For Quick Alerts
ALLOW NOTIFICATIONS  
For Daily Alerts

ತಾಜಾ ತರಕಾರಿಗಳನ್ನು ತೊಳೆಯುವ ಮುನ್ನ ಈ ಸಂಗತಿಗಳು ಗೊತ್ತಿರಲಿ

|

ತಾಜಾ ತರಕಾರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇವುಗಳ ನಿಯಮಿತ ಸೇವನೆಯಿಂದ ಲವಲವಿಕೆಯ ಆರೋಗ್ಯ ನಮ್ಮದಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ರಸ್ತೆ ಬದಿ ವ್ಯಾಪಾರಿಗಳಲ್ಲಿ, ಅಂಗಡಿಗಳಲ್ಲಿ ಅಥವಾ ತರಕಾರಿ ಮಾರುಟ್ಟೆಗಳಲ್ಲಿ ನಾವು ಸಾಮಾನ್ಯವಾಗಿ ತರಕಾರಿಗಳನ್ನು ಖರೀದಿಸುತ್ತೇವೆ. ಇನ್ನು ಅನುಕೂಲವಿದ್ದವರು ನೇರವಾಗಿ ತೋಟದಿಂದಲೇ ತರಕಾರಿಗಳನ್ನು ತರಿಸುತ್ತಾರೆ.

Vegetables

ಹೀಗೆ ಎಲ್ಲಿಂದಲೇ ತರಕಾರಿ ಅಥವಾ ಸೊಪ್ಪು ತಂದರೂ ಅವನ್ನು ಸ್ವಚ್ಛವಾಗಿ ತೊಳೆದ ನಂತರವೇ ಬಳಸಬೇಕಾಗುತ್ತದೆ. ಆದರೆ ತರಕಾರಿಗಳನ್ನು ನೀರಲ್ಲಿ ನೆನೆಸುವುದರಿಂದ ಕೆಲವಾರು ಪ್ರಯೋಜನಗಳಿವೆ. ಹಾಗೆಯೇ ಇದರಿಂದ ಕೆಲ ಅನಾನುಕೂಲತೆಗಳೂ ಇವೆ. ಯಾವ ತರಕಾರಿಗಳನ್ನು ನೆನೆಸುವುದು ಸೂಕ್ತ? ಅದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ತರಕಾರಿ ಸ್ವಚ್ಛಗೊಳಿಸುವುದು

ತರಕಾರಿ ಸ್ವಚ್ಛಗೊಳಿಸುವುದು

ತರಕಾರಿಗಳ ಮೇಲೆ ಜಮೆಯಾಗಿರುವ ಧೂಳು, ಮಣ್ಣು ಮುಂತಾದುವುಗಳನ್ನು ತೊಳೆದು ಸ್ವಚ್ಛಗೊಳಿಸಲು ಅವನ್ನು ನೀರಲ್ಲಿ ನೆನೆಸುವುದು ಸಾಮಾನ್ಯ ಸಂಗತಿಯಾಗಿದೆ. ಕಣ್ಣಿಗೆ ಕಾಣದ ಕೆಲ ಸೂಕ್ಷ್ಮ ಜೀವಾಣುಗಳು, ಬ್ಯಾಕ್ಟೀರಿಯಾಗಳು ತರಕಾರಿಗಳಿಗೆ ಅಂಟಿಕೊಂಡಿರುತ್ತವೆ. ಹೀಗಾಗಿ ಬಳಸುವ ಮುನ್ನ ತರಕಾರಿಗಳನ್ನು ತೊಳೆಯುವುದು ಅತಿ ಅಗತ್ಯವಾಗಿದೆ. ಆದರೆ ತರಕಾರಿಗಳನ್ನು ತೊಳೆಯಲು ಹಲವಾರು ವಿಧಾನಗಳಿವೆ. ಕೆಲ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಸಿಂಕ್‌ನಲ್ಲಿ ಹರಿಯುವ ನೀರಿನ ಕೆಳಗೆ ತರಕಾರಿ ತೊಳೆಯುವುದು ಉತ್ತಮ ಕ್ರಮ ಎಂದು ಹೇಳಲಾಗಿದೆ. ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿಯೇ ನೆನೆಸಿ ತೊಳೆಯುವುದಕ್ಕಿಂತ ಈ ವಿಧಾನ ಭಿನ್ನವಾಗಿದೆ. ಒಂದೇ ಪಾತ್ರೆಯಲ್ಲಿ ಎಲ್ಲ ತರಕಾರಿ ತೊಳೆಯುವುದರಿಂದ ಅದರಲ್ಲಿನ ಮಣ್ಣು, ಧೂಳು ಮತ್ತೆ ತರಕಾರಿಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಆದಾಗ್ಯೂ ಕೆಲ ಬಾರಿ ಅತಿಯಾದ ರಾಡಿ, ಮಣ್ಣು ಅಂಟಿಕೊಂಡಿದ್ದರೆ ತರಕಾರಿಗಳನ್ನು ಪಾತ್ರೆಯಲ್ಲಿ ಹಾಕಿ ಉಜ್ಜಿ ತೊಳೆಯಬೇಕಾಗುತ್ತದೆ. ಹೀಗೆ ಮಾಡಿದ ನಂತರವೂ ಹರಿಯುವ ನೀರಲ್ಲಿ ತರಕಾರಿಗಳನ್ನು ತೊಳೆದು ಬಳಸುವುದು ಸೂಕ್ತವಾಗಿದೆ.

Most Read: ಬಂಗುಡೆ ಮೀನು ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು

ತರಕಾರಿಗಳನ್ನು ತಾಜಾಗೊಳಿಸುವುದು

ತರಕಾರಿಗಳನ್ನು ತಾಜಾಗೊಳಿಸುವುದು

ಕೆಲ ಬಾರಿ ತರಕಾರಿ ಹಾಗೂ ಸೊಪ್ಪು ಬಹು ಬೇಗನೆ ಬಾಡಿದಂತಾಗಿ ತಾಜಾತನ ಕಳೆದುಕೊಂಡು ಬಿಡುತ್ತವೆ. ಅದರಲ್ಲೂ ಹಸಿರು ಸೊಪ್ಪಿನ ತರಕಾರಿಗಳು ಬೇಸಿಗೆ ಕಾಲದಲ್ಲಿ ಬೇಗನೆ ಬಾಡುತ್ತವೆ. ಇದನ್ನು ತಡೆಯಲು ತರಕಾರಿ, ಸೊಪ್ಪು ಅಥವಾ ಹಣ್ಣುಗಳನ್ನು ತಂದ ತಕ್ಷಣ ಅವನ್ನು ನೀರಲ್ಲಿ ನೆನೆಸಿ ನೀರು ಆರಿದ ನಂತರವೇ ಫ್ರಿಜ್‌ನಲ್ಲಿ ಇಡಬೇಕು. ಇದರಿಂದ ತರಕಾರಿಗಳು ಬಹಳ ಕಾಲ ತಾಜಾತನ ಉಳಿಸಿಕೊಳ್ಳುತ್ತವೆ. ಹಸಿ ಸೊಪ್ಪನ್ನು ಬಳಸುವ ಮುನ್ನ ನೀರಲ್ಲಿ ಹಾಕಿದರೆ ಅವು ಮತ್ತೆ ತಾಜಾತನ ಪಡೆದುಕೊಳ್ಳುತ್ತವೆ.

Most Read: ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದೇ?

ವಿಟಮಿನ್‌ಗಳ ಹಾಳಾಗುವಿಕೆ

ವಿಟಮಿನ್‌ಗಳ ಹಾಳಾಗುವಿಕೆ

ತರಕಾರಿಗಳನ್ನು ತೊಳೆಯುವುದರಿಂದ ಕೆಲ ಬಾರಿ ಅವುಗಳಲ್ಲಿನ ವಿಟಮಿನ್, ಪ್ರೋಟೀನ್‌ಗಳು ಹಾಳಾಗುವ ಸಾಧ್ಯತೆ ಇರುತ್ತದೆ. ವಿಟಮಿನ್ ಸಿ ಹಾಗೂ ವಿಟಮಿನ್ ಬಿ ಅಂಶಗಳು ಬಹು ಬೇಗನೆ ನೀರಲ್ಲಿ ಕರಗುವುದರಿಂದ ತರಕಾರಿಗಳಲ್ಲಿನ ಈ ಪೋಷಕಾಂಶಗಳು ಹಾಳಾಗಬಹುದು. ಹೀಗಾಗದಂತೆ ಎಚ್ಚರ ವಹಿಸುವುದು ಅಗತ್ಯ. ನೀರಿನಲ್ಲಿ ಕರಗುವ ಈ ವಿಟಮಿನ್‌ಗಳು ನಮ್ಮ ದೇಹದಲ್ಲಿ ಶೇಖರಣೆ ಆಗಿರುವುದಿಲ್ಲವಾದ್ದರಿಂದ ಈ ಅಂಶಗಳನ್ನು ನಾವು ನಿತ್ಯದ ಆಹಾರದಿಂದಲೇ ಪಡೆದುಕೊಳ್ಳಬೇಕಾಗುತ್ತದೆ.

ತರಕಾರಿಯ ಪರಿಮಳದ ಮೇಲೆ ಪರಿಣಾಮ

ತರಕಾರಿಯ ಪರಿಮಳದ ಮೇಲೆ ಪರಿಣಾಮ

ತರಕಾರಿಗಳನ್ನು ನೆನೆಸಿದಾಗ ಅವು ಕೆಲ ಮಟ್ಟಿನ ತೇವಾಂಶವನ್ನು ಹೀರಿಕೊಳ್ಳುತ್ತವೆ. ಈರುಳ್ಳಿ ಹಾಗೂ ಇನ್ನಿತರ ಕೆಲ ತರಕಾರಿಗಳು ಈ ರೀತಿ ನೀರು ಹೀರಿಕೊಂಡು ಮತ್ತಷ್ಟು ಉತ್ತಮವಾಗುತ್ತವೆ. ಆದರೆ ಮಶ್ರೂಮ್ ಅಥವಾ ಇನ್ನೂ ಕೆಲ ತರಕಾರಿಗಳನ್ನು ನೀರಲ್ಲಿ ಹಾಕಿದಾಗ ಅವು ಪರಿಮಳ ಕಳೆದುಕೊಂಡು ಪೇಲವವಾಗುತ್ತವೆ. ಕ್ಯಾಬೇಜ್ ಅಥವಾ ಈರುಳ್ಳಿ ತರದ ಗಾಢ ವಾಸನೆ ಇರುವ ತರಕಾರಿ ಮತ್ತು ಸೊಪ್ಪುಗಳನ್ನು ನೆನೆಸಿ ತೊಳೆಯುವುದು ಸೂಕ್ತ.

ತರಕಾರಿಯ ಪರಿಮಳದ ಮೇಲೆ ಪರಿಣಾಮ

ತರಕಾರಿಯ ಪರಿಮಳದ ಮೇಲೆ ಪರಿಣಾಮ

ಆದರೆ ಕೊತ್ತಂಬರಿ ಸೊಪ್ಪು, ಹೆಚ್ಚಿದ ಕ್ಯಾರೆಟ್ ಮತ್ತು ಮಶ್ರೂಮ್‌ಗಳನ್ನು ಹರಿಯುವ ನೀರಲ್ಲಿಯೇ ತೊಳೆಯಬೇಕು. ಕೋಣೆಯ ಉಷ್ಣತೆಗಿಂತ ಒಂಚೂರು ಹೆಚ್ಚು ಬೆಚ್ಚಗಿನ ನೀರಲ್ಲಿ ತರಕಾರಿ ತೊಳೆಯುವುದು ಸರಿಯಾದ ಕ್ರಮವಾಗಿದೆ. ಇದರಿಂದ ತರಕಾರಿ ಅಥವಾ ಸೊಪ್ಪು ನೀರನ್ನು ಹೀರಿಕೊಳ್ಳುವುದಿಲ್ಲ ಹಾಗೂ ಬ್ಯಾಕ್ಟೀರಿಯಾಗಳು ತೊಡೆದು ಹಾಕಲ್ಪಡುತ್ತವೆ.

English summary

Is washing Raw Fresh Vegetables in Water Good or Bad?

Raw vegetables, fresh from the garden, market or grocery store, all require a good cleaning before they can be prepared or eaten. Soaking raw vegetables has some benefits as well as some downsides. Choosing what to do depends on the which vegetable you are cleaning, as well as its overall condition.
Story first published: Saturday, December 8, 2018, 12:30 [IST]
X
Desktop Bottom Promotion