For Quick Alerts
ALLOW NOTIFICATIONS  
For Daily Alerts

ಕಡಲೆಕಾಳಿನಲ್ಲಿದೆ ಲೆಕ್ಕಕ್ಕೂ ಸಿಗದಷ್ಟು ಆರೋಗ್ಯಕಾರಿ ಪ್ರಯೋಜನಗಳು

|

ಭೂಮಿ ಮೇಲೆ ಸಿಗುವಂತಹ ದವಸಧಾನ್ಯಗಳು ಮಾನವನ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇಂತಹದರಲ್ಲಿ ಒಂದು ಕಡಲೆ. ಕಪ್ಪು ಕಡಲೆ ಹಾಗೂ ಬಿಳಿ ಕಡಲೆ(ಕಾಶ್ಮೀರಿ ಕಡಲೆ) ಎಂದು ಎರಡು ವಿಧಗಳಿವೆ. ಇದು ಕೂಡ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವುದು. ಇಷ್ಟು ಮಾತ್ರವಲ್ಲದೆ ಇದು ಖಾದ್ಯಗಳಿಗೆ ಹೆಚ್ಚಿನ ರುಚಿ ನೀಡುವುದು.

ಇದು ತುಂಬಾ ಅಗ್ಗವಾಗಿರುವ ಹಿನ್ನೆಲೆಯಲ್ಲಿ ಇದನ್ನು ಪ್ರತಿಯೊಬ್ಬರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಬನ್ನಿ ಕಪ್ಪು ಕಡಲೆ ಅಥವಾ ಕಡಲೆ ಕಾಳಿನಿಂದ ಸಿಗುವಂತಹ ಅಗ್ರ ಎಂಟು ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿಲ್ಲ. ಇದರ ಬಗ್ಗೆ ನೀವು ಈ ಲೇಖನದಿಂದ ತಿಳಿಯುತ್ತಾ ಹೋಗಿ...

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಇದರಲ್ಲಿರುವಂತಹ ಹೆಚ್ಚಿನ ನಾರಿನಾಂಶವು ನೈಸರ್ಗಿಕವಾಗಿ ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿ. ಇದು ನಿಮ್ಮ ಬಯಕೆಯನ್ನು ನಿಯಂತ್ರಿಸುವುದು ಮಾತ್ರವಲ್ಲದೆ ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು. ಆಹಾರದ ಪ್ರೋಟೀನ್ ಹೊಂದಿರುವ ಇದು ತೂಕ ನಿರ್ವಹಣೆಗೆ ಪ್ರಮುಖ ಪಾತ್ರ ವಹಿಸುವುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇನ್ನೊಂದು ಸರಳ ಟಿಪ್ಸ್ ಇಲ್ಲಿದೆ ನೋಡಿ- ತುಳಸಿ ಮತ್ತು ಸೌತೆಕಾಯಿಯನ್ನು ಬೆರೆಸಿದ ನೀರು ಕುಡಿದರೆ ಇದು ನಾಲಿಗೆಗೆ ಚುರುಗುಟ್ಟಿಸುವ ರುಚಿಯನ್ನು ನೀಡುವ ಜೊತೆಗೇ ತುಳಸಿ ಮತ್ತು ಸೌತೆ ಎರಡರ ಆರೋಗ್ಯಕರ ಪ್ರಯೋಜನವನ್ನೂ ಪಡೆಯಬಹುದು. ಇದಕ್ಕಾಗಿ ಒಂದು ಕಪ್ ಸಕ್ಕರೆಯನ್ನು ಕೊಂಚ ನೀರಿನಲ್ಲಿ ಬೆರೆಸಿ ಬಿಸಿಮಾಡಿ. ಇದಕ್ಕೆ ಕೆಲವು ಲಿಂಬೆಯ ಹನಿಗಳನ್ನು ಸೇರಿಸಿ. ಸಕ್ಕರೆ ಕರಗಿದ ಬಳಿಕ ಉರಿ ಆರಿಸಿ ಅರ್ಧ ಸೌತೆಕಾಯಿಯ ತುಂಡುಗಳು ಮತ್ತು ಕೆಲವು ತುಳಸಿ ಎಲೆಗಳನ್ನು ಸೇರಿಸಿ. ತಣಿದ ಬಳಿಕ ಈ ಮಿಶ್ರಣವನ್ನು ಒಂದು ದೊಡ್ಡ ಬಾಟಲಿ ನೀರಿಗೆ ಬೆರೆಸಿ ಫ್ರಿಜ್ಜಿನಲ್ಲಿ ಒಂದು ಘಂಟೆ ಇಡಿ. ಬಳಿಕ ಇಡಿಯ ದಿನ ಬಾಯಾರಿಕೆಯಾದಾಗಲೆಲ್ಲಾ ಐಸ್ ನೊಂದಿಗೆ ಅಥವಾ ಇಲ್ಲದೇ ಕೊಂಚಕೊಂಚವಾಗಿ ಸೇವಿಸುತ್ತಾ ಇರಿ.

Most Read: ಪ್ರತಿನಿತ್ಯ ಒಂದು ಹಿಡಿಯಷ್ಟು ಬೀಜಗಳನ್ನು ತಿಂದರೆ, ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ!

ಶಕ್ತಿ ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿ

ಶಕ್ತಿ ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿ

ಕಡಲೆಯಲ್ಲಿ ಪ್ರಮುಖವಾಗಿ ಖನಿಜಾಂಶವಾಗಿರುವಂತಹ ಮೆಗ್ನಿಶಿಯಂ ಇದ್ದು, ಇದರೊಂದಿಗೆ ಪ್ರಮುಖ ಆರೋಗ್ಯಕಾರಿ ಪೋಷಕಾಂಶಗಳಾಗಿರುವ ಥೈಮೇನ್, ಮೆಗ್ನಿಶಿಯಂ ಮತ್ತು ಫೋಸ್ಪರಸ್ ಇದೆ. ಮೆಗ್ನಿಶಿಯಂ ದೇಹಕ್ಕೆ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.

ರಕ್ತದ ಸಕ್ಕರೆ ಮಟ್ಟ ಸ್ಥಿರವಾಗಿಡುವುದು

ರಕ್ತದ ಸಕ್ಕರೆ ಮಟ್ಟ ಸ್ಥಿರವಾಗಿಡುವುದು

ಕಡಲೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್(ಜಿಐ) ತುಂಬಾ ಕಡಿಮೆ ಇದ್ದು, ಮಧುಮೇಹಿಗಳಿಗೆ ಇದು ಪರಿಣಾಮಕಾರಿಯಾಗಿದೆ. ಇದು ರಕ್ತನಾಳಗಳಲ್ಲಿ ತುಂಬಾ ನಿಧಾನ ಮತ್ತು ಸ್ಥಿರವಾಗಿ ಗ್ಲೂಕೋಸ್ ಬಿಡುಗಡೆ ಮಾಡಲು ನೆರವಾಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಹೀರಿಕೊಳ್ಳುವ ನಾರಿನಾಂಶ, ಅಧಿಕ ಪ್ರೋಟೀನ್ ಮತ್ತು ಕಬ್ಬಿನಾಂಶವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಲು ನೆರವಾಗುವುದು.

ಮಹಿಳೆಯರಲ್ಲಿ ಹಾರ್ಮೋನು ಮಟ್ಟ ನಿಯಂತ್ರಿಸುವುದು

ಮಹಿಳೆಯರಲ್ಲಿ ಹಾರ್ಮೋನು ಮಟ್ಟ ನಿಯಂತ್ರಿಸುವುದು

ಕಡಲೆಯಲ್ಲಿ ಪೈಥೊ-ಒಸ್ಟ್ರೋಜನ್ಸ್(ಸಸ್ಯ ಹಾರ್ಮೋನು) ಮತ್ತು ಸಾಪೊನಿನ್ಸ್(ಆ್ಯಂಟಿಆಕ್ಸಿಡೆಂಟ್) ಎನ್ನುವ ಫೈಥೋ ನ್ಯೂಟ್ರಿಯೆಂಟ್ಸ್ ಇದೆ. ಸ್ತನದ ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡುವುದು ಹಾಗೂ ಒಸ್ಟ್ರೋಜನ್ ಹಾರ್ಮೋನು ಮಟ್ಟವನ್ನು ಕಾಪಾಡುವ ಕಾರಣ ಅಸ್ಥಿರಂಧ್ರತೆಯಿಂದ ರಕ್ಷಿಸುವುದು. ಋತುಚಕ್ರದ ವೇಳೆ ಮನಸ್ಥಿತಿ ಬದಲಾಗುವುದನ್ನು ಇದು ತಡೆಯುವುದು.

Most Read: 'ತೊಂಡೆಕಾಯಿ ಎಲೆಗಳು': ಮಧುಮೇಹ, ಕಾಮಾಲೆ ರೋಗ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸುತ್ತದೆ

ರಕ್ತಹೀನತೆ ತಡೆಯುವುದು

ರಕ್ತಹೀನತೆ ತಡೆಯುವುದು

ಕಡಲೆಯಲ್ಲಿ ಪ್ರಮುಖವಾಗಿರುವ ಆಹಾರದ ಕಬ್ಬಿನಾಂಶವಿದೆ. ಇದು ದೇಹಕ್ಕೆ ಬೇಕಾಗಿರುವಂತಹ ಖನಿಜಾಂಶವನ್ನು ಒದಗಿಸುವ ಕಾರಣ ರಕ್ತಹೀನತೆ ತಡೆಯುವುದು. ಇದರಿಂದ ಗರ್ಭಿಣಿಯರು, ಬಾಣಂತಿಯರು ಮತ್ತು ಋತುಚಕ್ರದ ಸಮಸ್ಯೆ ಇರುವವರು ಇದನ್ನು ಸೇವಿಸಬೇಕು. ಬೆಳೆಯುತ್ತಿರುವ ಮಕ್ಕಳು ಮತ್ತು ರಕ್ತಹೀನತೆ ಸಮಸ್ಯೆ ಇರುವವರು ಇದನ್ನು ಸೇವಿಸಬೇಕು. ರಕ್ತಹೀನತೆ ಸಮಸ್ಯೆ ಇರುವವರು, ಹೀಗೆ ಮಾಡಿ- ಪ್ರತಿದಿನ ಹಸಿರು ಸೊಪ್ಪುಗಳನ್ನು ಆದಷ್ಟು ಸೇವಿಸಿ. ಅದರಲ್ಲೂ ಬಸಲೆ ಸೊಪ್ಪು ಅತ್ಯಂತ ಸೂಕ್ತವಾದ ಆಹಾರ. ಇನ್ನುಳಿದಂತೆ ಪಾಲಕ್, ಹರಿವೆ ಸೊಪ್ಪು, ಬೀನ್ಸ್, ಕೆಂಪು ಮಾಂಸ, ಒಣದ್ರಾಕ್ಷಿ, ಒಣ ಪೀಚ್ ಹಣ್ಣು, ಮೊಟ್ಟೆಯ ಹಳದಿ ಭಾಗ ಇತ್ಯಾದಿಗಳು ರಕ್ತಹೀನತೆಯನ್ನು ಸಾಕಷ್ಟು ಕಡಿಮೆಗೊಳಿಸುತ್ತವೆ. ಅಷ್ಟೇ ಅಲ್ಲದೆ ಕಿತ್ತಳೆ ಜಾತಿಯ ಹಣ್ಣುಗಳು ಅಂದರೆ ಮೂಸಂಬಿ, ಕಿತ್ತಳೆ, ಲಿಂಬೆ, ಚಕ್ಕೋತ ಮೊದಲಾದ ಹಣ್ಣುಗಳನ್ನು ಹೆಚ್ಚು ಸೇವಿಸಿ, ಇದನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವ ಜೊತೆಗೇ ಇತರ ಆಹಾರಗಳ ಮೂಲಕ ಸೇವಿಸಿದ್ದ ಕಬ್ಬಿಣವನ್ನು ರಕ್ತಕಣಗಳು ಪಡೆಯಲು ನೆರವಾಗುತ್ತದೆ. ನೆನಪಿಡಿ ಕೆಲವು ವ್ಯಸನಗಳು ರಕ್ತದ ಉತ್ಪಾದನೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮದ್ಯಪಾನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮದ್ಯದ ಸೇವನೆ ರಕ್ತದ ಉತ್ಪಾದನೆಗೆ ತಡೆ ಒಡ್ಡುತ್ತದೆ. ಆದ್ದರಿಂದ ಅನಾರೋಗ್ಯಕರವಾದ ಯಾವುದೇ ವ್ಯಸನಗಳನ್ನು ಬಿಡುವತ್ತ ಮನವನ್ನು ಗಟ್ಟಿಗೊಳಿಸಿ.

ರಕ್ತದೊತ್ತಡ ನಿಯಂತ್ರಣ

ರಕ್ತದೊತ್ತಡ ನಿಯಂತ್ರಣ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತನಾಳಗಳಲ್ಲಿನ ಬದಲಾವಣೆಯನ್ನು ತಿರುಗಿಸುವ ಮೂಲಕವಾಗಿ ರಕ್ತದೊತ್ತಡ ಕಡಿಮೆ ಮಾಡುವುದು. ಕಡಲೆಯಲ್ಲಿರುವ ಪೊಟಾಶಿಯಂ ಹಾಗೂ ಮೆಗ್ನಿಶಿಯಂನಿಂದಾಗಿ ದೇಹದಲ್ಲಿ ವಿದ್ಯುದ್ವಿಚ್ಛೇದಗಳನ್ನು ಸಮತೋಲನದಲ್ಲಿಡಲು ನೆರವಾಗುವುದು. ರಕ್ತದೊತ್ತಡ ನಿಯಂತ್ರಣಕ್ಕೆ ಒಂದಿಷ್ಟು ಸರಳ ಟಿಪ್ಸ್ ಇಲ್ಲಿದೆ ನೋಡಿ

*ಮೂರು ಕ್ಯಾರೆಟ್, ಒಂದು ಬೀಟ್ರೂಟ್, ಕೊಂಚ ಸೆಲೆರಿ ಎಲೆಗಳು, ಐದು ಎಸಳು ಸೌತೆಕಾಯಿ, ಒಂದು ಮರಸೇಬು ಮತ್ತು ಒಂದು ಚಿಕ್ಕತುಂಡು ಹಸುಶುಂಠಿ, ಈ ಎಲ್ಲವನ್ನೂ ಜ್ಯೂಸರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ ಸೋಸಿ ರಸ ಸಂಗ್ರಹಿಸಿ. ಈ ರಸವನ್ನು ನಿತ್ಯವೂ ಬೆಳಿಗ್ಗಿನ ಹೊತ್ತಿನಲ್ಲಿ ಸತತವಾಗಿ ಒಂದು ವಾರ ಕುಡಿಯಿರಿ,

*ಅಧಿಕ ರಕ್ತದೊತ್ತಡ ಇರುವಂತಹವರು ತಮ್ಮ ದೇಹದಲ್ಲಿ ಹೆಚ್ಚಿನ ನೀರಿನಾಂಶ ಇರುವಂತೆ ನೋಡಿಕೊಳ್ಳಬೇಕು. ದಿನಕ್ಕೆ ಸುಮಾರು 8-10 ಲೋಟ ನೀರು ಕುಡಿಯಬೇಕು. ಅದರಲ್ಲೂ ಎಳನೀರು ಕುಡಿದರೆ ತುಂಬಾ ಒಳ್ಳೆಯದು. ಇದು ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುವುದು. ಎಳನೀರಿನಲ್ಲಿ ಪೊಟಾಶಿಯಂ, ಮೆಗ್ನಿಶಿಯಂ ಮತ್ತು ವಿಟಮಿನ್ ಸಿ ಇದೆ. ಇದು ರಕ್ತದೊತ್ತಡ ಕಡಿಮೆ ಮಾಡುವುದು

*ಲಿಂಬೆಯಲ್ಲಿರುವಂತಹ ವಿಟಮಿನ್ ಸಿಯು ಹಾನಿಕಾರ ಫ್ರಿ ರ್ಯಾಡಿಕಲ್ ಪ್ರಭಾವ ಕಡಿಮೆ ಮಾಡುವುದು. ಅರ್ಧ ಲಿಂಬೆ ರಸವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ಇದಕ್ಕೆ ಸಕ್ಕರೆ ಅಥವಾ ಉಪ್ಪು ಹಾಕಬೇಡಿ.

*ಮೆಂತೆ ಕಾಳುಗಳಿಂದ ರಕ್ತದೊತ್ತಡ ನಿವಾರಣೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಇದರಲ್ಲಿ ಅಧಿಕ ಪೊಟಾಶಿಯಂ ಮತ್ತು ಆಹಾರದ ನಾರಿನಾಂಶವಿದೆ. ಒಂದು ಅಥವಾ ಎರಡು ಚಮಚ ಮೆಂತ್ಯೆಕಾಳುಗಳನ್ನು ನೀರಿಗೆ ಹಾಕಿ ಬೇಯಿಸಿ. ಈ ನೀರನ್ನು ಸೋಸಿಕೊಂಡು, ಮೆಂತ್ಯೆಯನ್ನು ರುಬ್ಬಿಕೊಳ್ಳಿ. ಖಾಲಿಹೊಟ್ಟೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಮೆಂತ್ಯೆ ಪೇಸ್ಟ್ ಸೇವಿಸಿ.

*ಕಡುಬಣ್ಣದ ಚಾಕಲೇಟ್ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನೇ ಉಂಟು ಮಾಡಲಿದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲಿದೆ.

ಜೀರ್ಣಕ್ರಿಯೆ ಸಮಸ್ಯೆಯಿಂದ ರಕ್ಷಣೆ

ಜೀರ್ಣಕ್ರಿಯೆ ಸಮಸ್ಯೆಯಿಂದ ರಕ್ಷಣೆ

ಕಡಲೆಯಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶದಿಂದಾಗಿ ಇದು ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಕರುಳನ್ನು ಆರೋಗ್ಯವಾಗಿಡುವುದು. ಇದರಿಂದ ಜೀರ್ಣಕ್ರಿಯೆ ಸಮಸ್ಯೆಯು ಕಾಡುವುದಿಲ್ಲ. ಪೈಥೋನ್ಯೂಟ್ರಿಯಂಟ್ಸ್, ಅಧಿಕ ಪ್ರೋಟೀನ್, ಆಹಾರದ ನಾರಿನಾಂಶ, ಹೆಚ್ಚಿನ ಖನಿಜಾಂಶ ಹಾಗೂ ವಿಟಮಿನ್ ಗಳು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡುವುದು. ಸಾಮಾನ್ಯವಾಗಿ ನಾವು ಊಟ ಮಾಡುವಾಗ ತಣ್ಣೀರು ಕುಡಿದರೆ, ಅದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಈ ಜೀರ್ಣಕ್ರಿಯೆಯ ಅಗ್ನಿಯು ಆರಿ ಹೋಗುತ್ತದೆ. ಅದು ನಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಲು ಅಡ್ಡಗಾಲಾಗಿ ನಿಂತು ಬಿಡುತ್ತದೆ. ಹಾಗಾಗಿ ಊಟ ಮಾಡಿದ ನಂತರ ಮೊದಲು ಬೆಚ್ಚಗಿನ ನೀರನ್ನು ಕುಡಿಯಿರಿ. ನಿಮಗೆ ಬೇಕಾದಲ್ಲಿ ಇದಕ್ಕೆ ಜೇನು ತುಪ್ಪ ಅಥವಾ ನಿಂಬೆರಸವನ್ನು ಬೆರೆಸಿಕೊಳ್ಳಬಹುದು. ಇನ್ನು ಊಟವಾದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ ಎಂದು ಆಯುರ್ವೇದವು ಸೂಚಿಸುತ್ತದೆ. ಇದಕ್ಕಾಗಿ ಮೊದಲು ಮೊಣಕಾಲಿನ ಮೇಲೆ ಕುಳಿತುಕೊಳ್ಳಿ. ನಿಮ್ಮ ಪಾದಗಳು ನಿಮ್ಮ ಸೊಂಟಕ್ಕೆ ಬೆಂಬಲವಾಗಿ ಇರಲಿ. ಈ ಸ್ಥಿತಿಯಲ್ಲಿ ಕುಳಿತುಕೊಂಡು, ನಿಮಗೆ ಆರಾಮವೆನಿಸಿದಾಗ ನಿಮ್ಮ ಹಸ್ತಗಳನ್ನು ಮೊಣಕಾಲಿನ ಮೇಲೆ ಇರಿಸಿಕೊಳ್ಳಿ. ಈ ಸ್ಥಿತಿಯಲ್ಲಿ 5-6 ನಿಮಿಷಗಳ ಕಾಲ ಕುಳಿತುಕೊಳ್ಳಿ. ಇದು ನಿಮಗೆ ಬರುವ ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ.

ಹೃದಯದ ಆರೋಗ್ಯ ಕಾಪಾಡುವುದು

ಹೃದಯದ ಆರೋಗ್ಯ ಕಾಪಾಡುವುದು

ಕಪ್ಪು ಕಡಲೆ ಸೇವನೆ ಮಾಡಿದರೆ ಇದು ಹೃದಯದ ಮೇಲೆ ಧನಾತ್ಮಕವಾದ ಪರಿಣಾಮ ಬೀರುವುದು ಹಾಗೂ ವಿವಿಧ ರೀತಿಯ ಹೃದಯದ ಸಮಸ್ಯೆಗಳಿಂದ ಕಾಪಾಡುವುದು. ಕಡಲೆಯಲ್ಲಿ ಹೆಚ್ಚಿನ ಮಟ್ಟದ ಮೆಗ್ನಿಶಿಯಂ ಮತ್ತು ಫಾಲಟೆ ಇದೆ. ಇದು ರಕ್ತನಾಳಗಳನ್ನು ಬಲಪಡಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವುದು.

English summary

health benefits bengal gram or kala chana

Black chickpeas, also known as Bengal grams, Garbanzo beans or ‘kala chana’ belong to the ‘desi’ variety and have a much higher fiber content and lower glycemic index. Being an extremely versatile legume, it is widely used in a variety of Middle Eastern and Indian dishes like falafels, hummus and curries as well as salads, soups and stews or even as a quick snack. In addition to their delicious nut like taste and buttery texture, black chickpeas are extremely beneficial for health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more