For Quick Alerts
ALLOW NOTIFICATIONS  
For Daily Alerts

ಬೀಟ್ರೂಟ್ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳನ್ನು ಅರಿಯಿರಿ

|

ಸಮೃದ್ಧವಾದ ಪೋಷಣೆಯ ಗುಣಗಳನ್ನು ಒಳಗೊಂಡಿರುವ ತರಕಾರಿಗಳಲ್ಲಿ ಬೀಟ್ರೂಟ್ ಸಹ ಒಂದು. ಬೀಟ್ರೂಟ್ ತನ್ನದೇ ಆದ ವಿಭಿನ್ನ ರುಚಿಯಿಂದ ಕೂಡಿರುತ್ತದೆ. ಕಡು ಕೆಂಪು ಬಣ್ಣಗಳಿಂದ ಕೂಡಿರುವ ಈ ಗಡ್ಡೆ ರೂಪದ ತರಕಾರಿ ರಕ್ತಹೀನತೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದು ನೈಸರ್ಗಿಕವಾಗಿಯೇ ಸಿಹಿಯನ್ನು ಹೊಂದಿರುವುದರಿಂದ ಕೆಲವರು ಇದನ್ನು ಸೇವಿಸಲು ದೂರ ಸರಿಯುತ್ತಾರೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಈ ತರಕಾರಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಸಿಹಿ, ಖಾರ, ಕುರುಕುರೆ ತಿಂಡಿಗಳ ತಯಾರಿಕೆಯಲ್ಲೂ ಉತ್ತಮ ರುಚಿ ನೀಡುವುದು. ಇದರಲ್ಲಿ ಕಡಿಮೆ ಪ್ರಮಾಣದ ಸೋಡಿಯಂ ಹಾಗೂ ರಕ್ತಕಣಗಳನ್ನು ವೃದ್ಧಿಸುವ ಗುಣವನ್ನು ಒಳಗೊಂಡಿದೆ. ಇದರಲ್ಲಿ ನೈಟ್ರೇಟ್ ಅಂಶ ಇರುವುದರಿಂದ ಬಿಪಿಯನ್ನು ಸಹ ನಿಯಂತ್ರಣದಲ್ಲಿಡುವುದು.

ಸುಂದರವಾಗಿ ಕಾಣಬೇಕೇ? 'ಬೀಟ್‌ರೂಟ್' ಫೇಸ್ ಪ್ಯಾಕ್ ಪ್ರಯತ್ನಿಸಿ

ವಿಶಿಷ್ಟ ರುಚಿಯನ್ನು ಒಳಗೊಂಡಿರುವ ಈ ತರಕಾರಿಯನ್ನು ನಿತ್ಯ ಸೇವಿಸುವುದರಿಂದ ಯಾವೆಲ್ಲಾ ಬಗೆಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದಿನ ವಿವರಣೆಯಲ್ಲಿ ವಿವರಿಸಿದೆ. ನಿಮಗೂ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಕೊಲೆಸ್ಟ್ರಾಲ್ ಅನ್ನು ತಗ್ಗಿಸಿ, ಹೃದಯದ ಆರೋಗ್ಯವನ್ನು ಹೆಚ್ಚಿಸುವುದು

ಕೊಲೆಸ್ಟ್ರಾಲ್ ಅನ್ನು ತಗ್ಗಿಸಿ, ಹೃದಯದ ಆರೋಗ್ಯವನ್ನು ಹೆಚ್ಚಿಸುವುದು

ಬೀಟ್ರೂಟ್‍ನಲ್ಲಿ ಫ್ಲವೋನೈಡ್, ಕರಗುವ ನಾರು ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ಇದನ್ನು ಬೆಟಾಸಯಾನಿನ್ ಎಂತಲೂ ಕರೆಯುತ್ತಾರೆ. ಬೀಟ್ರೂಟ್‍ನಲ್ಲಿರುವ ವಿಶೇಷ ಬಣ್ಣ ಹಾಗೂ ಅದರಲ್ಲಿರುವ ಪೋಷಕ ಗುಣವು ಎಲ್ ಡಿ ಎಲ್ ಕೊಲೆಸ್ಟ್ರಾಲ್‍ಅನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ. ಜೊತೆಗೆ ಅಪದಮನಿಯ ಆರೋಗ್ಯವನ್ನು ಕಾಪಾಡುವ ಈ ಗಡ್ಡೆ ರೂಪದ ತರಕಾರಿಯು ಒಟ್ಟಾರೆಯಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎನ್ನಲಾಗುವುದು.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಬೀಟ್ರೂಟ್ ನೈಟ್ರೇಟ್ ಅನ್ನು ಒಳಗೊಂಡಿದೆ. ಇದು ನಮ್ಮ ದೇಹದಲ್ಲಿ ನೈಟ್ರೇಟ್ ಮತ್ತು ನೈಟ್ರಿಕ್ ಆಕ್ಸೈಡ್ ಅನಿಲವನ್ನಾಗಿ ಪರಿವರ್ತನೆಗೊಳ್ಳುತ್ತದೆ. ಇವು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಅಪದಮನಿಯನ್ನು ವಿಸ್ತರಿಸುವುದು. ಗಣನೀಯವಾಗಿ ಇದನ್ನು 3 ದಿನ ಸೇವಿಸಿದರೆ ಸಮಸ್ಯೆಯು ನಿಯಂತ್ರಣಕ್ಕೆ ಬರುವುದು ಎನ್ನಲಾಗುತ್ತದೆ.

ಗರ್ಭಿಣಿಯರಿಗೆ ಉತ್ತಮವಾದ್ದು

ಗರ್ಭಿಣಿಯರಿಗೆ ಉತ್ತಮವಾದ್ದು

ಬೀಟ್ರೂಟ್ ಸಮೃದ್ಧವಾದ ಫೋಲಿಕ್ ಆಮ್ಲವನ್ನು ಒಳಗೊಂಡಿದೆ. ಹಾಗಾಗಿ ಇದು ಗರ್ಭಿಣಿ ಮಹಿಳೆಯರಿಗೆ ಅತ್ಯುತ್ತಮವಾದ್ದು ಎಂದು ಹೇಳಲಾಗುತ್ತದೆ. ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅತ್ಯುತ್ತಮ ರೀತಿಯಲ್ಲಿ ಸಹಕಾರ ನೀಡುವುದು. ತಾಯಿ ಮತ್ತು ಮಗುವಿಗೆ ಸೂಕ್ತ ರೀತಿಯಲ್ಲಿ ಶಕ್ತಿಯನ್ನು ನೀಡುವುದು.

ಕ್ಯಾನ್ಸರ್ ನಿಯಂತ್ರಿಸುತ್ತದೆ

ಕ್ಯಾನ್ಸರ್ ನಿಯಂತ್ರಿಸುತ್ತದೆ

ಕ್ಯಾನ್ಸರ್ ನಿಯಂತ್ರಿಸುವಂತಹ ಉತ್ಕರ್ಷಣ ನಿರೋಧಕಗಳನ್ನು ಬೀಟ್ರೂಟ್ ಒಳಗೊಂಡಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ ಬೀಟ್ರೂಟ್ ರಕ್ತ ಹಾಗೂ ಚರ್ಮ ಸಂಬಂಧಿ ಕ್ಯಾನ್ಸರ್‍ಅನ್ನು ತಡೆಯುತ್ತದೆ.

ಉರಿಯೂತವನ್ನು ಕಡಿಮೆಮಾಡುವುದು

ಉರಿಯೂತವನ್ನು ಕಡಿಮೆಮಾಡುವುದು

ಬೀಟ್ರೂಟ್ ನಿಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೂತ್ರಪಿಂಡದಂತಹ ನಿರ್ಣಾಯಕ ಅಂಗಗಳ ಮೇಲೆ ಆಂತರಿಕ ಉರಿಯೂತ ಪ್ರತಿದಿನ ಬೀಟ್ರೂಟ್ ನಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಬೀಟ್ರೂಟ್ ನಲ್ಲಿ ಫೋಲೇಟ್ ಮತ್ತು ಬೆಟಾಲೈನ್ ಬಲವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ.

ಬ್ರೇನ್ ಆರೋಗ್ಯ ಸುಧಾರಿಸುತ್ತದೆ

ಬ್ರೇನ್ ಆರೋಗ್ಯ ಸುಧಾರಿಸುತ್ತದೆ

ಹೈ ನೈಟ್ರೇಟ್ ನಮ್ಮ ದೇಹದಲ್ಲಿ ಆಮ್ಲಜನಕದ ಸೇವನೆಯನ್ನು ಹೆಚ್ಚಿಸುತ್ತದೆ. ಇದು ಗಮನಾರ್ಹವಾಗಿ ನಿಮ್ಮ ಮೆದುಳಿನ ಜೀವಕೋಶಗಳಿಗೆ ಅನುಕೂಲಕರವಾಗಿರುತ್ತದೆ. ಮೆದುಳು ಉತ್ತಮ ಕೆಲಸ ಮಾಡುತ್ತದೆ ಮತ್ತು ಬುದ್ಧಿಮಾಂದ್ಯತೆಯಂತಹ ಮಿದುಳಿನ ಅಸ್ವಸ್ಥತೆಗಳನ್ನು ತಡೆಯುತ್ತದೆ.

ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ

ನಿತ್ಯ ಬೀಟ್ರೂಟ್ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಕೊಲ್ಲಿಯಲ್ಲಿರಿಸುತ್ತದೆ. ಇದು ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿ ಯಕೃತ್ ಮತ್ತು ಗುಲ್ಮಗಳ ಆರೋಗ್ಯ ಕಾಪಾಡುವುದು.

ವಯಸ್ಸಾದ ಕಳೆಯನ್ನು ನಿಯಂತ್ರಿಸುತ್ತದೆ

ವಯಸ್ಸಾದ ಕಳೆಯನ್ನು ನಿಯಂತ್ರಿಸುತ್ತದೆ

ಬೀಟ್ರೂಟ್ ಚರ್ಮದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಪೋಷಿಸುತ್ತದೆ. ಇದು ಚರ್ಮಕ್ಕೆ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುವಂತಹ ಆಂಟಿಆಕ್ಸಿಡೆಂಟ್ ಲ್ಯುಟೈನ್ ಅನ್ನು ಸಹ ಒಳಗೊಂಡಿದೆ. ಚರ್ಮದ ಮೇಲೆ ಸುಕ್ಕುಗಳು ಮತ್ತು ತೆಳುವಾದ ರೇಖೆಗಳನ್ನು ಇದು ತಡೆಗಟ್ಟುತ್ತದೆ ಮತ್ತು ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ, ನಿಮ್ಮ ತ್ವಚೆಯು ಆಕರ್ಷಕ ಮತ್ತು ತಾರುಣ್ಯದದಿಂದ ಕೂಡಿರುವಂತೆ ಮಾಡುತ್ತದೆ. ಉತ್ತಮ ಆರೋಗ್ಯ ಗುಣಗಳನ್ನು ಒಳಗೊಂಡಿರುವ ಬೀಟ್ರೂಟ್ ಅನ್ನು ನಿತ್ಯ ಆಹಾರ ಪದಾರ್ಥದಲ್ಲಿ, ಜ್ಯೂಸ್ ರೂಪದಲ್ಲಿ ಅಥವಾ ಸಲಾಡ್‌ಗಳಾಗಿ ಸೇವಿಸಬಹುದು. ಗಣನೀಯವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಯಿಂದ ನೀವು ದೂರ ಉಯಳಿಯಬಹುದು.

English summary

What Are The Benefits Of Eating One Beetroot Daily?

Beetroots may not taste all that delicious, but they are a chock-full of nutrients, flavonoids and antioxidants. Other benefits of beetroots include lowering blood pressure, preventing cancer and brain diseases, and protecting the heart. Considered as one of the most healthiest vegetables, beetroot has a kind of an acquired taste.
Story first published: Thursday, March 22, 2018, 19:20 [IST]
X
Desktop Bottom Promotion