For Quick Alerts
ALLOW NOTIFICATIONS  
For Daily Alerts

ಬ್ರಾ ಸೈಜ್ ಸರಿಯಾಗಿದ್ದರೂ ಇಂತಹ ಸಮಸ್ಯೆಗಳೆಲ್ಲಾ ಕಾಡಬಹುದು!

|

ಮಹಿಳೆಯರು ಬ್ರಾ ಸೈಜ್ ಹಾಗೂ ವಿನ್ಯಾಸಗಳ ಬಗ್ಗೆ ಇನ್ನೂ ತಿಳಿದುಕೊಳ್ಳುವುದು ಸಾಕಷ್ಟಿದೆ. ಬ್ರಾ ಸೈಜ್ ಸರಿಯಾಗಿದೆ ಎಂದ ಮಾತ್ರಕ್ಕೆ ಅದು ದೇಹಕ್ಕೆ ಎಲ್ಲ ರೀತಿಯಿಂದಲೂ ಹಿತಕರ ಎಂದು ಹೇಳಲಾಗದು. ಬ್ರಾ ಸೈಜ್ ಸರಿಯಾಗಿಯೇ ಇದ್ದರೂ ಅನೇಕ ಸಮಸ್ಯೆಗಳು ಕಾಡಬಹುದು ಎಂಬುದು ಗೊತ್ತಿರಲಿ.

ಬ್ರಾ ಅಳತೆ ಸರಿಯಾಗಿದ್ದಾಗಲೂ ಸಮಸ್ಯೆಗಳು ಕಾಡಬಹುದು

ಬ್ರಾ ಅಳತೆ ಸರಿಯಾಗಿದ್ದಾಗಲೂ ಸಮಸ್ಯೆಗಳು ಕಾಡಬಹುದು

ದೇಹಕ್ಕೆ ಸರಿ ಹೊಂದಲಾರದ ಅಳತೆಯ ಬ್ರಾ ಧರಿಸುವುದರಿಂದ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ ಎಂಬುದು ತಿಳಿದ ವಿಷಯವೇ ಆಗಿದೆ, ಅದರಲ್ಲೂ ಭುಜನೋವು ಹಾಗೂ ತಲೆನೋವುಗಳು ಬಾಧಿಸುವುದು ಹೆಚ್ಚು. ಆದರೆ ಸ್ತನಗಳಿಗೊಪ್ಪುವ, ಅವನ್ನು ಸರಿಯಾದ ರೀತಿಯಲ್ಲಿ ಬಿಗಿದಪ್ಪುವ ಸೈಜ್‌ನ ಬ್ರಾ ಧರಿಸಿದಾಗಲೂ ಸಹ ಏನಾದರೂ ಸಮಸ್ಯೆಗಳು ಉಂಟಾಗಬಹುದಾ? ಹೌದು. ಕೇವಲ ಸೈಜ್ ಮಾತ್ರವಲ್ಲದೆ ಇನ್ನೂ ಕೆಲ ವಿಷಯಗಳಿಂದ ಹಲವಾರು ಸಮಸ್ಯೆಗಳು ಕಾಡಬಹುದು ಎಂಬುದು ನಿಜ. ಸರಿಯಾದ ಅಳತೆಯ ಬ್ರಾ ಧರಿಸುತ್ತಿದ್ದರೂ ಹೆಣ್ಣು ಮಕ್ಕಳು ಯಾವೆಲ್ಲ ಅನಾರೋಗ್ಯ ಸಮಸ್ಯೆಗಳು ಹಾಗೂ ಕಿರಿಕಿರಿಗಳನ್ನು ಅನುಭವಿಸಬೇಕಾಗಬಹುದು ಎಂಬುದನ್ನು ನೋಡೋಣ.

ಬ್ರಾ ಪಟ್ಟಿ ಸಿಂಡ್ರೋಮ್

ಬ್ರಾ ಪಟ್ಟಿ ಸಿಂಡ್ರೋಮ್

ಬ್ರಾ ಪಟ್ಟಿ ಸಿಂಡ್ರೋಮ್ ಅಥವಾ ಬ್ರಾ ಸ್ಟ್ರ್ಯಾಪ್ ಸಿಂಡ್ರೋಮ್ ಎಂಬುದು ಬ್ರಾ ಧರಿಸುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಕೊಸ್ಟೊಕ್ಲಾವಿಕುಲರ್ ಸಿಂಡ್ರೋಮ್ ಮತ್ತು ಕೊಲೊಕ್ವಿಲಿ ಎಂದು ಕರೆಯಲಾಗುತ್ತದೆ. ಬ್ರಾ ಪಟ್ಟಿಗಳಿಂದ ಭುಜಗಳ ಮೇಲೆ ಒತ್ತಡ ಉಂಟಾಗಿ ಅದರಿಂದ ಕುತ್ತಿಗೆ, ಭುಜ ಹಾಗೂ ತೋಳಿನ ಭಾಗಗಳಲ್ಲಿ ನೋವು ಉಂಟಾಗುತ್ತದೆ. ಇದನ್ನು ಬ್ರಾ ಪಟ್ಟಿ ಸಿಂಡ್ರೋಮ್ ಎನ್ನಲಾಗುತ್ತದೆ. ಈ ಬ್ರಾ ಪಟ್ಟಿಯ ಸಿಂಡ್ರೋಮ್ ಯಾವೆಲ್ಲ ಕಾರಣಗಳಿಂದ ಬರುತ್ತದೆ ಹಾಗೂ ಅದನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ವಿಸ್ತಾರವಾಗಿ ಈ ಅಂಕಣದಲ್ಲಿ ತಿಳಿಸಲಾಗಿದೆ.

Most Read: ಮಹಿಳೆಯರೇ ಬ್ರಾ ಕೊಳ್ಳುವಾಗ ಮತ್ತು ಧರಿಸುವಾಗ ಇರಲಿ ಎಚ್ಚರ!

ಕಾಸ್ಟೊಕ್ಲಾವಿಕುಲರ್ ಪ್ಯಾಸೇಜ್ ಸಂಕೋಚನದಿಂದ ಸಮಸ್ಯೆ

ಕಾಸ್ಟೊಕ್ಲಾವಿಕುಲರ್ ಪ್ಯಾಸೇಜ್ ಸಂಕೋಚನದಿಂದ ಸಮಸ್ಯೆ

ಅತಿ ಸಣ್ಣ ಗಾತ್ರದ ಪಟ್ಟಿ ಅಥವಾ ತೀರಾ ಹರಿತವಾದ ಪಟ್ಟಿಗಳಿರುವ ಬ್ರಾಗಳನ್ನು ಧರಿಸಿದಾಗ ಇವುಗಳ ಅತಿಯಾದ ಬಿಗಿತದಿಂದ ಭುಜಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಕುತ್ತಿಗೆ ಹಾಗೂ ಭುಜದ ಸುತ್ತಲಿನ ರಕ್ತನಾಳಗಳು ಹಾಗೂ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ತೀರಾ ಬೊಜ್ಜು ದೇಹದ ಅಥವಾ ದೊಡ್ಡ ಗಾತ್ರದ ಸ್ತನಗಳಿರುವ ಅಥವಾ ವಯಸ್ಸಾದ ಹೆಂಗಸರಲ್ಲಿ ಇಂಥ ಸಮಸ್ಯೆ ಜಾಸ್ತಿ. ಬ್ರಾ ಪಟ್ಟಿಗಳಿಂದ ಭುಜದ ಮೇಲಿನ ಮೃದು ಜೀವಕೋಶಗಳ ಮೇಲೆ ಕೆಳಮುಖವಾದ ಒತ್ತಡ ಹೆಚ್ಚಾಗಿ ಅದು ಕಾಲರ್ ಬೋನ್ ಮೇಲೆ ಒತ್ತಡ ಉಂಟು ಮಾಡುತ್ತದೆ. ಹೀಗಾದಾಗ ರಕ್ತನಾಳಗಳು ಹಾಗೂ ಅಪಧಮನಿಗಳು ಸಂಕೋಚನಗೊಂಡು ರಕ್ತಪರಿಚಲನೆಗೆ ಅಡ್ಡಿ ಉಂಟಾಗುತ್ತದೆ ಹಾಗೂ ಇದರಿಂದ ಇಡೀ ನ್ಯೂರೊವಾಸ್ಕುಲರ್ ವ್ಯವಸ್ಥೆ ಹಾಳಾಗಬಹುದು.

ಆರೋಗ್ಯದ ಮೇಲೆ ಪರಿಣಾಮಗಳು

ಆರೋಗ್ಯದ ಮೇಲೆ ಪರಿಣಾಮಗಳು

ಕಾಸ್ಟೊಕ್ಲಾವಿಕುಲರ್ ಪ್ಯಾಸೇಜ್ ಸಂಕೋಚನದಿಂದ ಮಹಿಳೆಯರು ಕುತ್ತಿಗೆ ಹಾಗೂ ಭುಜದ ಭಾಗದಲ್ಲಿ ತೀವ್ರತರವಾದ ನೋವು ಅನುಭವಿಸುವಂತಾಗಬಹುದು. ಅಲ್ಲದೆ ಭುಜ ಹಾಗೂ ಕುತ್ತಿಗೆಯ ಬಳಿ ಬಿಗಿತ ಹಾಗೂ ಆಯಾಸ ಜಾಸ್ತಿಯಾಗುತ್ತದೆ. ತೀರಾ ಅಸಹನೀಯವಾದ ಈ ನೋವನ್ನು ವಿಶ್ರಾಂತಿ ಪಡೆಯುವ ಮೂಲಕ ತುಸು ಕಡಿಮೆ ಮಾಡಿಕೊಳ್ಳಬಹುದು. ಭಾರವಾದ ಟ್ರಾವೆಲ್ ಬ್ಯಾಗ್ ಅಥವಾ ಇನ್ನಿತರ ಬ್ಯಾಗ್‌ಗಳನ್ನು ಭುಜಕ್ಕೆ ನೇತಾಡಿಸಿಕೊಂಡು ಚಲಿಸಿದಾಗ ಈ ನೋವು ಮರುಕಳಿಸುವ ಸಾಧ್ಯತೆಗಳಿರುತ್ತವೆ. ಈ ಬ್ರಾ ಪಟ್ಟಿಯಿಂದಾಗುವ ನೋವು ಬೆಳಗ್ಗಿನ ಸಮಯದಲ್ಲಿ ಕಡಿಮೆ ಇದ್ದು, ದಿನದಲ್ಲಿ ಹೆಚ್ಚಾಗುತ್ತ ಹೋಗುತ್ತದೆ ಎಂಬ ವಿಷಯ ಅಧ್ಯಯನದಿಂದ ತಿಳಿದು ಬಂದಿದೆ. ಬ್ರಾ ಪಟ್ಟಿ ಸಿಂಡ್ರೋಮ್ ನೋವಿನಿಂದ ಕೆಲ ಮಹಿಳೆಯರಲ್ಲಿ ಭುಜ ಸರಿಯುವಿಕೆ ಅಥವಾ ವೃತ್ತಾಕಾರ ಭುಜದ ಸಮಸ್ಯೆ ಉಂಟಾಗಬಹುದು.

ಬ್ರಾ ಪಟ್ಟಿ ಸಿಂಡ್ರೋಮ್ ಗುರುತಿಸುವುದು ಹೇಗೆ?

ಬ್ರಾ ಪಟ್ಟಿ ಸಿಂಡ್ರೋಮ್ ಗುರುತಿಸುವುದು ಹೇಗೆ?

ಭುಜ, ಕುತ್ತಿಗೆ ಅಥವಾ ತೋಳಿನಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಂಡಾಗ ಅದು ಬ್ರಾ ಪಟ್ಟಿಯ ಸಿಂಡ್ರೋಮ್ ಆಗಿರಬಹುದು. ಕೆಲವು ಬಾರಿ ತೋಳಿನಲ್ಲಿ ಜುಮ್ಮೆನಿಸುವ ಅನುಭವವೂ ಆಗಬಹುದು. ಇನ್ನು ಕೆಲ ಮಹಿಳೆಯರ ಕೈಗಳು ಊದಿಕೊಳ್ಳಬಹುದು ಅಥವಾ ನೀಲಿಯಾಗಬಹುದು. ಬ್ರಾ ಕಳಚಿದ ನಂತರ ಭುಜದ ಮೇಲೆ ಮೂಡಿರುವ ಬ್ರಾ ಪಟ್ಟಿಯ ಮಾರ್ಕ್‌ಗಳನ್ನು ಪರಿಶೀಲಿಸಬೇಕು. ಈ ಕಲೆಗಳು ಬೇಗ ಮಾಯವಾದರೆ ಸಮಸ್ಯೆ ಗಂಭೀರವಾಗಿಲ್ಲ ಎಂದರ್ಥ. ಆದರೆ ಇವು ದೀರ್ಘ ಕಾಲದವರೆಗೆ ಹಾಗೆಯೇ ಉಳಿದುಕೊಳ್ಳುತ್ತಿದ್ದರೆ ಭುಜದ ಜೀವಕೋಶಗಳಿಗೆ ಹಾನಿಯಾಗಿರುವ ಸಾಧ್ಯತೆ ಇರುತ್ತದೆ.

ಬ್ರಾ ಪಟ್ಟಿ ಸಿಂಡ್ರೋಮ್ ತಡೆಯುವುದು ಹೇಗೆ?

ಬ್ರಾ ಪಟ್ಟಿ ಸಿಂಡ್ರೋಮ್ ತಡೆಯುವುದು ಹೇಗೆ?

ಬ್ರಾ ಪಟ್ಟಿ ಸಿಂಡ್ರೋಮ್ ಸಮಸ್ಯೆ ಬಾರದಂತೆ ತಡೆಗಟ್ಟಬಹುದು ಎಂಬುದು ಮಾತ್ರ ಖುಷಿಯ ವಿಚಾರವಾಗಿದೆ. ಸಾಧ್ಯವಾದಾಗಲೆಲ್ಲ ಬ್ರಾ ಧರಿಸದೆ ಇರುವುದೇ ಈ ಸಮಸ್ಯೆ ತಡೆಗಟ್ಟುವ ಮೊದಲ ಹಾಗೂ ಪ್ರಮುಖ ಮಾರ್ಗವಾಗಿದೆ. ಸಾಧ್ಯವಾದರೆ ಮನೆಯಲ್ಲಿರುವಾಗ ಅಥವಾ ಮಲಗಿರುವಾಗ ಬ್ರಾ ಕಳಚಿಡುವುದು ಸೂಕ್ತ. ಎರಡನೆಯದಾಗಿ ಬ್ರಾ ಕೊಳ್ಳುವಾಗ ನಿಮ್ಮ ಸ್ತನಗಳಿಗೆ ಸೂಕ್ತವಾದ, ತೀರಾ ಬಿಗಿಯಲ್ಲದ ಬ್ರಾಗಳನ್ನು ಆಯ್ಕೆ ಮಾಡಿ ಹಾಗೂ ಬ್ರಾ ಪಟ್ಟಿಗಳು ತುಸು ಅಗಲವಾಗಿರುವ ಬ್ರಾಗಳನ್ನೇ ಆಯ್ದುಕೊಳ್ಳಿ. ನಿಯಮಿತ ವ್ಯಾಯಾಮ ಹಾಗೂ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದರಿಂದ ಸಹ ಬ್ರಾ ಪಟ್ಟಿ ಸಿಂಡ್ರೋಮ್‌ನಿಂದ ಪಾರಾಗಬಹುದು.

Most Read: "32,34,36" ನಿಮ್ಮ ಬ್ರಾ ಸೈಜ್ ಯಾವುದು?

ಬ್ರಾ ಪಟ್ಟಿ ಸಿಂಡ್ರೋಮ್ ನಿವಾರಣೋಪಾಯಗಳು

ಬ್ರಾ ಪಟ್ಟಿ ಸಿಂಡ್ರೋಮ್ ನಿವಾರಣೋಪಾಯಗಳು

ಒಂದೊಮ್ಮೆ ನೀವು ಈಗಾಗಲೇ ಬ್ರಾ ಪಟ್ಟಿಯ ಸಿಂಡ್ರೋಮ್‌ಗೆ ಒಳಗಾಗಿದ್ದಲ್ಲಿ ಕೆಲ ವಿಧಾನಗಳ ಮೂಲಕ ಅದರಿಂದ ಉಪಶಮನ ಪಡೆಯಬಹುದು. ಮೊದಲನೆಯದಾಗಿ ಸಾಧ್ಯವಾದರೆ ಪಟ್ಟಿ ರಹಿತ ಬ್ರಾ ಬಳಸಲು ಆರಂಭಿಸಿ. ಪ್ರತಿದಿನ ನೋವಿರುವ ಜಾಗವನ್ನು 10 ನಿಮಿಷಗಳವರೆಗೆ ಕಾಯಿಸಿ ಹಾಗೂ ತೇವಾಂಶ ನೀಡಿ. ತಜ್ಞರ ಮಾರ್ಗದರ್ಶನದಲ್ಲಿ ಯೋಗ ಅಥವಾ ವ್ಯಾಯಾಮ ಆರಂಭಿಸಿ. ಭುಜದ ಮೇಲೆ ಯಾವುದೇ ಭಾರವಾದ ವಸ್ತುಗಳನ್ನು ಹೊರಬೇಡಿ. ಸಮಸ್ಯೆ ತೀವ್ರವಾಗಿದ್ದರೆ ತಜ್ಞ ವೈದ್ಯರ ಸಲಹೆ ಪಡೆಯಬಹುದು.

English summary

Wearing even the right size of bra can cause these issues

It is a common fact now that wearing the wrong bra size can give you multiple health issues, like shoulder pain and even headaches. But, let's say you got your bra size checked and wear one that perfectly lifts your pair. Now, are you still open to any bra-related discomforts?
X
Desktop Bottom Promotion