For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ವೀರ್ಯ ಆರೋಗ್ಯವಾಗಿದೆ, ಎಂದು ಸೂಚಿಸುವ ಲಕ್ಷಣಗಳು

|

ವಿವಾಹವಾದ ದಂಪತಿಗೆ ಮಗು ಪಡೆಯಬೇಕೆಂಬ ಬಯಕೆ ಇದ್ದೇ ಇರುತ್ತದೆ. ಈ ವೇಳೆ ಮಗು ಪಡೆಯಲು ಕೆಲವೊಂದು ಅಡೆತಡೆಗಳು ಉಂಟಾಗಬಹುದು. ಇದರಲ್ಲಿ ಪ್ರಮುಖವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಬಂಜೆತನ ಹಾಗೂ ಪುರುಷರಲ್ಲಿ ವೀರ್ಯದ ಗಣತಿ ಕಡಿಮೆಯಾಗಿರುವುದು. ವೀರ್ಯದ ಗಣತಿ ಕಡಿಮೆಯಾಗಲು ವೀರ್ಯದ ಆರೋಗ್ಯವು ಸರಿಯಾಗಿ ಇಲ್ಲದೆ ಇರುವುದು ಕಾರಣವಾಗಿದೆ. ಇಂತಹ ಸಮಯದಲ್ಲಿ ನೀವು ವೈದ್ಯಕೀಯ ಪರೀಕ್ಷೆ ಮಾಡಿಕೊಂಡು ಸರಿಯಾಗಿ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ವೀರ್ಯದ ಗಣತಿ ಹೆಚ್ಚಿಸಿಕೊಳ್ಳಬಹುದು.

signs that prove your sperm is healthy

ವೀರ್ಯದ ಗುಣಮಟ್ಟ ಮತ್ತು ಪ್ರಮಾಣವು ವೀರ್ಯದ ಆರೋಗ್ಯವನ್ನು ತಿಳಿಸುತ್ತದೆ. ಇದರಿಂದ ನಿಮಗೆ ಮಗುವನ್ನು ಪಡೆಯಲು ಸಾಧ್ಯವಾಗುವುದು. ಇದೆರಡು ಸರಿಯಾಗಿ ಇಲ್ಲವೆಂದಾದರೆ ಆಗ ನಿಮಗೆ ಕೂಡ ಫಲವತ್ತತೆ ಸಮಸ್ಯೆಯು ಕಾಡಬಹುದು. ಇಲ್ಲಿ ಪ್ರಮುಖವಾಗಿರುವಂತಹ ವಿಚಾರವೆಂದರೆ ವೀರ್ಯವು ಆರೋಗ್ಯವಾಗಿದೆಯಾ ಎಂದು ತಿಳಿಯುವುದು. ಇದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಿ....

ಸ್ಖಲನದ ವೇಳೆ ವೀರ್ಯದ ಬಣ್ಣವು ಬಿಳಿ ಆಗಿರುವುದು

ಸ್ಖಲನದ ವೇಳೆ ವೀರ್ಯದ ಬಣ್ಣವು ಬಿಳಿ ಆಗಿರುವುದು

ತಜ್ಞರ ಪ್ರಕಾರ ಸಾಮಾನ್ಯವಾಗಿ ವೀರ್ಯವು ಬಿಳಿ ಅಥವಾ ಸ್ವಲ್ಪ ಬಿಳಿ ಬಣ್ಣವನ್ನು ಹೊಂದಿರುವುದು. ಹಳದಿ ಅಥವಾ ಸ್ವಲ್ಪ ಮಟ್ಟಿಗೆ ಹಸಿರು ಬಣ್ಣ ಅಥವಾ ಯಾವುದೇ ರೀತಿಯ ತೆಕ್ಕೆಯಂತೆ ಕಾಣಿಸಿಕೊಳ್ಳುವುದು ವೀರ್ಯದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಬಹುದು. ಕೆಂಪು ಅಥವಾ ಕಂದು ಬಣ್ಣವು ಹೆಮಟೊಸ್ಪರ್ಮಿಯಾದ ಪರಿಸ್ಥಿತಿ ಎಂದು ಹೇಳಬಹುದು. ಇದು ವೀರ್ಯದಲ್ಲಿ ರಕ್ತವು ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ವೀರ್ಯದ ಬಣ್ಣವು ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ. ನೀವು ಯುರೋಲಾಜಿಸ್ಟ್ ನ್ನು ಆದಷ್ಟು ಬೇಗನೆ ಭೇಟಿಯಾಗುವುದು ಒಳ್ಳೆಯದು.

Most Read: ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಭಾರತೀಯ ಆಹಾರಗಳು

ಹೊಟ್ಟೆಯ ಸುತ್ತಲು ಕೊಬ್ಬು ಆವರಿಸಿಕೊಂಡಿದ್ದರೆ…

ಹೊಟ್ಟೆಯ ಸುತ್ತಲು ಕೊಬ್ಬು ಆವರಿಸಿಕೊಂಡಿದ್ದರೆ…

ಸೊಂಟದ ಸುತ್ತಲು ಬೊಜ್ಜು ಆವರಿಸಿಕೊಂಡು ದೇಹದ ಭಾರವು ಅತಿಯಾಗಿದ್ದರೆ ಆಗ ವೀರ್ಯದ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವುದು ಖಚಿತ. ಬೊಜ್ಜು ಎನ್ನುವುದು ಚಯಾಪಚಯ ಕಾಯಿಲೆಗೆ ಸಂಬಂಧವನ್ನು ಹೊಂದಿದೆ. ತಜ್ಞರ ಪ್ರಕಾರ, `` ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನು ಇದರಿಂದಾಗಿ ಕಡಿಮೆಯಾಗುವುದು ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗಿರುವ ಪರಿಣಾಮವಾಗಿ ಅದು ವೀರ್ಯದ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು''.ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ಅತಿಯಾಗಿರುವ ಕ್ಯಾಲರಿಯನ್ನು ದಹಿಸಬಹುದಾಗಿದೆ.

ಆಹಾರ ಕ್ರಮವು ಸಂಸ್ಕರಿತ ಮಾಂಸದಿಂದ ಕೂಡಿರಬಾರದು

ಆಹಾರ ಕ್ರಮವು ಸಂಸ್ಕರಿತ ಮಾಂಸದಿಂದ ಕೂಡಿರಬಾರದು

ಹಾವರ್ಡ್ ಯೂನಿವರ್ಸಿಟಿಯವರು ನಡೆಸಿರುವಂತಹ ಸಂಶೋಧನೆಯಲ್ಲಿ ದಂಪತಿಯನ್ನು ವಿಟ್ರೊ ಫರ್ಟಿಲೈಸೇಷನ್ ಚಿಕಿತ್ಸೆಗೆ ಒಳಪಡಿಸಿದಾಗ ತಿಳಿದು ಬಂದಿರುವಂತಹ ವಿಚಾರ ಏನೆಂದರೆ ಪುರುಷರು ಅತಿಯಾಗಿ ಸಂಸ್ಕರಿತ ಮಾಂಸ ಸೇವನೆ ಮಾಡಿದರೆ ಇದು ವೀರ್ಯದ ಮೇಲೆ ಪರಿಣಾಮ ಬೀರುವುದು. ತಜ್ಞರು ಹೇಳುವಂತೆ, ಈ ಸಂಶೋಧನೆಯು ಶೇ. ನೂರರಷ್ಟು ಪ್ರಮಾಣಿತವಾಗದೆ ಇದ್ದರೂ ಅತಿಯಾಗಿ ಸಂಸ್ಕರಿತ ಮಾಂಸ ತಿನ್ನುವುದರಿಂದ ಕೊಬ್ಬು ಪುರುಷರಲ್ಲಿ ಫಲವತ್ತತೆ ಮೇಲೆ ಪರಿಣಾಮ ಬೀರುವುದು.

ಬಾಕ್ಸರ್ ಒಳ ಉಡುಪು ಧರಿಸುತ್ತಿದ್ದರೆ…

ಬಾಕ್ಸರ್ ಒಳ ಉಡುಪು ಧರಿಸುತ್ತಿದ್ದರೆ…

ನಿಮಗೆ ಆರಾಮದಾಯಕವಾಗಿರುವಂತಹ ಒಳ ಉಡುಪು ಧರಿಸಿದರೆ ಆಗ ನಿಮಗೆ ಹೆಚ್ಚಿನ ಆರಾಮ ಸಿಗುವುದು ಎನ್ನುವುದು ಸರಿಯಾದ ವಿಚಾರ. ಆದರೆ ವೀರ್ಯದ ವಿಚಾರದಲ್ಲಿ ಇದನ್ನು ಹೇಳಲು ಸಾಧ್ಯವಿಲ್ಲ. ಬಿಗಿಯಾಗಿರುವಂತಹ ಯಾವುದೇ ರೀತಿಯ ಒಳ ಉಡುಪು ಧರಿಸಿದರೆ ಇದರಿಂದ ನಿಮ್ಮ ಜನನೇಂದ್ರಿಯದ ಸುತ್ತಲಿನ ಉಷ್ಣತೆಯು ಹೆಚ್ಚಾಗುವುದು ಮತ್ತು ಇದರಿಂದ ವೀರ್ಯವು ಕೊಲ್ಲಲ್ಪಡುವುದು ಎಂದು ಹೇಳಲಾಗುತ್ತದೆ.

ಚಟುವಟಿಕೆಯ ಜೀವನ

ಚಟುವಟಿಕೆಯ ಜೀವನ

ಜೀವನಶೈಲಿ ಮತ್ತು ಕೆಲವೊಂದು ದೈಹಿಕ ಚಟುವಟಿಕೆಗಳಿಂದಲೂ ಪುರುಷರ ಫಲವತ್ತತೆ ಮೇಲೆ ಪರಿಣಾಮವಾಗುವುದು. ದೈಹಿಕವಾಗಿ ಚಟುವಟಿಕೆಯಿಂದ ಇರುವ ವ್ಯಕ್ತಿಯು ದೈಹಿಕವಾಗಿಯೂ ತುಂಬಾ ಆರೋಗ್ಯವಾಗಿ ಇರುವನು ಮತ್ತು ಇದರಿಂದ ವೀರ್ಯದ ಗುಣಮಟ್ಟವು ಉತ್ತಮವಾಗಿರುವುದು. ತಜ್ಞರ ಪ್ರಕಾರ, ವೀರ್ಯದ ಗುಣಮಟ್ಟವನ್ನು ಹೆಚ್ಚಿಸಲು ಇಂತಿಷ್ಟು ಸಮಯ ವ್ಯಾಯಾಮ ಮಾಡಬೇಕೆಂದು ಯಾವುದೇ ರೀತಿಯ ನಿಯಮಗಳು ಇಲ್ಲ. ಆದರೆ ನಿಯಮಿತವಾಗಿ ವ್ಯಾಯಮ ಮಾಡುತ್ತಿದ್ದರೆ ವೀರ್ಯದ ಗುಣಮಟ್ಟವು ಉತ್ತಮವಾಗುವುದು.

Most Read: ಸೆಕ್ಸ್ ಬಳಿಕ ದೇಹಲ್ಲಿ ಎದುರಾಗುವ ಕೆಲವೊಂದು ವಿಚಿತ್ರ ಸಂಗತಿಗಳು

ಕೊಬ್ಬಿನಾಮ್ಲವಿರುವ ಮೀನು ಸೇವಿಸಿ

ಕೊಬ್ಬಿನಾಮ್ಲವಿರುವ ಮೀನು ಸೇವಿಸಿ

ನಿಮ್ಮ ಆಹಾರ ಕ್ರಮದಲ್ಲಿ ಯಾವಾಗಲೂ ಸಾಲ್ಮನ್ ಮತ್ತು ಟ್ಯೂನಾ ಅಥವಾ ಯಾವುದೇ ರೀತಿಯ ಕೊಬ್ಬಿನಾಮ್ಲವಾಗಿರುವ ಒಮೆಗಾ-3 ಹೆಚ್ಚಾಗಿರುವಂತಹ ಮೀನುಗಳನ್ನು ಸೇವನೆ ಮಾಡಿ. ನೀವು ಮುಂದಿನ ಸಲ ಮೀನು ಮಾರುಕಟ್ಟೆಗೆ ಹೋದಾಗ ಅಲ್ಲಿಂದ ಇಂತಹ ಮೀನುಗಳನ್ನು ಖರೀದಿ ಮಾಡಿ. ಇದರಿಂದ ವೀರ್ಯದ ಆರೋಗ್ಯವು ಸುಧಾರಣೆ ಆಗುವುದು. ತಜ್ಞರು ಹೇಳುವಂತೆ, ``ಒಮೆಗಾ-3 ಕೊಬ್ಬಿನಾಮ್ಲವು ಹೆಚ್ಚಾಗಿ ಇರುವಂತಹ ಮೀನುಗಳು ವೀರ್ಯದ ಗಣತಿಯನ್ನು ಹೆಚ್ಚು ಮಾಡುವುದು.``ನೀವು ಆಹಾರ ಕ್ರಮದಲ್ಲಿ ಕೊಬ್ಬಿನಾಮ್ಲವು ಇರುವಂತಹ ಮೀನನ್ನು ಸೇರಿಸಿಕೊಂಡರೆ ಅದರಿಂದ ವೀರ್ಯದ ಆರೋಗ್ಯವು ಹೆಚ್ಚಾಗುವುದು.

ಬಿಪಿಎ ಮುಕ್ತವಾಗಿರುವ ಪ್ಲಾಸ್ಟಿಕ್ ಬಳಸಿ

ಬಿಪಿಎ ಮುಕ್ತವಾಗಿರುವ ಪ್ಲಾಸ್ಟಿಕ್ ಬಳಸಿ

ಬಿಸ್ಪೆನಾಲ್-ಎ(ಬಿಪಿಎ) ಎನ್ನುವುದು ಒಂದು ರೀತಿಯ ರಾಸಾಯನಿಕವಾಗಿದ್ದು, ಇದು ಹೆಚ್ಚಾಗಿ ಪ್ಲಾಸ್ಟಿಕ್, ಬಾಟಲಿ ಮತ್ತು ಡಬ್ಬಗಳ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ. ಸಂಸ್ಕರಿತ ಆಹಾರವನ್ನು ಶೇಖರಣೆ ಮಾಡಿ ಇಡುವಂತಹ ಕ್ಯಾನ್ ಗಳಲ್ಲಿ ಕೂಡ ಇದು ಇರುತ್ತದೆ. ಸಂಶೋಧನೆಗಳ ಪ್ರಕಾರ ಬಿಪಿಎ ಆಹಾರ ಅಥವಾ ಪಾನೀಯದೊಳಗೆ ಪ್ರವೇಶ ಮಾಡುವುದು. ಇದು ಬಿಸಿ ಮಾಡಿದಾಗ ಅಥವಾ ಡಿಷ್ ವಾಷರ್ ನಲ್ಲಿ ನಮಗೆ ತಿಳಿದುಬರುವುದು. ಡಾ. ಲೀ ಈ ಬಗ್ಗೆ ಎಚ್ಚರಿಸುತ್ತಾ, ``ಬಿಪಿಎ ಪುರುಷರ ಪಲವತ್ತತೆ ಮೇಲೆ ಹಲವಾರು ರೀತಿಯಿಂದ ಪರಿಣಾಮ ಬೀರುವುದು. ಇದು ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡದಂತೆ ಮಾಡುವುದು. ಆದರೆ ಯಾವ ಪ್ರಮಾಣದ ಬಿಪಿಎ ಮಟ್ಟವು ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುವುದು ಎಂದು ಪ್ರಸಕ್ತ ಸಂಶೋಧನೆಗಳಿಂದ ತಿಳಿದುಬಂದಿಲ್ಲ.''

ಧೂಮಪಾನ ಮಾಡಬಾರದು

ಧೂಮಪಾನ ಮಾಡಬಾರದು

ಧೂಮಪಾನ ನಿಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಇದು ಸುತ್ತಲಿನವರ ಆರೋಗ್ಯವನ್ನು ಕೆಡಿಸುವುದು. ಧೂಮಪಾನ ಮಾಡುವವರಲ್ಲಿ ಫಲವತ್ತತೆ ಮಟ್ಟ ಕೂಡ ಕಡಿಮೆಯಾವುದು. ಧೂಮಪಾನವು ಕ್ಯಾನ್ಸರ್ ಉಂಟು ಮಾಡುವುದು ಮಾತ್ರವಲ್ಲದೆ ವೀರ್ಯದಲ್ಲಿನ ಡಿಎನ್ ಎ ಮೇಲೂ ಪರಿಣಾಮ ಬೀರುವುದು.

ಸುರಕ್ಷಿತವಾಗಿರಲು ವೈದ್ಯರನ್ನು ಭೇಟಿಯಾಗಿ

ಸುರಕ್ಷಿತವಾಗಿರಲು ವೈದ್ಯರನ್ನು ಭೇಟಿಯಾಗಿ

ಮೇಲೇ ಹೇಳಿರುವಂತಹ ವಿಚಾರಗಳನ್ನು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ. ತಜ್ಞರು ಎಚ್ಚರಿಸುವಂತೆ, ಈ ಎಲ್ಲಾ ಕಾರಣಗಳಿಂದಾಗಿ ಪುರುಷರ ವೀರ್ಯದ ಆರೋಗ್ಯವು ಕೆಟ್ಟಿದೆ ಎಂದು ಹೇಳಲು ಆಗದು. ಒಳ್ಳೆಯ ದಂಪತಿಗಳಲ್ಲಿ ಹೆಚ್ಚಾಗಿ ಪುರುಷರು ತಮ್ಮ ವೀರ್ಯವು ಅಸಾಮಾನ್ಯವಾಗಿದೆ ಎಂದು ತಿಳಿದರೆ ಆಗ ಆಘಾತಕ್ಕೆ ಒಳಗಾಗುವುದು ಸಹಜ. ನಿಮಗೆ ಯಾವುದೇ ರೀತಿಯ ಗೊಂದಲವಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಕೊಳ್ಳುವುದು ಅತೀ ಅಗತ್ಯ.''

English summary

signs that prove your sperm is healthy

When you and your spouse are trying to conceive, you’ll be inundated with information on what you can do to improve your chances of getting pregnant. And one such way is to ensure that your sperm is healthy. Both the quality and quantity of sperm, which determines sperm health, can have a huge impact on how long you and your spouse will take to start a family.
X
Desktop Bottom Promotion