For Quick Alerts
ALLOW NOTIFICATIONS  
For Daily Alerts

ಮಧ್ಯಾಹ್ನ ನಿದ್ರಿಸುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ? ಆಯುರ್ವೇದ ಏನು ಹೇಳುತ್ತದೆ?

|

ಬಹಳಷ್ಟು ಜನರಿಗೆ ಮಧ್ಯಾಹ್ನ ಒಂದು ಸಣ್ಣ ನಿದ್ದೆ ಮಾಡದಿದ್ದರೆ ಸಮಾಧಾನವಾಗುವುದಿಲ್ಲ. ಮಧ್ಯಾಹ್ನ ನಿದ್ರಿಸುವುದು ಇವರಿಗೆ ಅಭ್ಯಾಸವೇ ಆಗಿ ಹೋಗಿರುತ್ತದೆ. ಆದರೆ ಮಧ್ಯಾಹ್ನ ನಿದ್ರೆ ಬರಲು ಕಾರಣಗಳಾದರೂ ಏನು ಎಂಬುದನ್ನು ನೀವು ಯಾವತ್ತಾದರೂ ಚಿಂತಿಸಿದ್ದೀರಾ? ರಾತ್ರಿ ಸರಿಯಾಗಿ ನಿದ್ದೆ ಬಾರದ ಕಾರಣ ಅದನ್ನು ಹಗಲು ನಿದ್ರೆಯಿಂದ ಸಮತೋಲನ ಮಾಡುತ್ತೇವಾ? ಅಥವಾ ಮತ್ತೇನಾದರೂ ಕಾರಣಗಳಿವೆಯಾ?

Is Sleeping During The Day Good Or Bad According To Ayurveda?

ಇಷ್ಟಕ್ಕೂ ಮಧ್ಯಾಹ್ನ ಮಲಗುವುದು ಆರೋಗ್ಯಕ್ಕೆ ಎಷ್ಟು ಹಿತಕಾರಿ? ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ? ಈ ಎಲ್ಲ ವಿಷಯಗಳಿಗೆ ಈ ಅಂಕಣದಲ್ಲಿ ಸಮಗ್ರವಾಗಿ ಮಾಹಿತಿ ನೀಡಲಾಗಿದ್ದು ನೀವೂ ಓದಿ ತಿಳಿದುಕೊಳ್ಳಿ.

ಮಧ್ಯಾಹ್ನ ಮಲಗುವುದು

ಮಧ್ಯಾಹ್ನ ಮಲಗುವುದು

ಮಧ್ಯಾಹ್ನ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವರ ಅಭಿಪ್ರಾಯವಾದರೆ, ಇದು ಆರೋಗ್ಯಕ್ಕೆ ಕೆಟ್ಟದ್ದು ಎಂಬುದು ಹಲವರ ತಿಳುವಳಿಕೆಯಾಗಿದೆ. ಆದರೆ ಆಯುರ್ವೇದದಲ್ಲಿ ಮಧ್ಯಾಹ್ನದ ನಿದ್ರೆಯ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದ್ದು, ಇದರಿಂದ ಆರೋಗ್ಯದ ಮೇಲಾಗುವ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳೆರಡರ ಬಗ್ಗೆಯೂ ವಿವರಿಸಲಾಗಿದೆ.

Most Read: ಯಾವ ರೀತಿ ಮಲಗುವ ಭಂಗಿ ಆರೋಗ್ಯಕ್ಕೆ ಉತ್ತಮವಾದದ್ದು?

ದೇಹದ ಮೇಲೆ ವಾತ, ಪಿತ್ತ, ಕಫಗಳ ಪರಿಣಾಮ

ದೇಹದ ಮೇಲೆ ವಾತ, ಪಿತ್ತ, ಕಫಗಳ ಪರಿಣಾಮ

ಆಯುರ್ವೇದದ ಪ್ರಕಾರ ದಿನನಿತ್ಯ ನಮ್ಮ ದೇಹವು ಪ್ರತಿ ನಾಲ್ಕು ತಾಸುಗಳ ಅಂತರದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ಚಕ್ರದಲ್ಲಿ ಸಾಗುತ್ತದೆ. ಪ್ರತಿಯೊಂದು ಅವಧಿಯೂ ಆಯಾ ದೋಷದ ಪರಿಣಾಮಕ್ಕೊಳಪಟ್ಟು ನೈಸರ್ಗಿಕವಾಗಿ ನಮ್ಮ ದೇಹವು ಚೈತನ್ಯ ಪಡೆದು ದಿನವಿಡೀ ನಮ್ಮನ್ನು ಚೈತನ್ಯದಾಯಕವಾಗಿ ಮಾಡುತ್ತದೆ.

ಬೆಳಗ್ಗೆ 6 ರಿಂದ 10 ರವರೆಗಿನ ಅವಧಿಯು ಕಫ ದೋಷ ಅವಧಿ

ಬೆಳಗ್ಗೆ 6 ರಿಂದ 10 ರವರೆಗಿನ ಅವಧಿಯು ಕಫ ದೋಷ ಅವಧಿ

ಬೆಳಗ್ಗೆ 6 ರಿಂದ 10 ರವರೆಗಿನ ಅವಧಿಯು ಕಫ ದೋಷ ಅವಧಿಯಾಗಿದ್ದು, ಈ ಸಮಯದಲ್ಲಿ ಸಾಮಾನ್ಯವಾಗಿ ದೇಹವು ಉಲ್ಲಸಿತವಾಗಿರುತ್ತದೆ. ಈ ಅವಧಿಯಲ್ಲಿ ದೈಹಿಕ ಕಸರತ್ತು, ಯೋಗ ಮುಂತಾದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಈ ಸಮಯದಲ್ಲಿ ಮಲಗಿಯೇ ಇದ್ದರೆ ದೇಹದ ಕೆಲ ಅಂಗಗಳು ಸೂಕ್ತವಾಗಿ ಕೆಲಸ ಮಾಡದೆ ದಿನವಿಡೀ ಆಲಸ್ಯ ಆವರಿಸಿದಂತಾಗುತ್ತದೆ. ಆಯುರ್ವೇದದ ಶಾಸ್ತ್ರದಲ್ಲಿ ಹೇಳಿದಂತೆ ಮಧ್ಯಾಹ್ನದ ಊಟ ಪ್ರಧಾನವಾಗಿದ್ದು, ಬೆಳಗಿನ ಟಿಫಿನ್ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಬೆಳಗಿನ ತಿಂಡಿ ಹೆಚ್ಚಾದಲ್ಲಿ ನಿದ್ರಾಲಸ್ಯ ಆವರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗಿನ ಅವಧಿಯನ್ನು ಪಿತ್ತ ಚಟುವಟಿಕೆಯ ಕಾಲ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಜಠರಾಗ್ನಿ ಕ್ರಿಯಾಶೀಲಗೊಂಡು ಸೇವಿಸಿದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ. ಹೀಗಾಗಿಯೇ ಮಧ್ಯಾಹ್ನದ ಊಟವನ್ನು ದಿನದ ಪ್ರಮುಖ ಊಟ ಎಂದು ತಿಳಿಸಲಾಗಿದೆ. ಈ ಅವಧಿಯಲ್ಲಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಿ ದಿನವಿಡೀ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಈ ಸಮಯದಲ್ಲಿ ಆಹಾರ ಜೀರ್ಣಗೊಳಿಸಲು ದೇಹವು ನೈಸರ್ಗಿಕವಾಗಿಯೇ ಸಿದ್ಧವಾಗಿರುವುದರಿಂದ ಈ ಅವಧಿಯಲ್ಲಿ ಹೆಚ್ಚಿನ ದೈಹಿಕ ಕಸರತ್ತು ಮಾಡುವ ಅವಶ್ಯಕತೆ ಇರುವುದಿಲ್ಲ.

Most Read: ಮಲಗುವ ಭಂಗಿ ಹೇಗಿರಬೇಕು? ಸರಿಯಾದ ಕ್ರಮ ಯಾವುದು?

ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ

ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ

ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ನಮ್ಮ ದೇಹದ ಮೇಲೆ ವಾತ ಗುಣದ ಹಿಡಿತ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತಿದ್ದು, ಇಡೀ ಅವಧಿಯಲ್ಲಿ ನಾವು ಕ್ರಿಯಾಶೀಲರಾಗಿರುತ್ತೇವೆ. ಆದರೆ ಈ ಅವಧಿಯಲ್ಲಿ ನಿದ್ರೆ ಆವರಿಸುವ ಸಾಧ್ಯತೆಯೂ ಇರುತ್ತದೆ. ಈ ಸಮಯದಲ್ಲಿ ನಮಗೆ ಖುಷಿ ಹಾಗೂ ನೆಮ್ಮದಿಯನ್ನು ನೀಡುವ ಕೆಲಸಗಳನ್ನು ಹೆಚ್ಚಾಗಿ ಮಾಡಬೇಕು.

ಮಧ್ಯಾಹ್ನದ ನಿದ್ರೆ ಸರಿಯಲ್ಲ

ಮಧ್ಯಾಹ್ನದ ನಿದ್ರೆ ಸರಿಯಲ್ಲ

ಆಯುರ್ವೇದದ ಪ್ರಕಾರ ಮಧ್ಯಾಹ್ನ ನಿದ್ರಿಸುವುದು ಸರಿಯಲ್ಲ. ಮಧ್ಯಾಹ್ನದ ನಿದ್ರೆಯಿಂದ ಕಫ ಮತ್ತು ವಾತ ಎರಡರ ಮಧ್ಯೆ ಸಮತೋಲ ತಪ್ಪಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂದು ಹೇಳಲಾಗಿದೆ. ಆದರೂ ಆರೋಗ್ಯವಂತ ಹಾಗೂ ದೃಢಕಾಯರಾದ ವ್ಯಕ್ತಿಗಳು ಬೇಸಿಗೆ ಕಾಲದಲ್ಲಿ ಮಾತ್ರ ಮಧ್ಯಾಹ್ನ ಕೆಲ ಹೊತ್ತು ನಿದ್ರಿಸಬಹುದು ಎಂದು ಆಯುರ್ವೇದ ಹೇಳುತ್ತದೆ. ಬೇಸಿಗೆಯಲ್ಲಿ ರಾತ್ರಿಗಳು ಚಿಕ್ಕವಾಗಿರುವುದರಿಂದ ನಿದ್ರೆಯ ಸಮತೋಲನ ಸಾಧಿಸಲು ಮತ್ತು ಬೇಸಿಗೆಯ ಬೇಗೆಯಿಂದ ದೇಹದ ನಿರ್ಜಲೀಕರಣ ತಡೆಯಲು ಕೆಲ ಹೊತ್ತು ಮಧ್ಯಾಹ್ನ ಮಲಗಬಹುದಾಗಿದೆ.

Most Read: ತಲೆದಿಂಬು ಇಲ್ಲದೇ ಮಲಗಿ, ಆರೋಗ್ಯ ವೃದ್ಧಿಸಿಕೊಳ್ಳಿ

ಮಧ್ಯಾಹ್ನದ ನಿದ್ರೆ ಯಾರಿಗೆ ಸೂಕ್ತ? ಯಾರಿಗೆ ಸೂಕ್ತವಲ್ಲ?

ಮಧ್ಯಾಹ್ನದ ನಿದ್ರೆ ಯಾರಿಗೆ ಸೂಕ್ತ? ಯಾರಿಗೆ ಸೂಕ್ತವಲ್ಲ?

ಯಾವೆಲ್ಲ ರೀತಿಯ ಆರೋಗ್ಯ ಹೊಂದಿದ ವ್ಯಕ್ತಿಗಳು ಮಧ್ಯಾಹ್ನ ಮಲಗಬಹುದು ಹಾಗೂ ಯಾರು ಮಧ್ಯಾಹ್ನ ಮಲಗಬಾರದು ಎಂಬ ಬಗ್ಗೆ ಆಯುರ್ವೇದದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದ್ದು, ಆ ಪಟ್ಟಿ ಈ ಕೆಳಗಿನಂತಿದೆ:

ಇಂಥವರು ಮಧ್ಯಾಹ್ನ ನಿದ್ರಿಸಕೂಡದು

ಇಂಥವರು ಮಧ್ಯಾಹ್ನ ನಿದ್ರಿಸಕೂಡದು

ಅತಿಯಾದ ಬೊಜ್ಜು ಇರುವವರು

ತೂಕ ಕಳೆದುಕೊಳ್ಳಲು ವ್ಯಾಯಾಮ ಮಾಡುತ್ತಿರುವವರು

ಡಯಾಬಿಟೀಸ್ ಇರುವವರು

ಅತಿಯಾದ ಎಣ್ಣೆಯುಕ್ತ ಆಹಾರ ಸೇವಿಸುವವರು

ಮಧ್ಯಾಹ್ನ ಮಲಗುವಿಕೆಯ ದುಷ್ಪರಿಣಾಮಗಳು

ಮಧ್ಯಾಹ್ನ ಮಲಗುವಿಕೆಯ ದುಷ್ಪರಿಣಾಮಗಳು

ಕೆಲ ರೀತಿಯ ಆರೋಗ್ಯ ಹೊಂದಿದ ವ್ಯಕ್ತಿಗಳು ಮಧ್ಯಾಹ್ನ ಯಾಕೆ ಮಲಗಬಾರದು ಎಂಬುದಕ್ಕೆ ನಿರ್ದಿಷ್ಟ ಕಾರಣಗಳಿವೆ. ಮಧ್ಯಾಹ್ನದ ನಿದ್ರೆಯಿಂದ ಯಾವೆಲ್ಲ ಕೆಟ್ಟ ಪರಿಣಾಮಗಳುಂಟಾಗುತ್ತವೆ ಎಂಬ ಪಟ್ಟಿ ಇಲ್ಲಿದೆ ನೋಡಿ...

*ಶೀತ ಉಲ್ಬಣಿಸಬಹುದು

*ಬೊಜ್ಜು ಹೆಚ್ಚಾಗುವ ಸಾಧ್ಯತೆ

*ಗಂಟಲು ಸಂಬಂಧಿ ರೋಗ ಬರಬಹುದು

*ವಾಕರಿಕೆಯ ಭಾವನೆ ಹೆಚ್ಚಾಗುವುದು

*ಚರ್ಮ ಸಂಬಂಧಿ ರೋಗ ಬರಬಹುದು

*ದೇಹ ಬಾವು ಬರಬಹುದು

*ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು

*ಕೆಲ ಜ್ಞಾನೇಂದ್ರಿಯಗಳ ಶಕ್ತಿ ಕುಂದುವ ಸಾಧ್ಯತೆ

ವಿವೇಚನೆಯಿಂದ ನೀವೇ ನಿರ್ಧರಿಸಿ

ವಿವೇಚನೆಯಿಂದ ನೀವೇ ನಿರ್ಧರಿಸಿ

ಮಧ್ಯಾಹ್ನ ಮಲಗುವುದನ್ನು ಆಯುರ್ವೇದದಲ್ಲಿ ಒಪ್ಪಲಾಗಿದೆಯಾದರೂ ಅದರ ನಿಯಮಗಳ ಪ್ರಕಾರ ಮಧ್ಯಾಹ್ನದ ನಿದ್ರೆ ನಿಮಗೆ ಎಷ್ಟು ಸೂಕ್ತ ಎಂಬುದನ್ನು ನೀವೇ ನಿರ್ಧರಿಸಬೇಕು. ಮಧ್ಯಾಹ್ನದ ಒಂದು ಚಿಕ್ಕ ನಿದ್ರೆ ನಿಮಗೆ ಉಪಯುಕ್ತವಾ ಅಥವಾ ಅದರಿಂದ ಸಮಸ್ಯೆಗಳುಂಟಾಗಬಹುದಾ ಎಂಬುದನ್ನು ವಿವೇಚನೆಯಿಂದ ನಿರ್ಧರಿಸಿ ಆಮೇಲೆ ನಿದ್ರಿಸಿ.

English summary

Is Sleeping During The Day Good Or Bad According To Ayurveda?

There are a lot of people who just cannot do without an afternoon siesta, and eventually, it becomes a habit for them. But have you ever wondered why you feel so sleepy during the afternoon? Is it because of lack of sleep during the night that you wish to complete your sleep by taking a nap during daytime? Is it good for your health? A few people say that sleeping during day time is good for the human body, while others say it’s not. Ayurveda has answers to all these questions along with the benefits and side effects of taking a nap during the day
X
Desktop Bottom Promotion