For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಚೈನೀಸ್ ಚಿಕನ್ ಫ್ರೈಡ್ ರೈಸ್‌ನಲ್ಲಿರುವ ಪೋಷಕಾಂಶಗಳು

|

ಇಂದಿನ ದಿನಗಳಲ್ಲಿ ನೀವು ಯಾವ ಹೋಟೆಲ್ ಗೆ ಹೋದರೂ ಕೂಡ ಅಲ್ಲಿ ಮೆನು ಕಾರ್ಡ್ ನಲ್ಲಿ ಚೈನೀಸ್ ಎನ್ನುವ ಪದವು ಖಂಡಿತವಾಗಿಯೂ ಕಾಣಲು ಸಿಗುವುದು. ಚೈನೀಸ್ ಖಾದ್ಯಗಳು ಇಂದು ಅಷ್ಟರ ಮಟ್ಟಿಗೆ ಜನಪ್ರಿಯವಾಗಿದೆ. ಚೈನೀಸ್ ಖಾದ್ಯಗಳೆಂದರೆ ಹೆಚ್ಚಿನವರಿಗೆ ಪಂಚಪ್ರಾಣ. ರಸ್ತೆಬದಿಯಲ್ಲೂ ನಿಮಗೆ ಚೈನೀಸ್ ಖಾದ್ಯಗಳು ಸಿಗುವುದು. ಇದು ತುಂಬಾ ರುಚಿಕರವಾಗಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಚೈನೀಸ್ ಆಹಾರವು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇದರಲ್ಲಿ ಬಳಸುವಂತಹ ರುಚಿ ಹೆಚ್ಚಿಸುವ ಪದಾರ್ಥಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ.

Nutrition Values

ಆದರೆ ಕೆಲವರ ಪ್ರಕಾರ ಮೀನು ಇತ್ಯಾದಿಗಳು ಮತ್ತು ಹಬೆಯಲ್ಲಿ ಬೇಯಿಸಿರುವಂತಹ ಚೈನೀಸ್ ಆಹಾರವು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಎಲ್ಲಾ ಚೈನೀಸ್ ಆಹಾರಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗದು. ಚೈನೀಸ್ ಚಿಕನ್ ಫ್ರೈಡ್ ರೈಸ್ ನಲ್ಲಿ ಅತ್ಯಧಿಕ ಕೊಬ್ಬು ಮತ್ತು ಕಾರ್ಬ್ರೋಹೈಡ್ರೇಟ್ಸ್ ಗಳಿವೆ. ಚೈನೀಸ್ ಚಿಕನ್ ಫ್ರೈಡ್ ರೈಸ್ ನಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಯಾವೆಲ್ಲಾ ಪೋಷಕಾಂಶಗಳು ಇವೆ ಮತ್ತು ಫ್ರೈಡ್ ರೈಸ್ ತಯಾರಿಸಿಕೊಳ್ಳುವುದು ಹೇಗೆ ಎಂದು ನೀವು ಲೇಖನದಲ್ಲಿ ಮುಂದಕ್ಕೆ ಓದುತ್ತಾ ಸಾಗಿ...

ಕ್ಯಾಲರಿಗಳು

ಕ್ಯಾಲರಿಗಳು

ಚಿಕನ್ ಫ್ರೈಡ್ ರೈಸ್ ನಲ್ಲಿ ಕ್ಯಾಲರಿಯು ಅತ್ಯಧಿಕವಾಗಿರುವುದು. ಒಂದು ಕಪ್ ಫ್ರೈಡ್ ರೈಸ್ ನಲ್ಲಿ ಸುಮಾರು 130ರಿಂದ 240 ಕ್ಯಾಲರಿಗಳು ಇರುವುದು ಎಂದು ತಜ್ಞರು ಹೇಳುತ್ತಾರೆ. ಇದು ನಮ್ಮ ದೈನಂದಿನ ಅಗತ್ಯತೆಗೆ ಬೇಕಿರುವ 2000 ಕ್ಯಾಲರಿಯಲ್ಲಿ ಶೆ. 6ರಿಂದ 11ರಷ್ಟು ಎಂದು ಹೇಳಲಾಗಿದೆ. ನೀವು ಫ್ರೈಡ್ ರೈಸ್ ನಲ್ಲಿರುವಂತಹ ಕ್ಯಾಲರಿ ತಿಂದು ಬಳಿಕ ಅದನ್ನು ದಹಿಸಲು ಬಯಸಿದ್ದರೆ ಆಗ ನೀವು ಸುಮಾರು 18 ನಿಮಿಷ ಸ್ಕಿಪ್ಪಿಂಗ್ ಅಥವಾ 58 ನಿಮಿಷ ಕಾಲ ಭಾರ ಎತ್ತುವ ವ್ಯಾಯಮ ಮಾಡಬೇಕು.

ಕೊಬ್ಬು

ಕೊಬ್ಬು

ಸಣ್ಣ ಪ್ರಮಾಣದಲ್ಲಿ ಇದನ್ನು ನೀಡಲಾದರೂ ಒಂದು ಕಪ್ ಫ್ರೈಡ್ ರೈಸ್ ನಲ್ಲಿ ಸುಮಾರು ಎರಡರಿಂದ 2.5 ಗ್ರಾಂ.ನಷ್ಟು ಆಹಾರದ ನಾರಿನಾಂಶವಿದೆ. ಈ ಕೊಬ್ಬಿನಲ್ಲಿ ಸುಮಾರು 3 ಗ್ರಾಂ ಪೂರ್ತಿ ಆರ್ದ್ರವಾದ ಕೊಬ್ಬು ಇದೆ. ಈ ಕೊಬ್ಬು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಅಮೆರಿಕಾದ ಹಾರ್ಟ್ ಅಸೋಸಿಯೇಶನ್ ಪ್ರಕಾರ ನಿತ್ಯವು ಕೇವಲ 16 ಗ್ರಾಂನಷ್ಟು ಮಾತ್ರ ಆರ್ದ್ರವಾದ ಕೊಬ್ಬು ಸೇವಿಸಬೇಕು. ಆದರೆ ಅರ್ಧ ಕಪ್ ಫ್ರೈಡ್ ರೈಸ್ ನಲ್ಲಿ ಸುಮಾರು 19 ಗ್ರಾಂನಷ್ಟು ಆರ್ದ್ರವಾದ ಕೊಬ್ಬು ಇರುವುದು.

Most Read: ರುಚಿ ಹೆಚ್ಚಿಸುವ 'ಚಿಕನ್ ಮೆಜೆಸ್ಟಿಕ್' ಹೊಸ ಶೈಲಿಯ ರೆಸಿಪಿ!

ಕಾರ್ಬ್ರೋಹೈಡ್ರೇಟ್ಸ್

ಕಾರ್ಬ್ರೋಹೈಡ್ರೇಟ್ಸ್

ಅಕ್ಕಿಯಿಂದ ತಯಾರಿಸಲಾಗುವಂತಹ ಇತರ ಖಾದ್ಯಗಳಿಗೆ ಹೋಲಿಕೆ ಮಾಡಿದರೆ ಚೈನೀಸ್ ಫ್ರೈಡ್ ರೈಸ್ ನಲ್ಲಿ ಹೆಚ್ಚಿನ ಮಟ್ಟದ ಕಾರ್ಬ್ರೋಹೈಡ್ರೇಟ್ಸ್ ಗಳು ಇವೆ. ಒಂದು ಕಪ್ ನಲ್ಲಿ ಸುಮಾರು 21 ರಿಂದ 44 ಗ್ರಾಂ ನಷ್ಟು ಕಾರ್ಬ್ರೋಹೈಡ್ರೇಟ್ಸ್ ಗಳು ಇವೆ. ದೇಹದಕ್ಕೆ ಬೇಕಾಗುವಂತಹ ಶಕ್ತಿ ನೀಡುವ ಪ್ರಮುಖ ಪೋಷಕಾಂಶವು ಕಾರ್ಬ್ರೋಹೈಡ್ರೇಟ್ಸ್ ಆಗಿದೆ. ಈ ಕಾರಣದಿಂದಾಗಿ ಅಧಿಕ ಕಾರ್ಬ್ರೋಹೈಡ್ರೇಟ್ಸ್ ಗಳು ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳನ್ನು ಒಳಗೊಂಡ ಕೆಲಸಗಳಿಗೆ ನೆರವಾಗುವುದು.

ನಾರಿನಾಂಶ

ನಾರಿನಾಂಶ

ಚೈನೀಸ್ ಫ್ರೈಡ್ಸ್ ರೈಸ್ ನಲ್ಲಿ ಇರುವಂತಹ ಪ್ರಮುಖ ಕಾರ್ಬ್ರೋಹೈಡ್ರೇಟ್ಸ್ ಎಂದರೆ ಅದು ಆಹಾರದ ನಾರಿನಾಂಶ. ಒಂದು ಕಪ್ ಚೈನೀಸ್ ಫ್ರೈಡ್ ರೈಸ್ ನಲ್ಲಿ ಒಂದರಿಂದ ಎರಡು ಗ್ರಾಂನಷ್ಟು ಆಹಾರದ ನಾರಿನಾಂಶವಿದೆ. ಆಹಾರದ ನಾರಿನಾಂಶವು ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು. ಇದು ತೃಪ್ತಿ ಹೆಚ್ಚಿಸುವುದು ಮತ್ತು ಆರೋಗ್ಯಕರ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವುದು.

ಪ್ರೋಟೀನ್

ಪ್ರೋಟೀನ್

ಚೈನೀಸ್ ಫ್ರೈಡ್ ರೈಸ್ ನಲ್ಲಿ ಅಧಿಕ ಮಟ್ಟದ ಪ್ರೋಟೀನ್ ಇದೆ. ಒಂದು ಕಪ್ ಫ್ರೈಡ್ ರೈಸ್ ನಲ್ಲಿ ಸುಮಾರು 8-12 ಗ್ರಾಂನಷ್ಟು ಪ್ರೋಟೀನ್ ಇದೆ. ಪ್ರೋಟೀನ್ ದೇಹದ ಆರೋಗ್ಯಕ್ಕೆ ಅತೀ ಅಗತ್ಯವಾಗಿರುವುದು. ಯಾಕೆಂದರೆ ಇದು ದೇಹದಲ್ಲಿ ಕೋಶಗಳು ಮತ್ತು ಅಂಗಾಂಶಗಳನ್ನು ಬೆಳೆಸಿ ನಿರ್ವಹಣೆ ಮಾಡುವುದು.

Most Read:ಆಹಾ, ಚಿಕನ್ ಬಿರಿಯಾನಿ, ಬಾಯಲ್ಲಿ ನೀರೂರುತ್ತಿದೆ!

ಸೋಡಿಯಂ

ಸೋಡಿಯಂ

ಚೈನೀಸ್ ಫ್ರೈಡ್ ರೈಸ್ ನಲ್ಲಿ ಸೋಡಿಯಂ ಅಂಶವು ಅತ್ಯಧಿಕವಾಗಿದೆ. ಅರ್ಧ ಕಪ್ ಚೈನೀಸ್ ಫ್ರೈಡ್ ರೈಸ್ ನಲ್ಲಿ 530 ಮಿ.ಗ್ರಾಂ.ಷ್ಟು ಸೋಡಿಯಂ ಇದೆ. ನಮ್ಮ ದೇಹಕ್ಕೆ ದಿನಕ್ಕೆ ಸುಮಾರು 2,300 ಮಿ.ಗ್ರಾಂ. ಸೋಡಿಯಂ ಬೇಕಾಗಿರುವುದು. ಇದರ ಶೇ.23ರಷ್ಟು ಪ್ರಮಾಣವು ಫ್ರೈಡ್ ರೈಸ್ ನಲ್ಲಿದೆ. ಅತಿಯಾಗಿ ಸೋಡಿಯಂ ಸೇವನೆ ಮಾಡಿದರೆ ಅದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯು ಕಾಡಬಹುದು.

ನೀವು ಮನೆಯಲ್ಲಿ ಚೈನೀಸ್ ಫ್ರೈಡ್ ರೈಸ್ ತಯಾರಿಸಿಕೊಂಡು ತಿನ್ನಬಹುದು. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಸೋಡಿಯಂ ಕಡಿಮೆ ಇರುವಂತಹ ಸೋಯಾ ಸಾಸ್ ಬಳಸಿ. ನಿಮಗೆ ಸಾವಯವ ಸೋಯಾ ಸಾಸ್ ಅಥವಾ ಜಿಎಂಒ ಸೋಯಾಬೀನ್ ಸಾಸ್ ಸಿಕ್ಕಿದರೆ ಆಗ ಅದು ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

1.ಮೂರು ಚಮಚ ತರಕಾರಿ ಎಣ್ಣೆ

2.ಮೊಟ್ಟೆಗಳು ನಾಲ್ಕು ದೊಡ್ಡ ಗಾತ್ರದ್ದು. ಸ್ವಲ್ಪ ಕಲಸಿಕೊಂಡು

3.ಈರುಳ್ಳಿ ತುಂಡರಿಸಿರುವುದು ¾ ಕಪ್

4.ಕೆಂಪು ದೊಣ್ಣೆ ಮೆಣಸು ¾ ಕಪ್

5.ಸಣ್ಣ ಗಾತ್ರದ ಬೀನ್ಸ್ ಇದನ್ನು ಸಣ್ಣಸಣ್ಣದಾಗಿ ಕತ್ತರಿಸಿಕೊಂಡು ಇರಿ. ಎರಡು ಕಪ್ ಆಗುವಷ್ಟು.

6.ಬೇಯಿಸಿರುವ ಕೋಳಿ ಮಾಂಸ 2 ಕಪ್

7.ಬಾಸ್ಮತಿ ಅಕ್ಕಿ ಬೇಯಿಸಿರುವುದು 4 ಕಪ್

8.ಸೋಯಾ ಸಾಸ್ 1/3 ಕಪ್

ಏಶ್ಯನ್ ಗಾರ್ಲಿಕ್ ಸಾಸ್

ಅಲಂಕಾರಕ್ಕಾಗಿ: ಈರುಳ್ಳಿ ಗಿಡ ತುಂಡರಿಸಿರುವುದು, ಬಾದಾಮಿ ತುಂಡರಿಸಿರುವುದು.

Most Read: ಚಿಕನ್ ನಿಂದ ಆರೋಗ್ಯಕ್ಕೆ ಒಂದಲ್ಲಾ, ಎರಡಲ್ಲಾ 11 ಲಾಭ!

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ದೊಡ್ಡ ಬಾಣಲೆಯಲ್ಲಿ ಹದ ಬೆಂಕಿಯಲ್ಲಿ ಒಂದು ಚಮಚ ಎಣ್ಣೆಯನ್ನು ಒಂದು ನಿಮಿಷ ಕಾಲ ಬಿಸಿ ಮಾಡಿ. ಇದಕ್ಕೆ ಮೊಟ್ಟೆ ಹಾಕಿ ಮತ್ತು ಬೇಯಿಸಿ, ನಿಧಾನವಾಗಿ ತಿರುಗಿಸಿ. 1-2 ನಿಮಿಷ ಕಾಲ ತಿರುಗಿಸಿ. ಇದು ಮೊಟ್ಟೆಯು ಸಣ್ಣ ಸಣ್ಣ ತುಂಡುಗಳಾಗಲಿ. ಈಗ ಮೊಟ್ಟೆ ತೆಗೆದು ಅದನ್ನು ಸರಿಯಾಗಿ ತುಂಡು ಮಾಡಿ.

*ಉಳಿದಿರುವ ಎಣ್ಣೆ ಬಿಸಿ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ದೊಣ್ಣೆ ಮೆಣಸು ಮತ್ತು ಬೀನ್ಸ್ ಹಾಕಿ 3-4 ನಿಮಿಷ ಕಾಲ ಬಿಸಿ ಮಾಡಿ ಮತ್ತು ತರಕಾರಿಯು ಮೆತ್ತಗೆ ಆಗಲಿ. ಇದರ ಬಳಿಕ ಕೋಳಿ ಮಾಂಸ ಹಾಕಿಕೊಂಡು 2 ನಿಮಿಷ ತಿರುಗಿಸಿ. ಇದರ ಬಳಿಕ ಅನ್ನ, ಸೋಯಾ ಸಾಸ್ ಮತ್ತು ಚಿಲ್ಲಿ ಗಾರ್ಲಿಕ್ ಸಾಸ್ ಹಾಕಿ ಸುಮಾರು 3-4 ನಿಮಿಷ ಕಾಲ ಹಾಗೆ ತಿರುಗಿಸುತ್ತಾ ಬಿಸಿ ಮಾಡಿ. ಈಗ ಮೊಟ್ಟೆಯನ್ನು ಇದಕ್ಕೆ ಬೆರೆಸಿಕೊಳ್ಳಿ ಮತ್ತು ಅಲಂಕಾರಕ್ಕೆ ಹೇಳಿರುವ ಸಾಮಗ್ರಿಗಳನ್ನು ಹಾಕಿ.

English summary

The Nutrition Values for Chinese Chicken Fried Rice

When you don't feel like cooking, Chinese take-out food can be a convenient, tasty choice. While many Chinese dishes — such as those featuring seafood or those that are steamed — can be healthy, not all menu items are optimal for your health. Chinese take-out chicken fried rice is high in fat and carbohydrates.
X
Desktop Bottom Promotion