For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಒಂದಲ್ಲ, ಎರಡು ಮೊಟ್ಟೆ ತಿನ್ನಬೇಕಂತೆ! ಇದರಿಂದ ಬರೋಬ್ಬರಿ 8 ಆರೋಗ್ಯ ಲಾಭಗಳಿವೆ

|

ಇತ್ತೀಚಿನ ಅಧ್ಯಯನವೊಂದು ದಿನಕ್ಕೆರಡು ಮೊಟ್ಟೆಗಳನ್ನು ಸೇವಿಸುವ ಮೂಲಕ ಕೆಲವು ಪ್ರಯೋಜನಗಳಿವೆ ಎಂದು ತಿಳಿಸಿದೆ. ಎರಡು ಮೊಟ್ಟೆಗಳಲ್ಲಿರುವ ಒಟ್ಟಾರೆ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ದೇಹಕ್ಕೆ ಹೆಚ್ಚಿನ ಚೈತನ್ಯ ಒದಗಿಸುತ್ತವೆ. ಒಂದು ಮಧ್ಯಮ ಗಾತ್ರದ ಮೊಟ್ಟೆಯ ಹಳದಿ ಭಾಗದಲ್ಲಿ 185 ರಿಂದ 215 ಮಿಲಿಗ್ರಾಂನಷ್ಟು ಕೊಲೆಸ್ಟ್ರಾಲ್ ಇರುತ್ತದೆ.

ಒಂದು ವೇಳೆ ನಿಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL ಅಥವಾ low density lipoprotein) ನೂರು ಮಿಲಿಗ್ರಾಂಗಿತಲೂ ಹೆಚ್ಚಿದ್ದರೆ ಅಥವಾ ಈಗಾಗಲೇ ನಿಮಗೆ ಹೃದಯ ಸಂಬಂಧಿ ರೋಗದ ಸಾಧ್ಯತೆಯನ್ನು ವೈದ್ಯರು ಈಗಾಗಲೇ ಪರೀಕ್ಷೆಗಳ ಮೂಲಕ ಖಚಿತಪಡಿಸಿದ್ದರೆ ನಿಮಗೆ ದಿನಕ್ಕೆ ಇನ್ನೂರು ಮಿಲಿಗ್ರಾಂ ನಷ್ಟು ಪ್ರಮಾಣವಿರುವ ಆಹಾರವನ್ನು ಗರಿಷ್ಟ ಪ್ರಮಾಣದಲ್ಲಿ ಸೇವಿಸಲು ಸಾಧ್ಯ. ಎರಡು ದೊಡ್ಡ ಗಾತ್ರದ ಮೊಟ್ಟೆಗಳ ಸೇವನೆಯಿಂದ ದೇಹಕ್ಕೆ ಹದಿಮೂರು ಗ್ರಾಂ ಪ್ರೋಟೀನ್, 9.5 ಗ್ರಾಂ ಕೊಬ್ಬು, 56 ಮಿಲಿಗ್ರಾಂ ಕ್ಯಾಲ್ಸಿಯಂ ಹಾಗೂ 1.8 ಮಿಲಿಗ್ರಾಂ ನಷ್ಟು ಕಬ್ಬಿಣ ದೊರಕುತ್ತದೆ.

ಕೋಳಿಮೊಟ್ಟೆ ಮಾತ್ರವಲ್ಲ, ಹಂಸ ಹಾಗೂ ಬಾತುಕೋಳಿಗಳ ಮೊಟ್ಟೆಗಳಲ್ಲಿಯೂ ಪ್ರೋಟೀನ್ ಅಧಿಕ ಪ್ರಮಾಣದಲ್ಲಿದೆ ಹಾಗೂ ಇವು ಸಹಾ ಆರೋಗ್ಯಕರವಾಗಿವೆ. ಆದರೆ ಮೊಟ್ಟೆಯಲ್ಲಿರುವ ಬಿಳಿ ಭಾಗದಲ್ಲಿರುವ ಪೋಷಕಾಂಶಗಳೂ ಹಳದಿ ಭಾಗದಲ್ಲಿರುವ ಪೋಷಕಾಂಶಗಳೂ ಬೇರೆ ಬೇರೆಯಾಗಿರುತ್ತವೆ ಎಂದು ನಿಮಗೆ ಗೊತ್ತಿತ್ತೇ? ಬನ್ನಿ, ದಿನಕ್ಕೆರಡು ಮೊಟ್ಟೆಗಳನ್ನು ಸೇವಿಸುವುದು ಆರೋಗ್ಯಕರವೇ ಅಲ್ಲವೇ ಎಂಬುದನ್ನು ಅರಿಯೋಣ:
1. ಮೆದುಳು ಕೋಲೈನ್ ಎಂಬ ಕಣದ ಇರುವಿಕೆಯ ಮೂಲಕ ಹೆಚ್ಚಿನ ರಕ್ಷಣೆ ಪಡೆಯುತ್ತದೆ
2. ಮೊಟ್ಟೆಯಲ್ಲಿರುವ ವಿಟಮಿನ್ ಡಿ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳುವಂತೆ ಮಾಡುತ್ತದೆ.
3. ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ
4. ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆ ತಗ್ಗುತ್ತದೆ.
5. ತೂಕ ಇಳಿಸಲು ನೆರವಾಗುತ್ತದೆ.
6. ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.
7. ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ತಗ್ಗುತ್ತದೆ
8. ಫಲವತ್ತತೆಯನ್ನು ಹೆಚ್ಚಿಸುತ್ತದೆ.

1.ಮೆದುಳು ಕೋಲೈನ್ ಎಂಬ ಕಣದ ಇರುವಿಕೆಯ ಮೂಲಕ ಹೆಚ್ಚಿನ ರಕ್ಷಣೆ ಪಡೆಯುತ್ತದೆ

1.ಮೆದುಳು ಕೋಲೈನ್ ಎಂಬ ಕಣದ ಇರುವಿಕೆಯ ಮೂಲಕ ಹೆಚ್ಚಿನ ರಕ್ಷಣೆ ಪಡೆಯುತ್ತದೆ

ಮೆದುಳಿನ ಜೀವಕೋಶಗಳಲ್ಲಿ ಕೋಲೈನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿದ್ದಷ್ಟೂ ಇವುಗಳ ಮೂಲಕ ಫಾಸ್ಪೋಲಿಪಿಡ್ಸ್ ಗಳೆಂಬ ಮೇಧಸ್ಸುಗಳು ಸಾಮಾನ್ಯ ಸಂವಹನ ನಡೆಸುವುದು ಸುಲಭವಾಗುತ್ತದೆ. ವಾಸ್ತವವಾಗಿ ಮೆದುಳಿನ ಜೀವಕೋಶಗಳು ಈ ಕೋಲೈನ್ ಎಂಬ ಪೋಷಕಾಂಶದಿಂದಲೇ ನಿರ್ಮಿಸಲ್ಪಟ್ಟಿದೆ. ದಿನಕ್ಕೆರದು ಮೊಟ್ಟೆಗಳನ್ನು ಸೇವಿಸುವ ಮೂಲಕ ಉತ್ತಮ ಪ್ರಮಾಣದ ಕೋಲೈನ್ ಲಭಿಸುತ್ತದೆ. ಯಾವಾಗ ಈ ಪೋಷಕಾಂಶ ಕಡಿಮೆಯಾಯಿತೋ ಆಗ ಸ್ಮರಣಶಕ್ತಿ ಕುಂದುವುದು, ಮರೆಗುಳಿತನ ಮೊದಲಾದವು ಆವರಿಸುತ್ತವೆ.

2.ಮೊಟ್ಟೆಯಲ್ಲಿರುವ ವಿಟಮಿನ್ ಡಿ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳುವಂತೆ ಮಾಡುತ್ತದೆ

2.ಮೊಟ್ಟೆಯಲ್ಲಿರುವ ವಿಟಮಿನ್ ಡಿ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳುವಂತೆ ಮಾಡುತ್ತದೆ

ಬೇಯಿಸಿದ ಮೊಟ್ಟೆ ಅಥವ ಮೀನಿನ ಎಣ್ಣೆಯ ಪೂರಕ ಔಷಧಿ? ಸಾಮಾನ್ಯವಾಗಿ ನಾವೆಲ್ಲರೂ ಬೇಯಿಸಿದ ಮೊಟ್ಟೆಯನ್ನೇ ಬಯಸುತ್ತೇವೆ ಅಲ್ಲವೇ, ಮೊಟ್ಟೆಗಳಲ್ಲಿ ವಿಟಮಿನ್ ಡಿ ಉತ್ತಮ ಪ್ರಮಾಣದಲ್ಲಿದ್ದು ಆಹಾರದ ಮೂಲಕ ಲಭಿಸಿದ ಕ್ಯಾಲ್ಸಿಯಂ ಅನ್ನು ಮೂಳೆ ಮತ್ತು ಹಲ್ಲುಗಳು ಹೀರಿಕೊಂಡು ಗಟ್ಟಿಕೊಳ್ಳಲು ನೆರವಾಗುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳಲಿಕ್ಕೂ ವಿಟಮಿನ್ನ್ ಡಿ ಗೂ ಏನು ಸಂಬಂಧ? ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು ಇದನ್ನು ನಮ್ಮ ಕರುಳುಗಳು ನೇರವಾಗಿ

ಹೀರಿಕೊಳ್ಳಲಾರವು. ಆದರೆ ವಿಟಮಿನ್ ಡಿಯಲ್ಲಿರುವ ಫಾಸ್ಪೇಟ್ ಮತ್ತು ಮೆಗ್ನೀಶಿಯಂ ಅಯಾನುಗಳು ಕ್ಯಾಲ್ಸಿಯಂ ಕಣಗಳೊಂದಿಗೆ ಅಂಟಿಕೊಂಡು ಕರುಳಿನಲ್ಲಿ ಹೀರಲ್ಪಡಲು ನೆರವಾಗುತ್ತದೆ.

3. ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ

3. ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ

ಹೊಸದಾಗಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ಕೋಳಿಮೊಟ್ಟೆಗಳಲ್ಲಿ ಲ್ಯೂಟಿನ್ ಎಂಬ ಪೋಷಕಾಂಶವಿದ್ದು ಇದು ಕಣ್ಣಿನ ದೃಷ್ಟಿ ಉತ್ತಮಗೊಳ್ಳಲು ನೆರವಾಗುತ್ತದೆ. ಇದೊಂದು ಕ್ಯಾರೋಟಿನಾಯ್ಡ್ ವಿಟಮಿನ್ ಆಗಿದ್ದು ಕಣ್ಣಿಗೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕಣ್ಣುಗಳಲ್ಲಿ ಪೊರೆ ಅಥವಾ ಕ್ಯಾಟರಾಕ್ಟ್ ಮೂಡುವುದು ಹಾಗೂ ವಯಸ್ಸಿನ ಪ್ರಭಾವದಿಂದ ಶಿಥಿಲವಾಗುವ ಕಣ್ಣುಗಳ ಸ್ನಾಯುಗಳು (macular degeneration) ಮೊದಲಾದವುಗಳನ್ನು ತಡವಾಗಿಸುವ ಮೂಲಕ

ಕಣ್ಣುಗಳ ಆರೋಗ್ಯ ಉತ್ತಮವಾಗಿಯೇ ಇರಲು ನೆರವಾಗುತ್ತದೆ. ಲ್ಯೂಟಿನ್ ಕೊರತೆಯಿಂದ ದೃಷ್ಟಿಮಾಂದ್ಯತೆ ಹಾಗೂ ಸರಿಪಡಿಸಲಾಗದಂತಹ ಇನ್ನೂ ಕೆಲವು ಕಣ್ಣಿನ ತೊಂದರೆಗಳು ಎದುರಾಗಬಹುದು.

4. ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆ ತಗ್ಗುತ್ತದೆ

4. ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆ ತಗ್ಗುತ್ತದೆ

ಇನ್ನೊಂದು ಹೊಸ ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಮೊಟ್ಟೆಗಳಲ್ಲಿ ಸಂತುಲಿತ ಪ್ರಮಾಣದ ಫಾಸ್ಪಟೈಡ್ ಗಳು ಲಭ್ಯವಿದ್ದು ಇವು ಆರೋಗ್ಯಕ್ಕೆ ಹಾನಿ ಎಸಗುವುದಿಲ್ಲ, ಬದಲಿಗೆ ದೇಹ ತಾನೇ ಉತ್ಪಾದಿಸಿಕೊಳ್ಳುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ರಕ್ತದಲ್ಲಿರುವ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

5. ತೂಕ ಇಳಿಸಲು ನೆರವಾಗುತ್ತದೆ

5. ತೂಕ ಇಳಿಸಲು ನೆರವಾಗುತ್ತದೆ

ವಿಜ್ಞಾನಿಗಳ ಪ್ರಕಾರ, ಉಪಾಹಾರದಲ್ಲಿ ಕಡಿಮೆ ಕ್ಯಾಲೋರಿಗಳಿರುವ ಹಾಗೂ ಮೊಟ್ಟೆಯನ್ನು ಒಳಗೊಂಡ ಆಹಾರವನ್ನು ಸೇವಿಸುವ ಮೂಲಕ ಶೀಘ್ರವೇ ತೂಕ ಇಳಿಸಲು ಸಾಧ್ಯವಾಗುತ್ತದೆ. ಈ ಬಗೆಯ ಉಪಾಹಾರ ಹೊಟ್ಟೆಯನ್ನು ಹೆಚ್ಚಿನ ಹೊತ್ತಿನವರೆಗೆ ತುಂಬಿರುವ ಭಾವನೆಯನ್ನು ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

6.ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ

6.ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ

ದಿನಕ್ಕೆರಡು ಮೊಟ್ಟೆಗಳನ್ನು ಸೇವಿಸುವ ಮೂಲಕ ಆರೋಗ್ಯಕರ, ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಮೊಟ್ಟೆಯಲ್ಲಿರುವ ಬಯೋಟಿನ್, ವಿಟಮಿನ್ ಬಿ12, ಹಾಗೂ ಜೀರ್ಣವಾಗುವ ಪ್ರೋಟಿನುಗಳು ಕೂದಲು ಹಾಗೂ ತ್ವಚೆಯ ಜೀವಕೋಶಗಳನ್ನು ಇನ್ನಷ್ಟು ದೃಢಗೊಳಿಸುತ್ತದೆ. ಅಲ್ಲದೇ ಮೊಟ್ಟೆಯಲ್ಲಿರುವ ಫಾಸ್ಪೋಲಿಪಿಡ್ ಗಳು ಯಕೃತ್ ನಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ

7. ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ತಗ್ಗುತ್ತದೆ

7. ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ತಗ್ಗುತ್ತದೆ

ದಿನಕ್ಕೆರಡು ಮೊಟ್ಟೆಗಳ ಸೇವನೆ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ ಎಂದು ಒಂದು ಅಧ್ಯಯನ ತಿಳಿಸಿದೆ. ಮಹಿಳೆಯರು ದಿನಕ್ಕೆರಡು ಮೊಟ್ಟೆಗಳನ್ನು ಉಪಾಹಾರದಲ್ಲಿ ಸೇವಿಸುವ ಮೂಲಕ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ 18 % ತಗ್ಗುತ್ತದೆ. ಇದಕ್ಕೆ ಮೊಟ್ಟೆಯಲ್ಲಿರುವ ಕೋಲೈನ್ ಎಂಬ ಪೋಷಕಾಂಶವೇ ಕಾರಣವಾಗಿದೆ ಹಾಗೂ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುವಲ್ಲಿ 24ಶೇಖಡಾದಷ್ಟು ಪಾತ್ರ ವಹಿಸುತ್ತದೆ.

8.ಫಲವತ್ತತೆಯನ್ನು ಹೆಚ್ಚಿಸುತ್ತದೆ

8.ಫಲವತ್ತತೆಯನ್ನು ಹೆಚ್ಚಿಸುತ್ತದೆ

ಮೊಟ್ಟೆಯಲ್ಲಿರುವ ವಿಟಮಿನ್ ಬಿ ದೇಹದಲ್ಲಿ ಫಲವತ್ತತೆಯ ರಸದೂತಗಳನ್ನು ಉತ್ಪಾದಿಸುವಲ್ಲಿ ನೆರವಾಗುತ್ತದೆ. ವಿಟಮಿನ್ ಬಿ9 ಅಥವಾ ಫೋಲಿಕ್ ಆಮ್ಲ ರಕ್ತದಲ್ಲಿರುವ ಕೆಂಪು ರಕ್ತಕಣಗಳ ಹಾಗೂ ಗರ್ಭದಲ್ಲಿರುವ ಶಿಶುವಿನ ಮೆದುಳುಬಳ್ಳಿಯ ಉತ್ಪಾದನೆಗೆ ಪ್ರಮುಖವಾಗಿ ಬಳಕೆಯಾಗುತ್ತದೆ. ಆಹಾರದಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲದ ಲಭ್ಯತೆ ಹುಟ್ಟುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಗರ್ಭಧರಿಸಲು ಯತ್ನಿಸುತ್ತಿರುವ ಮಹಿಳೆಯರು ನಿತ್ಯವೂ ಎರಡು ಮೊಟ್ಟೆಗಳನ್ನು ಸೇವಿಸುವುದು ಅಗತ್ಯ. ಒಂದು ಮೊಟ್ಟೆಯಲ್ಲಿ ಸುಮಾರು 7.0 ನಷ್ಟು ಫೋಲಿಕ್ ಆಮ್ಲವಿರುತ್ತದೆ. ಈ ಲೇಖನ ನಿಮಗೆ ಉಪಯುಕ್ತವೆಂದು ಕಂಡುಬಂದರೆ ಇದರ ಕೊಂಡಿಯನ್ನು ನಿಮ್ಮ ಕುಟುಂಬವರ್ಗ, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಹಂಚಿಕೊಂಡು ಅವರೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲು ನೆರವಾಗಿ.

English summary

Is Eating 2 Eggs A Day Good Or Bad?

Recent studies have shown the benefits of eating 2 eggs a day. It turns out that the reason is the eggs offer you a nutrition-packed deal to gain protein and other vital nutrients. A medium-sized egg yolk contains between 185 and 215 mg of cholesterol.If your LDL (bad) cholesterol level is more than 100 mg, or if you have been diagnosed with a heart disease, you should only eat 200 mg cholesterol a day. Two large eggs will provide your body with 13 grams protein, 9.5 grams fat, 56 mg of calcium, and 1.8 mg of iron.
X
Desktop Bottom Promotion