Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರು ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರಂತೆ! ಯಾಕೆ ಗೊತ್ತೇ?
ಸಾಮಾನ್ಯವಾಗಿ ಪುರುಷರು ಮಹಿಳೆಯರ ಬಗ್ಗೆ ನೀಡುವ ದೂರುಗಳಲ್ಲಿ ಸಿದ್ಧಗೊಳ್ಳಲು ಮತ್ತು ಶೌಚಾಲಯದಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದೇ ಆಗಿದೆ. ಆದರೆ ಈ ಮಾತನ್ನು ಮಹಿಳೆಯರು ಪೂರ್ಣವಾಗಿ ಒಪ್ಪುವುದಿಲ್ಲ, ಏಕೆಂದರೆ ಶೌಚಾಲಯದಲ್ಲಿ ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚು ಸಮಯ ಕಳೆಯುತ್ತಾರೆ.

ಈ ಮಾತನ್ನು ಬಹುತೇಕ ಎಲ್ಲಾ ಮಹಿಳೆಯರೂ ಒಪ್ಪುತ್ತಾರೆ. ಆದರೆ ಒಳಗೇಕೆ ಇವರಿಗೆ ಇಷ್ಟು ಸಮಯ ಹಿಡಿಯುತ್ತಿದೆ ಎಂಬುದರ ಬಗ್ಗೆ ನೀವು ಚಿಂತಿಸಿದ್ದೀರೇ? ಖಚಿತ ಕಾರಣ ತಿಳಿದುಬರುತ್ತಿಲ್ಲದಿದ್ದರೆ ಈ ಕಾರಣಗಳಿರಬಹುದು:

ತಮ್ಮ ಮೊಬೈಲನ್ನು ವೀಕ್ಷಿಸುತ್ತಿರುತ್ತಾರೆ
ಎಂದು ಈ ಸ್ಮಾರ್ಟ್ ಫೋನ್ ನಮ್ಮ ಜೀವನದಲ್ಲಿ ಅಡಿಯಿಟ್ಟಿತೋ, ನಮ್ಮೆಲ್ಲರ ಜೀವನಶೈಲಿಯೇ ಬದಲಾಗಿಬಿಟ್ಟಿದೆ. ಅಲ್ಲದೇ ಮೊಬೈಲನ್ನು ಶೌಚಾಲಯದಲ್ಲಿ ಬಳಸುವುದು ಬಹುತೇಕವಾಗಿ ಎಲ್ಲೆಡೆಯೂ ಹೆಚ್ಚು ಕಾಣಬರುತ್ತಿದೆ. 2012 ರಷ್ಟು ಹಿಂದೆಯೇ ಈ ಬಗ್ಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಮೊಬೈಲ್ ಫೋನನ್ನು ಹೊಂದಿದ್ದ ನೂರು ಪುರುಷರಲ್ಲಿ ಎಪ್ಪತ್ತೈದು ಪುರುಷರು ಈ ಸಮಯದಲ್ಲಿ ಮೊಬೈಲ್ ವೀಕ್ಷಿಸುತ್ತಿದ್ದರು ಎಂದು ಕಂಡುಬಂದಿದೆ. ಇವರಲ್ಲಿ ಮೂವತ್ತು ಪುರುಷರು ಈ ಸಮಯದಲ್ಲಿ ಮೊಬೈಲ್ ಬಳಸುವುದು ತಮಗೆ ಅಗತ್ಯ/ಅನಿವಾರ್ಯ ಎಂದು ತಿಳಿಸಿದ್ದಾರೆ. ಹಾಗಾಗಿ, ಒಂದು ವೇಳೆ ನಿಮ್ಮ ಪುರುಷ ಶೌಚಾಲಕ್ಕೆ ಧಾವಿಸುವ ಮುನ್ನ ತನ್ನೊಂದಿಗೆ ಮೊಬೈಲ್ ಫೋನನ್ನೂ ಕೊಂಡೊಯ್ದಿದ್ದರೆ ಇವರು ಇಲ್ಲಿ ಬಳಸುವುದು ಖಚಿತ ಹಾಗೂ ಹೆಚ್ಚಿನ ಸಮಯದ ಬಳಿಕವೇ ಹೊರಬರುವುದೂ ಖಚಿತವಾಗಿದೆ.

ಇದು ಆರೋಗ್ಯಕರ ಅಭ್ಯಾಸವೇ?
ಇಲ್ಲ, ಖಂಡಿತವಾಗಿಯೂ ಇಲ್ಲ. ಆರೋಗ್ಯ ತಜ್ಞರ ಪ್ರಕಾರ, ಯಾರೂ ಅನಿವಾರ್ಯ ಅಗತ್ಯವಿಲ್ಲದ ಹೊರತಾಗಿ ಹತ್ತು ನಿಮಿಷಕ್ಕೂ ಹೆಚ್ಚಿನ ಕಾಲ ಶೌಚಾಲಯದಲ್ಲಿ ಕಳೆಯಬಾರದು. ಇನ್ನೂ ಕಡಿಮೆ ಸಮಯ ಕಳೆದಷ್ಟೂ ಉತ್ತಮ! ಅದರಲ್ಲೂ ಶೌಚಾಲಯಕ್ಕೆ ಮೊಬೈಲ್ ಫೋನ್ ಮೊದಲಾದ ಯಾವುದೇ ಉಪಕರಣವನ್ನು ಕೊಂಡೊಯ್ದರೂ ಇದರ ಹೊರಕವಚದ ಮೇಲೆ ಅತಿಸೂಕ್ಷ್ಮ ಕೀಟಾಣು-ಕ್ರಿಮಿಗಳು ಕುಳಿತುಕೊಳ್ಳುವ ಸಾಧ್ಯತೆ ಹದಿನೆಂಟು ಪಟ್ಟು ಹೆಚ್ಚು. ಸಾಮಾನ್ಯವಾಗಿ ಈ ಕ್ರಿಮಿಗಳು ಬೆಚ್ಚಗಿರುವ ಪದರದ ಮೇಲೆ ಸುಲಭವಾಗಿ ಕುಳಿತು ಅಂಟಿಕೊಂಡುಬಿಡುತ್ತವೆ. ತನ್ಮೂಲಕ ರೋಗ ಹರಡುವ ಸಾಧ್ಯತೆಯೂ ಹತ್ತು ಹಲವಾರು ಪಟ್ಟು ಹೆಚ್ಚುತ್ತದೆ.

ಹಸ್ತಮೈಥುನ
ಎಲ್ಲಿಯವರೆಗೆ ಮನೆಯಲ್ಲಿ ಪುರುಷನೊಬ್ಬನೇ ಇರುತ್ತಾನೋ ಅಲ್ಲಿಯವರೆಗೆ ಆತನಿಗೆ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳಲು ಇಡಿಯ ವಾಸ್ತಸ್ಥಳ ಲಭ್ಯವಿರುತ್ತದೆ. ಆದರೆ ವಾಸಸ್ಥಳದಲ್ಲಿ ಇನ್ನೊಬ್ಬ ವ್ಯಕ್ತಿಯಿದ್ದರೂ ಈ ಕೆಲಸಕ್ಕೆ ಕೇವಲ ಶೌಚಾಲಯವೊಂದೇ ಗತಿ. ಹಾಗಾಗಿ ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ವಾಸಸ್ಥಳದಲ್ಲಿರುವ ಪುರುಷರು ಶೌಚಾಲಯದಲ್ಲಿ ಹೆಚ್ಚಿನ ಕಾಲ ಕಳೆಯಲು ಇದೂ ಒಂದು ಕಾರಣವಾಗಿದೆ. ಆದರೆ ನೆನಪಿಡಿ ಅತೀಯಾದ ಈ ವ್ಯಸನಕ್ಕೆ ತುತ್ತಾದ ವ್ಯಕ್ತಿಗಳು ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥವನ್ನು ಕಳೆದುಕೊಂಡಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸಲಾಗಿದೆ. ತನ್ಮೂಲಕ ನಾಲ್ಕು ಜನರ ನಡುವೆ ಇದ್ದ ಸಮಯದಲ್ಲಿ ಮೂತ್ರ ಪ್ರಕಟಗೊಂಡು ಮುಜುಗರ ಅನುಭವಿಸಬೇಕಾಗುತ್ತದೆ. ಇತರ ಅಡ್ಡಪರಿಣಾಮಗಳಲ್ಲಿ ಅತೀವವಾದ ದೈಹಿಕ ಸುಸ್ತು, ನಪುಂಸಕತೆ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ, ಅನಿಯಂತ್ರಿತ ವೀರ್ಯಸ್ಖಲನ ಕಾಡಬಹುದು!

ಗಡ್ಡ/ಮೀಸೆ ಕತ್ತರಿಸಿ ಒಪ್ಪವಾಗಿಸಿಕೊಳ್ಳುವುದು
ಹೌದು, ತಮ್ಮ ಗಡ್ಡ ಮೀಸೆಗಳೂ ಅಂದವಾಗಿ ಕಾಣಬೇಕೆಂದು ಪುರುಷರ ಇಚ್ಛೆಯಾಗಿರುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ಈ ವಿಷಯ ತಿಳಿದಿರುವುದಿಲ್ಲ. ಪುರುಷರು ತಮ್ಮ ಮೀಸೆ ಅಥವಾ ಗಡ್ಡಗಳನ್ನು ಪ್ರತಿಬಾರಿ ಶೌಚಾಲಯಕ್ಕೆ ಬಂದಾಗಲೂ ಗಮನಿಸಿ ಉದ್ದವಾಗಿರುವ ಕೂದಲುಗಳನ್ನು ರೇಜರ್, ಚಿಕ್ಕ ಕತ್ತರಿ ಅಥವಾ ಟ್ರಿಮ್ಮರ್ ಉಪಕರಣ ಬಳಿಸಿ ಕತ್ತರಿಸಿಕೊಂಡು ಒಪ್ಪವಾಗಿಸುತ್ತಾರೆ.

ಆಟವಾಡುವುದು
ವಿಶೇಷವಾಗಿ ಸಮಯದ ಆಭಾವವಿರುವ ಉದ್ಯೋಗಸ್ಥ ಪುರುಷರು ಹಾಗೂ ವಿದ್ಯಾರ್ಥಿಗಳು ಕಛೇರಿಯಲ್ಲಿಯೂ ಮನೆಯಲ್ಲಿಯೂ ತಮ್ಮ ಮನೋರಂಜನೆಗಾಗಿ ಸಮಯವನ್ನು ಹೊಂದಿಸಿಕೊಳ್ಳಲು ಅಸಮರ್ಥರಾಗಿದ್ದರೆ ತಮ್ಮ ನೆಚ್ಚಿನ ಆಟವನ್ನು ಇವರು ಶೌಚಾಲಯದಲ್ಲಿ ಸಿಗುವ ಅಲ್ಪ ಸಮಯದಲ್ಲಿಯೇ ಆಡಿ ಪೂರೈಸಿಕೊಳ್ಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಡಿಜಿಟಲ್ ಮತ್ತು ವೀಡೀಯೋ ಆಟಗಳು ಮಾನಸಿಕ ಆರೋಗ್ಯ ಸಂಬಂಧಿತ ರೋಗಗಳೇ ಆಗಿವೆ. ಹಾಗಾಗಿ, ಒಂದು ವೇಳೆ ನಿಮ್ಮ ಪುರುಷ ಶೌಚಾಲಯದಲ್ಲಿ ಮೊಬೈಲಿನಲ್ಲಿ ಆಟ ಆಡುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟೂ ಬೇಗನೇ ಸರಿದಾರಿಗೆ ತರಲು ಯತ್ನಿಸಿ.

ತಮ್ಮನ್ನು ತಾವೇ ಮೋಹಿಸಿಕೊಳ್ಳುವುದು
ಇಂಗ್ಲೆಂಡಿನಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಪ್ರತಿ ಹತ್ತರಲ್ಲೊಬ್ಬ ಪುರುಷರು ಒಂಟಿಯಾಗಿರುವ ತಮ್ಮನ್ನು ತಾವೇ ಶೌಚಾಲಯದ ಕನ್ನಡಿಯಲ್ಲಿ ನೋಡಿಕೊಂಡು ಮೋಹಿಸಿಕೊಳ್ಳುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

ಇವರು ಅಳುತ್ತಿರಬಹುದು!
ನಗುವ ಹೆಂಗಸನ್ನೂ ಅಳುವ ಗಂಡಸನ್ನೂ ನಂಬಬೇಡ ಎಂಬ ಕನ್ನಡದ ಗಾದೆಯೇ ಇದೆ. ಸಾಮಾನ್ಯವಾಗಿ ಪುರುಷರು ತಮ್ಮ ದುಃಖವನ್ನು ಪ್ರಕಟಗೊಳಿಸುವ ವೇಳೆ ಕಣ್ಣೀರು ಹರಿದರೂ ಇದು ಬೇರೆ ಯಾರೂ ಗಮನಿಸಬಾರದು ಎಂದೇ ಶೌಚಾಲಯಕ್ಕೆ ಹೋಗಿ ಮನಸಾರೆ ಅತ್ತು ಮನ ಹಗುರಾಗಿ ಬರುತ್ತಾರೆ.



Click it and Unblock the Notifications