For Quick Alerts
ALLOW NOTIFICATIONS  
For Daily Alerts

ಕೆಲವರಿಗೆ ಸೆಕ್ಸ್ ನಂತರ ತಲೆನೋವು ಬರುತ್ತದೆಯಂತೆ! ಇದಕ್ಕೆ ಕಾರಣವೇನು?

|

ಲೈಂಗಿಕ ಕ್ರಿಯೆ ಬಳಿಕ ಹೆಚ್ಚಿನವರು ಪರಾಕಾಷ್ಠೆ ತಲುಪುವರು. ಕ್ಲೈಮ್ಯಾಕ್ಸ್ ಬಳಿಕ ಹೆಚ್ಚಿನವರಿಗೆ ನಿದ್ರೆಗೆ ಜಾರಬೇಕು, ಇನ್ನು ಕೆಲವರಿಗೆ ಏನಾದರೂ ತಿನ್ನಬೇಕು ಅಥವಾ ಇನ್ನೇನಾದರೂ ಮಾಡಬೇಕು ಎನ್ನುವ ಬಯಕೆ ಮೂಡುವುದು. ಇದು ತುಂಬಾ ಕ್ಲಿಷ್ಟ ಸಮಯವಾಗಿರುವುದು.

2014ರಲ್ಲಿ ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ಶೇ. 1ರಷ್ಟು ಜನರಿಗೆ ಸೆಕ್ಸ್ ಬಳಿಕದ ತಲೆನೋವು ಕಾಣಿಸಿಕೊಳ್ಳುತ್ತದೆಯಂತೆ! ನೀವು ಕೂಡ ಈ ದುರಾದೃಷ್ಟವಾಗಿರುವ ಶೇ.1ರಲ್ಲಿದ್ದರೆ ಇದಕ್ಕೆ ಕಾರಣವೇನೆಂದು ತಿಳಿದುಕೊಂಡು ಅದನ್ನು ನೀವು ಕಡೆಗಣಿಸಿದರೆ ಆಗ ನೀವು ಸೆಕ್ಸ್ ನ್ನು ಆನಂದಿಸಬಹುದು...

ತಲೆನೋವು ಎನ್ನುವ ಪದದ ಬಗ್ಗೆ ಅತಿಯಾಗಿ ಆಲೋಚನೆ ಮಾಡಬೇಡಿ

ತಲೆನೋವು ಎನ್ನುವ ಪದದ ಬಗ್ಗೆ ಅತಿಯಾಗಿ ಆಲೋಚನೆ ಮಾಡಬೇಡಿ

ಮೊದಲನೇಯದಾಗಿ ನೀವು ಸೆಕ್ಸ್ ತಲೆನೋವು ಎನ್ನುವ ಪದದ ಬಗ್ಗೆ ಅತಿಯಾಗಿ ಆಲೋಚನೆ ಮಾಡಬೇಡಿ. ಯಾಕೆಂದರೆ ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಿಂದ ನಿಮಗೆ ಈ ರೀತಿ ಆಗಬಹುದು. ಸಾಮಾನ್ಯವಾಗಿ ಸೆಕ್ಸ್ ನಿಂದಾಗಿ ಬರುವಂತಹ ತಲೆ ನೋವಿನಿಂದಾಗಿ ನಿಮಗೆ ತಲೆಯ ಒಂದು ಭಾಗ ಅದೇ ರೀತಿಯಾಗಿ ಕುತ್ತಿಗೆಯಲ್ಲೂ ನೋವು ಕಾಣಿಸಿಕೊಳ್ಳುವುದು ಎಂದು ಅಮೆರಿಕನ್ ಮೈಗ್ರೇನ್ ಫೌಂಡೇಶನ್(ಎಎಂಎಫ್) ಹೇಳಿದೆ. ಇದು ಸೆಕ್ಸ್ ವೇಳೆ ಕಾಣಿಸಿಕೊಳ್ಳುವ ಸಾಮಾನ್ಯವಾದ ಒತ್ತಡದ ತಲೆನೋವು ಆಗಿದೆ ಅಥವಾ ಇದು ಬೇರೆ ರೀತಿಯ ಯಾವುದೇ ಗಂಭೀರ ಸಮಸ್ಯೆಯ ಲಕ್ಷಣವೂ ಆಗಿರಬಹುದು ಎಂದು ಮಾಯೊ ಕ್ಲಿನಿಕ್ ಹೇಳಿದೆ.

ಲಘುವಾಗಿರುವಂತಹ ತಲೆ ನೋವು

ಲಘುವಾಗಿರುವಂತಹ ತಲೆ ನೋವು

ಕೆಲವು ಜನರಿಗೆ ಲಘುವಾಗಿರುವಂತಹ ತಲೆ ನೋವು ಲೈಂಗಿಕ ಕ್ರಿಯೆ ವೇಳೆ ಕಾಣಿಸಿಕೊಳ್ಳುವುದು. ಆದರೆ ಲೈಂಗಿಕ ಕ್ರಿಯೆಯು ಹೆಚ್ಚಾದಂತೆ ಇದು ತುಂಬಾ ಕೆಟ್ಟ ಸ್ಥಿತಿಗೆ ತಲುಪುವುದು ಎಂದು ಎಎಂಎಪ್ ಹೇಳಿದೆ. ಅಥವಾ ನೀವು ಇದನ್ನು ಪರಾಕಾಷ್ಠೆ ತಲೆನೋವು ಎಂದು ಕೂಡ ಪರಿಗಣಿಸಬಹುದಾಗಿದೆ. ಇದು ಒಂದು ಸ್ಫೋಟಕ ತಲೆನೋವಿನಂತೆ ಬರುವುದು. ಇದು ನೀವು ಪರಾಕಾಷ್ಠೆ ತಲುಪುವ ಸ್ವಲ್ಪ ಸಮಯ ಮೊದಲು ಕಾಣಿಸಿಕೊಳ್ಳುವುದು. ಈ ತಲೆ ನೋವಿನ ಭಾವನೆಯನ್ನು ಥಂಡರ್ ಕ್ಯಾಪ್ ತಲೆ ನೋವು ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದು ತುಂಬಾ ಆಘಾತ ಉಂಟು ಮಾಡುವುದು ಮತ್ತು ಸದ್ದು ಮಾಡಿ ಗಮನ ಸೆಳೆಯುವುದು. ಮೈಗ್ರೇನ್ ಬರುವವರಿಗೂ ಸೆಕ್ಸ್ ಎನ್ನುವುದು ಕಾರಣ ವಾಗಿರಬಹುದು.

ತಲೆನೋವು ಹಠಾತ್ ಆಗಿ ಕಾಣಿಸಿಕೊಂಡರೆ

ತಲೆನೋವು ಹಠಾತ್ ಆಗಿ ಕಾಣಿಸಿಕೊಂಡರೆ

ಸೆಕ್ಸ್ ನ ತಲೆ ನೋವು ಯಾವ ರೀತಿ ಭಾವನೆ ಉಂಟು ಮಾಡುವುದು ಮತ್ತು ಅದು ಹೇಗೆ ಮುಂದುವರಿಯುವುದು ಎಂದು ತಿಳಿಯುವುದು ಅತೀ ಅಗತ್ಯವಾಗಿರುವುದು. ಯಾಕೆಂದರೆ ಇಂತಹ ತಲೆನೋವು ಹಠಾತ್ ಆಗಿ ಕಾಣಿಸಿಕೊಂಡರೆ ಇದು ಯಾವುದೇ ರೀತಿಯ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ ಎಂದು ಹೇಳಬಹುದು. ಇದರ ಬಗ್ಗೆ ನೀವು ತಕ್ಷಣ ಹೋಗಿ ವೈದ್ಯರನ್ನು ಭೇಟಿಯಾಗಬೇಕು ಎಂದು ಎಎಂಎಫ್ ಹೇಳಿದೆ. ನಿಮಗೆ ತಲೆನೋವು ಕಾಣಿಸಿಕೊಂಡು ಆಗ ನೀವು ಪ್ರಜ್ಞಾಹೀನಾದರೆ, ವಾಂತಿ, ಕುತ್ತಿಗೆಯಲ್ಲಿ ಬಿಗಿ ಸೆಳೆತ ಅಥವಾ 24 ಗಂಟೆಗಿಂತಲೂ ಹೆಚ್ಚಿನ ಸಮಯ ತಲೆನೋವು ಇದ್ದರೆ ಆಗ ಇದು ಖಂಡಿತವಾಗಿಯೂ ಬೇರೆ ಯಾವುದೇ ಅನಾರೋಗ್ಯದ ಲಕ್ಷಣವಾಗಿರಬಹುದು.

ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ

ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ

ನೀವು ಈ ವೇಳೆ ತಕ್ಷಣ ಹೋಗಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಸೆಕ್ಸ್ ತಲೆನೋವು ಎನ್ನುವುದು ಮೆದುಳಿನ ಒಡೆತ, ರಕ್ತಸ್ರಾವ ಅಥವಾ ಪಾರ್ಶ್ವವಾಯುವಿಗೆ ಕಾರಣ ವಾಗಬಹುದು ಎಂದು ಮಾಯೋ ಕ್ಲಿನಿಕ್ ತಿಳಿಸಿದೆ. ಆದರೆ ಹೆಚ್ಚಿನ ಜನರಿಗೆ ಸಾಮಾನ್ಯ ತಲೆನೋವು ಕಾಣಿಸಿ ಕೊಳ್ಳುವುದು. ಇದರ ಬಗ್ಗೆ ಗಂಭೀರವಾಗಿ ಚಿಂತೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ.

ಸೆಕ್ಸ್ ಎನ್ನುವುದು ದೈಹಿಕ ಶ್ರಮಕ್ಕೆ ಸಮಾನ ಆಗಿರುವುದು.

ಸೆಕ್ಸ್ ಎನ್ನುವುದು ದೈಹಿಕ ಶ್ರಮಕ್ಕೆ ಸಮಾನ ಆಗಿರುವುದು.

ಸೆಕ್ಸ್ ವೇಳೆ ನಿಮ್ಮ ಮೆದುಳಿನಲ್ಲಿ ಏನು ನಡೆಯುತ್ತಿರುತ್ತದೆ ಎನ್ನುವುದು ತಲೆನೋವನ್ನು ಉಂಟು ಮಾಡಬಹುದೇ? ಆದರೆ ಇದರ ಬಗ್ಗೆ ವೈದ್ಯರು ಕೂಡ ನಿಖರವಾಗಿ ಹೇಳುವುದಿಲ್ಲ. ಸಿದ್ಧಾಂತದ ಪ್ರಕಾರ ಸೆಕ್ಸ್ ಎನ್ನುವುದು ದೈಹಿಕ ಶ್ರಮಕ್ಕೆ ಸಮಾನ ಆಗಿರುವುದು. ಇದರಿಂದ ನಿಮ್ಮ ತಲೆಬುರುಡೆಯಲ್ಲಿನ ಕೆಲವು ರಕ್ತನಾಳಗಳು ಹಿಗ್ಗಿಕೊಂಡು ತಲೆನೋವು ಕಾಣಿಸಬಹುದು. ಆದರೆ ಇತರ ಕೆಲವು ತಲೆನೋವಿನಂತೆ ಇದಕ್ಕೆ ಸ್ಪಷ್ಟ ಕಾರಣ ಮತ್ತು ಚಿಕಿತ್ಸೆ ನೀಡಲು ನೀವು ಕೆಲವು ಜೀವನಶೈಲಿ ಅಂಶಗಳನ್ನು ಪರಿಗಣಿಸಲೇಬೇಕಾಗುತ್ತದೆ.

ಒಂದು ಸಲ ಮಾತ್ರ ಕಾಣಿಸಿಕೊಂಡಿದ್ದರೆ ಚಿಂತೆ ಮಾಡಬೇಕಿಲ್ಲ

ಒಂದು ಸಲ ಮಾತ್ರ ಕಾಣಿಸಿಕೊಂಡಿದ್ದರೆ ಚಿಂತೆ ಮಾಡಬೇಕಿಲ್ಲ

ಇದು ಸೆಕ್ಸ್ ವೇಳೆ ಒಂದು ಸಲ ಮಾತ್ರ ಕಾಣಿಸಿಕೊಂಡಿದ್ದರೆ ಆಗ ನೀವು ಯಾವುದೇ ಚಿಂತೆ ಮಾಡಬೇಕಿಲ್ಲ. ಆದರೆ ಇದು ನಿಮಗೆ ಪದೇ ಪದೇ ಕಾಣಿಸುತ್ತಿದ್ದರೆ ಆಗ ನೀವು ನರತಜ್ಞರನ್ನು ಭೇಟಿಯಾಬೇಕು. ಅವರು ನಿಮ್ಮ ಎಂಆರ್ ಐ ಸ್ಕ್ಯಾನ್ ಅಥವಾ ಸಿಟಿ ಸ್ಕ್ಯಾನ್ ಮಾಡಿಸಿ, ತಲೆಯ ರಚನೆ ಮತ್ತು ಅದರಲ್ಲಿ ಇರುವಂತಹ ರಕ್ತನಾಳಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವರು. ಇದರಿಂದ ಬೇರೆ ಯಾವುದೇ ಸಮಸ್ಯೆ ಇದಕ್ಕೆ ಕಾರಣವಲ್ಲವೆಂದು ಅವರು ಸ್ಪಷ್ಟಪಡಿಸುವರು. ತಲೆನೋವು ನಿಮಗೆ ದಿನಪೂರ್ತಿ ಅಥವಾ ವಾರಗಟ್ಟಲೆ ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ಅವರು ಬೆನ್ನುಮೂಳೆಯ ಟ್ಯಾಪ್ ಮಾಡಿಸಿಕೊಳ್ಳುವರು.

ಒಂದು ಸಲ ಮಾತ್ರ ಕಾಣಿಸಿಕೊಂಡಿದ್ದರೆ ಚಿಂತೆ ಮಾಡಬೇಕಿಲ್ಲ

ಒಂದು ಸಲ ಮಾತ್ರ ಕಾಣಿಸಿಕೊಂಡಿದ್ದರೆ ಚಿಂತೆ ಮಾಡಬೇಕಿಲ್ಲ

ಇದು ಕೇವಲ ಸೆಕ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವಂತಹ ತಲೆನೋವು ಆಗಿದ್ದರೆ ಆಗ ವೈದ್ಯರು ನಿಮಗೆ ಚಿಂತೆ ಮಾಡಬೇಡಿ ಎಂದು ಹೇಳಿ ಕೆಲವೊಂದು ಔಷಧಿಗಳನ್ನು ಸೂಚಿಸಬಹುದು ಎಂದು ಮಾಯೊ ಕ್ಲಿನಿಕ್ ಹೇಳುತ್ತದೆ. ಅಥವಾ ನಿಮಗೆ ಟ್ರಿಪಟಾನ್ ಕುಟುಂಬಕ್ಕೆ ಸಂಬಂಧಿಸಿರುವಂತಹ ಮಾತ್ರೆಯನ್ನು ನೀಡಬಹುದು. ಇದನ್ನು ಹೆಚ್ಚಾಗಿ ಮೈಗ್ರೇನ್ ನಿವಾರಣೆ ಮಾಡಲು ವೈದ್ಯರು ಸೂಚಿಸುವರು.

ಸೆಕ್ಸ್ ನಲ್ಲಿ ಭಾಗಿ ಆಗುವ ಒಂದು ಗಂಟೆಗೆ ಮೊದಲು

ಸೆಕ್ಸ್ ನಲ್ಲಿ ಭಾಗಿ ಆಗುವ ಒಂದು ಗಂಟೆಗೆ ಮೊದಲು

ಇದನ್ನು ನೀವು ಸೆಕ್ಸ್ ನಲ್ಲಿ ಭಾಗಿ ಆಗುವ ಒಂದು ಗಂಟೆಗೆ ಮೊದಲು ತೆಗೆದುಕೊಳ್ಳಬೇಕು. ನೀವು ಮುಂದಾಲೋಚನೆ ಮಾಡಬೇಕಾಗುತ್ತದೆ ಮತ್ತು ಯೋಜನೆಗಳು ನಿಮ್ಮ ಸೆಕ್ಸ್ ನ್ನು ರೋಮ್ಯಾಂಟಿಕ್ ಇಲ್ಲದಂತೆ ಮಾಡಬಹುದು. ಆದರೆ ಔಷಧಿಯಿಂದ ನೀವು ಸೆಕ್ಸ್ ನ್ನು ತಲೆ ನೋವು ಇಲ್ಲದೆ ಆನಂದಿಸುವಂತೆ ಆಗಬಹುದು.

ನಿಯಮಿತವಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ

ನಿಯಮಿತವಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ

ನೀವು ಪರಾಕಾಷ್ಠೆ ತಲುಪುವ ಮೊದಲೇ ಸೆಕ್ಸ್ ನ್ನು ನಿಲ್ಲಿಸಿ ಅಥವಾ ಇದರಿಂದ ಹೊರಬನ್ನಿ ಎಂದು ಕೆಲವು ವೈದ್ಯರು ಹೇಳಬಹುದು. ಆದರೆ ಇದು ಎಲ್ಲಾ ಸಮಯದಲ್ಲಿ ಅನಿವಾರ್ಯವಲ್ಲ ಎಂದು ಮನಶಾಸ್ತ್ರಜ್ಞ ಮತ್ತು ಮಾರ್ಡನ್ ಸೆಕ್ಸ್ ಥೆರಪಿ ಇನ್ ಸ್ಟಿಟ್ಯೂಟ್ ನ ನಿರ್ದೇಶಕ ಡಾ. ರಚೆಲ್ ನೀಡ್ಲೆ ಹೇಳುತ್ತಾರೆ. ``ನೀವು ನೋವಿನಲ್ಲಿ ಇರುವುದನ್ನು ನಾನು ಬಯಸುವುದಿಲ್ಲ. ಈ ಸಲಹೆಯು ತುಂಬಾ ತೀವ್ರ ಹಾಗೂ ಅಸ್ವಾಭಾವಿಕ ಎಂದು ಕಾಣಿಸುತ್ತದೆ.ನಿಯಮಿತವಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ತಲೆನೋವು ಇದ್ದರೆ ಆಗ ನೀವು ಪರಾಕಾಷ್ಠೆ ತಲುಪುವುದನ್ನು ನಿಲ್ಲಿಸಬೇಕು'' ಎಂದು ಹೇಳಲಾಗುತ್ತದೆ.

ಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಮತ್ತು ಚಿಕಿತ್ಸೆ ಪಡೆದುಕೊಳ್ಳಿ

ಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಮತ್ತು ಚಿಕಿತ್ಸೆ ಪಡೆದುಕೊಳ್ಳಿ

ನೀವು ಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಮತ್ತು ಚಿಕಿತ್ಸೆ ಪಡೆದುಕೊಂಡರೆ ಆಗ ನೀವು ಸೆಕ್ಸ್ ನ್ನು ಆನಂದಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಪರಾಕಾಷ್ಠೆ ತಲುಪುದನ್ನು ನಿಲ್ಲಿಸಲು ನಿಮಗೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಬಹುದು. ಆದರೆ ಅತೀ ಮುಖ್ಯವೆಂದು ನೀವು ವೈದ್ಯರ ಬಳಿಗೆ ತೆರಳಿ ಸೆಕ್ಸ್ ವೇಳೆ ಕಾಣಿಸಿಕೊಳ್ಳುವ ತಲೆನೋವಿನ ಲಕ್ಷಣಗಳು ಹೇಳಿಕೊಳ್ಳುವುದು. ಯಾಕೆಂದರೆ ಇದರಿಂದ ನಿಮಗೆ ಬೇರೆ ಯಾವುದೇ ಸಮಸ್ಯೆ ಆಗದೆ ಇರುವುದು. ನೀವು ಇದನ್ನು ಆದಷ್ಟು ಬೇಗನೆ ಪರಿಗಣಿಸಿದ ಬಳಿಕ ಸೆಕ್ಸ್ ನಲ್ಲಿ ಆದಷ್ಟು ಬೇಗ ತೊಡಗಿಕೊಂಡು ಆನಂದಿಸಬಹುದು ಎಂದು ಹೇಳುತ್ತಾರೆ. ನಿಮ್ಮ ಸಮಸ್ಯೆಯನ್ನು ಬಗೆಹರಿಸಿ ಕೊಂಡರೆ ಆಗ ನೀವು ಖಂಡಿತವಾಗಿಯೂ ಪರಾಕಾಷ್ಠೆ ತಲುಪಿ ಸೆಕ್ಸ್ ನ್ನು ಸಂಪೂರ್ಣವಾಗಿ ಆನಂದಿಸಬಹುದು.

English summary

Why You Get Headaches After Sex

It's next to impossible to pinpoint your state of mind right after an orgasm. Euphoric. Sleepy. Needing an egg sandwich. It's not always a bliss ful situation, though — about 1% of people get sex headaches, according to a 2014 study. If you're one of the unlucky 1%, figuring out what's triggering your sex headaches might help you prevent them from happening in the first place.
X
Desktop Bottom Promotion