For Quick Alerts
ALLOW NOTIFICATIONS  
For Daily Alerts

ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ

|

ಹೆಚ್ಚಿನ ಭಾರತೀಯ ಮನೆಗಳಲ್ಲಿ ಹಾಲು ಪ್ರಧಾನವಾಗಿದೆ, ಆದರೆ ಎಲ್ಲರೂ ಹಸುವಿನ ಹಾಲು ಕುಡಿಯಲು ಸಾಧ್ಯವಿಲ್ಲ. ಪಾನೀಯವಾಗಿ ಕುಡಿಯುವುದರಿಂದ ಹಿಡಿದು ಬೆಳಿಗ್ಗೆ ಸಿರಿಧಾನ್ಯಕ್ಕೆ ಸೇರಿಸುವವರೆಗೆ, ಇದು ಬಾಲ್ಯದಿಂದಲೂ ನಮ್ಮ ಜೀವನದ ಒಂದು ಭಾಗವಾಗಿದೆ.

Best Non-dairy Substitutes For Milk In Kannada

ಹಸುವಿನ ಹಾಲು ಸಮೃದ್ಧ-ಗುಣಮಟ್ಟದ ಪ್ರೋಟೀನ್ ಆಗಿದ್ದು ಅದು ಕ್ಯಾಲ್ಸಿಯಂ, ರಂಜಕ ಮತ್ತು ಬಿ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ವಿವಿಧ ಪೋಷಕಾಂಶಗಳ ಉತ್ತಮ ಮೂಲವಾಗಿದ್ದರೂ, ಇ ಆಹಾರದ ನಿರ್ಬಂಧಗಳು, ಅಲರ್ಜಿಗಳು ಹೊಂದಿರುವ ಜನರಿಗೆ ಹಾನಿಕಾರಕವಾಗಿದೆ. ಆದ್ದರಿಂದ, ನೀವು ಸಹ ಹಾಲಿಗೆ ಡೈರಿಯೇತರ ಪರ್ಯಾಯವನ್ನು ಹುಡುಕುತ್ತಿದ್ದರೆ, ನೀವು ಪ್ರಯತ್ನಿಸಬಹುದಾದ ಕೆಲವು ಆಯ್ಕೆಗಳು ಇಲ್ಲಿವೆ.

ಸೋಯಾ ಹಾಲು:

ಸೋಯಾ ಹಾಲು:

ಸೋಯಾಬೀನ್ ಅಥವಾ ಸೋಯಾ ಪ್ರೋಟೀನ್‌ನಿಂದ ತಯಾರಿಸಲ್ಪಟ್ಟ ಈ ಹಾಲಿನಲ್ಲಿ ಸಸ್ಯಜನ್ಯ ಎಣ್ಣೆಯು ರುಚಿ ಮತ್ತು ಸ್ಥಿರತೆಯನ್ನು ಸುಧಾರಿಸುತ್ತದೆ. ಹಸುವಿನ ಹಾಲಿಗೆ ಬದಲಿಗೆ ಈ ಹಾಲು ಎಲ್ಲಾ ಅಮೈನೋ ಆಮ್ಲಗಳನ್ನು ಒದಗಿಸುತ್ತದೆ. ಇದರಲ್ಲಿ ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಕೂಡ ಸಮೃದ್ಧವಾಗಿದೆ. ಸೋಯಾ ಹಾಲಿನ ಸುತ್ತ ಅನೇಕ ವಿವಾದಗಳಿವೆ, ಆದರೆ ಮಿತವಾಗಿ ಕುಡಿಯುವುದರಿಂದ ನಿಮಗೆ ಹಾನಿಯಾಗುವುದಿಲ್ಲ.

ಬಾದಾಮಿ ಹಾಲು:

ಬಾದಾಮಿ ಹಾಲು:

ಈ ಸಿಹಿ ಹಾಲನ್ನು ಬಾದಾಮಿಯಿಂದ ತಯಾರಿಸಲಾಗುತ್ತದೆ. ಬಾದಾಮಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು (ಎಂಯುಎಫ್ಎ) ಹೊಂದಿದ್ದು, ತೂಕ ನಷ್ಟ ಮತ್ತು ತೂಕ ನಿರ್ವಹಣೆಗೆ ಸಹಾಯಕವೆಂದು ಪರಿಗಣಿಸಲಾಗುತ್ತದೆ. ಅವು ವಿಟಮಿನ್ ಇ, ಪ್ರೋಟೀನ್ಗಳು, ಮ್ಯಾಂಗನೀಸ್ ಮತ್ತು ಫೈಬರ್ಗಳ ಸಮೃದ್ಧ ಮೂಲವಾಗಿದೆ. ಬಾದಾಮಿ ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ.

ತೆಂಗಿನ ಹಾಲು:

ತೆಂಗಿನ ಹಾಲು:

ತೆಂಗಿನಕಾಯಿಯ ತುರಿಯಿಂದ ತಯಾರಿಸಲ್ಪಟ್ಟ ಈ ಹಾಲು ಒಂದೊಳ್ಳೆ ಪರಿಮಳವನ್ನು ಹೊಂದಿರುತ್ತದೆ. ಇದರಲ್ಲಿ ಕ್ಯಾಲೋರಿಗಳು, ಕೊಬ್ಬುಗಳಿದ್ದು, ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್‌ಗಳಿರುವುದಿಲ್ಲ. ಕಾರ್ಬ್ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವ ಜನರಿಗೆ ಇದು ಉತ್ತಮವಾಗಿದೆ, ಆದರೆ ಹೆಚ್ಚಿನ ಪ್ರೋಟೀನ್ ಆಹಾರದಲ್ಲಿರುವವರಿಗೆ ಇದು ಉತ್ತಮವಲ್ಲ. ತೆಂಗಿನ ಹಾಲು ಎಚ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಗೋಡಂಬಿ ಹಾಲು:

ಗೋಡಂಬಿ ಹಾಲು:

ಗೋಡಂಬಿ ಬೀಜಗಳು, ಗೋಡಂಬಿ ಬೆಣ್ಣೆ ಮತ್ತು ನೀರಿನ ಮಿಶ್ರಣದಿಂದ ಈ ಕೆನೆ ತಯಾರಿಸಲಾಗುತ್ತದೆ. ಈ ಹಾಲಿನಲ್ಲಿ ಕ್ಯಾಲೊರಿ, ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಕಡಿಮೆ ಇದ್ದು, ಇದು ಮಧುಮೇಹಕ್ಕೆ ಉತ್ತಮ ಆಯ್ಕೆಯಾಗಿದೆ. ಆದರೆ ಅವುಗಳಲ್ಲಿ ಬಹಳ ಕಡಿಮೆ ಪ್ರೋಟೀನ್ ಇರುತ್ತದೆ. ಆದ್ದರಿಂದ ಹೆಚ್ಚಿನ ಪ್ರೋಟೀನ್ ಅವಶ್ಯಕತೆ ಇರುವವರಿಗೆ ಉತ್ತಮ ಆಯ್ಕೆಯಾಗಿಲ್ಲ.

ಅಕ್ಕಿ ಹಾಲು:

ಅಕ್ಕಿ ಹಾಲು:

ಬಿಳಿ ಅಥವಾ ಕಂದು ಅಕ್ಕಿ ಮತ್ತು ನೀರಿನಿಂದ ಪಡೆದ ಅಕ್ಕಿ ಹಾಲು ಲ್ಯಾಕ್ಟೋಸ್ ಕೊರತೆಯಿರುವವರಿಗೆ ಮತ್ತೊಂದು ಆಯ್ಕೆಯಾಗಿದೆ. ಡೈರಿಯೇತರ ಹಾಲಿನಲ್ಲಿ ಇದು ಕಡಿಮೆ ಅಲರ್ಜಿನ್ ಎಂದು ಹೇಳಲಾಗುತ್ತದೆ. ಇದು ಕಡಿಮೆ ಕೊಬ್ಬು ಮತ್ತು ಪ್ರೋಟೀನ್ ಹೊಂದಿದ್ದು, ಕಾರ್ಬೋಹೈಡ್ರೇಟ್‌ಗಳಲ್ಲಿ ಅಧಿಕವಾಗಿದೆ. ಅಕ್ಕಿ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಅಜೈವಿಕ ಆರ್ಸೆನಿಕ್ ಇದ್ದು, ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.

English summary

Best Non-dairy Substitutes For Milk In Kannada

Looking for non-dairy substitutes for milk? Here are 5 options you can try. have a look
X
Desktop Bottom Promotion