For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಎರಡೂ ಸ್ತನಗಳು ಏಕಸಮಾನ ಗಾತ್ರ ಹೊಂದಿರುವುದಿಲ್ಲವಂತೆ! ಯಾಕೆ ಗೊತ್ತೇ?

|

ಮಹಿಳೆಯರ ಅಂಗಸೌಷ್ಟವಕ್ಕೆ ಪ್ರಮುಖವಾಗಿ ಕಾರಣವಾಗುವ ಸ್ತನಗಳ ಬಗ್ಗೆ ಮಹಿಳೆಯರಿಗೂ ಗೊತ್ತಿರದ ಕೆಲವಾರು ವಿಷಯಗಳಿವೆ. ಹೊರನೋಟಕ್ಕೆ ಒಂದೇ ಗಾತ್ರವಿದ್ದಂತೆ ಅನ್ನಿಸಿದ್ದರೂ ನಿಮಗೇ ಕೊಂಚ ವ್ಯತ್ಯಾಸ ಇರುವುದು ಕಂಡುಬಂದಿತ್ತೇ? ಸಾಮಾನ್ಯವಾಗಿ ಇಲ್ಲ ಎಂದೇ ಹೆಚ್ಚಿನ ಉತ್ತರವಾದರೂ ಈ ವಿಷಯದಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ತಮ್ಮ ಸ್ತನಗಳ ಗಾತ್ರಗಳನ್ನು ಹೆಚ್ಚಿಸಿಕೊಳ್ಳಬಯಸಿದ್ದ ಪ್ರತಿ ನೂರು ಮಹಿಳೆಯರ ಪೈಕಿ ಎಂಭತ್ತೆಂಟು ಮಹಿಳೆಯರಿಗೆ ನೈಸರ್ಗಿಕವಾಗಿ ಈ ವ್ಯತ್ಯಾಸ ಪ್ರಮುಖವಾಗಿ ಕಂಡುಬಂದಿತ್ತು.

ಈ ಬಗ್ಗೆ ನಾವು ಪಂಚಶೀಲ ಪಾರ್ಕ್ ನಲ್ಲಿರುವ ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಸೆಂಟರ್ ನಲ್ಲಿ ಮಹಿಳಾ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿರುವ ಹಾಗೂ ಹಿರಿಯ ಸಲಹಾಕಾರ್ತಿಯಾಗಿರುವ ಡಾ. ಜನಶ್ರೀ ಸುಂದರ್ ರವರು ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಈ ವ್ಯತ್ಸಾಸಕ್ಕೆ ಕಾರಣಗಳನ್ನೂ ಇದನ್ನು ಸರಿಪಡಿಸಲು ಕೈಗೊಳ್ಳ ಬಹುದಾದ ಕ್ರಮಗಳನ್ನೂ ಅವರು ವಿವರಿಸಿದ್ದಾರೆ....

ಇದು ಒಂದು ಸಾಮಾನ್ಯ ಸ್ಥಿತಿಯಾಗಿದೆ

ಇದು ಒಂದು ಸಾಮಾನ್ಯ ಸ್ಥಿತಿಯಾಗಿದೆ

"ಒಂದು ಸ್ತನ ಇನ್ನೊಂದಕ್ಕಿಂತ ಗಾತ್ರದಲ್ಲಿ ಕೊಂಚ ಬದಲಾಗಿರುವುದು ಅತ್ಯಂತ ಸಾಮಾನ್ಯ, ಕೆಲವು ಸಂದರ್ಭಗಳಲ್ಲಿ ಮಾತ್ರ ಇದು ಭಾರೀ ಎನಿಸುವಷ್ಟು ವ್ಯತ್ಯಾಸವಿದ್ದು ಹೊರನೋಟಕ್ಕೇ ಗಮನಕ್ಕೆ ಬರುತ್ತದೆ. ಈ ಭಾರೀ ವ್ಯತ್ಯಾಸಕ್ಕೆ ದೈಹಿಕ ರಚನೆಯೇ ಕಾರಣ. ನಮ್ಮ ದೇಹ ಹೊರಗಿನಿಂದ ಸಮ್ಮಿತೀಯ ಅಥವಾ ಎಡಬಲ ಅಂಗಗಳು ಕನ್ನಡಿ ಪಡಿಯಚ್ಚಿನಂತೆ ಇವೆ ಎಂದು ಅನ್ನಿಸಿದರೂ ಹಲವಾರು ಅಂಗಗಳು ಅಸಮ್ಮೀತೀಯವಾಗಿವೆ. ಇದು ಸಾಮಾನ್ಯ ಸ್ಥಿತಿಯಾಗಿದ್ದು ಈ ಜಗತ್ತಿಯ ಪ್ರತಿ ಮಹಿಳೆಯಲ್ಲಿಯೂ ಕೊಂಚವಾದರೂ ವ್ಯತ್ಯಾಸವಿದ್ದೇ ಇರುತ್ತದೆ" ಎಂದು ಅವರು ವಿವರಿಸುತ್ತಾರೆ.

Most Read: ಸ್ತನ ಜೋತು ಬೀಳುವುದನ್ನು ತಡೆಯಲು ಸರಳ ಮನೆಮದ್ದುಗಳು

ರಸದೂತಗಳ ಬದಲಾವಣೆಗಳು

ರಸದೂತಗಳ ಬದಲಾವಣೆಗಳು

ಅಸಮ್ಮೀತೀಯ ಸ್ತನಗಳಿಗೆ ಯೌವನಾವಸ್ಥೆಯಲ್ಲಿ ಎದುರಾಗುವ ರಸದೂತಗಳ ಬದಲಾವಣೆಯೂ ಕಾರಣವಾಗಿದೆ. ತನ್ಮೂಲಕ ಒಂದು ಇನ್ನೊಂದಕ್ಕಿಂತ ಬೇಗನೇ ಬೆಳೆಯಲು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಬೆಳವಣಿಗೆಯ ಹಂತದಲ್ಲಿ ಒಂದಕ್ಕಿಂತ ಇನ್ನೊಂದು ಮುಂಚೂಣಿಯಲ್ಲಿದ್ದರೂ ಪೂರ್ಣಗಾತ್ರವನ್ನು ಪಡೆದಾಗ ಎರಡೂ ಹೆಚ್ಚೂ ಕಡಿಮೆ ಸಮಾನ ಗಾತ್ರದ್ದಾಗಿರುತ್ತವೆ. ಈ ವ್ಯತ್ಯಾಸ ಹೆಚ್ಚಿನವರಲ್ಲಿ ನಗಣ್ಯವಾಗಿದ್ದು ಅಪರೂಪದ ಸಂದರ್ಭದಲ್ಲಿ ಮುಜುಗರಕ್ಕೀಡಾಗುವಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ.

ಹಾಲೂಡಿಸುವ ತಾಯಂದಿರು

ಹಾಲೂಡಿಸುವ ತಾಯಂದಿರು

ತಜ್ಞರ ಪ್ರಕಾರ ಬಾಣಂತನ ಮತ್ತು ಮಗುವಿನ ಹಾಲೂಡಿಸುವ ಅವಧಿಯಲ್ಲಿ ಅಸಮ್ಮೀತೀಯ ಸ್ತನಗಳು ಎದುರಾಗಬಹುದು. ಕೆಲವೊಮ್ಮೆ ತಾಯಿ ಒಂದೇ ಕಡೆಯಿಂದ ಹಾಲು ಕುಡಿಸುವುದೂ ಇದಕ್ಕೆ ಕಾರಣವಾಗಿರಬಹುದು. ಪರಿಣಾಮವಾಗಿ ವ್ಯತ್ಯಾಸ ಹೆಚ್ಚಬಹುದು. ಹಾಗಾಗಿ ಗಾತ್ರವನ್ನು ಸಮಾನವಾಗಿ ಕಾಯ್ದುಕೊಳ್ಳಲು ಎರಡೂ ಕಡೆಗಳಿಂದ ಸಮಪ್ರಮಾಣದಲ್ಲಿ ಹಾಲೂಡಿಸುವುದು ತಾಯಂದಿರಿಗೆ ಅಗತ್ಯವಾಗಿದೆ.

ಸ್ತನಗಳಲ್ಲಿ ಮೂಡುವ ಗಡ್ಡೆಗಳು

ಸ್ತನಗಳಲ್ಲಿ ಮೂಡುವ ಗಡ್ಡೆಗಳು

ಸ್ತನಗಳ ಒಳಭಾಗದ ಅಂಗಾಂಶಗಳಲ್ಲಿ ಯಾವುದಾದರೊಂದು ಅಂಗಾಂಶ ಹೆಚ್ಚು ಬೆಳೆದು ಸಾಂದ್ರೀಕೃತಗೊಂಡರೆ ಇದು ಗಡ್ಡೆಯ ರೂಪ ತಳೆಯುತ್ತದೆ. ಇದೂ ಸ್ತನಗಳ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದೆ. ಕೆಲವು ಗಡ್ಡೆಗಳು ನಿರಪಾಯಕಾರಿಯಾಗಿದ್ದರೆ ಕೆಲವು ಕ್ಯಾನ್ಸರ್ ರೂಪವನ್ನೂ ತಳೆಯಬಹುದು. ಕೆಲವು ಸಂದರ್ಭಗಳಲ್ಲಿ ಸ್ತನಕ್ಕೆ ಬಿದ್ದ ಪೆಟ್ಟಿನಿಂದಾಗಿಯೂ ಗಡ್ಡೆ ಮೂಡಬಹುದು. ಇಂದು ಲಭ್ಯವಿರುವ ಮ್ಯಾಮ್ಮೋಗ್ರಾಫಿ ಉಪಕರಣಗಳಿಂದ ಈ ಗಡ್ಡೆಗಳನ್ನು ಪರೀಕ್ಷಿಸಿ ಸೂಕ್ತ ಪಡೆಯುವುದು ಅಗತ್ಯ ಇನ್ನೊಂದು ಕಾರಣವೆಂದರೆ ಸ್ತನಗಳ ಒಳಗಣ ನರಗಳು ತಿರುಚಿ ಗಂಟುಗಳಾಗಿ ಹಗ್ಗವೊಂದನ್ನು ಮಡಚಿ ಒಳಗಿಟ್ಟಂತೆ ಕಾಣುವುದು (fibrocystic breasts). ಇದು ಅಪಾಯಕಾರಿಯಲ್ಲದಿದ್ದರೂ ವೈದ್ಯರಿಂದ ಪರಿಶೀಲಿಸಿ ಸಲಹೆ ಪಡೆಯುವುದು ಅಗತ್ಯ.

Most Read: ಸ್ತನ ಕ್ಯಾನ್ಸರ್: ನಂಬಲೇ ಬಾರದ ಇಂತಹ ತಪ್ಪು ಕಲ್ಪನೆಗಳು

ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್

ಒಂದು ವೇಳೆ ಇದುವರೆಗೆ ಸಮಗಾತ್ರದಲ್ಲಿದ್ದ ಸ್ತನಗಳಲ್ಲೊಂದು ಬೆಳೆದು ಹಿಗ್ಗುತ್ತಾ ಸಾಗಿದರೆ ಇದು ಸಹಾ ಕಾಳಜಿಗೆ ಕಾರಣವಾಗಿದೆ. ತಕ್ಷಣವೇ ನಿಮ್ಮ ವೈದ್ಯರಿಂದ ತಪಾಸಣೆಗೊಳಿಸುವುದು ಅಗತ್ಯ.ಸಾಮಾನ್ಯವಾಗಿ ಕ್ಯಾನ್ಸರ್ ಗೆ ಒಳಗಾದ ಸ್ತನ ಶೀಘ್ರವೇ ಬೆಳೆಯುತ್ತಾ ಹಿಗ್ಗುತ್ತಾ ಸಾಗುತ್ತದೆ.

ಅನುವಂಶಿಕ ಕಾರಣಗಳು

ಅನುವಂಶಿಕ ಕಾರಣಗಳು

ಹೆಚ್ಚಿನ ಸಂದರ್ಭಗಳಲ್ಲಿ ಈ ವ್ಯತ್ಯಾಸಕ್ಕೆ ಹೀಗೇ ಎಂಬ ನಿರ್ದಿಷ್ಟ ಕಾರಣ ನೀಡಲು ಸಾಧ್ಯವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಅನುವಂಶಿಕ ಕಾರಣಗಳಿಂದಲೂ ಇವು ಕಾಣಬರುತ್ತವೆ. ವಂಶವಾಹಿನಿಯಲ್ಲಿ ಇದು ಕಂಡುಬಂದರೆ ಮುಂದಿನ ಪೀಳಿಗೆಯಲ್ಲಿಯೂ ಈ ಅಸಮ್ಮತೀಯತೆ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ ಚರ್ಮದ ಸೆಳೆತ, ಬಣ್ಣ ಮೊದಲಾದ ಅಂಶಗಳು ಅನುವಂಶೀಯವಾಗಿವೆ.

English summary

Why your breasts are not the same size

"It is common for each breast to be slightly different in size from the other one," says Dr Sundar. In a few cases, it has been found that uneven breast size can be the reason of normal anatomic variation. Most of our body parts aren't symmetrical and there is nothing wrong with slight differences.Another reason for your asymmetrical breasts could be changes during puberty. These changes can cause one breast to start growing before the other, however, they may stop growing at the same time. Sometimes, the difference is negligible and is hardly noticed by anyone. However, other times, the difference can be pronounced and can make you feel odd.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more