For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತೇ?

|

ದೇಹದ ಹೆಚ್ಚಿನ ಪ್ರಮುಖ ಅಂಗಗಳು ಇರುವುದು ನಮ್ಮ ದೇಹದೊಳಗೆ. ಹೀಗಾಗಿ ಅದು ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ನಮ್ಮ ಕಾಣಲು ಸಾಧ್ಯವಾಗದು. ಹೊಟ್ಟೆಯ ಎಡಭಾಗದಲ್ಲಿ ಹೆಚ್ಚಿನ ಪ್ರಮುಖ ಅಂಗಾಂಗಳು ಇವೆ. ಹೀಗಾಗಿ ಹೊಟ್ಟೆಯ ಒಳಗಿನ ಯಾವುದೇ ಅಂಗಾಂಗಳಿಗೆ ಏನಾದರೂ ಸಮಸ್ಯೆಯಾದರೆ ಆಗ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು.

What Can Cause Left Side Abdominal Pain?

ಹೀಗಾಗಿ ಇಂತಹ ನೋವನ್ನು ಕಡೆಗಣಿಸಬಾರದು. ಬೇಗನೆ ವೈದ್ಯರಲ್ಲಿ ಹೋಗಿ ಪರೀಕ್ಷೆ ಮಾಡಿಕೊಂಡರೆ ಸಮಸ್ಯೆಯ ಬಗ್ಗೆ ಆರಂಭದಲ್ಲೇ ತಿಳಿದುಕೊಂಡು ಚಿಕಿತ್ಸೆ ಪಡೆಯಬಹುದು. ಆದರೆ ಸಮಯಮೀರಿದರೆ ಆಗ ಮುಂದೆ ಚಿಕಿತ್ಸೆ ಸಾಧ್ಯವಾಗದೆ ಪ್ರಾಣಾಪಾಯವಾಗುವ ಸಾಧ್ಯತೆಯಿರುವುದು. ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ ಇದು ಯಾವುದರ ಲಕ್ಷಣವೆಂದು ತಿಳಿಯಿರಿ.

ಹೊಟ್ಟೆಯ ಎಡಭಾಗದಲ್ಲಿರುವ ಅಂಗಾಂಗಗಳು ಅಥವಾ ರಚನೆಗಳು

ಹೊಟ್ಟೆಯ ಎಡಭಾಗದಲ್ಲಿರುವ ಅಂಗಾಂಗಗಳು ಅಥವಾ ರಚನೆಗಳು

ಹೊಟ್ಟೆಯ ಎಡಭಾಗದಲ್ಲಿ ಕಾಣಿಸಿಕೊಳ್ಳುವ ನೋವಿಗೆ ಹೊಟ್ಟೆಯ ಎಡಭಾಗದಲ್ಲಿ ಇರುವಂತಹ ಕೆಲವೊಂದು ಅಂಗಾಂಗಗಳು ಅಥವಾ ರಚನೆಗಳು ಕಾರಣವಾಗಿರಬಹುದು. ಪುರುಷರಗಿಂತ ಹೆಚ್ಚು ಮಹಿಳೆಯರ ಹೊಟ್ಟೆಯ ಎಡಭಾಗದಲ್ಲಿ ಅಂಗಾಂಗಗಳು ಇರುವುದು. ಇದರಲ್ಲಿ ಪ್ರಮುಖವಾಗಿ ಗರ್ಭ, ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ ಇತ್ಯಾದಿಗಳು. ಹೀಗಾಗಿ ಪುರುಷರಿಗೆ ಹೋಲಿಸಿದೆ ಮಹಿಳೆಯರು ಹೊಟ್ಟೆಯ ಎಡಭಾಗದ ನೋವನ್ನು ಹೆಚ್ಚು ಅನುಭವಿಸುವರು.

ಹೊಟ್ಟೆಯ ಎಡಭಾಗದ ನೋವಿಗೆ ಕಾರಣವೇನು?

ಹೊಟ್ಟೆಯ ಎಡಭಾಗದ ನೋವಿಗೆ ಕಾರಣವೇನು?

ಹೊಟ್ಟೆಯ ಎಡಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಹಸಿವಿನ ನೋವಾಗಿರಬಹುದು

ಹೆಚ್ಚಾಗಿ ಮಕ್ಕಳಲ್ಲಿ ಹೊಟ್ಟೆಯ ಎಡಭಾಗದಲ್ಲಿ ಹಸಿವಿನಿಂದಾಗಿ ನೋವು ಕಾಣಿಸಿಕೊಳ್ಳುವುದು.

ಲಕ್ಷಣಗಳು

ಲಕ್ಷಣಗಳು

ಹಸಿವಿನ ನೋವು ತುಂಬಾ ಕಡಿಮೆಯಿರುವುದು ಮತ್ತು ಹೊಟ್ಟೆಯಲ್ಲಿ ತುಂಬಾ ಕಿರಿಕಿರಿ ಉಂಟು ಮಾಡುವುದು.

ಚಿಕಿತ್ಸೆ

ಹಸಿವನಿಂದ ಉಂಟಾಗಿರುವ ನೋವಿನ ನಿವಾರಣೆ ಮಾಡಲು ಈ ನೋವು ಕಾಣಿಸಿಕೊಂಡ ತಕ್ಷಣ ಏನಾದರೂ ತಿಂದರೆ ಒಳ್ಳೆಯದು.

ಮಲಬದ್ಧತೆಯಿಂದಾಗಿ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುವುದು

ಮಲಬದ್ಧತೆಯಿಂದಾಗಿ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುವುದು

ಮಲಬದ್ಧತೆಯನ್ನು ಡಿಶ್ಚೆಜಿಯಾ ಎಂದೂ ಕರೆಯಲಾಗುತ್ತದೆ. ಮಲವಿಸರ್ಜನೆ ಮಾಡಲು ಕಷ್ಟಪಡುವ ಹಾಗೂ ಕರುಳಿನ ಚಲನೆಯು ಸರಿಯಾಗಿ ಇಲ್ಲದೆ ಇರುವಂತಹ ವ್ಯಕ್ತಿಗಳಲ್ಲಿ ಈ ನೋವು ಕಾಣಿಸಿಕೊಳ್ಳುವುದು. ಮಲಬದ್ಧತೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸಿಕೊಲ್ಳುವುದು.

ಲಕ್ಷಣಗಳು

ಲಕ್ಷಣಗಳು

ನೋವಿನ ಹಾಗೂ ವಿರಳ ಕರುಳಿನ ಚಲನೆ. ಈ ಸಮಸ್ಯೆ ಇರುವವರಿಗೆ ಹೊಟ್ಟೆಯ ನೋವು ಹಾಗೂ ಊತ ಕಾಣಿಸಿಕೊಳ್ಳಬಹುದು. ಕೆಲವೊಂದು ಸಂದರ್ಭದಲ್ಲಿ ವಾಂತಿ ಕೂಡ ಆಗಬಹುದು.

ವಾಯು ಬಂಧನದಿಂದ ಎಡಭಾಗದಲ್ಲಿ ನೋವು

ವಾಯು ಬಂಧನದಿಂದ ಎಡಭಾಗದಲ್ಲಿ ನೋವು

ಲಕ್ಷಣಗಳು

ಹೊಟ್ಟೆಯ ಎಡಭಾಗದಲ್ಲಿ ಹಿಡಿದಿಟ್ಟಂತಹ ನೋವು

ಚಿಕಿತ್ಸೆ

ಬಸ್ಕೋಪಾನ್ ಅಥವಾ ಮೆಬೆರಿನ್ ನಂತಹ ಔಷಧಿಗಳು ಬಂಧಿಸಲ್ಪಟ್ಟಿರುವಂತಹ ವಾಯುವಿನ ಬಿಡುಗಡೆಗೆ ನೆರವಾಗುವುದು. ಹೊಟ್ಟೆಯ ನೋವಿನೊಂದಿಗೆ ಅತಿಸಾರ ಕೂಡ ಇದ್ದರೆ ಆಗ ಆ್ಯಂಟಿಬಯೋಟಿಕ್ ಕೂಡ ನೀಡಲಾಗುತ್ತದೆ.

ಕಿಡ್ನಿಯಲ್ಲಿನ ಕಲ್ಲು ಕೂಡ ಕಾರಣವಾಗಿರಬಹುದು

ಕಿಡ್ನಿಯಲ್ಲಿನ ಕಲ್ಲು ಕೂಡ ಕಾರಣವಾಗಿರಬಹುದು

ಮೂತ್ರಪಿಂಡದ ಕಲ್ಲನ್ನು ಮೂತ್ರಪಿಂಡದ ಕಲ್ಪನಾಶಾಸ್ತ್ರವೆಂದು ಕರೆಯಲಾಗುವುದು. ಇದು ಹೊಟ್ಟೆಯ ನೋವು ಉಂಟು ಮಾಡುವುದು. ಇದು ಪಿತ್ತರಸದ ಉದರಶೂಲೆಯನ್ನು ಹೋಲುತ್ತದೆ.

ಲಕ್ಷಣಗಳು

ಮೂತ್ರಪಿಂಡ ಅಥವಾ ಮೂತ್ರನಾಳ ಹೊರಸೂಸುವ ಎಡದ ಭಾಗದಲ್ಲಿ ತೀವ್ರ ಅಥವಾ ಹಠಾತ್ ನೋವು ಕಾಣಿಸುವುದು. ಮೂತ್ರಪಿಂಡ ಅಥವಾ ಮೂತ್ರನಾಳದ ಕಲ್ಲಿನ ಸಮಸ್ಯೆಯಿಂದಾಗಿ ಇಂತಹ ನೋವು ಕಾಣಿಸುವುದು. ಸೆಳೆತದ ರೀತಿಯಲ್ಲಿ ಈ ನೋವಿರುವುದು. ವಾಕರಿಕೆ ಅಥವಾ ವಾಂತಿ ಬರಬಹುದು.

ಚಿಕಿತ್ಸೆ

ಮೂತ್ರಪಿಂಡದ ಕಲ್ಲಿನ ಗಾತ್ರಕ್ಕೆ ಅನುಗುಣವಾಗಿ ಹೊಟ್ಟೆಯ ಎಡಭಾಗದ ನೋವಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಸಣ್ಣದಾಗಿದ್ದರೆ ಆಗ ಅದು ಮೂತ್ರದೊಂದಿಗೆ ಹೊರಬರುವುದು. ಇದಕ್ಕೆ ಹೆಚ್ಚು ಚಿಕಿತ್ಸೆ ಬೇಕಿಲ್ಲ.

ಅಪಸ್ಥಾನೀಯ ಗರ್ಭಧಾರಣೆಯಿಂದಲೂ ಹೊಟ್ಟೆಯ ಎಡಭಾಗಲ್ಲಿ ನೋವು

ಅಪಸ್ಥಾನೀಯ ಗರ್ಭಧಾರಣೆಯಿಂದಲೂ ಹೊಟ್ಟೆಯ ಎಡಭಾಗಲ್ಲಿ ನೋವು

ಫಲವತ್ತತೆಗೊಂಡ ಅಂಡಾಣುವು ಗರ್ಭಕೋಶದ ಹೊರಗಡೆ ಸ್ಥಾನ ಪಡೆದರೆ ಆಗ ಇದರಿಂದ ಅಪಸ್ಥಾನೀಯ ಗರ್ಭಧಾರಣೆ ನೋವು ಕಾಣಿಸುವುದು.

ಲಕ್ಷಣಗಳು

ಆರಂಭದಲ್ಲಿ ತುಂಬಾ ಕಡಿಮೆ ನೋವಿರುವ ಇದು ಬಳಿಕ ತೀವ್ರವಾಗಿ ಕಾಡುವುದು. ಇದು ಹೊಟ್ಟೆಯ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವುದು. ಇದು ಎಡ ಅಥವಾ ಬಲ ಭಾಗವಾಗಿರಬಹುದು. ಈ ವೇಳೆ ಅಸಾಮಾನ್ಯ ರೀತಿಯಲ್ಲಿ ರಕ್ತಸ್ರಾವವು ಆಗಬಹುದು. ಫಾಲೋಪಿಯನ್ ಟ್ಯೂಬ್ ಛದ್ರಗೊಂಡರೆ ಆಗ ರೋಗಿಯಲ್ಲಿ ವಾಕರಿಕೆ, ವಾಂತಿ, ನಿಶ್ಯಕ್ತಿ, ಅತಿಯಾದ ಹೊಟ್ಟೆ ನೋವು, ಗುದನಾಳದ ಒತ್ತಡ, ಅತಿಯಾದ ರಕ್ತಸ್ರಾವ ಮತ್ತು ಆಘಾತ ಉಂಟಾಗಬಹುದು.

ಡೈವರ್ಟಿಕ್ಯುಲಮ್ ಕೂಡ ಹೊಟ್ಟೆಯ ಎಡಭಾಗದ ನೋವಿಗೆ ಕಾರಣವಾಗಿರಬಹುದು

ಡೈವರ್ಟಿಕ್ಯುಲಮ್ ಕೂಡ ಹೊಟ್ಟೆಯ ಎಡಭಾಗದ ನೋವಿಗೆ ಕಾರಣವಾಗಿರಬಹುದು

ಒಂದು ಅಥವಾ ಅದಕ್ಕಿಂತ ಹೆಚ್ಚಿನ ಡೈವರ್ಟಿಕ್ಯುಲಮ್ನ ಉರಿಯೂತ ಇದಕ್ಕೆ ಕಾರಣವಾಗಿರಬಹುದು.

ಲಕ್ಷಣಗಳು

ಹಠಾತ್, ತೀವ್ರ ರೀತಿಯಲ್ಲಿ ಹೊಟ್ಟೆಯ ಎಡಭಾಗದಲ್ಲಿ ನೋವು, ಜ್ವರ, ವಾಕರಿಕೆ, ವಾಂತಿ, ಮಲಬದ್ಧತೆ, ಅತಿಸಾರ, ಗುದನಾಳದಲ್ಲಿ ರಕ್ತಸ್ರಾವ ಮತ್ತು ಹೊಟ್ಟೆ ಉಬ್ಬರ

ಕಿಬ್ಬೊಟ್ಟೆಯ ಮಹಾಪಧಮನಿಯ ಒಡೆತ

ಕಿಬ್ಬೊಟ್ಟೆಯ ಮಹಾಪಧಮನಿಯ ಒಡೆತ

ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಹಿಗ್ಗಿದ ಪ್ರದೇಶವನ್ನು ಕಿಬ್ಬೊಟ್ಟೆಯ ಮಹಾಪಧಮನಿಯ ಒಡೆತವೆಂದು ಕರೆಯಲಾಗುತ್ತದೆ ಮತ್ತು ಇದರಿಂದ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುವುದು.

ಲಕ್ಷಣಗಳು

ಹೊಟ್ಟೆಯಲ್ಲಿ ತೀವ್ರವಾಗಿರುವ ನೋವು, ಹೊಕ್ಕಳಬಳ್ಳಿ ಮತ್ತು ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುವುದು.

ಅಂಡಾಶಯದ ಚೀಲದಿಂದಲೂ ಹೊಟ್ಟೆಯ ಎಡಭಾಗದ ನೋವು ಬರಬಹುದು

ದ್ರವ ತುಂಬಿರುವಂತಹ ಚೀಲವಿರುವ ಅಂಡಾಶಯದ ಮೇಲ್ಮೈ ಅಥವಾ ಒಳಗಿನ ಭಾಗವನ್ನು ಅಂಡಾಶಯದ ಚೀಲವೆಂದು ಕರೆಯಲಾಗುತ್ತದೆ. ಇದರಿಂದ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುವುದು.

ಲಕ್ಷಣಗಳು

ಅನಿಯಮಿತ ಋತುಚಕ್ರ, ಶ್ರೋಣಿಯ ಭಾಗದಲ್ಲಿ ನೋವು, ಹೊಟ್ಟೆ ಭಾರವೆನಿಸುವುದು, ಲೈಂಗಿಕ ಕ್ರಿಯೆ ವೇಲೆ ನೋವು, ಹೊಟ್ಟೆಯ ಚಲನೆಗಳು, ವಾಕರಿಕೆ ಮತ್ತು ವಾಂತಿ.

Read more about: health wellness
English summary

What Can Cause Left Side Abdominal Pain?

Left-sided abdominal pain is the pain, which occurs on the left side of an imaginary line drawn on the central point of the body, below the sternum and passing via umbilicus and ending just above the pubic region. There are many organs and structures located on the left side of the abdomen and any disease or problem with them can result in left side abdominal pain.
Story first published: Thursday, November 22, 2018, 12:32 [IST]
X
Desktop Bottom Promotion