For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಸೆಕ್ಸ್ ಬಗ್ಗೆ ಇರುವ ಕೆಲವೊಂದು ತಪ್ಪು ನಂಬಿಕೆಗಳು

|

ಲೈಂಗಿಕ ಕ್ರಿಯೆ ಪ್ರತಿಬಾರಿಯೂ ಲೈಂಗಿಕ ಪರಾಕಾಷ್ಠೆಯೊಂದಿಗೇ ಸಮಾಪ್ತಿಗೊಳ್ಳಬೇಕು ಎಂಬುದೊಂದು ಸಾಮಾನ್ಯ ತಪ್ಪು ತಿಳುವಳಿಕೆಯಾಗಿದೆ. ಆದರೆ ಆರೋಗ್ಯಕರ ಲೈಂಗಿಕ ಜೀವನ ಹಾಗೂ ಸಂತೃಪ್ತ ದಾಂಪತ್ಯಕ್ಕಾಗಿ ದಂಪತಿಗಳ ನಡುವಣ ಲೈಂಗಿಕ ಕ್ರಿಯೆ ಭಾರೀ ಮಟ್ಟದ ಲೈಂಗಿಕ ಪರಾಕಾಷ್ಠೆಯೊಂದಿಗೇ ಮುಗಿಯುವ ಅಗತ್ಯವಿಲ್ಲ. ನಿಮ್ಮ ನಡುವೆ ಮಿಲನಕ್ರಿಯೆ ಆಗಾಗ ಆಗುತ್ತಿದ್ದರೂ ಹಾಗೂ ಪ್ರತಿ ಬಾರಿಯ ಅನುಭವಗಳು ಅತಿ ಅನ್ನಿಸುವಷ್ಟಿಲ್ಲದಿದ್ದರೂ ಸರಿ, ಇದು ನಿಮ್ಮ ದಾಂಪತ್ಯ ಹಾಗೂ ಲೈಂಗಿಕ ಜೀವನ ಆರೋಗ್ಯಕರವಲ್ಲ ಎನ್ನಲು ಯಾವುದೇ ಮಾನದಂಡವಲ್ಲ.

ಈ ಬಗ್ಗೆ ಜಗತ್ತಿನಲ್ಲಿ ಕೆಲವು ತಪ್ಪು ತಿಳುವಳಿಕೆಗಳು ಮನೆಮಾಡಿದ್ದು ಇವನ್ನು ನಂಬುವ ಮೂಲಕ ನಾವು ನಿಸರ್ಗದಿಂದ ದೂರವಾಗಿರುವುದನ್ನೇ ನಿಜವೆಂದು ನಂಬಿ ಆ ಪ್ರಕಾರ ನಡೆಯದಿದ್ದರೆ ನಮ್ಮ ಲೈಂಗಿಕ ಆರೋಗ್ಯವೇ ಸರಿಯಿಲ್ಲ ಎಂಬ ಅಪರಾಧಿ ಮನೋಭಾವಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಈ ವಿಷಯದಲ್ಲಿ ಗಂಭೀರವಾದ ಚಿಂತನೆ ಅಗತ್ಯ. ದಂಪತಿಗಳ ನಡುವೆ ಇಬ್ಬರಿಗೂ ಆಹ್ಲಾದಕರ ಎನಿಸುವ ಯಾವುದೇ ವಿಷಯವಾದರೂ ಸರಿ, ಇದರ ಮಟ್ಟವನ್ನು ಅಳೆಯಲು ಹೋಗದೇ ಪರಸ್ಪರರು ಮಾನಸಿಕರಾಗಿ ಎಷ್ಟು ತೃಪ್ತರಾಗಿದ್ದಾರೆ ಎಂಬುದು ಮುಖ್ಯವೇ ಹೊರತು ಲೈಂಗಿಕ ಪರಾಕಾಷ್ಠೆಯ ಉತ್ತುಂಗವೇ ಇದಕ್ಕೊಂದು ಮಾನದಂಡವಲ್ಲ. ಬನ್ನಿ, ಈ ಬಗ್ಗೆ ಜನಜನಿತವಾಗಿರುವ ತಪ್ಪು ತಿಳುವಳಿಕೆಗಳ ಬಗ್ಗೆ ಅರಿಯೋಣ...

ಇದು ಸಮಯಕ್ಕೆ ತಕ್ಕಂತೆ ಜರುಗಬೇಕು

ಇದು ಸಮಯಕ್ಕೆ ತಕ್ಕಂತೆ ಜರುಗಬೇಕು

ಇಂದಿನ ದಿನಗಳಲ್ಲಿ ಎಲ್ಲವೂ ಒಂದು ಸಮಯದ ಮಿತಿಯಲ್ಲಿ ಮತ್ತು ಅವಧಿಯಲ್ಲಿಯೇ ಪೂರ್ಣಗೊಳ್ಳುವುದು ಅವಶ್ಯವಾಗಿದ್ದು ಒಂದು ರೀತಿಯಲ್ಲಿ ನಮ್ಮ ಜೀವನವೇ ನಮಯದ ಮಿತಿಗಳಲ್ಲಿ ಬಂಧಿತವಾಗಿದೆ. ಇದಕ್ಕೆ ಲೈಂಗಿಕ ಕ್ರಿಯೆಯೂ ಹೊರತಾಗಿಲ್ಲ. ಹಾಗಾಗಿ ಲೈಂಗಿಕ ಕ್ರಿಯೆಯನ್ನೂ ಮನಬಂದ ಸಮಯದಲ್ಲಿ ಈಡೀರಿಸಿಕೊಳ್ಳದೇ ಇದಕ್ಕೆಂದೇ ಪ್ರತ್ಯೇಕವಾದ ಸಮಯವನ್ನು ಮೀಸಲಾಗಿಡುವುದು ಅಗತ್ಯ. ಯಾವ ಸಮಯವನ್ನು ಮೀಸಲಾಗಿಟ್ಟು ಇದನ್ನು ಹೇಗೆ ನಿರ್ವಹಿಸಿಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.

ಇದು ಸಮಯಕ್ಕೆ ತಕ್ಕಂತೆ ಜರುಗಬೇಕು

ಇದು ಸಮಯಕ್ಕೆ ತಕ್ಕಂತೆ ಜರುಗಬೇಕು

ಮಿಲನಕ್ರಿಯೆ ಪ್ರಮುಖವಾಗಿ ಎರಡು ಮನಸ್ಸುಗಳ ನಡುವಣ ಮಿಲನವಾಗಿದ್ದು ಆ ಸಮಯದಲ್ಲಿ ಇಬ್ಬರಲ್ಲೊಬ್ಬರ ಮನಸ್ಸು ಸರಿ ಇರದೇ ಇದ್ದರೆ ಈ ಕಟ್ಟುಪಾಡಿನ ಮಿತಿಯೊಳಗೆ ನಡೆಯುವ ಕ್ರಿಯೆ ಯಾಂತ್ರಿಕವಾಗಿರುತ್ತದೆಯೇ ವಿನಃ ಸ್ವಾಭಾವಿಕವಾಗಿರುವುದಿಲ್ಲ. ಹಾಗಾಗಿ ಇಬ್ಬರಲ್ಲಿಯೂ ಯಾವುದೇ ಆತಂಕ, ಉದ್ವೇಗವಿಲ್ಲದೇ ಮತ್ತು ಲಭ್ಯವಿರುವ ಸಮಯ ಮತ್ತು ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಂಡಾಗಲೇ ಈ ಕ್ರಿಯೆ ನೈಸರ್ಗಿಕವಾಗಿ ಜರುಗುತ್ತದೆ. ನಿಮ್ಮ ಮೊದಲ ಭೇಟಿಯನ್ನು ನೀವು ಎಷ್ಟು ಕಾತುರದಿಂದ ನಿರೀಕ್ಷಿಸುತ್ತಿದ್ದಿರಿ ಎಂಬುದನ್ನು ಊಹಿಸಿ, ಇದೇ ರೀತಿಯ ಸೂಕ್ತ ಸಂದರ್ಭ, ಸಮಯವನ್ನು ಪರಸ್ಪರರಿಗೆ ಮೀಸಲಾಗಿಟ್ಟು ಪರಿಪೂರ್ಣವಾಗಿ ಬಳಸಿಕೊಂಡರೆ ಜೀವನ ಸಾರ್ಥಕ.

Most Read: ಖಾಲಿ ಹೊಟ್ಟೆ ಅಥವಾ ತುಂಬಿದ ಹೊಟ್ಟೆ? ಸೆಕ್ಸ್ ಗೆ ಯಾವುದು ಒಳ್ಳೆಯದು?

ಅತಿ ನಿಧಾನ ಮತ್ತು ದೀರ್ಘಾವಧಿಯ ಲೈಂಗಿಕ ಕ್ರೀಡೆಯೇ ಅತ್ಯುತ್ತಮ

ಅತಿ ನಿಧಾನ ಮತ್ತು ದೀರ್ಘಾವಧಿಯ ಲೈಂಗಿಕ ಕ್ರೀಡೆಯೇ ಅತ್ಯುತ್ತಮ

ಲೈಂಗಿಕ ಕ್ರೀಡೆಯನ್ನು ಅತಿ ದೀರ್ಘ ಸಮಯದವರೆಗೆ ಮುಂದುವರೆಸಿಕೊಂಡು ಹೋಗುವುದರಿಂದಲೇ ಪರಿಪೂರ್ಣ ತೃಪ್ತಿ ಎಂಬ ಮಿಥ್ಯೆ ಜನಜನಿತವಾಗಿದೆ. ವಾಸ್ತವವಾಗಿ ತೃಪ್ತಿ ಪಡೆಯಲು ಇಷ್ಟೇ ಸಮಯ ಎಂಬ ಮಾನದಂಡವಿಲ್ಲ. ಹಾಗಾಗಿ ತುಂಬಾ ಹೊತ್ತು ಉಳಿಸಿಕೊಳ್ಳಲು ಹೋದರೆ ನಿರಾಶೆಯೇ ಗತಿಯಾಗಬಹುದು.

Most Read: ಮೂತ್ರನಾಳದ ಸೋಂಕು: ಗುಣವಾಗುವವರೆಗೂ ಸೆಕ್ಸ್‌ನ್ನು ಮುಂದೂಡಬೇಕೇ?

ಅತಿ ನಿಧಾನ ಮತ್ತು ದೀರ್ಘಾವಧಿಯ ಲೈಂಗಿಕ ಕ್ರೀಡೆಯೇ ಅತ್ಯುತ್ತಮ

ಅತಿ ನಿಧಾನ ಮತ್ತು ದೀರ್ಘಾವಧಿಯ ಲೈಂಗಿಕ ಕ್ರೀಡೆಯೇ ಅತ್ಯುತ್ತಮ

ಆದ್ದರಿಂದ ಮುನ್ನಲಿವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಕೆಲವು ಸಂದರ್ಭಗಳಲ್ಲಿ ಈ ಕ್ರೀಡೆಯನ್ನು ಕ್ಷಿಪ್ರವಾಗಿ ಮುಗಿಸಿ ಎರಡನೆಯ ಬಾರಿಗೆ ತಯಾರಾಗಬಹುದಾಗಿದೆ. ಈ ಅವಕಾಶವನ್ನು ಹಾಗೇ ಹೋಗಲು ಬಿಡದೇ ಮನೆಯೊಳಗಿನ ಬೇರೆ ಸ್ಥಳಗಳಲ್ಲಿ ಭಿನ್ನವಾದ ಪ್ರಯೋಗಗಳನ್ನು ಪ್ರಯತ್ನಿಸಿ.

ಇಬ್ಬರೂ ಲೈಂಗಿಕ ಮನೋಭಾವದಲ್ಲಿಯೇ ಇರುವುದು ಅವಶ್ಯ

ಇಬ್ಬರೂ ಲೈಂಗಿಕ ಮನೋಭಾವದಲ್ಲಿಯೇ ಇರುವುದು ಅವಶ್ಯ

ಒಂದು ಸಮೀಕ್ಷೆಯ ಪ್ರಕಾರ ಸುಮಾರು ಹದಿನೈದು ಶೇಖಡಾದಷ್ಟು ಸಂದರ್ಭಗಳಲ್ಲಿ ಸಂಗಾತಿಗಳಿಬ್ಬರಿಗೂ ಲೈಂಗಿಕತೆಯಲ್ಲಿ ಆಸಕ್ತಿಯೇ ಇರುವುದಿಲ್ಲ. ಹಾಗೂ ಇದು ಸಂಪೂರ್ಣವಾಗಿ ಸರಿಯಾಗಿದೆ! ಇದಕ್ಕೆ ಹಲವಾರು ಕಾರಣಗಳಿರಬಹುದು ಹಾಗೂ ಹೆಚ್ಚಿನವುಗಳನ್ನು ಅಲ್ಲಗಳೆಯುವಂತೆಯೇ ಇರುವುದಿಲ್ಲ.

ಇಬ್ಬರೂ ಲೈಂಗಿಕ ಮನೋಭಾವದಲ್ಲಿಯೇ ಇರುವುದು ಅವಶ್ಯ

ಇಬ್ಬರೂ ಲೈಂಗಿಕ ಮನೋಭಾವದಲ್ಲಿಯೇ ಇರುವುದು ಅವಶ್ಯ

ಹಾಗಾಗಿ ಇಬ್ಬರಲ್ಲಿ ಒಬ್ಬರಿಗಾದರೂ ಅಂದು ಲೈಂಗಿಕತೆಯಲ್ಲಿ ಆಸಕ್ತಿಯಿಲ್ಲದಿದ್ದರೆ ಸಂಗಾತಿ ಇವರ ಮನೋಭಾವಕ್ಕೆ ಪೂರ್ಣವಾದ ಸಹಕಾರ ನೀಡಿ ಮುಂದುವರೆಯದೇ ಇರುವ ಮೂಲಕ ಕೇವಲ ಲೈಂಗಿಕ ಜೀವನವನ್ನು ಇನ್ನಷ್ಟು ಆರೋಗ್ಯಕರವಾಗಿಸುವುದು ಮಾತ್ರವಲ್ಲ, ಪರಸ್ಪರರ ನಡುವಣ ಅನ್ಯೋನ್ಯತೆ, ವಿಶ್ವಾಸ ಹಾಗೂ ಅನುಬಂಧ ಅಪಾರವಾಗಿ ಹೆಚ್ಚುತ್ತದೆ. ಆದರೆ ಕೆಲವು ವಿಪರೀತ ಸಂದರ್ಭಗಳಲ್ಲಿ ಇಬ್ಬರಿಗೂ ಎಂದಿಗೂ ಲೈಂಗಿಕತೆಯ ಬಯಕೆಯೇ ಮೂಡದಿದ್ದರೆ ಮಾತ್ರ ಇದು ಗಂಭೀರವಾದ ಸಮಸ್ಯೆಯಾಗಿದ್ದು ಇದಕ್ಕೆ ತಜ್ಞರ ನೆರವಿನ ಅಗತ್ಯವಿದೆ.

Most Read: ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

ವಾರಕ್ಕೆ ಮೂರು ಬಾರಿಯಾದರೂ ಕೂಡಲೇಬೇಕು

ವಾರಕ್ಕೆ ಮೂರು ಬಾರಿಯಾದರೂ ಕೂಡಲೇಬೇಕು

ಸಂತೃಪ್ತ ದಾಂಪತ್ಯಕ್ಕೆ ಲೈಂಗಿಕ ಕ್ರೀಡೆ ಅವಶ್ಯವೇ ಹೊರತು ವಾರಕ್ಕಿಷ್ಟು, ದಿನಕ್ಕಿಷ್ಟು ಎಂಬ ಲೆಕ್ಕಾಚಾರದಲ್ಲಿ ಅಲ್ಲ! ದಂಪತಿಗಳಿಗೆ ಹೇಗೆ ಪರಸ್ಪರ ಇಷ್ಟವಾಗುತ್ತದೆಯೋ ಆ ಪ್ರಕಾರ ಮುಂದುವರೆಯುವುದೇ ಮುಖ್ಯವೇ ಹೊರತು ವಾರಕ್ಕಿಷ್ಟೇ ಬಾರಿ ಎಂಬ ಲೆಕ್ಕಾಚಾರ ತಪ್ಪು. ಲೈಂಗಿಕ ಕ್ರೀಡೆಯಿಂದ ಪರಸ್ಪರರ ಬಯಕೆಗಳು ಪೂರ್ಣಗೊಳ್ಳಬೇಕೇ ವಿನಃ ಯಾರೋ ಹೇಳಿದರು ಎಂದು ಇಷ್ಟವಿಲ್ಲದಿದ್ದರೂ, ಆರೋಗ್ಯವಿಲ್ಲದಿದ್ದರೂ ಮುಂದುವರೆಯುವುದು ಅಪಾಯಕರ!

ನೆನಪಿರಲಿ

ನೆನಪಿರಲಿ

ನೆಮ್ಮದಿಯ ದಾಂಪತ್ಯ ಜೀವನಕ್ಕೆ ಕೇವಲ ಮಿಲನವೊಂದೇ ಅಗತ್ಯವಲ್ಲ, ಅಪ್ಪುಗೆ, ಪರಸ್ಪರ ಕೈ ಹಿಡಿದುಕೊಳ್ಳುವುದು, ಚುಂಬನ ಮೊದಲಾದ ಆತ್ಮೀಯ ಸ್ಪರ್ಶಗಳೂ ಲೈಂಗಿಕ ಕ್ರೀಡೆಗೂ ಮಿಗಿಲಾದ ನೆಮ್ಮದಿಯನ್ನು ಒದಗಿಸುತ್ತವೆ.

ಮುಟ್ಟಿನ ದಿನದಲ್ಲಿ ಗರ್ಭ ಧರಿಸುವುದಿಲ್ಲ!

ಮುಟ್ಟಿನ ದಿನದಲ್ಲಿ ಗರ್ಭ ಧರಿಸುವುದಿಲ್ಲ!

ಇನ್ನೊಂದು ಜನಪ್ರಿಯ ಮಿಥ್ಯೆ ಎಂದರೆ ಮಾಸಿಕ ದಿನಗಳಲ್ಲಿ ಕೂಡುವುದರಿಂದ ಮಹಿಳೆಯರು ಗರ್ಭ ಧರಿಸುವುದಿಲ್ಲ ಎಂಬುದಾಗಿದೆ. ವಾಸ್ತವವಾಗಿ ಇದೊಂದು ದೊಡ್ಡ ತಪ್ಪು ನಂಬಿಕೆಯಾಗಿದೆ. ಈ ದಿನಗಳಲ್ಲಿ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ ಹಾಗೂ ಈ ದಿನಗಳಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ರಜೆ ನೀಡಬೇಕಾಗುತ್ತದೆ. ಆದರೆ ಮಹಿಳೆಯರು ಯಾವುದೇ ಸಮಯದ ಮಿಲನದಲ್ಲಿಯೂ ಗರ್ಭಧಾರಣೆಗೆ ಒಳಾಗಾಗುವ ಸಾಮರ್ಥ್ಯ ಪಡೆದಿರುತ್ತಾರೆ. ಏಕೆಂದರೆ ಮಹಿಳೆಯ ದೇಹ ಪ್ರವೇಶಿಸಿರುವ ವೀರ್ಯಾಣುಗಳು ಹೊರಬರದೇ ಸುಮಾರು ಐದು ದಿನಗಳ ಕಾಲ ಜೀವಂತವಾಗಿರುವ ಸಾಮರ್ಥ್ಯ ಹೊಂದಿರುತ್ತವೆ. ಹಾಗಾಗಿ ರಜಾದಿನಗಳ ಮಿಲನವೂ ಗರ್ಭಧಾರಣೆಗೆ ಕಾರಣವಾಗಬಹುದು.

English summary

Miss Understanding about healthy sex that we all are guilty believing

Here we bust four such myths that stop you from believing that you have a good and healthy sex life.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more