Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಕಾಂಡೋಮ್ ಇಲ್ಲದೆಯೂ ಸೆಕ್ಸ್ ನಲ್ಲಿ ಭಾಗಿಯಾಗಬಹುದೇ?
ಸಂಗಾತಿಯೊಂದಿಗೆ ಮದುವೆಯಾದ ಬಳಿಕ ನೀವು ನಡೆಸುವಂತಹ ಯಾವುದೇ ರೀತಿಯ ಸೆಕ್ಸ್ ಚಟುವಟಿಕೆ ಗಳಿಂದ ಸಮಸ್ಯೆಯು ಬರುವುದಿಲ್ಲ. ಆದರೆ ಹದಿಹರೆಯದಲ್ಲಿ ಸಾಮಾನ್ಯವಾಗಿ ನಡೆಸುವಂತಹ ಲೈಂಗಿಕ ಕ್ರಿಯೆಯಿಂದಾಗಿ ನಿಮಗೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡಬಹುದು. ಯಾಕೆಂದರೆ ಈ ವೇಳೆ ನೀವು ಗರ್ಭ ಧರಿಸಿದರೆ ಅದರಿಂದ ನಿಮ್ಮ ಮುಂದಿನ ಜೀವನ ಸಮಸ್ಯೆಗಳಿಂದ ತುಂಬಿ ಹೋಗಬಹುದು. ಇನ್ನು ಒಂದು ಮಾತೆಂದರೆ ಆಗ ಹಲವಾರು ರೀತಿಯ ಲೈಂಗಿಕ ರೋಗಗಳು ಸಂಗಾತಿಯಿಂದ ಬರುವಂತಹ ಸಾಧ್ಯತೆಗಳು ಇರುವುದು. ಇದರಿಂದ ಯಾರೇ ಆಗಲಿ, ನೀವು ಸುರಕ್ಷಿತ ಸೆಕ್ಸ್ ನಲ್ಲಿ ಪಾಲ್ಗೊಳ್ಳುವುದು ಅತೀ ಅಗತ್ಯವಾಗಿರುವುದು.
ಇದಕ್ಕಾಗಿ ಹೆಚ್ಚಿನವರು ಕಾಂಡೋಮ್ ಹಾಕಿಕೊಂಡು ಸೆಕ್ಸ್ ನಲ್ಲಿ ಭಾಗಿಯಾಗುವರು. ಆದರೆ ಸೆಕ್ಸ್ ವೇಳೆ ಯಾವಾಗ ಕಾಂಡೋಮ್ ಕಡೆಗಣಿಸಬಹುದು ಎಂದು ಕೆಲವು ತಜ್ಞರು ಹೇಳುವರು. ಗರ್ಭ ಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವಂತಹ ಸಮಯದಲ್ಲಿ ದಂಪತಿಯು ಕಾಂಡೋಮ್ ನ್ನು ಬಳಸದೆ ಸೆಕ್ಸ್ ನಲ್ಲಿ ಭಾಗಿಯಾಗಬಹುದು. ಕೆಲವರು ಹೊರ ತೆಗೆಯುವ ಕ್ರಮವನ್ನು ಇನ್ನು ಕೆಲವರನ್ನು ಎರಡನ್ನು ಅನುಸರಿಸಿಕೊಂಡು ಹೋಗುವರು. ಆದರೆ ತಜ್ಞರು ಮಾತ್ರ ಇಂತಹ ಕ್ರಮಗಳ ವಿರುದ್ಧವಾಗಿದ್ದಾರೆ. ತುಂಬಾ ಜವಾಬ್ದಾರಿಯುತ ಮಾರ್ಗದಿಂದ ಮಾತ್ರ ನೀವು ಕಾಂಡೋಮ್ ಬಳಸದೆ ಸೆಕ್ಸ್ ನಲ್ಲಿ ಭಾಗಿಯಾಗಬಹುದು. ನೀವು ಕಾಂಡೋಮ್ ಧರಿಸದೆ ಸೆಕ್ಸ್ ನಲ್ಲಿ ಭಾಗಿಯಾಗಬಹುದೇ ಎಂದು ಕೇಳುತ್ತಲಿದ್ದರೆ ಆಗ ನೀವು ಈ ಕೆಳಗಿನ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ....

ನೀವು ಏಕಸಂಗಾತಿಯ ಬದ್ಧತೆಯಲ್ಲಿದ್ದೀರಾ?
ನೀವು ಹಾಗೂ ನಿಮ್ಮ ಸಂಗಾತಿಯು ಯಾವಾಗಲೂ ಏಕ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳುತ್ತಿದ್ದರೆ ಅಂದರೆ ನೀವಿಬ್ಬರು ಮಾತ್ರ ಪರಸ್ಪರ ಸೆಕ್ಸ್ ನಲ್ಲಿ ಭಾಗಿಯಾಗುತ್ತಲಿದ್ದರೆ ಆಗ ನೀವು ಲೈಂಗಿಕ ರೋಗಗಳು ಬರುವಂತಹ ಸಾಧ್ಯತೆಗಳು ತುಂಬಾ ಕಡಿಮೆ ಇರುವುದು. ಬಹು ಸಂಗಾತಿ ಜತೆಗಿನ ಸೆಕ್ಸ್ ನಿಂದಾಗಿ ಲೈಂಗಿಕ ರೋಗಗಳು ಹೆಚ್ಚು.

ಕೊನೆಯ ಸಲ ಯಾವಾಗ ಲೈಂಗಿಕ ರೋಗದ ಪರೀಕ್ಷೆ ಮಾಡಿಕೊಂಡಿದ್ದಾನೆ?
ವ್ಯಕ್ತಿಯೊಬ್ಬ ಕೊನೆಯ ಸಲ ಸೆಕ್ಸ್ ನಲ್ಲಿ ಭಾಗಿಯಾದ ಮೂರು ತಿಂಗಳ ಒಳಗಡೆ ಮಾತ್ರ ಎಚ್ ಐವಿ ಪರೀಕ್ಷೆಯು ನಿಖರವಾಗಿರುವುದು ಎಂದು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಂಗಾತಿಯು ಕೆಲವೊಂದು ಲೈಂಗಿಕ ರೋಗಗಳಾಗಿರುವಂತಹ ಕ್ಲಾಮಾಡಿಯಾ, ಗೊನೊರಿಯಾ ಮತ್ತು ಸೈಫಿಲ್ಸ್ ನ್ನು ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಅಂಡೋತ್ಪತ್ತಿ ಸಮಯ
ಋತುಚಕ್ರದ ಮಧ್ಯದ ಅವಧಿಯಲ್ಲಿ ನಿಮ್ಮ ಅಂಡೋತ್ಪತ್ತಿ ಸಮಯವು ಬರುತ್ತದೆಯಾ ಮತ್ತು ಇದು ಯಾವಾಗ ಬರುತ್ತದೆ ಎಂದು ನೀವು ಸರಿಯಾಗಿ ತಿಳಿದುಕೊಂಡರೆ ಮಾತ್ರ ಕಾಂಡೋಮ್ ಬಳಸದೆ ಸೆಕ್ಸ್ ನಲ್ಲಿ ಭಾಗಿ ಆಗಬಹುದು. ಅದಾಗ್ಯೂ, ಇದು ಕೇವಲ ಗರ್ಭಧಾರಣೆ ತಡೆಯಲು ಮಾತ್ರ ನೆರವಾಗುವುದು ಮತ್ತು ಯಾವುದೇ ರೀತಿಯ ಲೈಂಗಿಕ ರೋಗಗಳನ್ನು ತಡೆಯಲು ಇದರಿಂದ ಸಾಧ್ಯವಾಗದು.

ಯಾವುದೇ ರೀತಿಯ ಗರ್ಭ ನಿರೋಧಕ ವಿಧಾನಗಳನ್ನು ಅನುಸರಿಸುತ್ತಿದ್ದೀರಾ?
ನೀವು ಯಾವುದೇ ರೀತಿಯ ಗರ್ಭ ನಿರೋಧಕ ಮಾತ್ರೆ ಅಥವಾ ಬೇರೆ ಗರ್ಭ ನಿರೋಧಕ ವಿಧಾನ ಅನುಸರಿಸುತ್ತಿದ್ದರೆ ಆಗ ನೀವು ಕಾಂಡೋಮ್ ನ್ನು ಕಡೆಗಣಿಸಬಹುದು. ಅದಾಗ್ಯೂ, ಇಂತಹ ಗರ್ಭ ನಿರೋಧಕ ಮಾತ್ರೆಗಳು ಕೇವಲ ಗರ್ಭಧಾರಣೆ ತಡೆಯಬಹುದು. ಆದರೆ ಲೈಂಗಿಕ ರೋಗಗಳಿಂದಲ್ಲ. ನೀವು ಈ ವಿಧಾನ ಅನುಸರಿಸುತ್ತಿದ್ದರೆ, ಆಗ ನೀವು ಮೊದಲಿನ ಎರಡು ಪಶ್ನೆಗಳನ್ನು ಖಂಡಿತವಾಗಿಯೂ ಕೇಳಲೇಬೇಕು.

ಸಂಗಾತಿಯ ಮೇಲಿನ ನಂಬಿಕೆ
ಕಾಂಡೋಮ್ ನ್ನು ಬಳಸದೆ ಇದ್ದರೆ ಆಗ ಗರ್ಭಧಾರಣೆ ಸಂಭವವಿದೆ ಮತ್ತು ಇದರಿಂದ ಲೈಂಗಿಕ ರೋಗಗಳು ಕೂಡ ಕಾಣಿಸಿಕೊಳ್ಳಬಹುದು. ನಿಮ್ಮ ಎಲ್ಲಾ ಲೆಕ್ಕಾಚಾರಗಳನ್ನು ಇದು ಬುಡಮೇಲು ಮಾಡಬಹುದು. ಕಾಂಡೋಮ್ ಬಳಸದೆ ನೀವು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು ಬಯಸುವುದಾದರೆ ಆಗ ನೀವು ಸಂಗಾತಿಯನ್ನು ನಂಬುತ್ತೀರಾ ಮತ್ತು ಆತ ನಿಮಗೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯು ಬಂದರೆ ಕೈ ಹಿಡಿಯಬಲ್ಲನೇ ಎಂದು ತಿಳಿಯಿರಿ. ಯಾಕೆಂದರೆ ಇದು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಪ್ರಮುಖ ಪಾತ್ರ ವಹಿಸುವುದು. ನಿಮಗೆ ನಂಬಿಕೆ ಮತ್ತು ಪರಸ್ಪರ ಬೆಂಬಲವಿದ್ದರೆ ಆಗ ನೀವು ಸೆಕ್ಸ್ ನ್ನು ಕಾಂಡೋಮ್ ಇಲ್ಲದೆಯೂ ಆನಂದಿಸಬಹುದು.



Click it and Unblock the Notifications