮೂತ್ರಪಿಂಡದ ಸಮಸ್ಯೆ ಇದೆ ಎಂದರ್ಥವಾಗಿದೆ. ಇದಲ್ಲದೇ ನೀವು ಮೂತ್ರವನ್ನು ಹೊರಹಾಕುವಾಗ ನಿಮ್ಮ ಮೂತ್ರದ ಬಣ್ಣವು ನಿಮ್ಮ ಮೂತ್ರಪಿಂಡದ ಬಗ್ಗೆ ಹೇಳುತ್ತದೆ. ಮೂತ್ರವನ್ನು ಮಾಡುವಾಗ ನಿಮಗೆ ಏನಾದರೂ ಕೆಂಪು ಬಣ್ಣ ಹಳದಿ ಬಣ್ಣ ಹಾಗೂ ಅರಿಶಿನ ಬಣ್ಣದ ಮೂತ್ರ ನಿಮಗೆ ಬರುತ್ತಿದ್ದರೆ ನಿಮ್ಮ ಮೂತ್ರಪಿಂಡದಲ್ಲಿ ತೊಂದರೆ ಇದೆ ಎಂದು ಅರ್ಥ. ಅಲ್ಲದೇ ನಿಮಗೆ ಮೂತ್ರ ಮಾಡುವಾಗ ನಿರಂತರವಾಗಿ ನೋವು ಇದ್ದರೆ ಅದು ಕೂಡ ಮೂತ್ರಪಿಂಡ ಸಮಸ್ಯೆಯ ಲಕ್ಷಣವಾಗಿದೆ. ಹಾಗಾಗಿ ನಿಮ್ಮ ಮೂತ್ರದಿಂದ ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಸಲೀಸಾಗಿ ಕಂಡುಹಿಡಿಯಬಹುದು. ಮೂತ್ರಪಿಂಡ ಅನಾರೋಗ್ಯವಾಗಿದೆ ಎಂದು ತಿಳಿದುಕೊಳ್ಳಬಹುದು.

ಊತ ಉಂಟಾಗುವುದು!

ಊತ ಉಂಟಾಗುವುದು!

ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳ ಮುಖ್ಯ ಕೆಲಸವೆಂದರೆ ದೇಹದಿಂದ ವಿಷ ಮತ್ತು ಕಲ್ಮಶಗಳನ್ನು ಹೊರಹಾಕುವುದಾಗಿದೆ. ಎಲ್ಲದರೂ ಕಿಡ್ನಿಯೂ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಈ ವಿಷಗಳು ದೇಹದೊಳಗೆ ಸಂಗ್ರಹವಾಗುತ್ತವೆ. ಇದು ದೇಹದ ಹಲವಾರು ಅಂಗಾಂಶಗಳಲ್ಲಿ ವಿಷ, ಹೆಚ್ಚುವರಿ ನೀರು ಮತ್ತು ಉಪ್ಪನ್ನು ನಿರ್ಮಿಸಲು ಕಾರಣವಾಗುತ್ತದೆ. ಇದರಿಂದಾಗಿ ಕಾಲುಗಳು, ಕೈಗಳು, ಮುಖ ಮತ್ತು ಪಾದಗಳಲ್ಲಿ ಊತ ಉಂಟಾಗುತ್ತದೆ. ಇದಲ್ಲದೇ ಮೊಣಕಾಲು ನೋವು ಹಾಗೂ ಸೊಂಟದ ಭಾಗದಲ್ಲಿ ಅಂದರೆ ಮೂತ್ರಪಿಂಡ ಇರುವಂತಹ ಜಾಗದಲ್ಲಿ ಹೆಚ್ಚಾಗಿ ನೋವು ಕಂಡು ಬರುತ್ತದೆ.

ಹಸಿವ ಆಗದೇ ಇರುವುದು!

ಹಸಿವ ಆಗದೇ ಇರುವುದು!

ನೀವು ಈ ಹಿಂದೆ ತುಂಬ ಹಸಿಯುತ್ತಿದ್ದಿರಿ ಸರಿಯಾಗಿ ಊಟ ಮಾಡುತ್ತಿದ್ದೀರಿ ಅಂದುಕೊಳ್ಳಿ ಆದರೆ ಈಗ ಹಸಿವು ಆಗುವುದಿಲ್ಲ ಎಂದಾದರೆ ಇದರ್ಥ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂಬುವುದಾಗಿದೆ.ಹೌದು ಇದು ಮೂತ್ರಪಿಂಡ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಹಸಿವು ಆಗದೆ ಇರುವುದು ಅಥವಾ ಹಸಿವಿನ ನಿರಂತರ ನಷ್ಟವು ನಿಮ್ಮ ಮೂತ್ರಪಿಂಡಗಳು ಅಪಾಯದಲ್ಲಿದೆ ಎಂದು ಸೂಚಿಸುವ ಪ್ರಮುಖ ಚಿಹ್ನೆಗಳಲ್ಲಿ ಒಂದಾಗಿದೆ.

ಮೂತ್ರದಲ್ಲಿ ರಕ್ತ!

ಮೂತ್ರದಲ್ಲಿ ರಕ್ತ!

ನಿಮ್ಮ ಮೂತ್ರದಲ್ಲಿ ಯಾವುದೇ ಕೆಂಪು ಕಲೆಗಳು ಅಥವಾ ನಿಮ್ಮ ಮೂತ್ರದಲ್ಲಿ ರಕ್ತ ಹೆಪ್ಪುಗಟ್ಟಿರುವ ಅನುಭವ ನಿಅಮಗಾದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ನಿಮ್ಮ ಮೂತ್ರದ ಬಣ್ಣದಲ್ಲಿ ಹಠಾತ್ ಬದಲಾವಣೆಯಾದರೆ ಅದು ರಕ್ತ ಮಿಶ್ರಿತ ಮೂತ್ರವಾಗಿರುತ್ತದೆ. ಇದು ಮೂತ್ರಪಿಂಡದ ಸಮಸ್ಯೆಯ ನಿರ್ಣಾಯಕ ಸಂಕೇತವಾಗಿದೆ. ಈ ಸ್ಥಿತಿಯನ್ನು ಹೆಮಟುರಿಯಾ ಎಂದು ಕರೆಯಲಾಗುತ್ತದೆ.

ವಿಪರೀತ ಆಯಾಸ!

ವಿಪರೀತ ಆಯಾಸ!

ಯಾವುದೇ ಕೆಲಸವನ್ನು ಮಾಡಿದರೂ ಕೂಡ ಹೆಚ್ಚಿಗೆ ಆಯಾಸ ಆಗುತ್ತಿರುವ ಅನುಭವ ನಿಮಗಾದರೆ ಇದು ಕೂಡ ಕಿಡ್ನಿ ಸಮಸ್ಯೆಯ ಲಕ್ಷಣವಾಗಿದೆ. ಹೌದು, ಮೂತ್ರಪಿಂಡ ಸಮಸ್ಯೆ ಇದ್ದರೆ ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಅಲ್ಲದೆ ಇದು ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಕೆಂಪು ರಕ್ತ ಕಣಗಳಲ್ಲಿನ ಈ ಇಳಿಕೆ ದೇಹದಾದ್ಯಂತ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯನ್ನು ನೇರವಾಗಿ ಪರಿಣಾಮ ಬೀರುತ್ತದೆ. ಇದು ಸೆಲ್ಯುಲಾರ್ ಚಯಾಪಚಯ ಕ್ರಿಯೆಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಮೂತ್ರಪಿಂಡದ ಆರೋಗ್ಯದಲ್ಲಿನ ಹಠಾತ್ ಬದಲಾವಣೆಯು ತೀವ್ರ ಆಯಾಸ, ವಾಕರಿಕೆಗೆ ಕಾರಣವಾಗುತ್ತದೆ.

ಮೂತ್ರದಲ್ಲಿ ಕಲ್ಲುಗಳಂತಹ ರಚನೆ!

ಮೂತ್ರದಲ್ಲಿ ಕಲ್ಲುಗಳಂತಹ ರಚನೆ!

ಮೂತ್ರದ ಬಣ್ಣದಲ್ಲಿನ ಬದಲಾವಣೆಯು ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಯ ಒಂದು ಸಾಮಾನ್ಯ ಲಕ್ಷಣವಾಗಿದೆ, ಆದಾಗ್ಯೂ, ನೀವು ಅಥವಾ ನಿಮ್ಮ ಕುಟುಂಬವು ಮೂತ್ರಪಿಂಡದ ಕಲ್ಲು ಸಮಸ್ಯೆ ಅಥವಾ ಸ್ಥೂಲಕಾಯತೆಯ ಇತಿಹಾಸವನ್ನು ಹೊಂದಿದ್ದರೆ, ನಿಮ್ಮ ಮೂತ್ರಪಿಂಡಗಳು ಅಪಾಯದಲ್ಲಿರುತ್ತದೆ. ಹೀಗಾಗಿ, ಮೂತ್ರಪಿಂಡದ ಸಂಬಂಧ ಪರೀಕ್ಷೆ ನಡೆಸುವುದು ಉತ್ತಮ.

ರಕ್ತದೊತ್ತಡದಲ್ಲಿ ಹಠಾತ್ ಏರಿಕೆ!

ರಕ್ತದೊತ್ತಡದಲ್ಲಿ ಹಠಾತ್ ಏರಿಕೆ!

ಹಠಾತ್ ರಕ್ತದೊತ್ತಡದ ಹೆಚ್ಚಳವು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಅಧ್ಯಯನಗಳ ಪ್ರಕಾರ, ಅಧಿಕ ರಕ್ತದೊತ್ತಡವು ಮೂತ್ರಪಿಂಡ ವೈಫಲ್ಯಕ್ಕೆ ಅಥವಾ ಕಿಡ್ನಿ ಫೈಲ್ ಗೆ ಸಂಬಂಧಿಸಿದೆ. ಆದ್ದರಿಂದ, ನಿಮ್ಮ ರಕ್ತದೊತ್ತಡದಲ್ಲಿ ಹಠಾತ್ ಏರಿಕೆ ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.

English summary

Chronic Kidney Disease: Signs That Say Your Kidney Is In Danger in Kannada

Chronic Kidney Disease: Don't negelect these warning signs of kidney disease, read on...
X
Desktop Bottom Promotion