For Quick Alerts
ALLOW NOTIFICATIONS  
For Daily Alerts

ವಿಶ್ವ ಏಡ್ಸ್ ದಿನ 2018: ಮಹಿಳೆಯರಲ್ಲಿ ಕಂಡುಬರುವ ಹೆಚ್‍‌ಐವಿ ರೋಗದ ಲಕ್ಷಣಗಳು

|

ಹೆಚ್ ಐ ವಿ ಅಥವಾ HIV -human immunodeficiency virus- ಅಂದರೆ ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಸೋಂಕುಕಾರಕ ವೈರಸ್ಸು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಈ ಸೋಂಕು ಇರುವ ರಕ್ತವನ್ನು ಇನ್ನೊಬ್ಬರಿಗೆ ನೀಡಿದರೆ ಅಥವಾ ಸೋಂಕು ಪೀಡಿದ ವ್ಯಕ್ತಿಯ ವೀರ್ಯಾಣುಗಳು ಲೈಂಗಿಕ ಸಂಪರ್ಕದಿಂದ ಹರಡಿದರೆ ಸೋಂಕು ಸುಲಭವಾಗಿ ಹರಡುತ್ತದೆ.

ಒಂದು ವೇಳೆ ಬಾಯಿಯಲ್ಲಿ ಗಾಯವಾಗಿದ್ದು ರಕ್ತ ಒಸರುವ ಸಂಭವವಿದ್ದರೆ ಈ ಸೋರಿದ ರಕ್ತವೂ ಲೈಂಗಿಕ ಸಂಪರ್ಕ ಅಥವಾ ಇತರ ವ್ಯಕ್ತಿಗಳಿಗೆ ಗಾಯದ ಮೂಲಕ ಈ ರಕ್ತ ಶರೀರ ಸೇರಿಕೊಳ್ಳುವ ಸಾಧ್ಯತೆಯೂ ಇದೆ. ಅಲ್ಲದೇ ಕ್ರಿಮಿರಹಿತವಾಗಿಸದ (unsterile)ಚುಚ್ಚುಮದ್ದು, ಔಷಧಿಗಳು, ಸಿರಿಂಜ್ ಅಥವಾ ಬೇರಾವುದೇ ವೈದ್ಯಕೀಯ ಉಪಕರಣಗಳನ್ನು ಸೋಂಕುಪೀಡಿದ ವ್ಯಕ್ತಿಗೆ ಬಳಸಿ ಇದನ್ನೇ ಬೇರೊಬ್ಬರಿಗೆ ಬಳಸಿದರೂ ಸೋಂಕು ಎದುರಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಎದುರಾಗುವ ಈ ಸೋಂಕಿಗೆ ಅಸುರಕ್ಷಿತ ಸಂಭೋಗವೇ ಪ್ರಮುಖ ಕಾರಣವಾಗಿದೆ. ಅಲ್ಲದೇ ಗುದರತಿಯೂ ಸೋಂಕು ಹರಡುವ ಹೆಚ್ಚಿನ ಸಾಧ್ಯತೆಯುಳ್ಳ ಲೈಂಗಿಕ ಕ್ರಿಯೆಯಾಗಿದೆ.

ಮಹಿಳೆಯರು ಮತ್ತು ಹೆಚ್ ಐ ವಿ

ಮಹಿಳೆಯರು ಮತ್ತು ಹೆಚ್ ಐ ವಿ

CDC ಅಥವಾ Centers for Disease Control and Prevention ಸಂಸ್ಥೆಯ ಪ್ರಕಾರ 2014 ರಲ್ಲಿ ಅಮೇರಿಕಾದಲ್ಲಿ ಕಂಡುಬಂದ ಪ್ರಕರಣಗಳಲ್ಲಿ 19 ಶೇಖಡಾ ಮಹಿಳೆಯರಿದ್ದಾರೆ. ಇವರಲ್ಲಿ ಬಹುತೇಕ ಎಲ್ಲರೂ ಸೋಂಕು ಪೀಡಿತ ಸಂಗಾತಿಯೊಂದಿಗೆ ನಡಿಸಿದ ಮಿಲನಕ್ರಿಯೆಯಿಂದಲೇ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಇವರಲ್ಲಿ 87 ಶೇಖಡಾ ಮಹಿಳೆಯರು ಭಿನ್ನಲಿಂಗರತಿಗೆ ಒಳಗಾಗಿದ್ದರೆ ಉಳಿದ ಹದಿಮೂರು ಶೇಖಡಾ ಮಹಿಳೆಯರಿಗೆ ನರಗಳಿಗೆ ಚುಚ್ಚಲಾಗುವ ಸೂಜಿಗಳು ಸೋಂಕುಪೀಡಿತವಾಗಿದ್ದುದರಿಂದ ಸೋಂಕಿಗೆ ಒಳಗಾಗಿದ್ದಾರೆ.

ಅಧ್ಯಾಯನಗಳು ಏನು ಹೇಳುತ್ತವೆ?

ಅಧ್ಯಾಯನಗಳು ಏನು ಹೇಳುತ್ತವೆ?

ಇತ್ತೀಚೆಗೆ ಈ ಸಂಖ್ಯೆ ಇಳಿಮುಖವಾಗುತ್ತಾ ಸಾಗಿರುವುದು ಸಂತಸದ ಸಂಗತಿಯಾಗಿದೆ. ಹಾಗೂ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಇದು ಅಮೇರಿಕಾದ ಸಂಗತಿ. ಆಫ್ರಿಕಾದಂತಹ ಹಿಂದುಳಿದ ರಾಷ್ಟ್ರಗಳ ಖಂಡಗಳಲ್ಲಿ ಈ ಸಂಖ್ಯೆ ಹೆಚ್ಚಿದೆ ಹಾಗೂ ಅಮೇರಿಕಾದಲ್ಲಿರುವ ಆಫ್ರಿಕನ್ನರಲ್ಲಿಯೂ ಈ ಸಂಖ್ಯೆ ಗಣನೀಯವಾಗಿ ಹೆಚ್ಚೇ ಇದೆ.

• 62 ಶೇಖಡಾ ಮಹಿಳೆಯರು ಆಫ್ರಿಕನ್ ಅಮೇರಿಕನ್ನರು (5,128 ಪತ್ತೆ ಹಚ್ಚಲಾದ ಪ್ರಕರಣಗಳು)

• 18 ಶೇಖಡಾ ಬಿಳಿಯರು (1,483 ಪತ್ತೆ ಹಚ್ಚಲಾದ ಪ್ರಕರಣಗಳು)

• 16 ಶೇಖಡಾ ಸ್ಪಾನಿಷ್ ವ್ಯಕ್ತಿಗಳು (1,350 ಪತ್ತೆ ಹಚ್ಚಲಾದ ಪ್ರಕರಣಗಳು)

Most Read:ಎಚ್ ಐವಿ ಸೋಂಕು ದೇಹಕ್ಕೆ ತಗುಲಿಗಾದ ಕಂಡುಬರುವ ಏಳು ಲಕ್ಷಣಗಳು

ಮಹಿಳೆಯರು ಮತ್ತು ಏಡ್ಸ್

ಮಹಿಳೆಯರು ಮತ್ತು ಏಡ್ಸ್

ಇತ್ತೀಚೆಗೆ ಪತ್ತೆ ಹಚ್ಚಲಾದ ಒಟ್ಟು 20,792 ಪ್ರಕರಣಗಳಲ್ಲಿ ಕಾಲು ಭಾಗದಷ್ಟು ಮಹಿಳೆಯರಿದ್ದಾರೆ. ಈ ಸೋಂಕು ಪತ್ತೆಯಾದ ದಿನದಿಂದ 2014ರವರೆಗೆ ಅಮೇರಿಕಾದಲ್ಲಿ ಒಟ್ಟು 1,210,835 ವ್ಯಕ್ತಿಗಳಿಗೆ ಏಡ್ಸ್ ಸೋಂಕು ಇರುವುದು ಪತ್ತೆಯಾಗಿದ್ದು ಇವರಲ್ಲಿ ಶೇಖಡಾ ಇಪ್ಪತ್ತರಷ್ಟು ಮಹಿಳೆಯರಿದ್ದಾರೆ.

ಮಹಿಳೆಯರಲ್ಲಿ ಹೆಚ್ ಐ ವಿ ಸೋಂಕು ಇರುವ ಲಕ್ಷಣಗಳು

ಮಹಿಳೆಯರಲ್ಲಿ ಹೆಚ್ ಐ ವಿ ಸೋಂಕು ಇರುವ ಲಕ್ಷಣಗಳು

ಈ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆದರೆ ಕೆಲವು ಲಕ್ಷಣಗಳು ಹೆಚ್ಚಿನವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಇವುಗಳಲ್ಲಿ ಪ್ರಮುಖವದವು ಎಂದರೆ:

ಸೋಂಕು ತಗುಲಿದ ತಕ್ಷಣವೇ ಈ ಸೋಂಕಿನ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಇದರ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಳ್ಳಲು ಎರಡರಿಂದ ನಾಲ್ಕು ವಾರಗಳೇ ಬೇಕಾಗಬಹುದು. ಮೊದಲು ಶೀತ ಅಥವಾ ಫ್ಲೂ ನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಹಾಗೂ ಇವು ಸಾಮಾನ್ಯ ಎಂಬ ಪಟ್ಟಿಯಲ್ಲಿ ಪರಿಗಣಿಸಲ್ಪಡುತ್ತವೆ. ಸುಮಾರು ಎಂಭತ್ತು ಶೇಖಡಾಕ್ಕೂ ಹೆಚ್ಚಿನ ಜನರಿಗೆ ಈ ಲಕ್ಷಣಗಳು ಪ್ರಾರಂಭಿಕವಾಗಿ ಕಾಣಿಸಿಕೊಳ್ಳುತ್ತವೆ. ಕೆಲವು ವ್ಯಕ್ತಿಗಳಲ್ಲಿ ಈ ಸೋಂಕು ಕೆಲವಾರು ವರ್ಷಗಳ ಬಳಿಕವೇ ಕಾಣಿಸಿಕೊಳ್ಳಬಹುದು. ಹಾಗಾಗಿ, ದಾಂಪತ್ಯ ಸಂಬಂಧಕ್ಕೆ ಒಳಗಾಗುವ ವ್ಯಕ್ತಿಗಳಿಬ್ಬರೂ ಈ ಸೋಂಕು ಇರುವ ಪರೀಕ್ಷೆಗೆ ಕಡ್ಡಾಯವಾಗಿ ಒಳಪಟ್ಟು ಇಬ್ಬರಲ್ಲಿಯೂ ಸೋಂಕು ಇಲ್ಲವೆಂದರೆ ಮಾತ್ರವೇ ಸಂಬಂಧ ಮುಂದುವರೆಸುವುದು ಸೂಕ್ತ. ಅಲ್ಲದೇ ಒಂದು ವೇಳೆ ಮಹಿಳೆಯರಲ್ಲಿ ಸೋಂಕು ಇರುವುದು ಗೊತ್ತಾದರೆ ಆದಷ್ಟೂ ಬೇಗನೇ ಚಿಕಿತ್ಸೆ ಪ್ರಾರಂಭಿಸಿ ಈ ಸೋಂಕು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬಹುದು ಹಾಗೂ ಈ ತೊಂದರೆ ಉಲ್ಬಣಗೊಳ್ಳದೇ ಗುಣವಾಗುವ ಸಾಧ್ಯತೆಯೂ ಹೆಚ್ಚುತ್ತದೆ.

ಮಹಿಳೆಯರಲ್ಲಿ ಈ ಸೋಂಕು ಪತ್ತೆಯಾಗುವ ಸಮಯದಲ್ಲಿ ಎಷ್ಟು ಹರಡಿದೆ ಎಂಬ ಅಂಶದ ಮೇಲೆ ಈ ಲಕ್ಷಣಗಳೂ ಬದಲಾಗುತ್ತಾ ಹೋಗುತ್ತವೆ. ಆ ಪ್ರಕಾರ ಇವುಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ: ಪ್ರಾಥಮಿಕ ಹಂತ (Acute HIV stage (new infection stage), ಮಧ್ಯಮ ಹಂತ (asymptomatic stage) ಹಾಗೂ ಮುಂದುವರೆದ ಹಂತ ( advanced stage). ಸಾಮಾನ್ಯವಾಗಿ ಅಂತಿಮ ಹಂತ ಬಂದ ಬಳಿಕವೇ ಈ ಸೋಂಕಿಗೆ AIDS (acquired immune deficiency syndrome (HIV/AIDS) ಎಂದು ಕರೆಯಲಾಗುತ್ತದೆ.

ಹೆಚ್ ಐ ವಿ ಮತ್ತು ಗರ್ಭಾವಸ್ಥೆ

ಹೆಚ್ ಐ ವಿ ಮತ್ತು ಗರ್ಭಾವಸ್ಥೆ

ಈ ಸೋಂಕಿಗೆ ಒಳಗಾದ ಮಹಿಳೆಯ ಗರ್ಭದಲ್ಲಿರುವ ಮಗುವಿಗೂ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಅಷ್ಟಕ್ಕೂ ಮಗುವಿನ ರಕ್ತದಲ್ಲಿ ಹರಿಯುತ್ತಿರುವುದು ತಾಯಿಯ ರಕ್ತವೇ ಅಲ್ಲವೇ, ಈ ರಕ್ತ ಸೋಂಕಿಗೊಳಗಾಗಿದ್ದರೆ ಮಗುವೂ ಸೋಂಕಿಗೆ ಒಳಪಡುತ್ತದೆ ಅಷ್ಟೇ ಅಲ್ಲ, ಸೋಂಕು ಉಲ್ಬಣಾವಸ್ಥೆ ತಲುಪುವಾಗ ಹೆರಿಗೆಯಾಗಿದ್ದರೆ ಬಾಣಂತಿ ಹಂತದಲ್ಲಿ ಮಗುವಿನ ಊಡಿಸುವ ಹಾಲಿನಿಂದಲೂ ಈ ಸೋಂಕು ಮಗುವಿಗೆ ಹರಡಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಈ ಸೋಂಕು ಇರುವುದು ದೃಢವಾದರೆ ತಕ್ಷಣವೇ ಸೋಂಕುನಿವಾರಕ (antiretrovirals) ಔಷಧಿಗಳನ್ನು ಗರ್ಭಾವಸ್ಥೆಯಲ್ಲಿ ಅಥವಾ ಸಿಸೇರಿಯನ್ ಹೆರಿಗೆಯ ಸಮಯದಲ್ಲಿ ಅಥವಾ ಹೆರಿಗೆಯ ಬಳಿಕ ಮಗುವಿಗೆ ನೀಡಿ ಮಗುವನ್ನು ಸೋಂಕಿಗೊಳಗಾಗುವುದರಿಂದ ರಕ್ಷಿಸಬಹುದು.

ಪ್ರಾಥಮಿಕ ಹಂತದಲ್ಲಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು:

ಪ್ರಾಥಮಿಕ ಹಂತದಲ್ಲಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು:

ಅತಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ

* ಮೈತುಂಬಾ ಚಿಕ್ಕ ಚಿಕ್ಕ ಗೀರುಗಳು ಕಾಣಿಸಿಕೊಂಡು ಚರ್ಮ ಕೆಂಪಗಾಗುವುದು

* ಜ್ವರ

* ಗಂಟಲಲ್ಲಿ ಕಿರಿಕಿರಿ

* ಅತಿಯಾದ ತಲೆನೋವು

ಸಾಮಾನ್ಯವಲ್ಲದ (ಕೆಲವರಲ್ಲಿ ಮಾತ್ರವೇ ಕಾಣಿಸಿಕೊಳ್ಳುವ) ಲಕ್ಷಣಗಳು

ಸಾಮಾನ್ಯವಲ್ಲದ (ಕೆಲವರಲ್ಲಿ ಮಾತ್ರವೇ ಕಾಣಿಸಿಕೊಳ್ಳುವ) ಲಕ್ಷಣಗಳು

* ಊದಿಕೊಂಡ ದುಗ್ಧ ಗ್ರಂಥಿಗಳು

* ವಾಕರಿಕೆ

* ಅಪಾರ ಸುಸ್ತು

* ಬಾಯಿಯ ಹುಣ್ಣುಗಳು

* ಯೋನಿಯಲ್ಲಿ ಸೋಂಕು, (ಶಿಲೀಂಧ್ರದ ಸೋಂಕು ಅಥವಾ ಬ್ಯಾಕ್ಟೀರಿಯಾಗಳ ಸೋಂಕು)

* ರಾತ್ರಿ ಸಮಯದಲ್ಲಿ ಮೈ ಬೆವರುವುದು

* ವಾಂತಿ

* ಸ್ನಾಯುಗಳಲ್ಲಿ ನೋವು ಮತ್ತು ಗಂಟುಗಳಲ್ಲಿ ನೋವು

ಈ ಲಕ್ಷಣಗಳಲ್ಲಿ ಕೆಲವು ಪ್ರಾರಂಭವಾದ ಬಳಿಕ ಕನಿಷ್ಟ ಒಂದರಿಂದ ಎರಡು ವಾರಗಳಾದರೂ ಮುಂದುವರೆಯಬಹುದು.

ಮಧ್ಯಮ ಹಂತವನ್ನು ತಲುಪಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಮಧ್ಯಮ ಹಂತವನ್ನು ತಲುಪಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಮೇಲೆ ತಿಳಿಸಿದ ಲಕ್ಷಣಗಳು ನಿಧಾನವಾಗಿ ಮರೆಯಾಗುತ್ತಾ ಹೋದಂತೆ ಎರಡನೆಯ ಹಂತ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿ ಸಾಮಾನ್ಯವಾಗಿ ಪ್ರಾರಂಭಿಕ ಹಂತದಷ್ಟು ಸ್ಪಷ್ಟವಾದ ಲಕ್ಷಣಗಳನ್ನು ತೋರುವುದಿಲ್ಲ. ಈ ಹಂತದಲ್ಲಿ ಹೆಚ್ ಐ ವಿ ಸೋಂಕು ಕೆಲವಾರು ತಿಂಗಳು ಅಥವಾ ವರ್ಷಗಳವರೆಗೆ ಯಾವುದೇ ಲಕ್ಷಣಗಳನ್ನು ತೋರದೇ ಹೋಗಬಹುದು. ಇದರರ್ಥ ವೈರಸ್ಸು ಆರಾಮವಾಗಿ ಮಲಗಿದೆ ಎಂದಲ್ಲ. ಬದಲಿಗೆ ಇದು ದೇಹದೊಳಗೇ ಸದ್ದಿಲ್ಲದೇ ತನ್ನ ಸಂಖ್ಯೆಯನ್ನು ವೃದ್ದಿಸಿಕೊಂಡು ಪೂರ್ಣ ಕ್ಷಮತೆ ಪಡೆದ ಬಳಿಕವೇ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಧಾಳಿಯಿಡುತ್ತದೆ. ನಮ್ಮ ದೇಹದಲ್ಲಿ ಕೆಲವು ಜೀವಕೋಶಗಳು (ಪ್ರಮುಖವಾಗಿ ರಕ್ತದಲ್ಲಿರುವ ಬಿಳಿ ರಕ್ತ ಕಣಗಳು) ರೋಗ ನಿರೋಧಕ ವ್ಯವಸ್ಥೆಯ ಪ್ರಮುಖ ರೂವಾಗಿಗಳಾಗಿವೆ. ಇವುಗಳು ಎಷ್ಟು ಪ್ರಬಲವಾಗಿವೆ ಎಂಬುದನ್ನು ಆಧರಿಸಿ ಎರಡನೆಯ ಹಂತ ಪ್ರಕಟಗೊಳ್ಳುವ ವೇಳೆಯೂ ವಿಳಂಬವಾಗುತ್ತಾ ಹೋಗುತ್ತದೆ. ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದರೂ ಈ ವೈರಸ್ಸುಗಳು ಆರಾಮವಾಗಿ ರಕ್ತ ಮತ್ತು ವೀರ್ಯಾಣುಗಳಲ್ಲಿ ಓಡಾಡಿಕೊಂಡಿದ್ದು ಇವುಗಳ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ಸೋಂಕು ಹರಡುವ ಪೂರ್ಣ ಕ್ಷಮತೆ ಪಡೆದಿರುತ್ತವೆ. ಇದೇ ಕಾರಣಕ್ಕೆ ಆರೋಗ್ಯವಂತರಂತೆ ಕಾಣುವ ವ್ಯಕ್ತಿಗಳೂ ಸೋಂಕು ಹೊಂದಿರುವುದು ಸಾಧ್ಯ. ಆದ್ದರಿಂದ ಸೋಂಕು ಇರುವ ಸಾಧ್ಯತೆಗೆ ಆರೋಗ್ಯವಂತರೂ ಪರೀಕ್ಷೆಗೊಳಪಡುವುದು ಅವಶ್ಯವಾಗಿದೆ.

Most Read: ವಿಶ್ವ ಏಡ್ಸ್ ದಿನ ವಿಶೇಷ: ಎಚ್‌ಐವಿ ಮತ್ತು ಏಡ್ಸ್‌- ಇವುಗಳ ನಡುವೆ ಇರುವ ವ್ಯತ್ಯಾಸವೇನು?

ಮುಂದುವರೆದ ಹಂತ (ಏಡ್ಸ್) ದಲ್ಲಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಮುಂದುವರೆದ ಹಂತ (ಏಡ್ಸ್) ದಲ್ಲಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಒಂದು ವೇಳೆ ಎರಡನೆಯ ಹಂತದಲ್ಲಿಯೂ ಸೋಂಕು ಪತ್ತೆಯಾಗದೇ ಇದ್ದು ಚಿಕಿತ್ಸೆಯೇ ದೊರಕದೆ ಹೋದರೆ ಮೂರನೆಯ ಹಂತಕ್ಕೆ ದಾಟಲು ಅಥವಾ ಹೆಚ್ ಐ ವಿ ವೈರಸ್ಸುಗಳು ಮತ್ತೆ ಸರಿಪಡಿಸಲಾಗದಂತೆ ರೋಗ ನಿರೋಧಕ ಶಕ್ತಿಯನ್ನು ಉಡುಗಿಸಲು ಕೆಲವು ತಿಂಗಳು ಅಥವಾ ವರ್ಷಗಳೇ ಹಿಡಿಯಬಹುದು. ಹೀಗೆ ತನ್ನ ಪ್ರಾಬಲ್ಯವನ್ನು ಈ ವೈರಸ್ಸುಗಳು ಏರಿಸಿಕೊಳ್ಳುತ್ತಾ ಹೋಗಿ ಅಂತಿಮವಾಗಿ ವ್ಯಕ್ತಿ ಮರಣಹೊಂದುವ ಅವಸ್ಥೆಯೇ ಏಡ್ಸ್ ಆಗಿದೆ. ಈ ಹಂತದಲ್ಲಿ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಮತ್ತೆ ಸರಿಪಡಿಸಲಾಗದಂತೆ ಕುಸಿಯುತ್ತದೆ ಹಾಗೂ ಈಗ ದೇಹಕ್ಕೆ ಸಾಮಾನ್ಯವಾಗಿ ಎದುರಾಗುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನು ಎದುರಿಸಲಾಗದೇ ದೇಹ ಸೋಲುತ್ತದೆ. ಹಾಗಾಗಿ ಏಡ್ಸ್ ಇರುವ ವ್ಯಕ್ತಿಗಳಿಗೆ ಸದಾ ಶೀತ, ಜ್ವರ, ಶಿಲೀಂಧ್ರದ ಸೋಂಕು ಮೊದಲಾದವು ಸದಾ ಕಾಡುತ್ತಿರುತ್ತವೆ.

ಈ ಹಂತದಲ್ಲಿ ಮಹಿಳೆಯರಿಗೆ ಎದುರಾಗುವ ಲಕ್ಷಣಗಳೆಂದರೆ

ಈ ಹಂತದಲ್ಲಿ ಮಹಿಳೆಯರಿಗೆ ಎದುರಾಗುವ ಲಕ್ಷಣಗಳೆಂದರೆ

* ಸತತವಾತ ಅತಿಸಾರ

* ವಾಕರಿಕೆ

* ವಾಂತಿ

* ತೂಕ ಶೀಘ್ರವಾಗಿ ಇಳಿಯುತ್ತಾ ಹೋಗುವುದು

* ಬಾಯಿಯಲ್ಲಿ ಹುಣ್ಣುಗಳು

* ಯೋನಿಯಲ್ಲಿ ಸೋಂಕು (ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾಗಳ ಸೋಂಕು)

* ಗರ್ಭಕೋಶ ಹಾಗೂ ಸಂಬಂಧಿತ ಅಂಗಗಳಲ್ಲುಂಟಾದ ಸೋಂಕು (Pelvic inflammatory disease(PID)

* ಸತತ ಮರುಕಳಿಸುವ ಜ್ವರ

* ಸತತ ಮರುಕಳಿಸುವ ನಡುಕ

* ಸತತ ಮರುಕಳಿಸುವ ರಾತ್ರಿ ಸಮಯದಲ್ಲಿ ಬೆವರುವಿಕೆ

* ಉಸಿರೆಳೆದುಕೊಳ್ಳಲು ಕಷ್ಟವಾಗುವುದು

* ಸತತ ಕೆಮ್ಮು

* ದುಗ್ಧಗ್ರಂಥಿಗಳು ಊದಿಕೊಳ್ಳುವುದು ಹಾಗೂ ಇಳಿಯಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುವುದು

* ಸ್ಮರಣಶಕ್ತಿ ಉಡುಗುವುವು, ಸಾಮಾನ್ಯ ಕ್ರಿಯೆಗಳಲ್ಲಿಯೂ ಗೊಂದಲ ಅಥವಾ ನರವ್ಯವಸ್ಥೆಯಲ್ಲಿ ಏರುಪೇರು.

English summary

Worlds Aids Day 2018: HIV Symptoms In Women

HIV is transmitted from person-to-person from contact with infected blood, semen and/or vaginal fluid. Having unprotected sex vaginal or anal sex (or oral sex if you have a cut or open sore in your mouth) with an infected partner greatly increases the risk of contracting HIV. HIV can also be transmitted via unsterile drug use, from using infected needles, syringes or drug equipment. Most women contract HIV during vaginal sex, however, anal sex is the riskiest type of sex for getting or spreading HIV.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X