For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದೇ?

|

ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಆಗ ನೀವು ಯಾವಾಗ ತಿನ್ನುತ್ತೀರಿ ಎನ್ನುವ ಜತೆಗೆ ಏನು ತಿನ್ನುತ್ತೀರಿ ಎನ್ನುವುದು ಕೂಡ ಮುಖ್ಯವಾಗಿರುವುದು. ಆಹಾರದ ಸಂಯೋನೆ ಮತ್ತು ಸಮಯವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಪೋಷಕಾಂಶಗಳ ಹೀರುವಿಕೆ ಮತ್ತು ಇತರ ಕೆಲವೊಂದು ವಿಚಾರಗಳ ಕಡೆ ಕೂಡ ಗಮನಹರಿಸಬೇಕಾಗುತ್ತದೆ. ಆಹಾರ ಕ್ರಮವೆನ್ನುವುದು ತುಂಬಾ ಶ್ರಮದಾಯಕವಾಗಿರುವ ಕೆಲಸವಾಗಿದೆ. ಯಾಕೆಂದರೆ ಇದರಲ್ಲಿ ನೀವು ದೇಹಕ್ಕೆ ಬೇಕಾಗಿರುವಂತ ಆಹಾರವನ್ನು ಸರಿಯಾದ ಪ್ರಮಾಣ ಹಾಗೂ ಕ್ರಮದಲ್ಲಿ ತಿನ್ನುವುದು ಅತೀ ಅಗತ್ಯವಾಗಿರುವುದು. ಇದರಿಂದ ದೇಹವು ಸರಿಯಾದ ಕ್ರಮದಲ್ಲಿ ಕೆಲಸ ಮಾಡಲು ಸಾಧ್ಯ.

ಆದರೆ ನಾವು ಆಲೋಚಿಸಿರುವಂತೆ ಹಾಲನ್ನು ರಾತ್ರಿ ಮಲಗುವ ಮೊದಲು ಸೇವನೆ ಮಾಡುವುದು ಆರೋಗ್ಯಕಾರಿಯಲ್ಲವೆಂದು ಪರಿಗಣಿಸಲಾಗಿದೆ. ಹಾಲನ್ನು ಹಿಂದಿನಿಂದಲೂ ಒಂದು ಸಂಪೂರ್ಣ ಊಟವೆಂದು ಪರಿಗಣಿಸಲಾಗಿದೆ ಮತ್ತು ಆದರೆ ಮಲಗುವ ಮೊದಲು ಇದನ್ನು ಸೇವನೆ ಮಾಡಿದರೆ ಜೀರ್ಣಕ್ರಿಯೆಯು ನಿಧಾನವಾಗುವುದು ಮತ್ತು ಕೆಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡಬಹುದು. ರಾತ್ರಿ ಊಟದ ಬಳಿಕ ನೀವು ಮತ್ತೊಂದು ಸಲ ಊಟ ಮಾಡಬಾರದಂತೆ.

milk

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಸೇವನೆ ಮಾಡಬಹುದೇ ಎನ್ನುವ ಪ್ರಶ್ನೆಯು ನಿಮ್ಮನ್ನು ಕಾಡುವುದು. ಕೆಲವು ಜನರು ಒಂದು ಲೋಟ ಹಾಲು ಅಥವಾ ಕೋಲ್ಡ್ ಕಾಫಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವರು. ಆದರೆ ಇದು ಸರಿಯಾಗಿರುವಂತಹ ಕ್ರಮವೇ? ಖಾಲಿ ಹೊಟ್ಟೆಯಲ್ಲಿ ಹಾಲು ಸೇವನೆ ಮಾಡುವುದನ್ನು ನೀವು ಕಡೆಗಣಿಸಬೇಕು. ಇದರಿಂದ ಆಗುವಂತಹ ಕೆಲವೊಂದು ಸಮಸ್ಯೆಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಜ್ಞರೇ ಉತ್ತರ ನೀಡಲಿದ್ದಾರೆ.

milk

ಹೆಚ್ಚಿನವರಿಗೆ ಹಾಲು ಮೊದಲ ಆಹಾರ

ಹಾಲು ಒಂದು ಸಂಪೂರ್ಣ ಊಟವೆಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕವಾಗಿ ಹೆಚ್ಚಿನವರು ಒಂದು ಲೋಟ ಹಾಲಿನೊಂದಿಗೆ ದಿನದ ಆರಂಭ ಮಾಡುವರು. ಲ್ಯಾಕ್ಟೋಸ್ ಅಸಹಿಷ್ಣುತೆ ಇಲ್ಲದೆ ಇರುವಂತಹ ವ್ಯಕ್ತಿಗಳು ದಿನಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ದೇಹಕ್ಕೆ ಸಿಗಲು ದಿನದ ಆರಂಭವನ್ನು ಒಂದು ಲೋಟ ಹಾಲಿನೊಂದಿಗೆ ಮಾಡುವರು. ನಿಮಗೆ ಯಾವುದೇ ರೀತಿಯ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಅಥವಾ ಲ್ಯಾಕ್ಟೋಸ್ ಅಸಹಿಷ್ಣುತೆ ಇಲ್ಲದೆ ಇದ್ದರೆ ಆಗ ನೀವು ಒಂದು ಲೋಟ ಹಾಲನ್ನು ಬೆಳಗ್ಗೆ ಕುಡಿದರೆ ಯಾವುದೇ ಸಮಸ್ಯೆಯಾಗದು ಎಂದು ಪೋಷಕಾಂಶ ತಜ್ಞರು ಹೇಳುತ್ತಾರೆ.

Most Read: ಸಪಾಟಾದ ಹೊಟ್ಟೆ ಪಡೆಯಲು ಕೇವಲ 14 ದಿನ ಎಳೆನೀರು ಸೇವಿಸಿ ಸಾಕು!

ಇದು ಮೊದಲ ಆಹಾರವಾಗಿ ಒಳ್ಳೆಯದಲ್ಲ

ದಿನದ ಮೊದಲ ಆಹಾರವಾಗಿ ನಾನು ಹಾಲನ್ನು ಯಾವತ್ತೂ ಸೂಚಿಸುವುದಿಲ್ಲ. ಲಿಂಬೆನೀರು ಅಥವಾ ಆ್ಯಪಲ್ ಸೀಡರ್ ವಿನೇಗರ್ ದಿನವನ್ನು ಉತ್ತಮವಾಗಿ ಆರಂಭಿಸಲು ಅತ್ಯುತ್ತಮವಾದ ವಿಧಾನವಾಗಿದೆ. ಇದರ ಬಳಿಕ ನೀವು ಹಾಲನ್ನು ಸೀರಲ್ ಅಥವಾ ಬೇರೆ ಯಾವುದರ ಜತೆಗೂ ಸೇವಿಸಬಹುದು. ನನ್ನ ಅಭಿಪ್ರಾಯದ ಪ್ರಕಾರ, ನಿಮ್ಮ ಹೊಟ್ಟೆಯು ಖಾಲಿಯಾಗಿದ್ದರೆ ಆಗ ನೀವು ದೇಹವನ್ನು ಶುದ್ಧೀಕರಿಸುವಂತಹ ಯಾವುದಾದರೂ ಲಘು ಆಹಾರ ಸೇವನೆ ಮಾಡುವುದು ಅತೀ ಅಗತ್ಯವಾಗಿದೆ. ಮಜ್ಜಿಗೆ ಅಥವಾ ಬೇರೆ ಹುದುಗು ಬಂದಿರುವಂತಹ ಆಹಾರವು ಕರಗಲು ತುಂಬಾ ಒಳ್ಳೆಯದು ಎಂದು ಮೈಕ್ರೋಬಯೋಟಿಕ್ ನ್ಯೂಟ್ರಿಷನಿಸ್ಟ್ ಆ್ಯಂಡ್ ಹೆಲ್ತ್ ಪ್ರಾಕ್ಟೀಸನರ್ ಶಿಲ್ಪಾ ಅರೋರಾ ಎನ್ ಡಿ ಅವರು ತಿಳಿಸುತ್ತಾರೆ.

milk

ಆಯುರ್ವೇದದ ಪ್ರಕಾರ

ಪ್ರತಿಯೊಬ್ಬರು ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸಬಾರದು. ನಿಮ್ಮ ದೇಹ ಪ್ರಕೃತಿಯು ಯಾವ ರೀತಿ ಇದೆ ಎಂದು ತಿಳಿದು ಹಾಲನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ನಿಮ್ಮ ದೇಹವು ವಾತ ಅಥವಾ ಕಫದಿಂದ ಕೂಡಿದ್ದರೆ ಆಗ ನೀವು ಖಾಲಿ ಹೊಟ್ಟೆಯಲ್ಲಿ ಯಾವತ್ತೂ ಹಾಲನ್ನು ಸೇವಿಸಬೇಡಿ. ಇದು ಕೆಮ್ಮು ಮತ್ತು ಜ್ವರಕ್ಕೆ ಕಾರಣವಾಗಬಹುದು. ಇದರಿಂದ ದಿನದಲ್ಲಿ ಮೊದಲ ಆಹಾರವಾಗಿ ಇದನ್ನು ಸೇವಿಸಬಾರದು. ಹೆಚ್ಚಿನ ವಾಯು ಸಮಸ್ಯೆಯನ್ನು ಹೊಂದಿರುವಂತಹ ವ್ಯಕ್ತಿಗಳು ತಣ್ಣಗಿನ ಹಾಲನ್ನು ಕುಡಿಯಬೇಕು.

ಯಾಕೆಂದರೆ ಇದರಲ್ಲಿನ ಕ್ಯಾಲ್ಸಿಯಂ ಆಮ್ಲದೊಂದಿಗೆ ಮಿಶ್ರಣಗೊಂಡು ಉಪ್ಪಾಗಿ ಪರಿವರ್ತನೆಯಾಗುವುದು ಮತ್ತು ಇದು ಹೆಚ್ಚಿನ ಅಸಿಡಿಟಿ ನಿವಾರಣೆ ಮಾಡುವುದು. ವಾತ ಇರುವಂತಹ ವ್ಯಕ್ತಿಗಳು ದಿನದ ಬೇರೆ ಸಮಯದಲ್ಲಿ ಹಾಲನ್ನು ಕುಡಿಯಬಹುದು ಮತ್ತು ಹಾಲಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.

Most Read: ಮೊಟ್ಟೆ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆಯೇ?

ವಿಭಿನ್ನ ದೇಹ ಪ್ರಕೃತಿಯು ಹಾಲಿಗೆ ಬೇರೆ ಬೇರೆ ರೀತಿಯಿಂದ ಪ್ರತಿಕ್ರಿಯಿಸುತ್ತದೆ. ಅಲರ್ಜಿ ಹೊಂದಿರುವಂತಹ ವ್ಯಕ್ತಿಗಳು ಹಾಲನ್ನು ಕುಡಿಯುವ ವೇಳೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ನಿಮ್ಮ ದೇಹಕ್ಕೆ ಏನು ಬೇಕೋ ಅದರಂತೆ ನೀವು ಆಹಾರ ಸೇವನೆ ಮಾಡಬೇಕು. ನಿಮ್ಮ ದೇಹದ ಮಾತನ್ನು ಕೇಳಿ. ಖಾಲಿ ಹೊಟ್ಟೆಯಲ್ಲಿ ಏನಾದರೂ ಸೇವಿಸಿದರೆ ಅದರಿಂದ ದೇಹಕ್ಕೆ ಶಕ್ತಿ ದೊರಕಿದರೆ ಖಂಡಿತವಾಗಿಯೂ ನೀವು ಅದನ್ನು ಸೇವಿಸಿ. ಇಲ್ಲವಾದರೆ ನೀವು ಅದನ್ನು ಬಿಟ್ಟುಬಿಡಬೇಕು ಎಂದು ದತ್ತಾ ಸಲಹೆ ನೀಡುತ್ತಾರೆ.

English summary

Is it good to drink milk on an empty stomach?

"Milk is a meal in itself and consuming it just before turning in may slow down the digestion process and cause gastric problems for some people. It is like having another meal post dinner," noted a Delhi-based weight management expert Anshul Jaibharat. Given this fact, should you rather have milk first thing in morning? Most of us, quickly gulp down a glass full of milk or a cold coffee on our way out before eating anything else.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more