Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ತೂಕ ಇಳಿಕೆಗೆ ಯಾವುದು ಒಳ್ಳೆಯದು? ಅನ್ನವೋ ಅಥವಾ ಚಪಾತಿಯೋ?
ತೂಕ ಇಳಿಕೆಯ ವಿಷಯ ಬಂದಾಗ ಅನ್ನ ಸೇವಿಸುವುದು ಒಳ್ಳೆಯದೋ ಚಪ್ಪಾತಿ ಸೇವಿಸಿದರೆ ಉತ್ತಮವೋ ಎಂಬ ಪ್ರಶ್ನೆ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಭಾರತೀಯರಾದ ನಮಗೆ ಚಿಕ್ಕಂದಿನಿಂದಲೂ ಅನ್ನ ಮತ್ತು ಚಪಾತಿ ಎರಡೂ ನಮ್ಮ ಊಟದಲ್ಲಿ ಸರಿಸಮನಾದ ಪ್ರಾಮುಖ್ಯತೆ ಪಡೆದಿರುವಾಗ ಇವುದಗಳಲ್ಲೊಂದಕ್ಕೆ ವಿದಾಯ ನೀಡಬೇಕೆಂದರೆ ನಮಗೆ ಇಷ್ಟವಾಗದ ಆಯ್ಕೆಯಾಗಿದೆ.
ಆದರೆ ತೂಕ ಇಳಿಯಬೇಕಾದರೆ ಆಹಾರದ ಮೇಲಿನ ವ್ಯಾಮೋಹವನ್ನು ಕೊಂಚವಾದರೂ ತ್ಯಜಿಸಲೇಬೇಕಾಗುತ್ತದೆ. ಅಷ್ಟಕ್ಕೂ ತೂಕ ಇಳಿಯಲಿಕ್ಕೆ ನಮ್ಮ ಇಷ್ಟದ ಆಹಾರಗಳನ್ನೆಲ್ಲಾ ತ್ಯಜಿಸಬೇಕಾಗಿಲ್ಲ, ಆದರೆ ಇದಕ್ಕೆ ಇತರರ ಒತ್ತಡವೇ ಹೆಚ್ಚಿನ ಕಾರಣವಾಗುತ್ತದೆ.

ಸ್ಥೂಲದೇಹಕ್ಕೆ ಪ್ರಮುಖ ಕಾರಣ:: ಕಾರ್ಬೋಹೈಡ್ರೇಟುಗಳು
ಸ್ಥೂಲದೇಹವನ್ನು ಕರಗಿಸಲು ಕಾರ್ಬೋಹೈಡ್ರೇಟುಗಳನ್ನು ತ್ಯಜಿಸುವ ಮೂಲಕ ಹಲವರು ಭಾರೀ ಪ್ರಮಾಣದಲ್ಲಿ ತೂಕವನ್ನು ಕಳೆದುಕೊಂಡಿದ್ದಾರೆ. ಆದರೆ ನಮ್ಮ ಭಾರತೀಯ ಅಡುಗೆಗಳಲ್ಲಿ ಅನ್ನ ಮತ್ತು ಚಪಾತಿಗಳಲ್ಲೆರಡರಲ್ಲೂ ಕಾರ್ಬೋಹೈಡ್ರೇಟುಗಳಿವೆ. ಅದರಲ್ಲೂ ಬಹುತೇಕ ನಮ್ಮ ಅಡುಗೆ-ಖಾದ್ಯಗಳು ಅಕ್ಕಿ ಅಥವಾ ಗೋಧಿಹಿಟ್ಟನ್ನು ಆಧರಿಸಿಯೇ ಇದ್ದು ಇವುಗಳನ್ನೊಂದನ್ನೂ ನಮಗೆ ತ್ಯಜಿಸುವುದೆಂದರೆ ಅಷ್ಟು ಪ್ರಮಾಣದ ಆಹಾರ-ಖಾದ್ಯಗಳನ್ನು ತ್ಯಜಿಸುವುದೇ ಆಗಿದೆ, ಇದು ಅಷ್ಟು ಸುಲಭವಲ್ಲ.
Most Read: ಹುಣಸೆ ಬೀಜದಲ್ಲಿ ಇರುವಂತಹ ಆರೋಗ್ಯ ಲಾಭಗಳು

ಈ ದ್ವಂದ್ವದ ವಿಜೇತ - ಚಪಾತಿ
ಆದರೆ ತೂಕ ಕಳೆದುಕೊಳ್ಳುವ ಅಗತ್ಯತೆ ಎದುರಾದಾಗ ನಿಜವಾದ ವಿಜೇತ ಎಂದರೆ ಚಪಾತಿ. ಪೌಷ್ಟಿಕಾಂಶಗಳ ಅಥವಾ ಕ್ಯಾಲೋರಿಗಳ ವಿಷಯದಲ್ಲಿ ಅನ್ನಕ್ಕೂ ಚಪಾತಿಗೂ ಹೆಚ್ಚಿನ ವ್ಯತ್ಯಾಸವಿಲ್ಲದೇ ಹೋದರೂ ಅನ್ನದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿರುವ ಸೋಡಿಯಂ ಅನ್ನದ ಸೋಲಿಗೆ ಪ್ರಮುಖ ಕಾರಣವಾಗಿದೆ. ಸುಮಾರು ನೂರಿಪ್ಪತ್ತು ಗ್ರಾಂ ಗೋಧಿಯಲ್ಲಿ 190 ಮಿಲಿಗ್ರಾಂ ಸೋಡಿಯಂ ಇದೆ.

ಪ್ರಮುಖ ವ್ಯತ್ಯಾಸ?
ಹಾಗಾಗಿ, ವೈದ್ಯಕೀಯ ಕಾರಣಗಳಿಗಾಗಿ ಸೋಡಿಯಂ ಪ್ರಮಾಣವನ್ನು ತಗ್ಗಿಸಲು ವೈದ್ಯರು ಸಲಹೆ ನೀಡಿದ್ದರೆ ನೀವು ಮೊದಲಾಗಿ ಚಪಾತಿ ತಿನ್ನುವುದನ್ನು ಬಿಡಬೇಕು. ಆದರೆ ವಾಸ್ತವವಾಗಿ ತೂಕ ಇಳಿಸುವವರಿಗೆ ಚಪಾತಿಯೇ ಹೆಚ್ಚು ಸೂಕ್ತ, ಏಕೆ? ಚಪಾತಿಗೆ ಹೋಲಿಸಿದರೆ ಅನ್ನದಲ್ಲಿ ಕಡಿಮೆ ಕರಗದ ನಾರು, ಪ್ರೋಟೀನ್ ಮತ್ತು ಕೊಬ್ಬು ಇವೆ. ಅನ್ನದಲ್ಲಿ ಹೆಚ್ಚಿನ ಕ್ಯಾಲೋರಿಗಳು ಇದ್ದರೂ ಇದೇ ಪ್ರಮಾಣದ ಚಪಾತಿಯಲ್ಲಿ ಪಡೆಯುವಷ್ಟು ಶಕ್ತಿಯನ್ನು ಒದಗಿಸಲಾರದು.
Most Read: ರಾತ್ರಿ ಮಲಗುವ ಮುನ್ನ ಇಂತಹ ಆಹಾರಗಳನ್ನು ತಿಂದರೆ, ಆರೋಗ್ಯ ವೃದ್ಧಿಯಾಗುತ್ತದೆ!

ದಿನಕ್ಕೆ ನಾಲ್ಕು ಚಪಾತಿ
ಇದೇ ಸಮಯದಲ್ಲಿ, ದಿನವೊಂದರಲ್ಲಿ ಸೇವಿಸಬೇಕಾದ ಚಪಾತಿಗಳ ಪ್ರಮಾಣವೂ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಪಾತಿ ತೂಕ ಇಳಿಕೆಗೆ ಒಳ್ಳೆಯದು ಎಂದಾಕ್ಷಣ ಎಷ್ಟು ಬೇಕೋ ಅಷ್ಟು ಚಪಾತಿ ತಿನ್ನುವಂತಿಲ್ಲ. ದಿನವೊಂದಕ್ಕೆ ಗರಿಷ್ಟ ನಾಲ್ಕು ಚಪಾತಿ ತಿಂದರೆ ಮಾತ್ರವೇ ಈ ಗುರಿ ನೆರವೇರಲು ಸಾಧ್ಯ.

ರಾತ್ರಿ ಎಂಟಕ್ಕೂ ರಾತ್ರಿಯೂಟ
ಒಂದು ವೇಳೆ ರಾತ್ರಿಯೂಟಕ್ಕೆ ಚಪಾತಿ ತಿನ್ನಬಯಸಿದರೆ, ಇದಕ್ಕೆ ಅತಿ ಸೂಕ್ತ ಸಮಯವೆಂದರೆ ರಾತ್ರಿಯ ಏಳುವರೆ. ಅಂದರೆ ಎಂಟು ಗಂಟೆಗೆಲ್ಲಾ ನಿಮ್ಮ ಊಟ ಮುಗಿದು ಕೊಂಚ ಕಾಲ ಅಡ್ಡಾಡಿ ಆದಷ್ಟೂ ಬೇಗನೇ ಮಲಗಲಿಕ್ಕೆ ತೊಡಗಬೇಕು. ಏಕೆಂದರೆ ನಮ್ಮ ದೇಹ ನಿಸರ್ಗದ ಗಡಿಯಾರದೊಂದಿಗೆ ಜೊತೆಜೊತೆಯಾಗಿ ಹೆಜ್ಜೆ ಹಾಕುವಂತಿದ್ದರೂ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ಮಲಬದ್ಧತೆ ಸಮಸ್ಯೆ ಇದ್ದವರು ಚಪಾತಿ ಸೇವಿಸಿ
ಗೋಧಿಯಿ೦ದ ತಯಾರಿಸಲಾಗುವ ಚಪಾತಿಯಿ೦ದ ಒದಗಬಹುದಾದ ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಪೈಕಿ ಇದೂ ಕೂಡಾ ಒ೦ದಾಗಿದೆ. ಚಪಾತಿಯು ಮಲಬದ್ಧತೆಯನ್ನು ನಿವಾರಿಸಲು ನೆರವಾಗುತ್ತದೆ. ಹೀಗಾಗಿ, ಮಲಬದ್ಧತೆಯಿ೦ದ ಬಳಲುತ್ತಿರುವವರು ಚಪಾತಿಯನ್ನೊಳಗೊ೦ಡ ಆಹಾರಕ್ರಮವನ್ನೊಮ್ಮೆ ಪ್ರಯತ್ನಿಸಿ ನೋಡಬಹುದು. ಇನ್ನು ಚಪಾತಿಗೆ ಎಣ್ಣೆ ಅಥವಾ ಬೆಣ್ಣೆಯನ್ನು ಸೇರಿಸದೇ ಹೋದಲ್ಲಿ, ಚಪಾತಿಗಳು ಕ್ಯಾಲರಿಗಳನ್ನು ಅತೀ ಕನಿಷ್ಟಪ್ರಮಾಣದಲ್ಲಿ ಒಳಗೊ೦ಡಿವೆ. ಹೀಗಾಗಿ, ನೀವು ಚಪಾತಿಯನ್ನು ಒ೦ದು ತೂಕನಷ್ಟ ಆಹಾರಕ್ರಮದ ರೂಪದಲ್ಲಿ ಬಳಸಿಕೊಳ್ಳಬಹುದು.

ಮಧುಮೇಹಿಗಳಿಗೂ ಚಪಾತಿ ಒಳ್ಳೆಯದು
ಗೋಧಿಯಲ್ಲಿ ಪೌಷ್ಟಿಕಾ೦ಶವು ಅಧಿಕ ಪ್ರಮಾಣದಲ್ಲಿರುತ್ತದೆಯಾದ್ದರಿ೦ದ ಕೆಲವೊ೦ದು ಅನಾರೋಗ್ಯ ಸಮಸ್ಯೆಗಳಾದ ಸ್ಥೂಲಕಾಯ, ಶಕ್ತಿಹೀನತೆ, ಖನಿಜಾ೦ಶಗಳ ಕೊರತೆ, ರಕ್ತಹೀನತೆ, ಸ್ತನದ ಕ್ಯಾನ್ಸರ್, ಕ್ಷಯರೋಗ, ಹಾಗೂ ಗರ್ಭಿಣಿಯರಿಗೆ ಸ೦ಬ೦ಧಿಸಿದ ಇತರ ಆರೋಗ್ಯ ಸಮಸ್ಯೆಗಳನ್ನು ಚಪಾತಿಯನ್ನೊಳಗೊ೦ಡ ಆಹಾರಕ್ರಮವನ್ನನುಸರಿಸುವುದರ ಮೂಲಕ ಆರೈಕೆ ಮಾಡಬಹುದು. ಬಹುಧಾನ್ಯಗಳು ಶರ್ಕರಪಿಷ್ಟಗಳ ಅತ್ಯುತ್ತಮ ಆಗರವಾಗಿವೆ. ಪೂರ್ಣಗೋಧಿಯಲ್ಲಿ ಸಕ್ಕರೆಯ ಮೌಲ್ಯಾ೦ಕನವು ಕಡಿಮೆ ಇರುತ್ತದೆಯಾದ್ದರಿ೦ದ ಮಧುಮೇಹಿಗಳು ಪೂರ್ಣಗೋಧಿಯಿ೦ದ ತಯಾರಿಸಿದ ಚಪಾತಿಗಳನ್ನು ಸೇವಿಸಬಹುದು. ಜೊತೆಗೆ, ತೂಕನಷ್ಟವನ್ನು ಹೊ೦ದಬಯಸುವವರು ಅಥವಾ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳಬಯಸುವವರೂ ಕೂಡಾ ಚಪಾತಿಯನ್ನು ಸೇವಿಸಬಹುದು. ಏಕೆ೦ದರೆ ಚಪಾತಿಯು ಕಡಿಮೆ ಕ್ಯಾಲರಿಗಳುಳ್ಳವುಗಳಾಗಿದ್ದು, ಅಧಿಕ ನಾರಿನ೦ಶವನ್ನು ಹೊ೦ದಿವೆ.