For Quick Alerts
ALLOW NOTIFICATIONS  
For Daily Alerts

ಹಸ್ತಮೈಥುನದಿಂದ ಸೌಂದರ್ಯವೃದ್ಧಿ! ಜೊತೆಗೆ ಇತರ ಆರೋಗ್ಯ ಪ್ರಯೋಜನಗಳು

|

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ 84 ಶೇಖಡಾ ಅಮೇರಿಕನ್ನರು ( 92 ಶೇಖಡಾ ಪುರುಷರು ಮತ್ತು 72 ಶೇಖಡಾ ಮಹಿಳೆಯರು) ಹಸ್ತಮೈಥುನದಲ್ಲಿ ಸುಖ ಕಂಡುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ವೈದ್ಯಕೀಯ ದಾಖಲೆಗಳ ಪ್ರಕಾರ ಸ್ವರತಿಯ ಮೂಲಕ ಮನಃತೃಪ್ತಿ ಪಡೆದುಕೊಳ್ಳುವುದು ಪ್ರತಿಯೊಬ್ಬರೂ ನಡೆಸಿಕೊಳ್ಳುವ ಕಾರ್ಯವಾಗಿದ್ದರೂ ಇದರಲ್ಲಿ ಅರ್ಧದಷ್ಟು ವ್ಯಕ್ತಿಗಳು (55 ಶೇಖಡಾ) ಈ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ. ಈ ನೈಸರ್ಗಿಕ ಕ್ರಿಯೆಗೆ ಕೆಲವು ಕಟ್ಟುಪಾಡುಗಳನ್ನು ಹಮ್ಮಿಕೊಂಡಿರುವುದು ಪ್ರಮುಖ ಕಾರಣ.

ಆದರೆ ವಾಸ್ತವವಾಗಿ ಈ ಕ್ರಿಯೆಯಿಂದ ಅಚ್ಚರಿಗೊಳಿಸುವಷ್ಟು ಆರೋಗ್ಯರಕ ಪ್ರಯೋಜನಗಳಿವೆ. ಈ ಪ್ರಯೋಜನಗಳು ಮಾನಸಿಕ ತೃಪ್ತಿ, ಉತ್ತಮಗೊಳ್ಳುವ ಸಂಬಂಧಗಳು, ತ್ವಚೆಯ ಕಾಂತಿ ಉತ್ತಮಗೊಳ್ಳುವುದು, ರಾತ್ರಿ ಸುಖಕರ ನಿದ್ದೆ ಬರುವುದು ಮೊದಲಾದ ರೂಪಗಳಲ್ಲಿದೆ. ಈ ಕ್ರಿಯೆಯ ಮೂಲಕ ಪಡೆಯಬಹುದಾದ ಏಳು ಪ್ರಮುಖ ಪ್ರಯೋಜನಗಳ ಬಗ್ಗೆ ತಜ್ಞರು ನೀಡಿರುವ ವಿವರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ..

ಇದರಿಂದ ಸೌಂದರ್ಯ ವೃದ್ಧಿಯಾಗುತ್ತದೆಯಂತೆ!

ಇದರಿಂದ ಸೌಂದರ್ಯ ವೃದ್ಧಿಯಾಗುತ್ತದೆಯಂತೆ!

ಲೈಂಗಿಕ ಕ್ರೀಡೆಯ ಬಳಿಕ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಂಡಿದ್ದೀರಾ? ಈಗ ನಿಮ್ಮ ತ್ವಚೆ ಕಾಂತಿಯುಕ್ತವಾಗಿದೆ ಎಂದೆನಿಸುತ್ತಿಲ್ಲವೇ? ಇದಕ್ಕೆ ಪ್ರಮುಖ ಕಾರಣ ಲೈಂಗಿಕ ಕ್ರೀಡೆಯ ಸಮಯದಲ್ಲಿ ಏರಿದ್ದ ನಿಮ್ಮ ಹೃದಯ ಬಡಿತ! ಹಾಗೂ ಇದರ ಬಳಿಕ ನಿಮ್ಮ ದೇಹದಿಂದ ಸ್ರವಿಸಿದ್ದ ಬೆವರು. ಈ ಕ್ರಿಯೆ ಬಹುತೇಕ ರಸದೂತಗಳಿಂದ ನಿಯಂತ್ರಿಸಲ್ಪಡುತ್ತವೆ.

ಇದರಿಂದ ಸೌಂದರ್ಯ ವೃದ್ಧಿಯಾಗುತ್ತದೆಯಂತೆ!

ಇದರಿಂದ ಸೌಂದರ್ಯ ವೃದ್ಧಿಯಾಗುತ್ತದೆಯಂತೆ!

ತಜ್ಞರ ಪ್ರಕಾರ ಹಸ್ತಮೈಥುನದಿಂದ ಕೆಲವು ಗಂಭೀರ ಸ್ವರೂಪದ ಸೌಂದರ್ಯಸಂಬಂಧಿ ಪ್ರಯೋಜನಗಳು ದೊರಕಬಹುದು. ಅಲ್ಲದೇ ಇದೇ ಪ್ರಯೋಜನವನ್ನು ಫೇಶಿಯಲ್ ವಿಧಾನದಿಂದ ಪಡೆಯಲು ಭಾರೀ ಹಣ ಖರ್ಚು ಮಾಡಬೇಕಾಗಿ ಬರುತ್ತದೆ. "ನಾವು ಲೈಂಗಿಕ ಸುಖದ ಪರಾಕಾಷ್ಠೆಯನ್ನು ಪಡೆಯುವ ಸಮಯದಲ್ಲಿ ನಮ್ಮ ದೇಹ ಹಲವಾರು ರಸದೂತಗಳನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಡೋಪಮೈನ್ ಹಾಗೂ ಆಕ್ಸಿಟೋಸಿನ್ ಪ್ರಮುಖವಾಗಿವೆ. ಇವು ಮಾನಸಿಕವಾಗಿ ಮುದ ನೀಡುವ ಜೊತೆಗೇ ತ್ವಚೆ ವಜ್ರದಂತೆ ಹೊಳೆಯುವಂತೆ ಮಾಡುತ್ತದೆ" ಎಂದು ಅವರು ವಿವರಿಸುತ್ತಾರೆ. ಹಾಗಾಗಿ ಈ ಪ್ರಯೋಜನವನ್ನು ಪಡೆಯಲು ಲೈಂಗಿಕ ಕ್ರೀಡೆಗಾಗಿ ಸಂಗಾತಿ ಲಭ್ಯವಿಲ್ಲದೇ ಹೋದರೂ ಹಸ್ತಮೈಥುನದ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು. ಇದಕ್ಕಾಗಿ ದುಬಾರಿ ಪ್ರಸಾದನಗಳನ್ನು ಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ.

Most Read:ಕದ್ದುಮುಚ್ಚಿ ಬ್ಲೂ ಫಿಲಂ ನೋಡುತ್ತಿದ್ದೀರಾ? ಹಾಗಾದರೆ ಇಂದೇ ನಿಲ್ಲಿಸಿ! ಯಾಕೆ ಗೊತ್ತೇ?

ಗಂಡ ಹೆಂಡಿರ ಸಂಬಂಧ ಉತ್ತಮಗೊಳಿಸುತ್ತದೆ

ಗಂಡ ಹೆಂಡಿರ ಸಂಬಂಧ ಉತ್ತಮಗೊಳಿಸುತ್ತದೆ

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಯೇ ಇದೆ. ಉಂಡು ಮಲಗಿದ ಬಳಿಕ ಏನಾಗುತ್ತದೆ? ಹೊದಿಕೆಯಡಿ ನಿಧಾನವಾಗಿ ಪರಸ್ಪರರಿಗೆ ಹತ್ತಿರಾಗುವ ಬಳಿಕ ನಡೆಯುವ ಕ್ರೀಡೆಯಿಂದ ದೇಹದಲ್ಲಿ ಸ್ರವಿಸುವ ರಸದೂತಗಳು ಮನೋಭಾವವನ್ನು ಉತ್ತಮಗೊಳಿಸಿ ಸುಖಭಾವನೆಯನ್ನು ನೀಡುತ್ತವೆ. ಇದರ ಜೊತೆಗೇ ಲೈಂಗಿಕ ಪರಾಕಷ್ಠೆಯ ಸಮಯದಲ್ಲಿ ಸ್ರವಿಸಿದ ಡೋಪಮೈನ್ ಮತ್ತು ಆಕ್ಸಿಟೋಸಿನ್ ರಸದೂತಗಳು ಲೈಂಗಿಕ ತೃಪ್ತಿಯನ್ನು ನೀಡುವ ಜೊತೆಗೇ ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತವೆ.

ಗಂಡ ಹೆಂಡಿರ ಸಂಬಂಧ ಉತ್ತಮಗೊಳಿಸುತ್ತದೆ

ಗಂಡ ಹೆಂಡಿರ ಸಂಬಂಧ ಉತ್ತಮಗೊಳಿಸುತ್ತದೆ

"ಈ ರಸದೂತಗಳು ನಮ್ಮಲ್ಲಿ ಶಾಂತಿಯನ್ನು ಪಡೆಯುವ ಜೊತೆಗೇ ನಮ್ಮ ಸುತ್ತಲಿನ ಜಗತ್ತಿನಲ್ಲಿಯೂ ಶಾಂತಿಯನ್ನು ಬಯಸುವ ಭಾವನೆಯನ್ನು ಪಡೆಯಲು ಈ ರಸದೂತಗಳು ನೆರವಾಗುತ್ತವೆ" ಎಂದು ತಜ್ಞರು ತಿಳಿಸುತ್ತಾರೆ. ಹಾಗಾಗಿ ದಂಪತಿಗಳ ನಡುವಣ ಲೈಂಗಿಕ ಕ್ರಿಯೆಯಷ್ಟೇ ಒಂಟಿಯಾಗಿದ್ದಾಗ ನಡೆಸುವ ಹಸ್ತಮೈಥುನವೂ "ನೈಸರ್ಗಿಕ ಕ್ಸಾನಾಕ್ಸ್ (Xanax) ನಷ್ಟೇ ಉತ್ತಮ ಪರಿಣಾಮ ಒದಗಿಸುತ್ತದೆ. ಅಲ್ಲದೇ ಈ ಪ್ರಯೋಜನಗಳನ್ನು ಪಡೆಯಲು ಸಂಗಾತಿ ಇರಲೇಬೇಕೆಂಬ ಅನಿವಾರ್ಯತೆಯೂ ಇರುವುದಿಲ್ಲ, ಇದೊಂದು ನಿಸರ್ಗ ನೀಡಿದ ಅದ್ಭುತ ಕೊಡುಗೆಯಾಗಿದ್ದು ಇದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು" ಎಂದು ಇವರು ತಿಳಿಸುತ್ತಾರೆ.

ಸುಖನಿದ್ದೆ ಪಡೆಯಲು ನೆರವಾಗುತ್ತದೆ

ಸುಖನಿದ್ದೆ ಪಡೆಯಲು ನೆರವಾಗುತ್ತದೆ

ಲೈಂಗಿಕ ಕ್ರೀಡೆಯ ಬಳಿಕ ನಿಮಗೆ ಸುಖನಿದ್ದೆಯಾವರಿಸುವುದನ್ನು ನೀವು ಗಮನಿಸಿದ್ದರೆ ಇದರಲ್ಲೇನೋ ಇದೆ ಎಂದು ನಿಮಗೆ ಖಚಿತವಾಗಿರಬಹುದು. ರಾಷ್ಟ್ರೀಯ ನಿದ್ದೆ ಸಂಸ್ಥೆ (National Sleep Foundation) ಪ್ರಕಾರ ಲೈಂಗಿಕ ಪರಾಕಾಷ್ಠೆಯನ್ನು ಪಡೆಯುವುದರಿಂದ ನಿದ್ದೆಗೆ ಸಂಬಂಧಿಸಿದ ಪ್ರಬಲ ಪ್ರಯೋಜನಗಳಿವೆ. ಇಲ್ಲೂ ಸಹಾ, ಈ ಸಮಯದಲ್ಲಿ ಬಿಡುಗಡೆಗೊಂಡ ರಸದೂತಗಳೇ ಈ ಸುಖನಿದ್ದೆಯೂ ಕಾರಣವಾಗಿವೆ. ಈ ಸಮಯದಲ್ಲಿ ಮನಸ್ಸಿಗೆ ಮುದನೀಡುವ ಆಕ್ಸಿಟೋಸಿನ್ ಲಭಿಸುವುದು ಮಾತ್ರವಲ್ಲ ಮಾನಸಿಕ ಒತ್ತಡಕ್ಕೆ ಕಾರಣವಾದ ಕಾರ್ಟಿಸೋಲ್ ಸಹಾ ಕಡಿಮೆಯಾಗುವುದು ಏಕಕಾಲದಲ್ಲಿ ನಡೆಯುವ ಕಾರಣದಿಂದಲೇ ಮನಸ್ಸು ನಿರಾಳವಾಗಿ ನಿದ್ದೆ ಆವರಿಸುತ್ತದೆ.

ಸುಖನಿದ್ದೆ ಪಡೆಯಲು ನೆರವಾಗುತ್ತದೆ

ಸುಖನಿದ್ದೆ ಪಡೆಯಲು ನೆರವಾಗುತ್ತದೆ

ಅಲ್ಲದೇ ಈ ಸಮಯದಲ್ಲಿ ಬಿಡುಗಡೆಯಾಗುವ ಪ್ರೊಲಾಕ್ಟಿನ್ ಎಂಬ ರಸದೂತವೂ ನಿರಾಳತೆ ಮತ್ತು ಸುಖನಿದ್ದೆಯನ್ನು ನೀಡುತ್ತದೆ. "ನಮ್ಮ ಮನಸ್ಸಿನ ದುಗುಡಗಳನ್ನೆಲ್ಲಾ ನಿವಾರಿಸಿ ಸುಖನಿದ್ದೆಯನ್ನು ಈ ಆಪ್ತ ಕ್ರಿಯೆಯ ಮೂಲಕ ಪಡೆದುಕೊಳ್ಳಬಹುದಾದರೆ ಇದಕ್ಕೆ ಹಿಂಜರಿಕೆ ಏಕೆ? ಪ್ರತಿ ರಾತ್ರಿಯೂ ಈ ಮೂಲಕ ಸುಖನಿದ್ದೆಯನ್ನು ಪಡೆದು ನಮ್ಮ ಜೀವನವನ್ನು ಇನ್ನಷ್ಟು ಸುಖಕರವಾಗಿ ನಡೆಸಬಾರದೇಕೆ?" ಎಂದು ತಜ್ಞರು ಪ್ರಶ್ನಿಸುತ್ತಾರೆ.

ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವುದನ್ನು ಕಡಿಮೆಗೊಳಿಸುತ್ತದೆ

ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವುದನ್ನು ಕಡಿಮೆಗೊಳಿಸುತ್ತದೆ

ವಿಜ್ಞಾನಿಗಳ ಪ್ರಕಾರ ದಿನಕ್ಕೊಂದು ಕಾಮಪರಾಕಾಷ್ಠೆ ಪಡೆಯುವ ಮೂಲಕ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ. ಈ ಜಗತ್ತಿನಲ್ಲಿ ಪ್ರತಿ ಒಂಭತ್ತು ಪುರುಷರಲ್ಲಿ ಒಬ್ಬರಿಗೆ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಕ್ಯಾನ್ಸರ್ ಆವರಿಸುತ್ತಿದೆ. ಹೌದು, 2015 ರಲ್ಲಿ ಹಾರ್ವರ್ಡ್ ವೈದ್ಯಕೀಯ ವಿದ್ಯಾಲಯ ಮತ್ತು ಬ್ರಿಂಗ್ ಹ್ಯಾಮ್ ಮಹಿಳೆಯರ ಆಸ್ಪತ್ರೆಯಲ್ಲಿ ನಡೆಸಿದ ಸಂಶೋಧನೆಗಳಲ್ಲಿ ತಿಂಗಳಿಗೆ ಸುಮಾರು 21 ಬಾರಿ ಸ್ಖಲಿಸುವ ಪುರುಷರಿಗೆ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆ 22 ಶೇಖಡಾ ಕಡಿಮೆ ಇರುತ್ತದೆ.

ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವುದನ್ನು ಕಡಿಮೆಗೊಳಿಸುತ್ತದೆ

ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವುದನ್ನು ಕಡಿಮೆಗೊಳಿಸುತ್ತದೆ

ಆದರೆ ಸಂಗಾತಿಗಳ ಮಿಲನದ ಮೂಲಕ ಪಡೆಯುವ ಸ್ಖಲನ ಈ ಸಾಧ್ಯತೆ ಎಷ್ಟು ಕಡಿಮೆಗೊಳಿಸುತ್ತದೆ ಎಂದು ಖಚಿತವಾಗಿ ಇದುವರೆಗೆ ತಿಳಿದುಬಂದಿಲ್ಲ ಎಂದು ಸಂತಾನೋತ್ಪತ್ತಿ ತಜ್ಞರು ಅಭಿಪ್ರಾಯ ಪಡುತ್ತಾರೆ. ಪುರುಷರ ವೃಷಣಗಳಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಹಾಗೇ ಇರದೇ ಕಾಲಕಾಲಕ್ಕೆ ವಿಸರ್ಜನೆಗೊಳ್ಳುತ್ತಿರಬೇಕೆಂದೇ ನಮ್ಮ ಶರೀರ ರಚನೆಗೊಂಡಿರಬೇಕು, ಹಾಗಾಗಿ ಇದನ್ನು ಸಂಗ್ರಹಗೊಳಿಸುದಕ್ಕಿಂತ ಕಾಲಕಾಲಕ್ಕೆ ವಿಸರ್ಜಿಸುವುದೇ ಆರೋಗ್ಯಕರ ಎಂದು ಇವರು ಲಿವ್ ಸ್ಟ್ರಾಂಗ್ .ಕಾಂ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸುತ್ತಾರೆ. ವಾಸ್ತವವಾಗಿ "ಇದನ್ನು ಬಳಸಿ ಇಲ್ಲದಿದ್ದರೆ ಇದು ಕೆಡುತ್ತದೆ ಎಂಬ ಸೂತ್ರದಂತಿದೆ" ಎಂದು ಅವರು ತಿಳಿಸುತ್ತಾರೆ.

 ಜೀವನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ

ಜೀವನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ

ನಿಮ್ಮ ಜೀವನದ ಮೇಲೆ ನಿಮ್ಮ ನಿಯಂತ್ರಣವನ್ನು ಬೇರೊಬ್ಬರು ಹೊಂದಿರುವ ಭಾವನೆ ನಿಮಗಾಗಿದೆಯೇ ಅಥವಾ ಇದರಿಂದ ಹೊರಬರಲು ಏನೂ ಅಥವಾ ಯಾರೂ ನೆರವಿಗೆ ಬರುತ್ತಿಲ್ಲವೇ? ಇನ್ನೊಬ್ಬರ ಜೀವನವನ್ನು, ಪರಿಸ್ಥಿತಿಯನ್ನು ಅಥವಾ ಸ್ಥಳವನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗಲಿಕ್ಕಿಲ್ಲ. ಆದರೆ ನಮ್ಮ ದೇಹದ ಮೇಲೆ ನಾವೇ ನಿಯಂತ್ರಣ ಸಾಧಿಸಲು ಸಾಧ್ಯವಾಗದಿದ್ದರೆ ಇದಕ್ಕಿಂತ ಹೀನಾಯ ಸ್ಥಿತಿ ಇನ್ನೊಂದಿರಲಾರದು. "ನಾವು ಹಲವಾರು ಒತ್ತಡಗಳ ಇಕ್ಕಟ್ಟಿನಲ್ಲಿ ಜೀವಿಸುತ್ತಿದ್ದೇವೆ ಹಾಗೂ ಕರ್ತವ್ಯಗಳ ಭಾರವನ್ನು ಹೊರುವ ಅನಿವಾರ್ಯತೆಯೂ ಇದೆ, ನಮ್ಮ ಭಾವನೆಗಳು ಮತ್ತು ದೇಹದ ಮೇಲೆ ಹತೋಟಿಯನ್ನು ಪಡೆದು ಈ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲು ಹಸ್ತಮೈಥುನ ನೆರವಾಗುತ್ತದೆ" ಎಂದು ತಜ್ಞರು ತಿಳಿಸುತ್ತಾರೆ.

Most Read:ಪುರುಷರು ಹಸ್ತಮೈಥುನ ಮಾಡಿಕೊಳ್ಳಲು ಇಷ್ಟಪಡುವುದು ಯಾಕೆ? ಇಲ್ಲಿದೆ ಎಂಟು ಕಾರಣಗಳು

 ಜೀವನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ

ಜೀವನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ

"ಈ ಶತಮಾನದಲ್ಲಿ ಜನಿಸಿದವರಿಗೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ, ಏಕೆಂದರೆ ಇತರ ಯಾವುದೇ ವಯಸ್ಸಿನ ವ್ಯಕ್ತಿಗಳಿಗಿಂತಲೂ ಇವರು ಹೆಚ್ಚು ಸ್ವರತಿ ಪಡೆಯುವವರಾಗಿದ್ದಾರೆ. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ 57 ವ್ಯಕ್ತಿಗಳು ವಾರಕ್ಕೊಮ್ಮೆಯಾದರೂ ಸ್ವರತಿ ಹೊಂದುತ್ತಾರೆ ಹಾಗೂ ಇದರಿಂದ ಇಂದಿನ ಆಧುನಿಕ ದಿನದಲ್ಲಿ ತಮ್ಮ ವೃತ್ತಿಜೀವನ ಮತ್ತು ಅಂತರ್ಜಾಲ ಡೇಟಿಂಗ್ ಮತ್ತು ಸೂಕ್ತ ಸಂಗಾತಿಯನ್ನು ಪಡೆಯಲು ನಡೆಸಬೇಕಾದ ಪರದಾಟ ಮೊದಲಾದವುಗಳನ್ನು ನಿಭಾಯಿಸಲು ಈ ಮೂಲಕ ಮಾನಸಿಕರಾಗಿ ಸನ್ನದ್ಧರಾಗಲು ನೆರವಾಗುತ್ತದೆ. ಸ್ವರತಿಯ ಮೂಲಕ ನಮ್ಮೆಲ್ಲಾ ದುಗುಡಗಳನ್ನು ಹೊರಗಿಟ್ಟು ನಮ್ಮಲ್ಲೇ ಮಾನಸಿಕ ಸಂತೃಪ್ತಿಯನ್ನು ಹಾಗೂ ನಮ್ಮಲ್ಲಿಯೇ ಸುರಕ್ಷಿತ ಸಂಬಂಧವನ್ನು ಪಡೆಯುವಂತಾಗಲು ಸಾಧ್ಯವಾಗುತ್ತದೆ" ಎಂದು ಅವರು ವಿವರಿಸುತ್ತಾರೆ.

ಅತಿಯಾದ ಆಹಾರದ ಹಸಿವನ್ನು ಅದುಮಿಡುತ್ತದೆ

ಅತಿಯಾದ ಆಹಾರದ ಹಸಿವನ್ನು ಅದುಮಿಡುತ್ತದೆ

ಯಾವುದಾದರೊಂದು ವಸ್ತುವನ್ನು ಅಗತ್ಯವುಳ್ಳ ಇನ್ನೊಬ್ಬರಿಗೆ ನೀಡಿದಾಗ ಪಡೆಯುವ ಆನಂದದ ಸಮಯದಲ್ಲಿಯೂ ಈ ಪ್ರೀತಿ ರಸದೂತವಾದ ಆಕ್ಸಿಟೋಸಿನ್ ಸ್ರವಿಸುತ್ತದೆ. ಇದು ತ್ವಚೆಯನ್ನು ಉತ್ತಮಗೊಳಿಸುವ ಜೊತೆಗೇ ಉತ್ತಮ ನಿದ್ದೆ ಪಡೆಯಲು ಹಾಗೂ ಮಾನಸಿಕ ಸಂತೃಪ್ತಿ ಪಡೆಯಲೂ ನೆರವಾಗುತ್ತದೆ. ಅಲ್ಲದೇ ಕಾಮಪರಾಕಾಷ್ಠೆಯ ಸಮಯದಲ್ಲಿ ಬಿಡುಗಡೆಯಾದ ಈ ರಸದೂತ ಹಸಿವನ್ನು ನಿಗ್ರಹಿಸಲೂ ನೆರವಾಗುತ್ತದೆ. "ಪ್ರಾಥಮಿಕವಾಗಿ ನಾವು ಮನುಷ್ಯನೆಂಬ ಪ್ರಾಣಿಗಳಾಗಿದ್ದು ಇತರ ಪ್ರಾಣಿಗಳಂತೆಯೇ ನಮಗೂ ಪ್ರಾಥಮಿಕ ಮತ್ತು ಸಹಜ ಪ್ರೇರಣೆಯ ಬದುಕುಳಿಯುವಿಕೆಯ ಅಗತ್ಯವಿದೆ.

ಅತಿಯಾದ ಆಹಾರದ ಹಸಿವನ್ನು ಅದುಮಿಡುತ್ತದೆ

ಅತಿಯಾದ ಆಹಾರದ ಹಸಿವನ್ನು ಅದುಮಿಡುತ್ತದೆ

ಈ ಅಗತ್ಯಗಳಿಲ್ಲದೆಯೂ ನಾವು ಬದುಕಬಲ್ಲೆವು ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿದ್ದಂತೆಯೇ ನಮ್ಮ ಮನಸ್ಸಿನ ಪೂರಕಭಾಗ ನಮ್ಮನ್ನು ಅತಿಮಾನವನೆಂಬ ಭಾವನೆಗೆ ದೂಡುತ್ತದೆ. ಹಾಗಾಗಿ ನೈಸರ್ಗಿಕ ಮನಸ್ಸಿನ ತೃಪ್ತಿಯನ್ನು ಪಡೆಯುವ ಲೈಂಗಿಕ ಸುಖದಿಂದ ವಂಚಿತರಾದವರು ಈ ಕೊರತೆಯನ್ನು ಬೇರೆ ವಿಷಯಗಳ ಮೂಲಕ ಪಡೆಯುತ್ತಾರೆ, ಉದಾಹರಣೆಗೆ ಅತಿಯಾಗಿ ತಿನ್ನುವ ಮೂಲಕ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಹಾಗಾದರೆ ಆಕ್ಸಿಟೋಸಿನ್ ಎಷ್ಟು ಪ್ರಬಲವಾಗಿದೆ? ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾದಾಗ ನಮಗೆ ತಿನ್ನುವ ಬಯಕೆ ಅತಿ ಕಡಿಮೆಯಾಗುತ್ತದೆ ಹಾಗೂ ಹೆಚ್ಚು ಹೆಚ್ಚು ಉತ್ಪಾದಿಸುವತ್ತ ನಮಗೆ ಪ್ರೇರಣೆ ದೊರಕುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆ (ಮತ್ತು ಸ್ವರತಿ) ಅತಿಯಾಗಿ ತಿನ್ನುವ ಚಟವನ್ನು ಬಿಡಿಸುತ್ತದೆ" ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ

 ಇದರಿಂದ ನಮ್ಮ ಲೈಂಗಿಕ ಜೀವನಕ್ಕೇನೂ ತೊಂದರೆಯಿಲ್ಲ

ಇದರಿಂದ ನಮ್ಮ ಲೈಂಗಿಕ ಜೀವನಕ್ಕೇನೂ ತೊಂದರೆಯಿಲ್ಲ

ಕೆಲವು ವ್ಯಕ್ತಿಗಳು ಹಸ್ತಮೈಥುನ ದಾಂಪತ್ಯ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ ಎಂಬ ಭಾವನೆ ಹೊಂದಿದ್ದಾರೆ. (ಇವರ ಪ್ರಕಾರ ಲೈಂಗಿಕ ಸಂಬಂಧವನ್ನು ಹಸ್ತಮೈಥುನ ಕಬಳಿಸಿಬಿಡುತ್ತದೆ). ಆದರೆ ಇದು ಹಾಗೇ ಆಗಬೇಕೆಂದೇನೂ ಇಲ್ಲ. ಇತ್ತೀಚಿನ ಒಂದು ಸಮೀಕ್ಷೆಯಲ್ಲಿ ಪುರುಷರು ಮತ್ತು ಮಹಿಳೆಯರು ಹಸ್ತಮೈಥುನವನ್ನು ನಿಯಮಿತವಾಗಿ ಪಡೆಯುತ್ತಾರಾದರೂ ತಮ್ಮ ಲೈಂಗಿಕ ಜೀವನವನ್ನು ತ್ಯಾಗ ಮಾಡಿ ಅಲ್ಲ, ಬದಲಿಗೆ ಲೈಂಗಿಕ ಜೀವನವನ್ನು ಪರಿಪೂರ್ಣವಾಗಿ ಅನುಭವಿಸಿದ ಬಳಿಕ ಹೆಚ್ಚುವರಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ದಾಂಪತ್ಯ ಸುಖವನ್ನು ಭರ್ಪೂರಿಯಾಗಿ ಅನುಭವಿಸಿದ ಬಳಿಕವೂ ತಮ್ಮದೇ ಖಾಸಗಿ ಸಮಯದಲ್ಲಿ ಸ್ವರತಿಯ ಮೂಲಕ ಸ್ವಸಂತೋಷ ಪಡೆಯಲು ಸಾಧ್ಯವಾಗುತ್ತದೆ.

English summary

Masturbation Gives You Clear Skin? Plus,Other Benefits!

According to a recent survey, 84 percent of Americans — 92 percent of men and 72 percent of women — engage in the act of masturbation. Despite the fact that almost everyone masturbates, more than half (55 percent) never talk about it. And guess what? The act of self-pleasure actually has a surprising amount of health, beauty and relationship benefits, ranging from giving you glowing skin to helping you sleep at night. In case you need a reason to masturbate
X
Desktop Bottom Promotion