ಆಳವಾಗಿ ಕರಿಯಲು ಆರೋಗ್ಯಕಾರಿ ಎಣ್ಣೆಗಳು

Posted By: Hemanth
Subscribe to Boldsky

ಕರಿದಿರುವ ತಿಂಡಿ ಅಥವಾ ಆಹಾರವೆಂದರೆ ಇಷ್ಟಪಡದವರು ತುಂಬಾ ಕಡಿಮೆ. ಅದರಲ್ಲೂ ಕೆಲವರಿಗೆ ಕರಿದ ತಿಂಡಿಗಳೆಂದರೆ ಪಂಚಪ್ರಾಣ. ತೂಕ ಹೆಚ್ಚಿಸಿಕೊಳ್ಳುವ ಭಯದಿಂದ ಕರಿದ ತಿಂಡಿಗಳಿಂದ ದೂರವಿರುತ್ತಾರೆಯೇ ಹೊರತು, ಆಸೆ ಬಿಟ್ಟು ಅಲ್ಲ. ಅದರಲ್ಲೂ ತುಂಬಾ ಆಳವಾಗಿ ಕರಿದಿರುವ ತಿಂಡಿಗಳು ಅಥವಾ ಆಹಾರಗಳನ್ನು ಬಾಯಿಗೆ ಹಾಕಿಕೊಂಡಾಗ ಬರುವ ಸದ್ದು ನಮ್ಮ ಬಾಯಿರುಚಿ ಮತ್ತಷ್ಟು ಹೆಚ್ಚಿಸುವುದು.

ಆದರೆ ಹೊರಗಡೆ ಹೋಗಿ ಇಂತಹ ತಿಂಡಿ ತಿಂದರೆ ಅದರಿಂದ ಅಪಾಯ ಹೆಚ್ಚು. ಯಾಕೆಂದರೆ ಒಂದೇ ಎಣ್ಣೆಯಲ್ಲಿ ಹಲವಾರು ಬಾರಿ ಇಂತಹ ತಿಂಡಿಗಳನ್ನು ಕರಿಯಲಾಗುವುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಮನೆಯಲ್ಲೇ ಕರಿದ ತಿಂಡಿ ತಯಾರಿಸಿಕೊಂಡು ತಿಂದರೆ ಅದು ಆರೋಗ್ಯಕ್ಕೂ ಹಿತಕಾರಿ. ಆಳವಾಗಿ ಕರಿಯಲು ಯಾವ ಎಣ್ಣೆಗಳನ್ನು ಬಳಸಿಕೊಂಡರೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

deep-frying

ಆಹಾರ ಆಳವಾಗಿ ಕರಿಯಲು ಯಾವ ಎಣ್ಣೆ ಆರೋಗ್ಯಕಾರಿ ಎನ್ನುವುದಕ್ಕೆ ಕೆಲವು ಮಾನದಂಡಗಳು.

ಎಣ್ಣೆಯು ಆಳವಾಗಿ ಕರಿಯಲು ಒಳ್ಳೆಯದೇ ಅಥವಾ ಅಲ್ಲವೇ ಎನ್ನುವುದನ್ನು ತಿಳಿಯಲು ಎರಡು ಮಾನದಂಡಗಳಿವೆ.

ಮೊದಲನೇಯದು ಎಣ್ಣೆಯ ಧೂಮಪಾನ ಬಿಂದು

ಆಳವಾಗಿ ಕರಿಯಬೇಕಾದರೆ ಆಗ ಎಣ್ಣೆಯು ಸುಮಾರು 176-190 ಡಿಗ್ರಿ ಸೆಲ್ಸಿಯಸ್ ನಲ್ಲಿ ಬಿಸಿಯಾಗುವುದು. ಆರೋಗ್ಯಕಾರಿ ಎಣ್ಣೆಯು ಅದಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ತಮ್ಮ ಧೂಮಪಾನ ಬಿಂದು ಹೊಂದಿರುವುದು. ಇದರಿಂದಾಗಿ ಆಹಾರ ಕರಿಯುವ ವೇಳೆ ಹಾನಿಕಾರಕ, ಕ್ಯಾನ್ಸರ್ ಕಾರಕ ಧೂಮವನ್ನು ಆಹಾರ ಹೀರಿಕೊಳ್ಳುವುದನ್ನು ತಡೆಯಬಹುದು.

ಮತ್ತೊಂದು ಮಾನದಂಡವೆಂದರೆ ಎಣ್ಣೆಯಲ್ಲಿ ಯಾವ ರೀತಿಯ ಕೊಬ್ಬಿದೆ ಎನ್ನುವುದು...

ಕರಿಯುವ ಎಣ್ಣೆಯು ಬಹುಪರ್ಯಾಪ್ತ ಕೊಬ್ಬಿನಿಂದ ಮಾಡಿದ್ದರೆ ಆಗ ಎಣ್ಣೆಯು ಆಳವಾಗಿ ಕರಿಯುವಾಗ ಉತ್ಕರ್ಷಿಸಲ್ಪಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದು ಕಾನ್ಸರ್ ಕಾರಕಗಳನ್ನು ಉತ್ಪತ್ತಿ ಮಾಡುವುದು. ಎಣ್ಣೆಯನ್ನು ಪರ್ಯಾಪ್ತ ಕೊಬ್ಬಿನಿಂದ ಮಾಡಿದರೆ ಒಳ್ಳೆಯದು.

ಆಳವಾಗಿ ಕರಿಯಲು ಆರೋಗ್ಯಕಾರಿ ಎಣ್ಣೆ ಯಾವುದು?

ತೆಂಗಿನ ಎಣ್ಣೆ

ಯಾಕೆಂದರೆ ಅಧ್ಯಯನಗಳ ಪ್ರಕಾರ ತೆಂಗಿನೆಣ್ಣೆಯನ್ನು ಆಳವಾಗಿ ಕರಿಯಲು 180 ಡಿಗ್ರಿ ಸೆಲ್ಸಿಯಸ್ ನಲ್ಲಿ ಬಿಸಿ ಮಾಡಿದರೂ ಅದು ಕೆಡುವುದಿಲ್ಲ. ತೆಂಗಿನೆಣ್ಣೆಯನ್ನು ಪರ್ಯಾಪ್ತ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಆಳವಾಗಿ ಕರಿಯಲು ತೆಂಗಿನೆಣ್ಣೆ ಬಳಸುವಾದ ಅದು ಮಧ್ಯಮ ಸುವಾಸನೆ ಬೀರುತ್ತಲಿರಲಿ. ಇದರಿಂದ ಕರಿಯುವಾಗ ಆಹಾರದ ಸುವಾಸನೆಯನ್ನು ತೆಂಗಿನೆಣ್ಣೆಯು ನುಂಗಿ ಹಾಕುವುದಿಲ್ಲ.

ತೆಂಗಿನೆಣ್ಣೆ ಬಳಸಲು ಇಷ್ಟವಿಲ್ಲವಾದರೆ ಆರೋಗ್ಯಕಾರಿ ಆಯ್ಕೆಗಳು

ಆಹಾರವನ್ನು ಆಳವಾಗಿ ಕರಿಯಲು ಕೆಲವೊಂದು ಆರೋಗ್ಯಕಾರಿ ಎಣ್ಣೆಗಳು ಇಲ್ಲಿವೆ.

Fried Chips

1. ತುಪ್ಪ

ತುಪ್ಪವು ಪ್ರತಿಯೊಂದನ್ನು ಹತ್ತುಪಟ್ಟು ಹೆಚ್ಚು ರುಚಿಕರವಾಗಿ ಮಾಡುವುದು. ಅದರ ಸುವಾಸನೆ ಮರೆಯಲು ಸಾಧ್ಯವಿಲ್ಲ. ತುಪ್ಪ ಬಳಸಿಕೊಂಡು ನೀವು ಆಹಾರ ಕರಿಯುವುದಿದ್ದರ ಆಗ ತಿಂಗಳಲ್ಲಿ ಎಷ್ಟು ಸಲ ಬಳಸುತ್ತೀರಿ ಎನ್ನುವುದನ್ನು ನಿರ್ಬಂಧಿಸಿಕೊಳ್ಳಿ. ಎಲ್ಲಾ ಪ್ರಾಣಿಗಳ ಕೊಬ್ಬುಗಳು ಆಳವಾಗಿ ಕರಿಯಲು ತುಂಬಾ ಉಪಯುಕ್ತ. ಯಾಕೆಂದರೆ ಇದನ್ನು ಪರ್ಯಾಪ್ತ ಕೊಬ್ಬು ಅಥವಾ ಏಕಪರ್ಯಾಪ್ತ ಕೊಬ್ಬಿನಿಂದ ತಯಾರಿಸಲಾಗಿರುತ್ತದೆ. ಇದು ಅಧಿಕ ಉಷ್ಣತೆಯಲ್ಲೂ ತಟಸ್ಥವಾಗಿರುವುದು. ಆಳವಾಗಿ ಕರಿಯಲು ಬೆಣ್ಣೆ ಒಳ್ಳೆಯದೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಇದರಲ್ಲಿ ಕಾರ್ಬ್ಸ್ ಮತ್ತು ಪ್ರೋಟೀನ್ ಒಳಗೊಂಡಿರುವುದು. ಇದು ಅಧಿಕ ಉಷ್ಣತೆಯಲ್ಲಿ ತಟಸ್ಥವಾಗಿರಲ್ಲ.

2. ಆಲಿವ್ ತೈಲ

ಆಳವಾಗಿ ತಿಂಡಿಗಳನ್ನು ಕರಿಯಲು ತುಂಬಾ ಆರೋಗ್ಯಕಾರಿ ತರಕಾರಿಯೆಂದರೆ ಅದು ಆಲಿವ್ ತೈಲ. ಇದನ್ನು 24 ಗಂಟೆಗಳ ಕಾಲ ಆಳವಾಗಿ ಕರಿದರೂ ಇದು ಕೆಡುವುದಿಲ್ಲ. ಆದರೆ ಇದರ ರುಚಿ ಮಾತ್ರ ಹೆಚ್ಚು ಹೆಚ್ಚು ಕರಿದಂತೆ ಬದಲಾಗಬಹುದು.

3. ಅವಕಾಡೋ ತೈಲ

ಅವಕಾಡೋ ತೈಲದ ಧೂಮಪಾನದ ಬಿಂದು 270 ಡಿಗ್ರಿಯಾಗಿರುವ ಕಾರಣದಿಂದಾಗಿ ಇದು ಆಳವಾಗಿ ಕರಿಯಲು ತುಂಬಾ ಒಳ್ಳೆಯ ತೈಲ. ಇದನ್ನು ಏಕಪರ್ಯಾಪ್ತ ಮತ್ತು ಕೆಲವು ಬಹುಪರ್ಯಾಪ್ತ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಆಳವಾಗಿ ಕರಿಯಲು ಈ ಎಣ್ಣೆಗಳನ್ನು ಬಳಸಬೇಡಿ ಸೂರ್ಯಕಾಂತಿ ಎಣ್ಣೆ, ಜೋಳದ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯನ್ನು ಆಳವಾಗಿ ಕರಿಯಲು ಬಳಸಬೇಡಿ. ಇದು ಎಣ್ಣೆ ಹಾಗೂ ಆಹಾರದಲ್ಲಿರುವ ಕೆಲವು ಆರೋಗ್ಯಕಾರಿ ಅಂಶಗಳನ್ನು ಕೆಡಿಸುವುದು ಮತ್ತು ಇದರಲ್ಲಿ ಅಪಾಯಕಾರಿ ಟ್ರಾನ್ಸ್ ಕೊಬ್ಬು ಇದೆ. ನೀವು ಮನೆಯಲ್ಲಿ ಆಳವಾಗಿ ಕರಿಯಲು ಎಣ್ಣೆ ಬಳಸುವಾಗ ಈ ಎಣ್ಣೆಗಳನ್ನು ಬಳಸಬೇಡಿ ಎನ್ನುವುದು ನಮ್ಮ ಕೋರಿಕೆ.

ನೆನಪಿಡಿ: ಆಳವಾಗಿ ಕರಿಯುವ ತಿಂಡಿ ಹಾಗೂ ಆಹಾರದಿಂದ ಹೆಚ್ಚಿನ ಕ್ಯಾಲರಿ ನಮ್ಮ ದೇಹಕ್ಕೆ ಸಿಗುವುದು. ಎಣ್ಣೆ ಯಾವುದೇ ಇದ್ದರೂ ಕ್ಯಾಲರಿ ದೇಹ ಸೇರುವುದು. ಇದರಿಂದ ತಿಂಗಳಲ್ಲಿ ಎರಡು ಸಲ ಮಾತ್ರ ಆಳವಾಗಿ ಕರಿಯಿರಿ.

English summary

what-is-the-healthiest-oil-for-deep-frying

The healthiness of an oil for deep frying depends on its smoking point and the chief fats in it. That's why coconut oil is the best for deep frying. Other healthy alternatives are ghee, olive oil, and avocado oil. Just remember to restrict the number of times you deep fry food at home, regardless of the oil you use, since it's still unhealthy.