For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಳಿಕ ಸರಿಯಾಗಿ ನೀರು ಕುಡಿಯಬೇಕಂತೆ! ಯಾಕೆ ಗೊತ್ತೇ?

|

ನಮ್ಮ ದೇಹದಲ್ಲಿ ಶೇಕಡಾ 75ರಷ್ಟು ನೀರಿನಾಂಶವಿದೆ ಎಂದು ಹೇಳಲಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಪ್ರತಿನಿತ್ಯದ ಅಗತ್ಯತೆಗಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಿದರೆ ಆಗ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುವುದು. ಇದರಿಂದ ಪ್ರತಿನಿತ್ಯ ನಮ್ಮ ದೇಹದ ಅಗತ್ಯತೆಗೆ ಬೇಕಾಗುವಷ್ಟು ನೀರು ಕುಡಿಯಲೇಬೇಕು. ನೀರನ್ನು ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವ ವಾದವು ಈಗಲೂ ನಡೆಯುತ್ತಲೇ ಇದೆ. ಇದರ ಬಗ್ಗೆ ಹಲವಾರು ರೀತಿಯ ಸಂಶೋಧನೆಗಳು ಕೂಡ ನಡೆಯುತ್ತಲಿದೆ.

Drink Water After Sex

ಒಂದು ನಿರ್ಧಾರಕ್ಕೆ ಬರಲು ಇದರಿಂದ ಸಾಧ್ಯವಾಗಿಲ್ಲ. ಆದರೆ ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ಸೆಕ್ಸ್ ಬಳಿಕ ನೀರು ಕುಡಿಯುವ ಬಗ್ಗೆ. ಹೌದು, ಹೆಚ್ಚಿನ ಜನರಿಗೆ ಸೆಕ್ಸ್ ಬಳಿಕ ನೀರು ಸೇವನೆ ಮಾಡಬೇಕೆಂದು ತಿಳಿದಿರುವುದಿಲ್ಲ. ನೀವು ತುಂಬಾ ಆನಂದಿಸಿದ ಬಳಿಕ ನೀರು ಸೇವನೆ ಮಾಡುವುದು ಎಷ್ಟು ಅಗತ್ಯವೆಂದು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಯಾವುದು ಎಂದು ತಿಳಿಯಲು ನೀವು ಮುಂದಕ್ಕೆ ಓದುತ್ತಾ ಸಾಗಿ.

ತೇವಾಂಶ ನೀಡಬೇಕು

ತೇವಾಂಶ ನೀಡಬೇಕು

ನಿಮ್ಮ ಹೃದಯ ಬಡಿತ ಹೆಚ್ಚಿಸುವ, ಬೆವರು ಹರಿಸುವಂತೆ ಮಾಡುವಂತಹ ಯಾವುದೇ ರೀತಿಯ ದೈಹಿಕ ಚಟುವಟಿಕೆ ಬಳಿಕ ನೀವು ನೀರು ಸೇವಿಸುವುದು ಅತೀ ಅಗತ್ಯವಾಗಿದೆ. ಸೆಕ್ಸ್ ಇದಕ್ಕೆ ಹೊರತಾಗಿಲ್ಲ ಮತ್ತು ಇದು ಬೇರೆ ದೈಹಿಕ ಚಟುವಟಿಕೆಗಳಿಗೆ ಸಮಾನವಾಗಿದೆ. ಇದರಿಂದಲೂ ದೇಹವು ನಿರ್ಜಲೀಕರಣವಾಗುವುದು. ನಿರ್ಜಲೀಕರಣವು ನಿಮ್ಮ ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ನಿಮ್ಮ ಬಾಯಿ ಅಥವಾ ಯೋನಿಯು ಸೆಕ್ಸ್ ಆಟದ ಬಳಿಕ ಸಂಪೂರ್ಣವಾಗಿ ಒಣಗಿದಂತೆ ಆಗಬಹುದು. ಇದರಿಂದ ಸೆಕ್ಸ್ ಬಳಿಕ ನೀರು ಕುಡಿಯಲು ಮರೆಯಬೇಡಿ.

Most Read: ಕಾಮಾಸಕ್ತಿ ಹಾಗೂ ಸೆಕ್ಸ್ ಪವರ್ ಹೆಚ್ಚಿಸುವ ಆಹಾರಗಳು

ನೀರು ಕುಡಿದರೆ ಮೂತ್ರಕೋಶದ ಸೋಂಕು(ಯುಟಿಐ) ತಡೆಯಬಹುದು

ನೀರು ಕುಡಿದರೆ ಮೂತ್ರಕೋಶದ ಸೋಂಕು(ಯುಟಿಐ) ತಡೆಯಬಹುದು

ಸಂಶೋಧನೆಗಳ ಪ್ರಕಾರ ಲೈಂಗಿಕವಾಗಿ ತುಂಬಾ ಚಟುವಟಿಕೆಯಿಂದ ಇರುವಂತಹ ಮಹಿಳೆಯರು ಬೇರೆ ಮಹಿಳೆಯರಿಗಿಂತ ಹೆಚ್ಚು ಸೋಂಕು ತಗಲಿಸಿಕೊಳ್ಳುವ ಅಪಾಯವಿರುವುದು. ಸೆಕ್ಸ್ ಬಳಿಕ ಹೆಚ್ಚಿನ ನೀರು ಸೇವನೆ ಮಾಡಿದರೆ ಆಗ ಮೂತ್ರಕೋಶದ ಸೋಂಕನ್ನು ಕಡಿಮೆ ಮಾಡಬಹುದು. ಜೀವಮಾನದಲ್ಲಿ ಹೆಚ್ಚಿನ ಮಹಿಳೆಯರು ಯುಟಿಐ ಸಮಸ್ಯೆಗೆ ಒಳಗಾಗುವರು. ಆದರೆ ಇದಕ್ಕೆ ನಿಮ್ಮ ಲೈಂಗಿಕ ಜೀವನವನ್ನು ದೂರಬಾರದು. ನೀರು ನಿಮ್ಮ ಮೂತ್ರವನ್ನು ತೆಳುಗೊಳಿಸುವುದು ಮತ್ತು ಇದರಿಂದ ಮೂತ್ರವಿಸರ್ಜನೆಯು ಸರಾಗವಾಗಿ ಆಗುವುದು. ಹೆಚ್ಚಿನ ಮಹಿಳೆಯರು ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡಬೇಕೆಂದು ತಿಳಿದಿದೆ. ಆದರೆ ನೀರು ಕುಡಿಯಬೇಕೆಂದು ತಿಳಿದಿಲ್ಲ. ಯೋನಿಯು ತೇವಾಂಶದಿಂದ ಇರಬೇಕು. ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವ ಕಾರಣ ಬ್ಯಾಕ್ಟೀರಿಯಾವು ಹೊರಹೋಗುವುದು. ಇದರಿಂದ ಮೂತ್ರಕೋಶದ ಸೋಂಕನ್ನು ತಡೆಯಬಹುದು.

ಸ್ನಾಯು ಸೆಳೆತ ಮತ್ತು ಬಿಗಿತ ತಡೆಯಲು

ಸ್ನಾಯು ಸೆಳೆತ ಮತ್ತು ಬಿಗಿತ ತಡೆಯಲು

ಸ್ನಾಯು ಸೆಳೆತ ಅಥವಾ ಬಿಗಿತದಿಂದಾಗಿ ಸೆಕ್ಸ್ ಬಳಿಕ ನೀವು ಸಂಪೂರ್ಣವಾಗಿ ಆನಂದ ಪಡೆಯಲು ಸಾಧ್ಯವಾಗದು. ನೋವು ಯಾವಾಗಲೂ ಒಳ್ಳೆಯ ಅನುಭವವಲ್ಲ. ನಿರ್ಜಲೀಕರಣ ಮತ್ತು ಅತಿಯಾಗಿ ಬೆವರು ಹೊರಹೋಗುವ ಕಾರಣದಿಂದಾಗಿ ಜನರಲ್ಲಿ ಹೆಚ್ಚಾಗಿ ಸ್ನಾಯುಗಳ ಸೆಳೆತವು ಉಂಟಾಗುವುದು. ಸೆಕ್ಸ್ ತುಂಬಾ ಹುರುಪಿನ ಚಟುವಟಿಕೆಯಾಗಿದೆ ಮತ್ತು ಇದರಲ್ಲಿ ಹಲವಾರು ಭಂಗಿಗಳನ್ನು ಕೂಡ ಬಳಸಲಾಗುವುದು. ನಿಮ್ಮ ದೇಹವು ಈ ಭಂಗಿಗೆ ತಯಾರಾಗಿ ಇಲ್ಲದೆ ಇದ್ದರೆ ಆಗ ಸೆಳೆತವು ಉಮಟಾಗುವುದು. ಪರಾಕಾಷ್ಠೆ ವೇಳೆ ನೀವು ಹೆಚ್ಚು ಬೆವರುತ್ತೀರಿ ಮತ್ತು ಸ್ಖಲನ ಮತ್ತು ಜೊಲ್ಲು ಕೂಡ ಹೊರಹೋಗುವುದು. ಇದರಿಂದ ನೀವು ಸೆಕ್ಸ್ ಗೆ ಮೊದಲು ಮತ್ತು ಸೆಕ್ಸ್ ಬಳಿಕ ಸ್ವಲ್ಪ ಸಮಯ ಬಿಟ್ಟು ನೀರು ಸೇವಿಸಬೇಕು.

Most Read: ಮದುವೆಗೂ ಮುಂಚೆ ಹೀಗೆಲ್ಲಾ ಮಾಡಬೇಡಿ, ಮುಂದೆ ತೊಂದರೆಯಾಗಬಹುದು!

ನಿರ್ವಿಷಗೊಳಿಸುವುದು

ನಿರ್ವಿಷಗೊಳಿಸುವುದು

ಯುಟಿಐ ತಡೆಯಲು ಮಹಿಳೆಯರು ಸೆಕ್ಸ್ ಬಳಿಕ ನೀರು ಸೇವನೆ ಮಾಡುವುದು ಎಷ್ಟು ಅಗತ್ಯವೋ ಅದೇ ರೀತಿ ಪುರುಷರು ಕೂಡ ಸೆಕ್ಸ್ ಚಟುವಟಿಕೆ ಬಳಿಕ ದೇಹದಲ್ಲಿರುವ ವಿಷವನ್ನು ಹೊರಹಾಕಲು ನೀರು ಸೇವನೆ ಮಾಡುವುದು ಅತೀ ಅಗತ್ಯವಾಗಿದೆ. ಮೂತ್ರವು ಹೆಚ್ಚಾಗುವ ಕಾರಣದಿಂದಾಗಿ ಇದು ಮಹಿಳೆಯರ ಗರ್ಭಕೋಶವನ್ನು ಶುದ್ಧೀಕರಿಸುವುದು. ಇದರಿಂದ ಶಿಲೀಂಧ್ರ ಸೋಂಕನ್ನು ಕೂಡ ತಡೆಯಬಹುದು.

ಸೆಕ್ಸ್ ಜೀವನ ಸುಧಾರಿಸಲು

ಸೆಕ್ಸ್ ಜೀವನ ಸುಧಾರಿಸಲು

ಪುರುಷರು ಹೆಚ್ಚು ನೀರು ಸೇವನೆ ಮಾಡುವುದರಿಂದ ಶಿಶ್ನಗಳಿಗೆ ಸರಿಯಾಗಿ ರಕ್ತಸಂಚಾರವಾಗುವುದು. ಇದರಿಂದ ಆರೋಗ್ಯಕಾರಿ, ಗಡುಸಾದ ಹಾಗೂ ಬಲವಾದ ನಿಮಿರುವಿಕೆ ಉಂಟಾಗುವುದು. ನೀವು ಇನ್ನೊಂದು ಸಲ ಸೆಕ್ಸ್ ನಲ್ಲಿ ತೊಡಗಿಕೊಳ್ಳಲು ಬಯಸುವುದಾದರೆ ಆಗ ನೀವು ನೀರು ಸೇವಿಸಿ. ಯಾವುದೇ ರೀತಿಯ ಶಕ್ತಿ ಪೇಯಗಳು ಮತ್ತು ಆಲ್ಕೋಹಾಲ್ ನಿಮಗೆ ನೀರು ಕುಡಿದಷ್ಟು ಲಾಭವನ್ನು ಖಂಡಿತವಾಗಿಯೂ ನೀಡಲಾರದು. ಪ್ರತಿನಿತ್ಯ ನೀವು ಸುಮಾರು ಮೂರು ಲೀಟರ್ ನಷ್ಟು ನೀರು ಸೇವನೆ ಮಾಡಿ. ನೀರು ಸೇವನೆ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ ಮಟ್ಟವು ಹೆಚ್ಚಾಗುವುದು. ನಿರ್ಜಲೀಕರಣದಿಂದಾಗಿ ಉಂಟಾಗುವಂತಹ ನಿಮಿರು ದೌರ್ಬಲ್ಯ ಸಮಸ್ಯೆಯನ್ನು ಕೂಡ ನೀರು ಸೇವನೆಯಿಂದ ನಿವಾರಣೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ನೀರು ಕುಡಿಯುವುದರಿಂದ ನಿಮ್ಮ ಲೈಂಗಿಕ ಆರೋಗ್ಯ ಮಾತ್ರವಲ್ಲದೆ, ಸಂಪೂರ್ಣ ಆರೋಗ್ಯ ಕಾಪಾಡುವುದು.

ಪ್ರತಿನಿತ್ಯ 8-10 ಲೋಟ ನೀರು ಕುಡಿಯಬೇಕು

ಪ್ರತಿನಿತ್ಯ 8-10 ಲೋಟ ನೀರು ಕುಡಿಯಬೇಕು

ಸೆಕ್ಸ್ ಅನ್ನುವುದು ತುಂಬಾ ಖುಷಿ ನೀಡುವಂತಹ ಚಟುವಟಿಕೆ. ಇದನ್ನು ನಾವು ಪ್ರೀತಿಸುತ್ತೇವೆ. ಸೆಕ್ಸ್ ಬಳಿಕ ಮಾಡಬೇಕಾದ ಕೆಲವೊಂದು ಕೆಲಸಗಳಲ್ಲಿ ನೀರು ಕುಡಿಯುವುದು ಕೂಡ ಒಂದು ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಅದಾಗ್ಯೂ, ಸೆಕ್ಸ್ ಬಳಿಕ ನಿರ್ಜಲೀಕರಣದಿಂದ ಬಳಲುವುದು ಯಾರು ಕೂಡ ಬಯಸುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 8-10 ಲೋಟ ನೀರು ಕುಡಿಯಬೇಕು ಎಂದು ಹೇಳಿರುವರು. ಸೆಕ್ಸ್ ಬಳಿಕ ನೀವು ನೀರಿನ ಸೇವನೆ ಹೆಚ್ಚಿಸಿ. ಸೆಕ್ಸ್ ಬಳಿಕ ನೀರು ಕುಡಿಯುವುದು ಯಾಕೆ ಎಂದು ಕಾರಣಗಳು ತಿಳಿದಿದೆ ತಾನೇ? ಸೆಕ್ಸ್ ಬಳಿಕ ನೀರು ಕುಡಿಯಲು ಮರೆಯಬೇಡಿ.

English summary

Why You Should Drink Water After Sex

Water is a basic need just like food and shelter. Drinking water daily is recommended by healthcare providers for all humans. However, there are times it is essential for you to do so. One of those times is, after one of the most enjoyable things in life, sex. It is not common knowledge that drinking water is one of the things to do after sex and even less so why it is crucial. Water may be the last thing on your mind after such a satisfying act. You probably want to cuddle and sleep. Read on to find out the five reasons why you should drink water after sex.
Story first published: Saturday, November 17, 2018, 15:58 [IST]
X
Desktop Bottom Promotion