For Quick Alerts
ALLOW NOTIFICATIONS  
For Daily Alerts

ಬರೀ ಎರಡೇ ವಾರಗಳಲ್ಲಿ ತೂಕ ಇಳಿಸಿಕೊಳ್ಳಲು 14 ಸರಳ ವಿಧಾನಗಳು

|

ದೇಹವನ್ನು ಆರೋಗ್ಯ ಹಾಗೂ ಫಿಟ್ ಆಗಿ ಇರಿಸಬೇಕು ಎಂದರೆ ಆಗ ಹಲವಾರು ರೀತಿಯ ವ್ಯಾಯಾಮ ಹಾಗೂ ಆಹಾರ ಕ್ರಮ ಕೂಡ ಆರೋಗ್ಯವಾಗಿರಬೇಕು. ಹೀಗೆ ಮಾಡಿದರೆ ಮಾತ್ರವು ದೇಹವು ಫಿಟ್ ಆಗಿ ಇರಲು ಸಾಧ್ಯ. ಇಲ್ಲವಾದಲ್ಲಿ ದೇಹದಲ್ಲಿ ಬೊಜ್ಜು ತುಂಬಿಕೊಳ್ಳುವುದು ಮತ್ತು ಹಲವಾರು ರೀತಿಯ ಕಾಯಿಲೆಗಳು ಕೂಡ ಬರುವುದು. ದೇಹದ ತೂಕ ಇಳಿಸಿಕೊಳ್ಳಲು ಹಲವಾರು ರೀತಿಯಿಂದ ಪ್ರಯತ್ನಿಸುವವರು ಇದ್ದಾರೆ. ಅತೀ ವೇಗವಾಗಿ ತೂಕ ಇಳಿಸಿಕೊಳ್ಲುವುದು ಹೇಗೆ ಎಂದು ಹೆಚ್ಚಿನವರು ಪ್ರಶ್ನಿಸುವರು. ಆದರೆ ನೀವು ಈ ಲೇಖನದಲ್ಲಿ ನೀಡಿರುವಂತಹ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಎರಡನೇ ವಾರಗಳಲ್ಲಿ ತೂಕ ಇಳಿಸಿಕೊಳ್ಳಬಹುದು. ಇದು ಹೇಗೆ ಎಂದು ನೀವು ತಿಳಿಯಿರಿ.

ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀ ಕುಡಿಯಿರಿ

ದೇಹದ ತೂಕ ತುಂಬಾ ವೇಗವಾಗಿ ಇಳಿಸಿಕೊಳ್ಳಲು ಪ್ರಮುಖವಾಗಿ ಗ್ರೀನ್ ಟೀ ಕುಡಿಯಬೇಕು. ಇದು ನಿಯಮಿತವಾಗಿ ಬಳಸಿಕೊಂಡರೆ ಅದ್ಭುತ ಫಲಿತಾಂಶ ನೀಡುವುದು. ದಿನದಲ್ಲಿ ನೀವು 3-5 ಕಪ್ ಗ್ರೀನ್ ಟೀ ಕುಡಿದರೆ ಆಗ ಶೇ.40ರಷ್ಟು ಕೊಬ್ಬು ಇಳಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ.

ಬೆಳಗ್ಗೆ ಬೇಗನೆ ವ್ಯಾಯಾಮ

ಬೆಳಗ್ಗೆ ಬೇಗನೆ ವ್ಯಾಯಾಮ

ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದರಿಂದಾಗಿ ಸುಮಾರು 3 ಪಟ್ಟು ಕೊಬ್ಬು ಕರಗಿಸಬಹುದು ಎಂದು ಹೇಳಲಾಗುತ್ತದೆ. ಇದು ಬೇರೆ ಯಾವುದೇ ಸಮಯದಲ್ಲೂ ವ್ಯಾಯಾಮ ಮಾಡುವುದಕ್ಕಿಂತ ಹೆಚ್ಚು ಫಲಪ್ರದವಾಗಿರುವುದು. ಬೆಳಗ್ಗೆ ನೀವು ಎದ್ದ ಬಳಿಕ ಒಂದು ಅರ್ಧ ಗಂಟೆ ವ್ಯಾಯಾಮ ಮಾಡಿ.

ಹೆಚ್ಚು ಕ್ರಿಯಾತ್ಮಕವಾಗಿರಿ

ಹೆಚ್ಚು ಕ್ರಿಯಾತ್ಮಕವಾಗಿರಿ

ತುಂಬಾ ಕ್ರಿಯಾತ್ಮಕವಾಗಿ ಹಾಗೂ ದಿನನಿತ್ಯ ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಸ್ವಲ್ಪ ಹೆಚ್ಚು ದೈಹಿಕ ಶ್ರಮ ಸೇರಿಸಿಕೊಂಡರೆ ಆಗ ನೀವು ಆಲೋಚಿಸಿರುವುದಕ್ಕಿಂತ ವೇಗವಾಗಿ ತೂಕ ಇಳಿಕೆ ಮಾಡಬಹುದು. ಈ ಅಧಿಕ ಚಟುವಟಿಕೆಗಳಿಂದ ಹೆಚ್ಚಿನ ಕ್ಯಾಲರಿ ದಹಿಸುವ ಮೂಲಕವಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗಿ ಇರಲಿದೆ.

ಹೆಚ್ಚು ನಡೆಯಿರಿ

ಹೆಚ್ಚು ನಡೆಯಿರಿ

ದಿನಕ್ಕೆ ನೀವು ನೂರು ಕ್ಯಾಲರಿ ಅಥವಾ ಅದಕ್ಕಿಂತ ಹೆಚ್ಚು ದಹಿಸಬೇಕು ಎಂದು ಬಯಸಿದ್ದರೆ ಆಗ ನೀವು ದಿನಕ್ಕೆ ಸುಮಾರು 10 ಸಾವಿರ ಹೆಜ್ಜೆ ನಡೆಯಬೇಕು. ಇದರಿಂದ ನೀವು ವರ್ಷಕ್ಕೆ ಸುಮಾರು ನಾಲ್ಕುವರೆ ಕೆಜಿ ಕಡಿಮೆ ಮಾಡಬಹುದು.

ತೂಕ ಇಳಿಸಿಕೊಳ್ಳಲು ಕೆಲವು ಆರೋಗ್ಯಕಾರಿ ತಿಂಡಿಗಳು

ಆದಷ್ಟು ನೀರು ಕುಡಿಯಿರಿ

ಆದಷ್ಟು ನೀರು ಕುಡಿಯಿರಿ

ದೇಹವು ಆರೋಗ್ಯವಾಗಿ ಇರಬೇಕಾದರೆ ಆಗ ನೀರು ಆದಷ್ಟು ಕುಡಿಯಬೇಕು ಎಂದು ಹೇಳಲಾಗುತ್ತದೆ. ನೀರು ಹೆಚ್ಚು ಮಟ್ಟದಲ್ಲಿ ಕುಡಿದರೆ ಆಗ ದೇಹದಲ್ಲಿ ಶೇಖರಣೆ ಆಗುವಂತಹ ಕೊಬ್ಬು ಕಡಿಮೆ ಆಗುವುದು. ಸರಿಯಾದ ಮಟ್ಟದಲ್ಲಿ ನೀರು ಕುಡಿಯದೆ ಇದ್ದರೆ ಆಗ ಕಿಡ್ನಿ ಮತ್ತು ಯಕೃತ್ ಗೆ ಸರಿಯಾಗಿ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಸಾಧ್ಯವಾಗದೆ ಇರಬಹುದು. ಯಕೃತ್ ನ ಮುಖ್ಯ ಕೆಲಸವೆಂದರೆ ಕೊಬ್ಬನ್ನು ಕರಗಿಸಿ ಶಕ್ತಿಯಾಗಿ ಪರಿವರ್ತನೆ ಮಾಡುವುದು ಮತ್ತು ಇದು ಸರಿಯಾಗಿ ಆಗದೆ ಇದ್ದರೆ ಆಗ ಕಿಡ್ನಿ ಕೆಲಸವನ್ನು ಕೂಡ ಮಾಡಬೇಕಾಗುತ್ತದೆ.

ಸರಿಯಾಗಿ ನಿದ್ರಿಸಿ

ಸರಿಯಾಗಿ ನಿದ್ರಿಸಿ

ಕ್ಯೂಬೆಕ್ ನ ಲಾವಲ್ ಯೂನಿವರ್ಸಿಟಿಯು ನಡೆಸಿರುವಂತಹ ಅಧ್ಯಯನದ ಪ್ರಕಾರ ಯಾರು 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಮಲಗುತ್ತಾರೆಯಾ ಮತ್ತು ಆರು ಗಂಟೆಗಿಂತ ಕಡಿಮೆ ಮಲಗುವವರು ದೇಹ ತೂಕ ಹೆಚ್ಚಿಸಿಕೊಳ್ಳುವರು. ಸಾಮಾನ್ಯವಾಗಿ ನಿದ್ರಿಸುವ ಸಮಯವು 7-8 ಗಂಟೆ ಆಗಿರುವುದು. ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡಿ ಮತ್ತು ತುಂಬಾ ದೀರ್ಘ ಕಾಲ ಮತ್ತು ತುಂಬಾ ಕಡಿಮೆ ಕೂಡ ಮಲಗಬೇಡಿ.

ಊಟಕ್ಕೆ ಮೊದಲು ನೀರು ಅಥವಾ ತರಕಾರಿ ಜ್ಯೂಸ್ ಸೇವಿಸಿ

ಊಟಕ್ಕೆ ಮೊದಲು ನೀರು ಅಥವಾ ತರಕಾರಿ ಜ್ಯೂಸ್ ಸೇವಿಸಿ

ಒಂದು ಲೋಟ ನೀರು ಅಥವಾ ತರಕಾರಿ ಜ್ಯೂಸ್ ಕುಡಿದರೆ ಆಗ ಹಸಿವು ಕಡಿಮೆ ಆಗುವುದು ಮತ್ತು ಆಗ ನೀವು ಹೆಚ್ಚು ಆಹಾರ ಸೇವನೆ ಮಾಡದೆ ತೂಕ ವೇಗವಾಗಿ ಕಳೆದುಕೊಳ್ಳುವಂತೆ ಮಾಡುವುದು.

ಹೆಚ್ಚು ಹೊತ್ತು ಆಹಾರ ಜಗಿಯಿರಿ

ಹೆಚ್ಚು ಹೊತ್ತು ಆಹಾರ ಜಗಿಯಿರಿ

ನೀವು ತಿನ್ನುವಂತಹ ಪ್ರತಿಯೊಂದು ಆಹಾರವನ್ನು 8-12 ಸಲ ಜಗಿಯಬೇಕು. ನಿಧಾನವಾಗಿ ತಿನ್ನಿ. ನೀವು ಹೀಗೆ ಮಾಡಿದರೆ ಆಗ ದೇಹಕ್ಕೆ ಇನ್ನಷ್ಟು ತಿನ್ನಲಿಕ್ಕೆ ಇದೆ ಎಂದು ತಿಳಿಯುವುದಿಲ್ಲ.

ಕೊಬ್ಬು ದಹಿಸಲು ತೂಕವಾದ ವಸ್ತುಗಳನ್ನು ಎತ್ತಿ

ಕೊಬ್ಬು ದಹಿಸಲು ತೂಕವಾದ ವಸ್ತುಗಳನ್ನು ಎತ್ತಿ

ನೀವು ಹೆಚ್ಚು ಭಾರದ ವಸ್ತುಗಳನ್ನು ಎತ್ತಿಕೊಂಡ ವೇಳೆ ಕೊಬ್ಬು ವೇಗವಾಗಿ ದಹಿಸುವುದು. ನೀವು ತುಂಬಾ ತೀವ್ರತೆಯಿಂದ ಹೆಚ್ಚು ತೂಕವನ್ನು ಎತ್ತಿಕೊಳ್ಳುವ ಕಾರಣದಿಂದಾಗಿ ಕೊಬ್ಬು ದಹಿಸುವುದು. ದೇಹದ ಚಯಾಪಚಯ ಕ್ರಿಯೆ ಕೂಡ ದೇಹದಲ್ಲಿ ಕೊಬ್ಬು ಕರಗಿಸಲು ನೆರವಾಗುವುದು. ಇದರಿಂದಾಗಿ ನೀವು ಭಾರವಾದ ತೂಕ ಎತ್ತಲು ಪ್ರಯತ್ನಿಸಿ.

4 ಗಂಟೆಗಿಂತ ಹೆಚ್ಚು ಕಾಲ ಕುಳಿತಿರಬೇಡಿ

4 ಗಂಟೆಗಿಂತ ಹೆಚ್ಚು ಕಾಲ ಕುಳಿತಿರಬೇಡಿ

ನಾಲ್ಕು ಗಂಟೆ ನೀವು ಕುಳಿತೇ ಇದ್ದರೆ ಆಗ ಕನಿಷ್ಠ 10 ನಿಮಿಷಕ್ಕೊಮ್ಮೆ ನೀವು ಎದ್ದು ನಿಲ್ಲಿ. ಮಿಸ್ಸೊರಿ ಯೂನಿವರ್ಸಿಟಿ ಪ್ರಕಾರ ನಾಲ್ಕು ಗಂಟೆಗಿಂತ ಹೆಚ್ಚು ಕಾಲ ನೀವು ಕುಳಿತುಕೊಂಡು ಇದ್ದರೆ ಆಗ ದೇಹದಲ್ಲಿನ ಚಯಾಪಚಯ ಕ್ರಿಯೆಯು ತುಂಬಾ ನಿಧಾನವಾಗುವುದು ಮತ್ತು ಕೊಬ್ಬು ದೇಹದಲ್ಲಿ ಶೇಖರಣೆ ಆಗುವುದು.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ. ಇನ್ನು ಪಪ್ಪಾಯಿಯನ್ನು ನೇರವಾಗಿ ತಿನ್ನಲು ಆಗದವರು ಅದನ್ನು ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಆದರೆ ತೂಕ ಕಳೆದುಕೊಳ್ಳಬೇಕೆಂದು ಬಯಸುವವರು ಜ್ಯೂಸ್‌ಗೆ ಸಕ್ಕರೆ ಹಾಕಬೇಡಿ. ಪಪ್ಪಾಯಿಯಲ್ಲಿ ನೈಸರ್ಗಿಕವಾಗಿ ಸಿಹಿ ಅಂಶವಿದೆ.

Most Read: ದೇಹದ ತೂಕ ಇಳಿಸಿಕೊಳ್ಳಲು 'ಆಯುರ್ವೇದ ಟಿಪ್ಸ್'

ಅರ್ಧ ಚಮಚ ದಾಲ್ಚಿನ್ನಿ+ ಒಂದು ಚಮಚ ಜೇನು

ಅರ್ಧ ಚಮಚ ದಾಲ್ಚಿನ್ನಿ+ ಒಂದು ಚಮಚ ಜೇನು

ಒಂದು ಕಪ್‎ನಷ್ಟು ಬಿಸಿ ನೀರಿಗೆ ಅರ್ಧ ಚಮಚ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ದೊಡ್ಡ ದೊಡ್ಡ ಭಾಗಗಳಿದ್ದರೆ ಅದನ್ನು ಬೇರ್ಪಡಿಸಿ. ಇದಕ್ಕೆ ಒಂದು ಚಮಚ ಜೇನು ಸೇರಿಸಿ. ಖಾಲಿ ಹೊಟ್ಟೆಗೆ ಈ ದ್ರಾವಣವನ್ನು ಸೇವಿಸಿ ನಂತರ ಅರ್ಧಗಂಟೆಯ ಬಳಿಕ ಬೆಳಗ್ಗಿನ ಉಪಹಾರ ಸೇವಿಸಿ.‎ ರಾತ್ರಿ ವೇಳೆಯಲ್ಲಿ ಕೂಡ ಇದನ್ನು ಜ್ಯೂಸ್‎ನಂತೆ ನಿಮಗೆ ಸೇವಿಸಬಹುದಾಗಿದೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲಿದ್ದು ಹೊಟ್ಟೆಯನ್ನು ಭರ್ತಿಮಾಡಲಿದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಒತ್ತಡವನ್ನು ನಿವಾರಿಸಲಿದೆ. ಜಾಸ್ತಿ ತಿನ್ನುವ ಅಭ್ಯಾಸವಿದ್ದವರು ಇಲ್ಲವೇ ರಾತ್ರಿ ಚೆನ್ನಾಗಿ ತಿಂದು ಜೀರ್ಣಕ್ರಿಯೆ ಸಮಸ್ಯೆ ಎದುರಾಗಿದೆ ಎಂದಾದಲ್ಲಿ ಈ ಜೇನು ದ್ರಾವಣ ನಿಮಗೆ ಆರಾಮದಾಯಕವಾಗಿದೆ. ಇದು ನೇರ ಕಾರ್ಬೊಹೈಡ್ರೇಟ್ ಆಗಿದ್ದು ಇದರಲ್ಲಿರುವ ಜೀರ್ಣಕ್ರಿಯೆಗೆ ಸುಗಮವಾಗಿರುವ ಸಕ್ಕರೆಯನ್ನು ಒಳಗೊಂಡಿದೆ.

ವೀಳ್ಯದೆಲೆ

ವೀಳ್ಯದೆಲೆ

ವೀಳ್ಯದೆಲೆಯಲ್ಲಿ ಹಲವು ಆರೋಗ್ಯಕರ ಅಂಶಗಳಿವೆ. ಜೀರ್ಣಕ್ರಿಯೆಗೆ ನೆರವಾಗುವುದು, ಹೊಟ್ಟೆಯಲ್ಲಿ ಹೆಚ್ಚಿನ ಜೀರ್ಣರಸಗಳು ಸ್ರವಿಸಲು ನೆರವಾಗಿ ಉಬ್ಬರವಾಗದಂತೆ ರಕ್ಷಣೆ ನೀಡುವುದು, ಮಲಬದ್ಧತೆಯನ್ನು ತಡೆಯುವುದು ಮೊದಲಾದವು ಈ ಎಲೆಯ ನೇರ ಉಪಯೋಗಗಳಾದರೆ ಕಾಳುಮೆಣಸಿನೊಂದಿಗೆ ಸೇವಿಸಿದರೆ ತೂಕವನ್ನೂ ಇಳಿಸಬಹುದು ಎಂದು ಇತ್ತೀಚೆಗೆ ತಿಳಿದುಬಂದಿದೆ. ವೀಳ್ಯದೆಲೆಯನ್ನು ಜಗಿದಾಗ ಬಾಯಿಯಲ್ಲಿ ಜೊಲ್ಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದೇ ವೇಳೆಯಲ್ಲಿ ಜಠರಕ್ಕೆ ಸಿದ್ಧವಾಗಿರಲು ಮೆದುಳಿನಿಂದ ಸಂದೇಶ ಹೋಗುತ್ತದೆ. ಪರಿಣಾಮವಾಗಿ ಹೊಟ್ಟೆಹಸಿವು ಪ್ರಾರಂಭವಾಗುತತ್ದೆ. ಈ ದ್ರವವನ್ನು ನುಂಗಿದ ಬಳಿಕ ಹೊಟ್ಟೆಯಲ್ಲಿ ಈ ಮೊದಲು ಜೀರ್ಣಗೊಂಡಿದ್ದ ಆಹಾರದಲ್ಲಿದ್ದ ವಿಷಕಾರಿ ವಸ್ತುಗಳನ್ನು (ಆಯುರ್ವೇದದಲ್ಲಿ ಇದಕ್ಕೆ ಆಮ ಎಂದು ಕರೆಯುತ್ತಾರೆ) ಈ ದ್ರವ ಎದುರಿಸಿ ಹಾನಿಯಾಗುವುದನ್ನು ತಪ್ಪಿಸುತ್ತದೆ.

ದಾಸವಾಳದ ಹೂ

ದಾಸವಾಳದ ಹೂ

ನೀವು ದಾಸವಾಳದ ಹೂವಿನ ರುಚಿಯನ್ನು ಪ್ರೀತಿಸಿದರೆ ಆಗ ನೀವು ಹೆಚ್ಚು ಸಮಯ ತೆಗೆದುಕೊಳ್ಳದೆ ತೂಕ ಇಳಿಸಿಕೊಳ್ಳುವುದು ಖಂಡಿತ. ಇದರಲ್ಲಿ ನ್ಯೂಟ್ರೀನ್, ಫ್ಲವನಾಯಿಡ್ ಮತ್ತು ಹಲವಾರು ರೀತಿಯ ಖನಿಜಾಂಶಗಳಿವೆ. ಇವೆಲ್ಲವೂ ನಿಮ್ಮ ದೇಹವು ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ಸ್‌ನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಯಾವುದೇ ರೀತಿಯಲ್ಲೂ ಸೇವಿಸಬಹುದು.

English summary

Ways to Lose Weight in 2 Weeks

Losing weight in just two weeks is not an easy task but by following the below given points you can possibly achieve your goal
X
Desktop Bottom Promotion