For Quick Alerts
ALLOW NOTIFICATIONS  
For Daily Alerts

ರಾತ್ರಿ ಸೇವಿಸಬಹುದಾದ ಉತ್ತಮ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ...

By Sushma Charhra
|

ಯಾರಾದರೂ ನಿಮ್ಮ ಬಳಿ ರಾತ್ರಿ ಊಟಕ್ಕೆ ಏನು ತಯಾರಿಸಿದ್ದೀರಿ ಎಂದು ಪ್ರಶ್ನೆ ಕೇಳಿದರೆ, ಬಹುಶ್ಯಃ ವು ಹಾಂ.. ! ಜಾಸ್ತಿಯೇನಿಲ್ಲ ಎಂದು ಉತ್ತರಿಸುತ್ತೀರೇನೋ ಅಲ್ವಾ?. ಹಾಗಂತ ನೀವೊಬ್ಬರೇ ಅಲ್ಲ,ಇಲ್ಲಿ ಹಲವು ಮಂದಿ ಇದ್ದಾರೆ, ಅವರಿಗೆ ರಾತ್ರಿ ಊಟಕ್ಕೆ ಯಾವ ಆಹಾರ ತಿಂದರೆ ತಮ್ಮ ಡಯಟ್ ಪ್ಲಾನ್ ಸರಿಯಾಗಿ ಇರುತ್ತೆ ಎಂಬುವುದೇ ತಿಳಿದಿಲ್ಲ.. ರಾತ್ರಿ ಅಡುಗೆಗೆ ಏನು ತಯಾರಿಸೋದು ಎಂಬುದೊಂದು ಪ್ರಶ್ನೆಗೆ ಸರಳ ಉತ್ತರಗಳನ್ನು ನಾವಿಲ್ಲಿ ನಿಮಗೆ ನೀಡಲಿದ್ದೆ. ಸರಿಯಾದ ಆಹಾರವನ್ನು ಆಯ್ಕೆ ಮಾಡಿ ರಾತ್ರಿ ಸೇವಿಸುವುದು ಕೆಲವೊಮ್ಮೆ ತುಂಬಾ ಕಠಿಣವಾದ ವಿಚಾರವಾಗಿ ಬಿಡುತ್ತದೆ. ನೀವು ಅರೋಗ್ಯಕರವಾದ ಆಹಾರ ಸೇವಿಸಬೇಕು ಎಂದುಕೊಂಡಿರಬಹುದು ಆದರೆ ಅತಿಯಾಗಿ ಸೇವಿಸಬಾರದು, ಸಕ್ಕರೆ, ಉಪ್ಪಿನಾಂಶ ಅತಿಯಾಗಿ ಇರುವ ಆಹಾರಗಳು ರಾತ್ರಿಯ ಮೇಲೆ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಮಾಡುತ್ತದೆ.

ರಾತ್ರಿಯ ವೇಳೆ ನಿಮ್ಮ ಸ್ನಾಯುಗಳು ಮತ್ತು ಅಂಗಾಂಶಗಳು ಕೆಲಸ ಮಾಡಲು ಆರಂಭವಾಗಿ , ತಮ್ಮೊಳಗೆ ತಾವು ಪುನರ್ಭತಿಯಾಗುವ ಕೆಲಸ ಮಡುತ್ತದೆ. ಯಾಕೆಂದರೆ ಅವುಗಳಿಗೆ ಹಗಲಿನಲ್ಲಿ ಹಾಗೆ ಮಾಡಿಕೊಳ್ಳಲು ಬಿಡುವು ಸಿಗುವುದಿಲ್ಲ. ವಿಟಮಿನ್ ಬಿ6, ಟ್ರೀಪ್ಟೋಫಾನ್ ಮತ್ತು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳ ಮಿಶ್ರಣವಿರುವ ನೈಸರ್ಗಿಕ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಸೂಕ್ತವಾದದ್ದು.

best food to eat at night in kannada

1.ಹಸಿರು ಎಲೆಯ ತರಕಾರಿಗಳನ್ನ ಸೇವಿಸಿ

ಮೆಲಟಾನಿನ್ ಅನ್ನು ನಿರ್ಮಿಸಲು ನಿಮ್ಮ ದೇಹವು ಟ್ರಿಪ್ಟೋಫಾನ್ ಅನ್ನು ಬಳಸುತ್ತೆ ಮತ್ತು ಅದಕ್ಕಾಗಿ ಕ್ಯಾಲ್ಸಿಯಂ ಬೇಕಾಗುತ್ತೆ ಎಂಬ ವಿಚಾರ ನಿಮಗೆ ತಿಳಿದಿದೆಯಾ? ಮೆಲಟಾನಿನ್ ಅನ್ನುವುದು ಒಂದು ಹಾರ್ಮೋನಾಗಿದ್ದು ಇದು ರಾತ್ರಿ ನೈಸರ್ಗಿಕವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.ಡೈರಿಯ ಪದಾರ್ಥಗಳಲ್ಲಿ ಯಾವುದೇ ಅನುಮಾನವಿಲ್ಲದೇ ಹೇಳಬಹುದು ಕ್ಯಾಲ್ಸಿಯಂ ಇರುತ್ತೆ ಎಂದು ಆದರೆ ಕಡುಹಸಿರಾಗಿರುವ ತರಕಾರಿಗಳಲ್ಲೂ ಕೂಡ ಹಲವು ರೀತಿಯ ದೊಡ್ಡ ಪ್ರಮಾಣದ ಮಿನರಲ್ ಗಳು ಲಭ್ಯವಾಗುತ್ತದೆ. ಕಡು ಹಸಿರು ಬಣ್ಣದ ತರಕಾರಿಗಳಾದ ಪಾಲಕ್, ಪುದೀನಾ, ಇತ್ಯಾದಿಗಳನ್ನು ರಾತ್ರಿಯ ವೇಳೆ ಬಳಸಬಹುದು.

2. ಓಟ್ ಮೀಲ್ ನ್ನು ಎರಡು ಪಟ್ಟು ಮಾಡಿ

ಓಟ್ ಮೀಲ್ ನಲ್ಲಿ ಹಲವು ಲಾಭಗಳಿದ್ದು, ನೀವು ಬೆಳಿಗ್ಗೆ ತಿಂಡಿಗೆ ಬಳಸುವ ಇತರೆ ಅದೆಷ್ಟೊ ಧಾನ್ಯಗಳಿಂದ ಉತ್ತಮವಾಗಿದೆ..ಓಟ್ಸ್ ಕಾಂಪ್ಲೇಕ್ಸ್ ಕಾರ್ಬೋಹೈಡ್ರೇಟ್ ಗಳನ್ನು ಇವು ಹೆಚ್ಚಾಗಿ ಹೊಂದಿರುತ್ತದೆ ಮತ್ತು ಅದು ಜೀರ್ಣಗೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ, ಹಾಗಾಗಿ ಹೆಚ್ಚು ಸಮಯ ನಿಮಗೆ ಹಸಿವಾಗುವುದಿಲ್ಲ ಮತ್ತು ಮಧ್ಯರಾತ್ರಿ ಏನನ್ನಾದರೂ ತಿನ್ನಬೇಕು ಎಂಬ ಚಪಲಕ್ಕೆ ಬೀಳದಂತೆ ಇದು ನೋಡಿಕೊಳ್ಳುತ್ತದೆ. ಓಟ್ ಮೀಲ್ ಸೇವನೆಯಿಂದ ರಾತ್ರಿ ಉತ್ತಮ ರೀತಿಯಲ್ಲಿ ನಿದ್ದೆ ಬರುತ್ತದೆ ಯಾಕೆಂದರೆ ಇದರಲ್ಲಿರುವ ಕಾಂಪ್ಲೆಕ್ಸ್ ಕಾರ್ಬೊಹೈಡ್ರೇಟ್ಸ್ ಮತ್ತು ಪ್ರೋಟೀನ್ ಗಳು ಸೆರೆಟೋನಿನ್ ಅನ್ನುಬಿಡುಗಡೆಗೊಳಿಸುತ್ತದೆ. ಈ ಹಾರ್ಮೋನು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.ಓಟ್ ಮೀಲನ್ನು ಬಿಸಿ ಹಾಲಿನೊಂದಿಗೆ ಸೇರಿಸಿ ಕುಡಿಯುವುದು ಅಥವಾ ಮೊಸರಿಗೆ ಬೆರೆಸಿ ಸೇವಿಸುವುದನ್ನು ಮಾಡಬಹುದು.

3. ಮೀನುಗಳು

8 ಔನ್ಸ್ ನಷ್ಟು ಮೀನನ್ನು ಸೇವಿಸುವುದನ್ನು ಶಿಫಾರಸ್ಸು ಮಾಡಲಾಗುತ್ತೆ ಅಥವಾ ವಾರಕೊಮ್ಮೆ ಯಾವುದಾದರೂ ಸಮುದ್ರ ಆಹಾರ ಸೇವಿಸುವುದು ಉತ್ತಮ ಅಭ್ಯಾಸವಾಗಿರುತ್ತದೆ.ಯಾಕೆಂದರೆ ವಿಟಮಿನ್ ಬಿ6 ಕೂಡ ಮೆಲಟೋನಿನ್ ಉತ್ಪಾದನೆಯನ್ನು ದೇಹವು ಮಾಡುವಂತೆ ಮಾಡುವ ಮತ್ತೊಂದು ನ್ಯೂಟ್ರಿಯಂಟ್ ಆಗಿದೆ. ಕೆಲವೊಂದು ಮೀನುಗಳು ವಿಟಮಿನ್ ಬಿ 6 ಅನ್ನು ಹೊಂದಿರುತ್ತದೆ ಉದಾಹರಣಗೆ ಸಲ್ಮೋನ್, ಟೂನಾ ಮತ್ತು ಹಾಲಿಬಟ್ ಇತ್ಯಾದಿ. ಮೀನಿನಲ್ಲಿ ಒಮೆಗಾ 3 ಆಸಿಡ್ ಗಳೂ ಕೂಡ ಅಧಿಕವಾಗಿರುತ್ತದೆ.

4. ಬಾಳೆಹಣ್ಣು

ನಿಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಪೊಟಾಷಿಯಂ ಮತ್ತು ಮೆಗ್ನೇಷಿಯಂ ಅನ್ನು ಬಾಳೆಹಣ್ಣು ತಿನ್ನುವ ಮೂಲಕ ನೀಗಿಸಿಕೊಳ್ಳಬಹುದು..ಮಲಗುವ ಮುನ್ನ ಬಾಳೆಹಣ್ಣು ಸೇವಿಸುವುದರಿಂದಾಗಿ, ಸುಲಭದಲ್ಲಿ ನೀವು ನಿದ್ರಾಸ್ಥಿತಿಗೆ ತಲುಪಬಹುದು ಮತ್ತು ಇದು ನಿಮ್ಮ ಸ್ನಾಯುಗಳು ಆರಾಮಾಗಲು ಸಹಾಯ ಮಾಡುತ್ತದೆ.ಒಂದು ತಿಳಿದುಕೊಳ್ಳಬೇಕಾದ ಅಧ್ಯಯನದಲ್ಲಿ, ಮೆಗ್ನೇಷಿಯಂನಿಂದಾಗಿ ಯಾರು ಇನ್ಸೋಮ್ನಿಯಾ ಸಮಸ್ಯೆಯಿಂದ ಯಾರು ಬಳಲುತ್ತಿದ್ದಾರೋ ಅಂತವರ ನಿದ್ದೆಯ ಕ್ವಾಲಿಟಿಯನ್ನು ಹೆಚ್ಚಿಸಲು ಅದು ನೆರವಾಗುತ್ತದೆ .ಈ ಹಣ್ಣಿನಲ್ಲಿ ಟ್ರಿಪ್ಟೋಫಾನ್ ಇದ್ದು, ಇದು ನಿದ್ದೆಯ ಮೇಲೆ ನೈಸರ್ಗಿಕ ಪರಿಣಾಮಗಳನ್ನು ಮಾಡುತ್ತದೆ.ಆತಂಕವನ್ನು ಕಡಿಮೆ ಮಾಡುತ್ತೆ, ನಿದ್ದೆಯನ್ನು ಹೆಚ್ಚಿಸುತ್ತೆ, ನಿಮ್ಮ ದೇಹದ ಕೊಬ್ಬಿನಾಂಶವನ್ನು ಕರಗಿಸುತ್ತದೆ.

5. ಪೌಲ್ಟ್ರೀ ಆಹಾರಗಳ ಸೇವನೆ

ನೀವು ಮಾಂಸವನ್ನು ಇಷ್ಟಪಡುವವರಾ?ಹಾಗಾದ್ರೆ ಈ ಆಹಾರವನ್ನು ರಾತ್ರಿಯ ವೇಳೆ ಸೇವಿಸುವುದು ನಿಮಗೆ ಸಹಾಯವಾಗಲಿದೆ. ಟ್ರಿಫ್ಟೋಫಾನ್ ಎಂಬ ಅಮೈನೋ ಆಸಿಡ್ ನ್ನು ನಾವು ಮಾಂಸದಲ್ಲಿ ಗಮನಿಸಬಹುದು ಮತ್ತು ಇದ್ದು ನಿದ್ದೆಯ ಮೇಲೆ ಪರಿಣಾಮ ಮಾಡುತ್ತದೆ.ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಚಿಕನ್ ತಿನ್ನುವುದು ಅಥವಾ 3 ಔನ್ಸ್ ನಷ್ಟು ಟರ್ಕಿ ಮಾಂಸ ಸೇವನೆಯು ನಿದ್ದೆಯ ಅವಧಿಯನ್ನು ಹೆಚ್ಚಿಸುತ್ತದೆಯಂತೆ.ನಿಮ್ಮ ಡೀಪ್ ನಿದ್ದೆಯನ್ನು ಹೆಚ್ಚಿಸಬೇಕೆಂದರೆ ಟ್ರಿಪ್ಟೋಫಾನ್ನಿಂದ ಶ್ರೀಮಂತವಾಗಿರುವ ಆಹಾರನವನ್ನು ಸೇವಿಸಬೇಕು ಜೊತೆಗೆ ಬ್ರೌಸ್ ರೈಸ್ ನ್ನು ಸೇವಿಸಿದರೆ ಕಾರ್ಬೋಹೈಡೇಟ್ ಗಳು ಲಭ್ಯವಾಗುತ್ತದೆ.

6. ಬಾದಾಮಿ ಬೀಜಗಳನ್ನು ಸೇವಿಸಿ ಉತ್ತಮ ನಿದ್ದೆ ಪಡೆಯಿರಿ

ಬಾದಾಮಿ ಬೀಜಗಳು ನಿದ್ದೆಯನ್ನು ಹೆಚ್ಚಿಸುವ ಅತ್ಯುತ್ತಮ ಆಹಾರ ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡುವ ವಿಚಾರಕ್ಕೆ ಬಂದರೆ ಬಾದಾಮಿ ಉತ್ತಮವಾದುದ್ದಾಗಿದೆ. ಇದರಲ್ಲಿ ಮೆಗ್ನೇಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಹಾಗಾಗಿ ಈ ಎರಡೂ ಕಾಂಬಿನೇಷನ್ ಒಟ್ಟಿಗೆ ಕೆಲಸ ಮಾಡುತ್ತದೆ ಮತ್ತು ದೇಹದ ಸ್ನಾಯುಗಳು ರಿಲ್ಯಾಕ್ಸ್ ಆಗಲು ನೆರವಾಗುತ್ತೆ.ಕ್ಯಾಲ್ಸಿಯಂ ನಿಮ್ಮ ಮೆದುಳು ಟ್ರಿಪ್ಟೋಫಾನ್ ನ್ನು ಮೆಲಾಟಿನ್ ಆಗಿ ಪರಿವರ್ತಿಸುವ ಕೆಲಕ್ಕೆ ಬಹಳವಾಗಿ ಕೆಲಸ ಮಾಡುತ್ತದೆ.

7. ಚೀಸ್

ಯಾವ ವ್ಯಕ್ತಿಗಳು ರಾತ್ರಿಯ ವೇಳೆ ತಮ್ಮ ಬ್ಯುಸಿಯಾದ ಜೀವನಕ್ರಮಗಳಿಂದ ಈಹಾರ ಸೇವಿಸಲು ಸಾಧ್ಯವಾಗುತ್ತಿಲ್ಲವೇ, ಅವರು ಜಸ್ಟ್ ಒಂದು ಬ್ರೆಡ್ ಗೆ ಚೀಸ್ ಅಥವಾ ಬೆಣ್ಣೆ ಹಚ್ಚಿಕೊಂಡು ತಿನ್ನುವುದು ಕೂಡ ಒಂದು ಉತ್ತಮ ಉಪಾಯವೇ ಆಗಿದೆ. ಹೊಟ್ಟೆ ಹಸಿವಿನಿಂದ ಹೋಗಿ ನಿದ್ರಿಸುವುದು ನಿಮ್ಮ ದೇಹದ ಹಿತದೃಷ್ಟಿಯಿಂದ ಒಳ್ಳೆಯದಲ್ಲಿ. ನಿಮ್ಮದು ಅಷ್ಟೊಂದು ಬಿಡುವಿಲ್ಲದ ಕೆಲಸವಾಗಿದ್ದರೆ ಕಾಟೇಜ್ ಚೀಸ್ ಒಂದು ಉತ್ತಮ ಆಯ್ಕೆ. ಹಮ್ಮೂಸ್ ಜೊತೆ ಇಲ್ಲವೆ ಚಪಾತಿಯ ಜೊತೆ ಅಥವಾ ಬ್ರೆಡ್ ಮೇಲೆ ಚೀಸ್ ಸವರಿಕೊಂಡು ಸೇವಿಸಿ. ಇದುನಿಮ್ಮ ಹಸಿವನ್ನು ತಕ್ಕಮಟ್ಟಿಗೆ ನಿವಾರಿಸುತ್ತೆ ಮತ್ತು ನಿದ್ದೆಯನ್ನು ಹೆಚ್ಚಿಸುತ್ತೆ.

8. ಚೆರ್ರೀ ಹಣ್ಣುಗಳು

ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರೀಷಿಯನ್ ಸಂಸ್ಥೆಯ ಅಧ್ಯಯನವಂದು ತಿಳಿಸುವಂತೆ, ಯಾವ ವ್ಯಕ್ತಿಗಳು ಪ್ರತಿದಿನ ಒಂದು ಗ್ಲಾಸ್ ಚೆರ್ರೀ ಹಣ್ಣುಗಳನ್ನು ಸೇವಿಸುತ್ತಾರೋ ಅವರ ನಿದ್ದೆಯ ಅವಧಿಯೂ ಅಧಿಕವಾಗಿರುತ್ತದೆ. ಇದು ಯಾಕೆಂದರೆ ಚೆರ್ರೀಯಲ್ಲಿ ನೈಸರ್ಗಿಕವಾಗಿ ನಿದ್ದೆ ಜಾರುವಂತೆ ಮಾಡುವ ಮೆಲಟಾನಿನ್ ಕಂಟೆಟ್ ಗಳಿದೆ .ಮೆಲಟಾನಿನ್ ಗಳು ನೀವು ಹೆಚ್ಚು ಹೊತ್ತು ನಿದ್ರಿಸುವಂತೆ ಮಾಡುತ್ತದೆ. ಚೆರ್ರಿಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು, ಉರಿಯೂತ ಕಡಿಮೆಗೊಳಿಸುವ ಸಾಮರ್ಥ್ಯ, ಆರ್ಥೈಟೀಸ್ ನೋವುಗಳ ನಿವಾರಣೆ, ಬೆಲ್ಲಿ ಫ್ಯಾಟ್ ಕರಗಿಸುವ ತಾಕತ್ತು ಮತ್ತು ಸ್ಟ್ರೋಕ್ ಆಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಶಕ್ತಿ ಇದೆ.

ರಾತ್ರಿಯ ವೇಳೆ ಈ ಆಹಾರಗಳನ್ನು ಸೇವಿಸುವುದರ ಆಶ್ಚರ್ಯಕಾರಿ ಲಾಭಗಳು

. ಗ್ಲಿಸಮಿಕ್ ಇಂಡೆಕ್ಸ್ ಹೆಚ್ಚಾಗಿರುವ ಆಹಾರ ಪದಾರ್ಥಗಳು ನಿಮ್ಮ ಬ್ಲಡ್ ಶುಗರ್ ಲೆವೆಲ್ ನ್ನು ಕಡಿಮೆ ಮಾಡುತ್ತೆ. ಲೆಂಟಿಲ್ಸ್, ಕಪ್ಪು ಬೀನ್ಸ್ ಗಳು, ಸಿಹಿ ಆಲೂಗಡ್ಡೆಗಳು, ಸಲಮೂನ್,ಚಿಕನ್ ಇತ್ಯಾದಿ
• ಕಾರ್ಬೋಹೈಡ್ರೇಟ್ ಅಂಶವಿರುವ ಆಹಾರಗಳನ್ನು ಸೇವಿಸುವುದರಿಂದ ಮಧ್ಯರಾತ್ರಿ ಹಸಿವಾಗುವುದು ತಪ್ಪುತ್ತದೆ. ನಿಮ್ಮ ಎಪಟೈಟ್ ಅನ್ನು ನಿಯಂತ್ರಣದಲ್ಲಿ ಇಡಲು ಇದು ಸಹಾಯಕ.
• ಪ್ರೋಟೀನ್ ಅಧಿಕವಾಗಿರುವ ಆಹಾರಗಳನ್ನು ನಿದ್ದೆಗೆ ಜಾರುವ ಮುನ್ನ ಸೇವಿಸಿ. ಇದು ನಿಮ್ಮ ದೇಹದ ಮಾಂಸಖಂಡಗಳನ್ನು ಬಲಗೊಳಿಸುತ್ತದೆ. ನೀವು ಮಲಗಿದ್ದರೂ ಕೂಡ ನಿಮ್ಮ ದೇಹ ಕೆಲಸ ನಿರ್ವಹಿಸುವುದನ್ನು ನಿಲ್ಲಿಸಿರುವುದಿಲ್ಲ ಎಂಬುದು ನಿಮಗೆ ನೆನಪಿರಲಿ. ಲೇಖನವನ್ನು ಹಂಚಿಕೊಳ್ಳಿ..! ನಿಮಗೆ ಈ ಲೇಖನ ಇಷ್ಟವಾದರೆ, ನಿಮ್ಮವರೊಂದಿಗೆ ಹಂಚಿಕೊಳ್ಳಿ.

English summary

Here Are The Best Foods To Eat At Night

What do you answer when someone asks you, 'What's cooking for dinner'? You probably say, 'Ah! Nothing much'. Well not only you but there are many people out there who find it a trouble in thinking 'what to eat for dinner'? This article will solve that problem for you as we will be writing about the best foods to eat at night. Choosing a healthy night-time food can sometimes become more complicated. You might want to eat healthy foods but don't want to go overboard on sugar and salty foods, which can disrupt your sleep at night.
Story first published: Friday, June 29, 2018, 16:01 [IST]
X
Desktop Bottom Promotion