For Quick Alerts
ALLOW NOTIFICATIONS  
For Daily Alerts

  ಒಂದೇ ವಾರದಲ್ಲಿ 'ಮೊಣಕಾಲು ನೋವು' ಕಡಿಮೆಗೊಳಿಸುವ ಮನೆಮದ್ದುಗಳು

  By Arshad
  |

  ನಮ್ಮೆಲ್ಲರಿಗೂ ಜೀವನದ ಒಂದು ಹಂತದಲ್ಲಿ ವೈದ್ಯಕೀಯ ಪರಿಕರಗಳ ಅಗತ್ಯ ಬೇಕೇ ಬೇಕಾಗುತ್ತದೆ. ನಿರಂತರ ಬದಲಾವಣೆಗೆ ಒಳಪಡುವ ನಮ್ಮ ಶರೀರ ವಯಸ್ಸಾದಂತೆ ಶಿಥಿಲವಾಗುತ್ತಾ ಹೋಗುತ್ತದೆ. ಸಾಮಾನ್ಯ ಜೀವನ ನಡೆಸಲು ಕೆಲವು ಪರಿಕರಗಳು ಅನಿವಾರ್ಯವಾಗುತ್ತವೆ. ಕನ್ನಡಕ, ಕಾಂಟಾಕ್ಟ್ ಲೆನ್ಸ್ ಮೊದಲಾದ ಸರಳ ಉಪಕರಣಗಳು ನಿತ್ಯದ ಅವಶ್ಯಕತೆಯಾಗುತ್ತವೆ. ನಡುವಯಸ್ಸು ದಾಟಿದ ಬಳಿಕ ಎದುರಾಗುವ ಮೊಣಕಾಲಗಂಟಿನ ನೋವು ಅಥವಾ ಸೊಂಟದ ಮೂಳೆಯ ಸವೆತ ಹೆಚ್ಚಾದರೆ ಈ ಗಂಟುಗಳನ್ನು ಬದಲಿಸುವ ಕಾರ್ಯಗಳನ್ನೂ ನಡೆಸಬೇಕಾಗುತ್ತದೆ. ಸಾಮಾನ್ಯವಾಗಿ ನಲವತ್ತು ದಾಟಿದ ಬಳಿಕ ಹೆಚ್ಚಿನ ಜನರು ಅಲ್ಪಪ್ರಮಾಣದಿಂದ ಹಿಡಿದು ಭಾರೀ ಪ್ರಮಾಣದ ಮೊಣಗಂಟಿನ ನೋವಿನಿಂದ ಬಳಲಲು ತೊಡಗುತ್ತಾರೆ. ವಯಸ್ಸು ಮುಂದುವರೆಯುತ್ತಿದ್ದಂತೆಯೇ ಈ ನೋವು ಸಹಾ ಉಲ್ಬಣಗೊಳ್ಳುತ್ತಾ ಸಾಗುತ್ತದೆ. ಒಂದು ಹಂತದಲ್ಲಿ ಈ ನೋವು ಸಹಿಸಲಸಾಧ್ಯವಾಗುತ್ತದೆ ಹಾಗೂ ನಡೆದಾಡುವಿಕೆಯನ್ನೇ ಪ್ರತಿಬಂಧಿಸುತ್ತದೆ.

  ಮೊಣಗಂಟಿನ ಅಥವಾ ಮೊಣಕಾಲು ನೋವು ಎದುರಾಗಲು ಕೆಲವಾರು ಕಾರಣಗಳಿವೆ. ಓಡುವಾಗ ಅಥವಾ ನಡೆಯುವಾಗ ಎದುರಾಗಿದ್ದ ಉಳುಕು, ಸ್ನಾಯುಗಳ ನೋವು ಮೊದಲಾದವು. ಆದರೆ ಸಂಧಿವಾತ ಈ ನೋವಿಗೆ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾರಣವಾಗಿದೆ. ಈ ನೋವನ್ನು ಅಲಕ್ಷಿಸಕೂಡದು ಹಾಗೂ ಉಲ್ಬಣಗೊಳ್ಳುವ ಮುನ್ನವೇ ವೈದ್ಯಕೀಯ ನೆರವು ಪಡೆದುಕೊಳ್ಳುವ ಮೂಲಕ ಶೀಘ್ರವಾಗಿ ಚೇತರಿಸಿಕೊಳ್ಳಬಹುದು. ಆದರೆ ಅಲ್ಪಪ್ರಮಾಣದಲ್ಲಿದ್ದರೆ ಇದನ್ನು ಕೆಲವು ಮನೆಮದ್ದುಗಳ ಮೂಲಕ ಸಮರ್ಥವಾಗಿ ನಿವಾರಿಸಿ ಹಿಂದಿನ ಆರೋಗ್ಯವನ್ನು ಪಡೆದುಕೊಳ್ಳಬಹುದು.

  ಆದರೆ, ಮೊಣಗಂಟಿನ ನೋವಿಗೆ ಯಾವುದೇ ಚಿಕಿತ್ಸೆ ನಡೆಸುವ ಮೊದಲು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಹಾಗೂ ವೈದ್ಯರ ಸಲಹೆಯನ್ನು ಪಡೆದೇ ಮುಂದುವರೆಯಬೇಕು. ಏಕೆಂದರೆ ಚಿಕಿತ್ಸೆಗೆ ಬಳಸುವ ಯಾವುದೇ ಸಾಮಾಗ್ರಿ ನಿಮ್ಮ ಚರ್ಮಕ್ಕೆ ಅಲರ್ಜಿಕಾರಕವಾಗಿರಬಹುದು ಹಾಗೂ ಕೆಲವೊಮ್ಮೆ ಗಂಭೀರವಾದ ತೊಂದರೆ ಪ್ರಾರಂಭಿಕ ಹಂತದಲ್ಲಿದ್ದು ಈಗತಾನೇ ನೋವು ಪ್ರಾರಂಭವಾಗಿರಬಹುದು. ಸೂಕ್ತ ಪರೀಕ್ಷೆಗಳ ಮೂಲಕ ವೈದ್ಯರು ಈ ಕಾರಣವನ್ನು ಕಂಡುಕೊಂಡು ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವೇ? ಮೊಣಗಂಟಿನ ಚಿಪ್ಪನ್ನು ಬದಲಿಸಬೇಕಾಗಬಹುದೇ ಎಂಬುದನ್ನು ನಿರ್ಧರಿಸುತ್ತಾರೆ.

  ಒಂದು ವೇಳೆ ನೋವು ಅಲ್ಪಪ್ರಮಾಣದಲ್ಲಿದ್ದು ಇದಕ್ಕೆ ಕೊಂಚವೇ ಉಲ್ಬಣಗೊಂಡಿರುವ ಸಂಧಿವಾತ ಕಾರಣವಾಗಿದ್ದರೆ ಅಥವಾ ಇತ್ತೀಚಿನ ಗಾಯ ಅಥವಾ ಪೆಟ್ಟಿನಿಂದಾಗಿ ಈ ನೋವು ಎದುರಾಗಿದ್ದರೆ ಈ ಮನೆಮದ್ದುಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಹಾಗೂ ಇನ್ನಷ್ಟು ಉಲ್ಬಣಗೊಳ್ಳುವುದರಿಂದ ತಪ್ಪಿಸಿ ಮೊಣಗಂಟು ನೋವನ್ನು ಪೂರ್ಣವಾಗಿ ಇಲ್ಲವಾಗಿಸಲು ನೆರವಾಗುತ್ತವೆ. ಬನ್ನಿ, ಈ ನಿಟ್ಟಿನಲ್ಲಿ ಲಭ್ಯವಿರುವ ಕೆಲವು ಪರ್ಯಾಯ ಚಿಕಿತ್ಸೆಗಳ ಬಗ್ಗೆ ಅರಿಯೋಣ:

  ತಾಯ್ಚಿ

  ತಾಯ್ಚಿ

  ಮೊಣಗಂಟಿನ ನೋವನ್ನು ಕಡಿಮೆ ಮಾಡಲು ದೇಹದ ಸಮತೋಲನ ಹಾಗೂ ಬಾಗುವಿಕೆಯನ್ನು ಉತ್ತಮಗೊಳಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಪುರಾತನ ಚೀನೀ ವಿಧಾನವೊಂದು ಪ್ರಚಲಿತದಲ್ಲಿದ್ದು ಸಂಧಿವಾತದ ನೋವನ್ನು ಶೀಘ್ರವೇ ಕಡಿಮೆ ಮಾಡುತ್ತದೆ. researchers of Arthritis and Rheumatism ಎಂಬ ಒಂದು ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡಂತೆ ಈ ವಿಧಾನ ಮೂಳೆಗಳಲ್ಲಿ ಗಾಳಿಗುಳ್ಳೆ ತುಂಬಿ ಶಿಥಿಲವಾಗಿರುವ ಓಸ್ಟಿಯೋಪೋರೋಸಿಸ್ ಎಂಬ ತೊಂದರೆಯಿಂದ ನರಳುವ ವ್ಯಕ್ತಿಗಳಿಗೆ ಹೆಚ್ಚಿನ ಫಲ ನೀಡುತ್ತದೆ. ಈ ವಿಧಾನ ನೋವನ್ನು ಕಡಿಮೆಗೊಳಿಸುತ್ತದೆ ಹಾಗೂ ಮೂಳೆಗಳನ್ನು ಇನ್ನಷ್ಟು ಹೆಚ್ಚು ಸೆಳೆಯಲು ನೆರವಾಗುತ್ತವೆ. ಈ ವಿಧಾನದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ವ್ಯಾಯಮವನ್ನು ನಡೆಸಬೇಕಾಗುತ್ತದೆ ಹಾಗೂ ಒಂದು ನಿಯಮವನ್ನು ಕಡ್ಡಾಯವಾಗಿ ಪಾಲಿ಼ಸಬೇಕಾಗುತ್ತದೆ.

  ಬಿಸಿ ಮತ್ತು ತಣ್ಣನೆಯ ಚಿಕಿತ್ಸಾ ವಿಧಾನ

  ಬಿಸಿ ಮತ್ತು ತಣ್ಣನೆಯ ಚಿಕಿತ್ಸಾ ವಿಧಾನ

  ಸಣ್ಣ ಮತ್ತು ಮಧ್ಯಮ ಪ್ರಾಬಲ್ಯದ ಸಂಧಿವಾತವನ್ನು ಗುಣಪಡಿಸಲು ಹಲವಾರು ವರ್ಷಗಳಿಂದ ವೈದ್ಯರು ಈ ವಿಧಾನವನ್ನು ಅನುಸರಿಸುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ಮೊಣಗಂಟು ಎದುರಾದ ವ್ಯಕ್ತಿಗಳು ನೋವು ಉಲ್ಬಣಗೊಳ್ಳುವ ಭಯದಿಂದ ತಮ್ಮ ಚಲನವಲನವನ್ನೇ ಕನಿಷ್ಟಗೊಳಿಸಿರುತ್ತಾರೆ. ಆದರೆ ಹೀಗೆ ಚಾಲನರಹಿತರಾಗಿರುವುದು ಮೂಳೆಗಂಟುಗಳು ಬಿರುಸಾಗಲು ಕಾರಣವಾಗುತ್ತವೆ. ಈ ಪರಿ ಈಗಾಗಲೇ ಎದುರಾಗಿದ್ದರೆ ಮೊಣಕಾಲ ಮೇಲೆ ಬಿಸಿಯಾಗಿರುವ ದಿಂಬೊಂದನ್ನು (ಬಿಸಿನೀರು ತುಂಬಿದ ಅಥವಾ ಬಿಸಿಮಾಡಿದ ಉಪ್ಪು ತುಂಬಿದ) ಇರಿಸಿದರೆ ಬಿರುಸಾಗಿರುವ ಗಂಟುಗಳು ನಿಧಾನವಾಗಿ ಸಡಿಲಗೊಳ್ಳುತ್ತವೆ. ಒಂದು ವೇಳೆ ಗಂಟುಗಳ ಭಾಗದಲ್ಲಿ ಊದಿಕೊಂಡಿದ್ದರೆ ಈ ಭಾಗದಲ್ಲಿ ತಣ್ಣನೆಯ ದಿಂಬನ್ನು ಇರಿಸಿ ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು. ಒಂದು ವೇಳೆ ಈ ನೋವು ಗಾಯ ಅಥವಾ ಪೆಟ್ಟಿನಿಂದ ಉಂಟಾಗಿದ್ದರೆ ಗಾಯಗೊಂಡ ಇಪ್ಪತ್ತನ್ನಾಲ್ಕು ಘಂಟೆಗಳ ಒಳಗೆ ತಣ್ಣನೆಯ ದಿಂಬಿರಿಸುವುದನ್ನು ವೈದ್ಯರು ಸಲಹೆ ಮಾಡುತ್ತಾರೆ. ನೋವು ಮತ್ತು ಊತದ ಪ್ರಮಾಣವನ್ನನುಸರಿಸಿ ಬಿಸಿ ಮತ್ತು ತಣ್ಣನೆಯ ವಿಧಾನಗಳನ್ನು ಆಗಾಗ ಬದಲಿಸಿಕೊಳ್ಳುವುದರಿಂದಲೂ ಉತ್ತಮ ಹಾಗೂ ಶೀಘ್ರ ಉಪಶಮನ ದೊರಕುತ್ತದೆ.

  ಶುಂಠಿಯ ರಸ

  ಶುಂಠಿಯ ರಸ

  ಹಸಿಶುಂಠಿ ನಮ್ಮೆಲ್ಲರ ಅಡುಗೆ ಮನೆಯಲ್ಲಿ ಸದಾ ಇರುವ ಸಾಮಾಗ್ರಿಯಾಗಿದೆ. ಶುಂಠಿಯನ್ನು ಹಸಿಯಾಗಿ, ಕುದಿಸಿ ಟೀ ರೂಪದಲ್ಲಿ ಅಥವಾ ಗುಳಿಗೆಗಳ ರೂಪದಲ್ಲಿ ಸೇವಿಸಬಹುದು. ಹಲವಾರು ಅಡುಗೆಗಳಲ್ಲಿ ರುಚಿಕಾರಕ ಮಸಾಲೆಯ ರೂಪದಲ್ಲಿಯೂ ಶುಂಠಿ ಬಳಕೆಯಾಗುತ್ತದೆ. ಶುಂಠಿಯ ಆರೋಗ್ಯವರ್ಧಕ ಗುಣಗಳು ಹಲವಾರು ರೂಪದಲ್ಲಿ ಬಳಕೆಯಾಗುತ್ತವೆ. ವಾಕರಿಕೆ, ಹೊಟ್ಟೆಯ ತೊಂದರೆಗಳಿಗೆ ಹಸಿಶುಂಠಿಯ ಸೇವನೆ ತಕ್ಷಣದ ಪರಿಹಾರ ಒದಗಿಸುತ್ತದೆ. ಸಂಧಿವಾತ ಮತ್ತು ಮೊಣಗಂಟಿನ ನೋವಿಗೂ ಹಸಿಶುಂಠಿಯ ಸೇವನೆ ಹಾಗೂ ತೆಳ್ಳಗೆ ಹಸಿಶುಂಠಿಯನ್ನು ಅರೆದು ಲೇಪಿಸಿಕೊಳ್ಳುವುದರಿಂದಲೂ ಉತ್ತಮ ಪರಿಹಾರ ದೊರಕುತ್ತದೆ.

  ನೀಲಗಿರಿ ಎಣ್ಣೆ

  ನೀಲಗಿರಿ ಎಣ್ಣೆ

  ಇದೊಂದು ಸುಲಭವಾಗಿ ಸಿಗುವ ಪರಿಣಾಮಕಾರಿ ನೋವು ನಿವಾರಕ ಎಣ್ಣೆಯಾಗಿರುತ್ತದೆ. ಇದು ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿಯನ್ನು ಒದಗಿಸಲು ನೆರವಾಗುತ್ತದೆ. ಇದು ಮೊಣಕಾಲುಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹೀಗೆ ಇದು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನೋವು ಇರುವ ಭಾಗಕ್ಕೆ ಇದನ್ನು ನೇರವಾಗಿ ಲೇಪಿಸಿ, ಮಸಾಜ್ ಮಾಡಿ. ಮೊಣಕಾಲು ನೋವಿಗೆ ಇದು ಒಂದು ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

  ಕರ್ಪೂರದ ಎಣ್ಣೆ

  ಕರ್ಪೂರದ ಎಣ್ಣೆ

  ಕರ್ಪೂರದ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಮಂಡಿ ನೋವನ್ನು ನಿವಾರಿಸುತ್ತದೆ. ಇದು ತ್ವಚೆಯನ್ನು ತಂಪುಗೊಳಿಸುತ್ತದೆ ಮತ್ತು ಈ ತಂಪುಕಾರಕ ಗುಣದಿಂದ ತ್ವಚೆಯ ಮೇಲೆ, ತುರಿಕೆ ತಂದು ಆ ಮೂಲಕ ನೋವನ್ನು ನಿವಾರಿಸುತ್ತದೆ. ನೋವಿಗೆ ಪ್ರತಿರೋಧ ಒದಗಿಸುವ ತುರಿಕೆಯು ತ್ವಚೆಯನ್ನು ಮರಗಟ್ಟಿಸುವಂತೆ ಮಾಡಿ, ನೋವನ್ನು ನಿವಾರಿಸುತ್ತದೆ.

  ಅರಿಶಿನ

  ಅರಿಶಿನ

  ಇದು ಸಹ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದರಿಂದಾಗಿ ಇದು ಸಹ ಮಂಡಿ ನೋವು ಮತ್ತು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಎಲ್ಲರ ಮನೆಯಲ್ಲಿ ಲಭ್ಯವಿರುವ ಒಂದು ಅದ್ಭುತವಾದ ಮನೆ ಮದ್ದಾಗಿರುತ್ತದೆ.

  ಎಪ್ಸಂ ಸಾಲ್ಟ್ (ಮೆಗ್ನಿಷಿಯಂ ಸಲ್ಫೇಟ್)

  ಎಪ್ಸಂ ಸಾಲ್ಟ್ (ಮೆಗ್ನಿಷಿಯಂ ಸಲ್ಫೇಟ್)

  ಎಪ್ಸಂ ಸಾಲ್ಟ್‌ನಲ್ಲಿರುವ ಅಧಿಕ ಪ್ರಮಾಣದ ಮೆಗ್ನಿಷಿಯಂ ನೋವನ್ನು ನಿವಾರಿಸುತ್ತದೆ. ಇದನ್ನು ಹಿಂದಿಯಲ್ಲಿ ಸೆಂದಾ ನಮಕ್ ಎಂದು ಕರೆಯುತ್ತಾರೆ. ಇದನ್ನು ನೀರಿನಲ್ಲಿ ಹಾಕಿ ಕರಗುವಂತೆ ಮಾಡಿ. ನಿಮ್ಮ ಮೊಣಕಾಲನ್ನು ಈ ಮಿಶ್ರಣದಲ್ಲಿ ನೆನೆಸಿ, ನಿಮ್ಮ ನೋವು ನಿವಾರಣೆಯಾಗುವುದನ್ನು ನೀವೇ ನೋಡಿ. ನಿಮಗೆ ಇಷ್ಟವಿದ್ದಲ್ಲಿ ಎಪ್ಸಂ ಸಾಲ್ಟ್ ನೀರಿನಲ್ಲಿ ಸ್ನಾನ ಸಹ ಮಾಡಬಹುದು.

  ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆ

  ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆ

  ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆಯಲ್ಲಿ ಒಲಿಯೊಕ್ಯಾಂಥಲ್ ಎಂಬ ಒಂದು ರಾಸಾಯನಿಕವು ಕಂಡು ಬರುತ್ತದೆ. ಇದು ಉರಿಯೂತವನ್ನು ಇತರ ನೋವು ನಿವಾರಕಗಳಂತೆಯೇ ನಿವಾರಿಸುತ್ತದೆ. ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆಯಿಂದ ಉರಿಯೂತ ಮತ್ತು ಮಂಡಿ ನೋವು ಇರುವ ಭಾಗಕ್ಕೆ ಮಸಾಜ್ ಮಾಡುವುದರಿಂದ ಸಹ ನೋವನ್ನು ನಿವಾರಿಸಿಕೊಳ್ಳಬಹುದು.

  ಡಾಂಡೆಲಿಯನ್ ಎಲೆಗಳು

  ಡಾಂಡೆಲಿಯನ್ ಎಲೆಗಳು

  ಡಾಂಡೆಲಿಯನ್ ಎಲೆಗಳಲ್ಲಿ ವಿಟಮಿನ್ ಎ ಮತ್ತು ಸಿ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಹಾನಿಯಾಗಿರುವ ಕೋಶಗಳನ್ನು ರಿಪೇರಿ ಮಾಡಲು ನೆರವು ನೀಡುತ್ತವೆ. ಇದರಲ್ಲಿ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿರುವ ಲಿನೊಲೆಕ್ ಮತ್ತು ಲಿನೊಲೆಕ್ ಆಮ್ಲಗಳು ಇವೆ. ಆದ್ದರಿಂದ ಈ ಎಲೆಗಳ ಟೀಯನ್ನು ಮಾಡಿಕೊಂಡು ಸೇವಿಸುವುದರಿಂದ ಅಥವಾ ಸಲಾಡ್ ಮಾಡಿಕೊಂಡು ಸೇವಿಸುವುದರಿಂದ ಇದರ ಪ್ರಯೋಜನವನ್ನು ನೀವು ಪಡೆಯಬಹುದು.

  ಪುದಿನಾ ಎಣ್ಣೆ

  ಪುದಿನಾ ಎಣ್ಣೆ

  ಪುದಿನಾ ಎಣ್ಣೆಯನ್ನು ನಿಮಗೆ ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಿ. ಇದರಲ್ಲಿರುವ ತಂಪುಕಾರಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದಿನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ.

  ಐಸ್‍ಪ್ಯಾಕ್

  ಐಸ್‍ಪ್ಯಾಕ್

  ನೋವು ಮತ್ತು ಬಾವನ್ನು ಕಡಿಮೆ ಮಾಡಲು ಐಸ್‍ಪ್ಯಾಕ್ ಅಥವಾ ಕೋಲ್ಡ್ ಪ್ಯಾಕ್‍ಗಳನ್ನು ಬಳಸಿ. ನೋವು ಇರುವ ಭಾಗದಲ್ಲಿ ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ, ಐಸ್‍ಪ್ಯಾಕನ್ನು 10 ರಿಂದ 20 ನಿಮಿಷಗಳ ಕಾಲ ಇಡಿ. ಇದು ಮನೆಯಲ್ಲಿಯೇ ಸಿಗುವ ತಕ್ಷಣದ ಮಂಡಿ ನೋವು ನಿವಾರಕ.

  ವ್ಯಾಯಾಮ

  ವ್ಯಾಯಾಮ

  ಮಂಡಿ ನೋವು, ಬಿಗಿತ ಅಥವಾ ಅರ್ಥರಿಟಿಸ್‌ನಂತಹ ನೋವುಗಳಿಂದ ಬಳಲುತ್ತಿರುವವರಿಗೆ ವ್ಯಾಯಾಮವು ಸಹ ನೋವು ನಿವಾರಕವಾಗಿರುತ್ತದೆ. ವ್ಯಾಯಾಮವು ತೂಕವನ್ನು ನಿಯಂತ್ರಿಸುತ್ತದೆ, ಮಂಡಿಗಳಲ್ಲಿರುವ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಅವುಗಳನ್ನು ಸುಲಭವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ನೀವು ಮನೆಯಲ್ಲಿಯೇ ಮಾಡಬಹುದಾದ ಕೆಲವು ಸಾಮಾನ್ಯ ವ್ಯಾಯಾಮಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಸ್ಟ್ರೆಚಿಂಗ್

  ಸ್ಟ್ರೆಚಿಂಗ್

  ಸ್ನಾಯುಗಳ ಸ್ಟ್ರೆಚಿಂಗ್ ಯಾವಾಗಲೂ ವಿಶ್ರಾಂತಿ ಮತ್ತು ನೋವನ್ನು ತಪ್ಪಿಸಲು ಉತ್ತಮ ವ್ಯಾಯಾಮವಾಗಿವೆ. ಮಂಡಿಗಳಿಗೆ ಒಳ್ಳೆಯದಾದ ಅನೇಕ ಸ್ಟ್ರೆಚಿಂಗ್ ವ್ಯಾಯಾಮಗಳಿವೆ. ಕೆಲವು ಉತ್ತಮ ಸ್ಟ್ರೆಚಿಂಗ್ ವ್ಯಾಯಾಮಗಳಲ್ಲಿ ಮೊಣಕಾಲನ್ನು ಸಡಿಲಗೊಳಿಸಿ ಸ್ನಾಯುಗಳ ನೋವನ್ನು ದೂರಮಾಡುವ ಹಮ್ ಸ್ಟ್ರಿಂಗ್ ಸ್ಟ್ರೆಚಿಂಗ್ ಉತ್ತಮವಾಗಿದೆ. ನೀವು ಮುಂದೆ ಒಂದು ಕಾಲನ್ನು ಇರಿಸಿ ಮತ್ತು ನೀವು ಒತ್ತಡ ಅಭಿಪ್ರಾಯವಾಗುವ ತನಕ ಇನ್ನೊಂದು ಕಾಲಿನ ಮಂಡಿಯನ್ನು ಬಾಗಿ ಕುಳಿತುಕೊಳ್ಳಬೇಕು. ಇಂತಹ ಇತರ ಹಲವು ವ್ಯಾಯಾಮಗಳಿವೆ.

  ಯೋಗ

  ಯೋಗ

  ಯಾವುದೇ ಮೊಣಕಾಲು ಗಾಯ ಸಂಭವಿಸಿದಾಗ ಮಾಡಬಹುದಾದ ಮತ್ತೊಂದು ಉತ್ತಮ ವ್ಯಾಯಾಮ ಯೋಗ. ಯೋಗ ನಿಧಾನವಾಗಿ ಸ್ನಾಯುಗಳನ್ನು ಸಡಿಲಗೊಳಿಸಿ, ಮಂಡಿಗಳ ಮೇಲೆ ಯಾವುದೇ ಒತ್ತಡ ಅಥವಾ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಕೇವಲ ಕಾಲುಗಳು ಮತ್ತು ಮೊಣಕಾಲುಗಳ ವಿಶ್ರಾಂತಿಗೆ ಮೀಸಲಾದ ಅನೇಕ ಯೋಗ ಆಸನಗಳಿವೆ. ಯೋಗ, ಇತರ ವ್ಯಾಯಾಮಗಳಿಗೆ ಹೋಲಿಸಿದರೆ ದೀರ್ಘಾವಧಿ ಪರಿಣಾಮಗಳನ್ನು ಹೊಂದಿದೆ. ಕೇವಲ " ಸೂರ್ಯ ನಮಸ್ಕಾರ" ಒಂದೇ ಮಂಡಿ ನೋವು ನಿವಾರಿಸಲು ಸಹಾಯ ಮಾಡಬಹುದು.

  ಸ್ಟೆಪ್ ಅಪ್

  ಸ್ಟೆಪ್ ಅಪ್

  ಮೆಟ್ಟಿಲು ಅಥವಾ ಸ್ಟೆಪ್ ಅಪ್ ವ್ಯಾಯಾಮ ಅನೇಕ ಪ್ರಯೋಜನಗಳನ್ನು ಹೊಂದಿದ್ದು ಹೃದಯ ವ್ಯಾಯಾಮವಾಗಿದೆ. ಈ ವ್ಯಾಯಾಮ, ಹೃದಯ ಬಡಿತಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ಶಾಖ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಇಡೀ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಸ್ಟೆಪ್ ಅಪ್ ಮಾಡುವಾಗ ಮಂಡಿಯನ್ನು ಬಗ್ಗಿಸಕೂಡದು. ಇದು ನೇರ ಮತ್ತು ಸ್ಥಿರವಾಗಿರಬೇಕು. ಒಂದು ನಿಮಿಷಗಳ ನಿರಂತರ ಸ್ಟೆಪ್ ಅಪ್ ವ್ಯಾಯಾಮ ಮಂಡಿಗಳಿಗೆ ಲಾಭಕರವಾಗಿರುತ್ತದೆ. ಸ್ಟೆಪ್ ಅಪ್ ವ್ಯಾಯಾಮ ಮೊಣಕಾಲನ್ನು ಬೆಚ್ಚಗಾಗಿಸುವ ಮತ್ತು ಅದರ ಮೇಲೆ ಯಾವುದೇ ತೀವ್ರವಾದ ಒತ್ತಡ ಬೀಳದಂತೆ ಕಡಿಮೆ ಮಾಡುತ್ತದೆ. ಇದು ಯಾವುದೇ ರೀತಿಯ ಮೊಣಕಾಲು ಗಾಯದಿಂದ ಬಳಲುತ್ತಿರುವ ನೀವು ಮಾಡಬಹುದಾದ ಒಂದು ತ್ವರಿತ ವ್ಯಾಯಾಮ.

  English summary

  How to Cure Knee Pain Naturally? Here Are Ways to Do So

  Knee pain can occur due to various reasons such as sprain while playing or running, muscle pain, but it is seen that arthritis is a common cause of knee pain. In case of extreme pain, it is advisable to visit a medical professional, but for mild or moderate knee pain you can successfully try out some of the home-made remedies. But before making any attempt to cure knee pain, one should be cautious and should seek medical advice. This is because your skin can be allergic to any of the homemade remedies or your pain might require undergoing some surgery to resolve the pain.
  Story first published: Sunday, June 3, 2018, 8:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more