For Quick Alerts
ALLOW NOTIFICATIONS  
For Daily Alerts

ಈ ಗಿಡಮೂಲಿಕೆಯ ಟೀಯಿಂದ ನಿಮ್ಮ ಖಿನ್ನತೆಗೆ ಸಿಗಬಹುದು ಮುಕ್ತಿ

|

ರೋಸ್ಮರಿಯು ಸಾಂಪ್ರದಾಯಿಕ ಆಯುರ್ವೇದ ಔಷಧವಾಗಿದ್ದು, ವಿಶಿಷ್ಟ ಪರಿಮಳ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಇದು ಪುದೀನ ಗಿಡದ ಕುಟುಂಬದಿಂದ ಬಂದಿದ್ದು, ಶತಶತಮಾನಗಳಿಂದ ಔಷಧೀಯ ಗುಣಗಳ ಭಾಗವಾಗಿದೆ. ಈ ಆರೋಗ್ಯಕರ ಮೂಲಿಕೆಯು ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ -6 ನ ಉತ್ತಮ ಮೂಲವಾಗಿದೆ. ಸಾಮಾನ್ಯವಾಗಿ ಸಂಪೂರ್ಣ ಒಣಗಿದ ಮೂಲಿಕೆ ಅಥವಾ ಪುಡಿಯನ್ನು ಸಾರವಾಗಿ ಬಳಸಲಾಗುತ್ತದೆ, ಆದರೆ ಚಹಾವನ್ನು ತಾಜಾ ಅಥವಾ ಒಣಗಿದ ಎಲೆಗಳಿಂದ ತಯಾರಿಸಲಾಗುತ್ತದೆ. ಇದು ಸ್ನಾಯು ನೋವನ್ನು ನಿವಾರಿಸುವುದಲ್ಲದೇ, ಬುದ್ಧಿಶಕ್ತಿಯನ್ನು ಸುಧಾರಿಸುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ. ರೋಸ್ಮರಿ ಯಾವುದೇ ರೀತಿಯದ್ದಾದರೂ ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ರೋಸ್ಮರಿ ಚಹಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿದಿನ ಒಂದು ಕಪ್ ತಾಜಾ ರೋಸ್ಮರಿ ಗಿಡಮೂಲಿಕೆ ಚಹಾವನ್ನು ಕುಡಿಯಿರಿ ಮತ್ತು ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಿರಿ. ಇಂತಹ ರೋಸ್ಮರಿ ಟೀ ನಿಮ್ಮ ಆತಂಕ ಮತ್ತು ಖಿನ್ನತೆಗೆ ಹೇಗೆ ಸಹಾಯ ಮಾಡಲಿದೆ ಎಂಬುದನ್ನು ಈ ಲೇಖನದಲ್ಲಿ ಹೇಳಲಾಗಿದೆ.

ಆತಂಕ ಮತ್ತು ಖಿನ್ನತೆಗೆ ರೋಸ್ಮರಿ ಟೀ:

ಆತಂಕ ಮತ್ತು ಖಿನ್ನತೆಗೆ ರೋಸ್ಮರಿ ಟೀ:

ಆತಂಕ ಮತ್ತು ಖಿನ್ನತೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಎರಡು ಸಾಮಾನ್ಯ ನ್ಯೂರೋಸೈಕಿಯಾಟ್ರಿಕ್ ಸಮಸ್ಯೆಗಲಾಗಿವೆ. ಈ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದ್ದರೂ, ತೊಡಕುಗಳನ್ನು ತಪ್ಪಿಸಲು ರೋಗಲಕ್ಷಣಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಆತಂಕ ಮತ್ತು ಖಿನ್ನತೆಗಾಗಿ ರೋಸ್ಮರಿ ಚಹಾದ ಬಗ್ಗೆ ಸಂಶೋಧನೆ ನಡೆಯುತ್ತಿದ್ದರೂ, ರೋಸ್ಮರಿ ಚಹಾ ಕುಡಿಯುವುದು ಮತ್ತು ಅದರ ಗಾಳಿ ತೆಗೆದುಕೊಳ್ಳುವುದು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಮತ್ತು ನಿಮ್ಮ ನೆನಪಿನ ಶಕ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.

ಅಮೇರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ರೋಸ್ಮರಿ ಚಹಾದಲ್ಲಿ ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಈ ಚಹಾವು ಖಿನ್ನತೆ ಶಮನಕಾರಿ ಮತ್ತು ಆಂಜಿಯೋಲೈಟಿಕ್ ಪರಿಣಾಮಗಳನ್ನು ಹೊಂದಿದೆ. ಅದು ಎರಡೂ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ.

ಕಾಂಪ್ಲಿಮೆಂಟರಿ ಥೆರಪೀಸ್ ಇನ್ ಕ್ಲಿನಿಕಲ್ ಪ್ರಾಕ್ಟೀಸಸ್ ಜರ್ನಲ್ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು 500 ಮಿ.ಗ್ರಾಂ ರೋಸ್ಮರಿಯನ್ನು ದಿನಕ್ಕೆ ಎರಡು ಬಾರಿ ಒಂದು ತಿಂಗಳ ಕಾಲ ತೆಗೆದುಕೊಳ್ಳುವುದರಿಂದ ಆತಂಕದ ಮಟ್ಟವನ್ನು ನಿವಾರಿಸಬಹುದು ಮತ್ತು ಮೆಮೊರಿ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.

ರೋಸ್ಮರಿ ಚಹಾದ ಆರೋಗ್ಯ ಪ್ರಯೋಜನಗಳು:

ರೋಸ್ಮರಿ ಚಹಾದ ಆರೋಗ್ಯ ಪ್ರಯೋಜನಗಳು:

ದಕ್ಷಿಣ ಅಮೆರಿಕಾ ಮತ್ತು ಮೆಡಿಟರೇನಿಯನ್ ಪ್ರದೇಶದ ಮೂಲವನ್ನು ಹೊಂದಿರುವ ರೋಸ್ಮರಿ ಅನೇಕ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ. ರೋಸ್ಮರಿಯನ್ನು ನಿಯಮಿತವಾಗಿ ಕುಡಿಯುವುದರಿಂದ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ನಿಮಗೆ ಲಾಭವಾಗುತ್ತದೆ. ನೀವು ತಿಳಿದುಕೊಳ್ಳಬೇಕಾದ ರೋಸ್ಮರಿ ಚಹಾದ ಇತರ ಕೆಲವು ಪ್ರಯೋಜನಗಳು ಇಲ್ಲಿವೆ:

ಉತ್ಕರ್ಷಣ ನಿರೋಧಕಗಳು, ಉರಿಯೂತದ ಮತ್ತು ಆ್ಯ ಟಿಮೈಕ್ರೊಬಿಯಲ್ ಪರಿಣಾಮಗಳನ್ನು ಒಳಗೊಂಡಿರುತ್ತದೆ ಇದು ನಿಮಗೆ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ರೋಸ್ಮರಿ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ

  • ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
  • ರೋಸ್ಮರಿ ಚಹಾವು ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಂದ ರಕ್ಷಿಸುತ್ತದೆ
  • ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳಾದ ಮ್ಯಾಕ್ಯುಲರ್ ಡಿಜೆನರೇಶನ್‌ನ ತೀವ್ರತೆಯನ್ನು ನಿಧಾನಗೊಳಿಸುತ್ತದೆ
  • ಕರುಳಿನ ಆರೋಗ್ಯಕರ ಸಮತೋಲನವನ್ನು ಉತ್ತೇಜಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
  • ರೋಸ್ಮರಿ ಸಾರವು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ
ರೋಸ್ಮರಿ ಚಹಾ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ:

ರೋಸ್ಮರಿ ಚಹಾ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ:

ರೋಸ್ಮರಿ ಚಹಾವನ್ನು ತಯಾರಿಸುವುದು ತುಂಬಾ ಸುಲಭ. ಒಂದು ಪಾತ್ರೆಯಲ್ಲಿ ಎರಡು ಕಪ್ ನೀರನ್ನು ಕುದಿಯಲು ಇಡಿ. ಈಗ, ಮೂರು ಟೀ ಚಮಚ ರೋಸ್ಮರಿಯನ್ನು ತೆಗೆದುಕೊಂಡು ಅದನ್ನು ಸುಮಾರು 5 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಇದನ್ನು ಹೆಚ್ಚು ಸಮಯ ಕುದಿಸಬೇಡಿ. ಏಕೆಂದರೆ ಅದು ಕಹಿ ಬಿಡಲು ಶುರುವಾಗುತ್ತದೆ. ಎಲೆಗಳು ತಾಜಾವಾಗಿದ್ದರೆ ಎಲೆಗಳ ಸಮೇತ ಚಹಾ ಕುಡಿಯಬಹುದು, ಇಲ್ಲವಾದಲ್ಲಿ ಅದನ್ನು ಸೋಸಿ ತೆಗೆಯಿರಿ. ನೀವು ತುಂಬಾ ಕಹಿ ಅನುಭವಿಸಿದರೆ, ಅದನ್ನು ಸಿಹಿಯಾಗಿಸಲು ನೀವು ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಜೇನುತುಪ್ಪವು ಯಾವಾಗಲೂ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ಉತ್ಕರ್ಷಣ ನಿರೋಧಕ ಫ್ಲೇವನಾಯ್ಡ್ ಗಳಂತಹ ಸಂಯುಕ್ತಗಳನ್ನು ಒಳಗೊಂಡಿರುತ್ತದೆ, ಅದು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಸ್ಮರಿ ಚಹಾವು ಉತ್ತಮ ಆಯ್ಕೆಯಾಗಿದ್ದರೂ, ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು.

English summary

Benefits Of Rosemary Tea For Anxiety And Depression And How To Make

Anxiety and depression are two of the most common mental health problems affecting millions of people. Including rosemary tea in your diet can help people suffering from these problems.
X