For Quick Alerts
ALLOW NOTIFICATIONS  
For Daily Alerts

ಯೋನಿನಾಳದ ಯೀಸ್ಟ್ ಸೋಂಕು: ಕಾರಣಗಳು, ಲಕ್ಷಣಗಳು ಹಾಗೂ ಚಿಕಿತ್ಸೆ

By Arshad
|

ನಮ್ಮ ದೇಹದಲ್ಲಿ ಎಲ್ಲೆಲ್ಲಿ ತೇವ ಇರುತ್ತದೆಯೋ ಅಲ್ಲೆಲ್ಲಾ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಆಶ್ರಯ ಪಡೆಯುತ್ತವೆ ಹಾಗೂ ಸೋಂಕು ಹರಡಲು ಕಾರಣವಾಗುತ್ತವೆ. ಅದರಲ್ಲೂ ಶಿಲೀಂಧ್ರ ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿದ್ದಾಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

infection

ಯೋನಿಯ ಬಗ್ಗೆ ಇರುವ ಇಂತಹ ಕಟ್ಟುಕಥೆಗಳನ್ನು ನಂಬಬೇಡಿ!

ಆದರೆ ಶಿಲೀಂಧ್ರ ಅಗತ್ಯಕ್ಕೂ ಹೆಚ್ಚು ವೃದ್ಧಿಗೊಂಡರೆ ಇದು ಸೋಂಕಿಗೆ ಕಾರಣವಾಗುತ್ತದೆ. ಇಂದಿನ ಲೇಖನದಲ್ಲಿ ಮಹಿಳೆಯರಲ್ಲಿ ಎದುರಾಗುವ ವೃಂತ ಕೋಶ ಅಥವಾ ಯೋನಿನಾಳದ ಶಿಲೀಂಧ್ರದ ಸೋಂಕಿನ ಬಗ್ಗೆ ನೋಡೋಣ:....

ಯೋನಿನಾಳದ ಶಿಲೀಂಧ್ರದ ಸೋಂಕು ಎಂದರೇನು?

ಯೋನಿನಾಳದ ಶಿಲೀಂಧ್ರದ ಸೋಂಕು ಎಂದರೇನು?

ಕ್ಯಾಂಡಿಡಾ ಎಂಬ ಹೆಸರಿನ ಶಿಲೀಂಧ್ರ ಮಿತಿಮೀರಿ ಅಭಿವೃದ್ಧಿಗೊಂಡಾಗ ಈ ಸೋಂಕು ಎದುರಾಗುತ್ತದೆ. ಈ ಶಿಲೀಂಧ್ರ ಚರ್ಮದ ತೇವದಲ್ಲಿ ಆಶ್ರಯ ಪಡೆಯುತ್ತದೆ ಹಾಗೂ ದೇಹದೊಳಗಿನ ದ್ರವಭಾಗವಿರುವಲ್ಲೆಲ್ಲಾ ಆಶ್ರಯ ಪಡೆಯುತ್ತದೆ. ಬಾಯಿ, ಗಂಟಲು, ಕರುಳು, ನಾಲಿಗೆ ಹಾಗೂ ಮುಖ್ಯವಾಗಿ ಯೋನಿಯಲ್ಲಿ ಆಶ್ರಯ ಪಡೆದಿದ್ದು ಸಾಮಾನ್ಯವಾಗಿ ಇದು ಆರೋಗ್ಯಕ್ಕೆ ಪೂರಕವೇ ಆಗಿರುತ್ತದೆ. ಆದರೆ ಯಾವಾಗ ಇವು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಗೊಳ್ಳುತ್ತವೆಯೋ ಆಗ ಇದು ಸೋಂಕು ಉಂಟು ಮಾಡುತ್ತವೆ.

ಕ್ಯಾಂಡಿಡಾ ಶಿಲೀಂಧ್ರದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಪ್ರಬೇಧಗಳಿವೆ. ಇವುಗಳಲ್ಲಿ ಸುಮಾರು ಹದಿನೈದು ಮಾತ್ರವೇ ಅತಿಯಾದ ಪ್ರಮಾಣದಲ್ಲಿ ಬೆಳೆದು ಸೋಂಕು ಹರಡುವುದನ್ನು ಗುರುತಿಸಲಾಗಿದೆ. ಸೋಂಕು ಹರಡಿಸಬಲ್ಲ ಶಿಲೀಂಧ್ರಗಳನ್ನು albicans, C. glabrata, C. parapsilosis, C. tropicalis ಹಾಗೂ C. krusei ಮೊದಲಾದ ಹೆಸರುಗಳ ಮೂಲಕ ಗುರುತಿಸಲಾಗುತ್ತದೆ.

ಯೋನಿನಾಳದ ಶಿಲೀಂಧ್ರದ ಸೋಂಕಿಗೆ ಕಾರಣಗಳೇನು?

ಯೋನಿನಾಳದ ಶಿಲೀಂಧ್ರದ ಸೋಂಕಿಗೆ ಕಾರಣಗಳೇನು?

ನಮ್ಮ ದೇಹದಲ್ಲಿರುವ ಸೂಕ್ಷ್ಮಜೀವಿಗಳು ಹಾಗೂ ಶಿಲೀಂಧ್ರದ ಪ್ರಮಾಣದ ಸಮತೋಲನ ಕೆಲವು ಕಾರಣಗಳಿಂದ ಏರುಪೇರಾಗುತ್ತದೆ. ಮಾನಸಿಕ ಒತ್ತಡ, ನಿದ್ದೆಯ ಕೊರತೆ, ಕೆಲವು ಔಷಧಿಗಳ ಪರಿಣಾಮಗಳು, ಲೈಂಗಿಕ ರೋಗಗಳು, ಮಧುಮೇಹ ಹಾಗೂ ಸ್ಥೂಲಕಾಯ ಶಿಲೀಂಧ್ರದ ಸೋಂಕು ಉಂಟುಮಾಡಲು ಕಾರಣವಾಗುತ್ತವೆ.

ಗರ್ಭನಿರೋಧಕ ಕ್ರಮಗಳು ಇದಕ್ಕೆ ಕಾರಣವಾಗಿರಬಹುದು

ಗರ್ಭನಿರೋಧಕ ಕ್ರಮಗಳು ಇದಕ್ಕೆ ಕಾರಣವಾಗಿರಬಹುದು

ಸೂಕ್ಷ್ಮಜೀವಿಗಳು ಹಾಗೂ ಶಿಲೀಂಧ್ರದ ಪ್ರಮಾಣದ ಸಮತೋಲನ ತಪ್ಪಲು ನಮ್ಮ ಕೆಲವು ಜೀವನಕ್ರಮಗಳೂ ಕಾರಣವಾಗುತ್ತವೆ. ಅತಿಯಾದ ಸಕ್ಕರೆ ಇರುವ ಅಹಾರಗಳ ಸೇವನೆ, ಸುಗಂಧವಿಲ್ಲದಿರುವ ಸೋಪುಗಳ ಬಳಕೆ, ನೊರೆಸ್ನಾನ, ಯೋನಿಯ ಒಳಭಾಗ ಸ್ವಚ್ಛಗೊಳಿಸುವ ಡೋಶ್ ಉಪಕರಣದ ಬಳಕೆ, ಜನನಾಂಗದ ಭಾಗದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಅಸಡ್ಡೆ, ಬೆವರು ಹೀರಿಕೊಳ್ಳದ ಬಟ್ಟೆಯಿಂದ ತಯಾರಿಸಿದ ಒಳ ಉಡುಪುಗಳನ್ನು ಧರಿಸುವುದು, ಕೆಲವು ಗರ್ಭನಿರೋಧಕ ಕ್ರಮಗಳು ಇತ್ಯಾದಿಗಳು ಈ ಸೋಂಕಿಗೆ ಕಾರಣವಾಗಬಹುದು.

ಯೋನಿನಾಳದ ಶಿಲೀಂಧ್ರದ ಸೋಂಕಿನ ಲಕ್ಷಣಗಳೇನು?

ಯೋನಿನಾಳದ ಶಿಲೀಂಧ್ರದ ಸೋಂಕಿನ ಲಕ್ಷಣಗಳೇನು?

* ಯೋನಿದ್ವಾರ ಹಾಗೂ ಯೋನಿಯ ಒಳಭಾಗದಲ್ಲಿ ಅಸಾಧ್ಯ ತುರಿಕೆ

* ಯೋನಿಯ ತುಟಿಗಳು ಊದಿಕೊಳ್ಳುವುದು

* ಯೋನಿಯ ಭಾಗದಲ್ಲಿ ಉರಿಯುವುದು

* ಯೋನಿಯಿಂದ ಹಳದಿಮಿಶ್ರಿತ ಅಥವಾ ಹಸಿರುಮಿಶ್ರಿತ ದ್ರವ ಸೋರುವುದು

* ಮೂತ್ರ ವಿಸರ್ಜಿಸುವ ವೇಳೆ ಉರಿ ಕಾಣಿಸಿಕೊಳ್ಳುವುದು

* ಜನನಾಂಗದ ಭಾಗದಲ್ಲಿ ಚರ್ಮ ಕೆಂಪಗಾಗುವುದು

* ಮಿಲನ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು

ಯೋನಿಯ ದುರ್ವಾಸನೆ ಸಮಸ್ಯೆ! ಸಂಕೋಚ ಪಟ್ಟರೆ ಇನ್ನಷ್ಟು ಸಂಕಷ್ಟ!

ಯೋನಿನಾಳದ ಶಿಲೀಂಧ್ರದ ಸೋಂಕಿನ ತಪಾಸಣೆ

ಯೋನಿನಾಳದ ಶಿಲೀಂಧ್ರದ ಸೋಂಕಿನ ತಪಾಸಣೆ

ಈ ಸೋಂಕು ಇರುವ ಬಗ್ಗೆ ವೈದ್ಯರು ರೋಗಿಯ ಆರೋಗ್ಯ ಇತಿಹಾಸವನ್ನು ಪರಿಶೀಲಿಸುತ್ತಾರೆ ಹಾಗೂ ಇದಕ್ಕೂ ಹಿಂದೆ ಶಿಲೀಂಧ್ರದ ಸೋಂಕು ಎದುರಾಗಿತ್ತೇ ಅಥವಾ ಲೈಂಗಿಕ ರೋಗಗಳೇನಾದರೂ ಆವರಿಸಿತ್ತೇ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಬಳಿಕ, ವೈದ್ಯರು ಸೂಕ್ತ ಉಪಕರಣಗಳ ಮೂಲಕ ಯೋನಿಯ ಒಳಭಾಗವನ್ನು ಪರಿಶೀಲಿಸಿ ಕೆಂಪಗಾಗಿರುವ ಬಗ್ಗೆ, ಸ್ರಾವದ ಬಗ್ಗೆ, ವಾಸನೆ, ಊದಿಕೊಂಡಿದೆಯೇ, ಸೋಂಕು ಆವರಿಸಿದ ಬಗ್ಗೆ ಹೊರಗಿನ ಚರ್ಮ ನೀಡುವ ಸೂಚನೆಗಳು, ತುಟಿಗಳು ಹಾಗೂ ಚರ್ಮದಲ್ಲಿ ಬಿರುಕುಗಳಿವೆಯೇ ಎಂಬ ವಿವರಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಈ ಸೋಂಕು ಎದುರಾಗಿರುವನ್ನು ಖಚಿತಪಡಿಸಿಕೊಳ್ಳಲು vaginal wet mount test ಎಂಬ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಉಪ್ಪುನೀರಿನ ದ್ರಾವಣದೊಂದಿಗೆ ಪರೀಕ್ಷಿಸಲಾಗುತ್ತದೆ

ಉಪ್ಪುನೀರಿನ ದ್ರಾವಣದೊಂದಿಗೆ ಪರೀಕ್ಷಿಸಲಾಗುತ್ತದೆ

ಈ ಪರೀಕ್ಷೆಯಲ್ಲಿ ಯೋನಿಯ ಸ್ರಾವದ ಕೊಂಚ ಪ್ರಮಾಣವನ್ನು ಉಪ್ಪುನೀರಿನ ದ್ರಾವಣದೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಬಳಿಕ ಈ ಮಿಶ್ರಣವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿರಿಸಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಈ ಸ್ರಾವ ಉಪ್ಪುನೀರನ್ನು ಹೀರಿಕೊಂಡು ಉಬ್ಬಿದ್ದರೆ ಯೋನಿನಾಳದಲ್ಲಿ ಶಿಲೀಂಧ್ರದ ಸೋಂಕು ಆವರಿಸಿದೆ ಎಂದು ಖಚಿತವಾಗುತ್ತದೆ.

KOH slide test ಎಂಬ ಪರೀಕ್ಷೆ

KOH slide test ಎಂಬ ಪರೀಕ್ಷೆ

ಇದರ ಜೊತೆಗೇ KOH slide test ಎಂಬ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪೊಟ್ಯಾಶಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಯೋನಿಯ ಸ್ರಾವವನ್ನು ಮಿಶ್ರಣ ಮಾಡಲಾಗುತ್ತದೆ. ಈ ಪ್ರಬಲ ದ್ರಾವಣದಲ್ಲಿ ಯೋನಿಸ್ರಾವದಲ್ಲಿದ್ದ ಬ್ಯಾಕ್ಟೀರಿಯಾ ಮತ್ತು ಜೀವಕೋಶಗಳು ನಷ್ಟಗೊಂಡು ಕೇವಲ ಶಿಲೀಂಧ್ರದ ಕೋಶಗಳು ಮಾತ್ರವೇ ಉಳಿದುಕೊಳ್ಳುತ್ತವೆ. ಈ ಶಿಲೀಂಧ್ರದ ಬಗೆಯನ್ನು ಕಂಡುಕೊಂಡು ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಸಲಹೆ ಮಾಡಲಾಗುತ್ತದೆ.

ಯೋನಿನಾಳದ ಶಿಲೀಂಧ್ರದ ಸೋಂಕಿಗೆ ಒದಗಿಸಲಾಗುವ ಚಿಕಿತ್ಸೆಗಳು

ಯೋನಿನಾಳದ ಶಿಲೀಂಧ್ರದ ಸೋಂಕಿಗೆ ಒದಗಿಸಲಾಗುವ ಚಿಕಿತ್ಸೆಗಳು

ಈ ಸೋಂಕಿಗೆ ಚಿಕಿತ್ಸೆಯ ರೂಪದಲ್ಲಿ ಶಿಲೀಂಧ್ರ ನಾಶಕ ಗುಳಿಗೆಗಳು, ಪ್ರತಿಜೀವಕಗಳನ್ನು ಸೇವಿಸಲು, ಯೋನಿಯೊಳಗೆ ಹಚ್ಚಿಕೊಳ್ಳಬೇಕಾದ ಔಷಧಿ (vaginal suppositories) ಅಥವಾ ಕ್ರೀಮ್ ಗಳನ್ನು ಹಚ್ಚಲು ಸಲಹೆ ಮಾಡಬಹುದು. ಶಿಲೀಂಧ್ರದ ಸೋಂಕನ್ನು ನಿವಾರಿಸಲು ಯೋನಿಯೊಳಗೆ ಹಚ್ಚಿಕೊಳ್ಳಬೇಕಾದ ಔಷಧಿಗಳಲ್ಲಿ miconazole, tioconazole, butoconazole, ಹಾಗೂ clotrimazole ಪ್ರಮುಖವಾಗಿವೆ.

ಗರ್ಭಿಣಿಯಾಗಿದ್ದರೆ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ

ಗರ್ಭಿಣಿಯಾಗಿದ್ದರೆ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ

ಒಂದು ವೇಳೆ ನೀವು ಗರ್ಭಿಣಿಯಾಗಿದ್ದರೆ ಇವುಗಳಲ್ಲಿ ಯಾವುದೇ ಔಷಧಿಯನ್ನು ಪ್ರಯೋಗಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಒಂದು ವೇಳೆ ಈ ಸೋಂಕು ತೀವ್ರವಾಗಿದ್ದರೆ fluconazole ಹಾಗೂ itraconazoleಮೊದಲಾದ ಶಿಲೀಂಧ್ರನಿವಾರಕ ಔಷಧಿಗಳನ್ನು ಹೊಟ್ಟೆಗೆ ತೆಗೆದು ಕೊಳ್ಳಬೇಕಾಗಬಹುದು. ಈ ಔಷಧಿಗಳ ಗುಣಪಡಿಸುವ ಪ್ರಮಾಣ 80% ಕ್ಕೂ ಹೆಚ್ಚಾಗಿದ್ದು ಸೋಂಕು ನಿವಾರಣೆಯಾಗುವ ಸಾಧ್ಯತೆ ಹೆಚ್ಚು. ಆದರೆ ಈ ಔಷಧಿಗಳ ಮಿತಿಮೀರಿದ ಪ್ರಮಾಣದ ಸೇವನೆಯಿಂದ ಯಕೃತ್ ನ ತೊಂದರೆ ಎದುರಾಗಬಹುದು.

ಯೋನಿನಾಳದ ಶಿಲೀಂಧ್ರದ ಸೋಂಕು ಉಲ್ಬಣಗೊಂಡರೆ ಏನಾಗುತ್ತದೆ?

ಯೋನಿನಾಳದ ಶಿಲೀಂಧ್ರದ ಸೋಂಕು ಉಲ್ಬಣಗೊಂಡರೆ ಏನಾಗುತ್ತದೆ?

ಒಂದು ವೇಳೆ ಸೊಂಕು ಅತಿ ಹೆಚ್ಚು ತೀವ್ರವಲ್ಲದಿದ್ದರೆ nystatin, miconazole, clotrimazole ಮೊದಲಾದ ಪ್ರಬಲವಲ್ಲದ ಔಷಧಿಗಳೇ ಇದರ ನಿವಾರಣೆಗೆ ಸಾಕಾಗುತ್ತದೆ. ಒಂದು ವೇಳೆ ಯೋನಿನಾಳದ ಶಿಲೀಂಧ್ರದ ಸೋಂಕು ಉಲ್ಬಣಗೊಂಡರೆ ಯಾವ ತೊಡಕುಗಳು ಎ಼ದುರಾಗುತ್ತವೆ? ಸಾಮಾನ್ಯವಾಗಿ ಗರ್ಭಿಣಿಯರಿಗೆ ಈ ಸೋಂಕು ಉಂಟಾಗಿದ್ದರೆ ಹೆರಿಗೆಗೂ ಮುನ್ನ ಮಗುವಿನ ಜನನವಾಗುವುದು, ಹೆರಿಗೆಗೂ ಮುನ್ನ ಜನನಾಂಗದ ಭಾಗದಲ್ಲಿ ಸೀಳುವಿಕೆ ಕಾಣಿಸಿಕೊಳ್ಳುವುದು ಹಾಗೂ ಇತರ ತೊಂದರೆಗಳು ಎದುರಾಗುತ್ತವೆ.

ಈ ತೊಂದರೆ ಉಲ್ಬಣಗೊಂಡರೆ ತುಂಬಾನೇ ಡೇಂಜರ್

ಈ ತೊಂದರೆ ಉಲ್ಬಣಗೊಂಡರೆ ತುಂಬಾನೇ ಡೇಂಜರ್

ಒಂದು ವೇಳೆ ಚಿಕಿತ್ಸೆ ವಿಳಂಬವಾದರೆ ಕೆಲವು ಬಗೆಯ ಕ್ಯಾಂಡಿಡಾ ಶಿಲೀಂಧ್ರಗಳು ಅತಿ ಹೆಚ್ಚಿನ ಹಾನಿ ಎಸಗುತ್ತವೆ. ಇದರಲ್ಲಿ ಪ್ರಮುಖವಾದ ತೊಂದರೆ ಎಂದರೆ vaginal thrush ಎಂಬ ಸ್ಥಿತಿ ಎದುರಾಗುವುದು ಹಾಗೂ ಈ ಸ್ಥಿತಿಯಲ್ಲಿ ಜನನಾಂಗದ ಭಾಗ ಅತಿಯಾಗಿ ಕೆಂಪಗಾಗುತ್ತದೆ ಹಾಗೂ ಮುಟ್ಟಲೂ ಆಗದಷ್ಟು ಸಂವೇದನೆ ಪಡೆಯುತ್ತದೆ. Candida albicansಎಂಬ ಶಿಲೀಂಧ್ರ ವಿಪರೀತವಾಗಿ ಬೆಳೆಯುವ ಮೂಲಕ ಎದುರಾಗುವ ಈ ತೊಂದರೆ ಉಲ್ಬಣಗೊಂಡರೆ ಇತರ ಅಂಗಗಳಿಗೂ ಹರಡಿ ನಿಯಂತ್ರಣ ಸಾಧಿಸದಿದ್ದರೆ ಪ್ರಾಣಾಪಾಯವೂ ಎದುರಾಗಬಹುದು.

ಕ್ಯಾಂಡಿಡಾ ಶಿಲೀಂಧ್ರ

ಕ್ಯಾಂಡಿಡಾ ಶಿಲೀಂಧ್ರ

ಈ ಸೋಂಕನ್ನು ನಿಯಂತ್ರಿಸದಿದ್ದರೆ ಕಾಲಕ್ರಮೇಣ ರಕ್ತದಲ್ಲಿಯೂ ಸೇರಿಕೊಂಡು ದೇಹದ ಇತರ ಭಾಗಗಳಿಗೆಲ್ಲಾ ಪಸರಿಸ ತೊಡಗುತ್ತದೆ. ಮುಖ್ಯವಾಗಿ ಶ್ವಾಸಕೋಶ, ಹೃದಯದ ಕವಾಟಗಳು, ಯಕೃತ್ ಮೊದಲಾ ಪ್ರಮುಖ ಅಂಗಗಳಿಗೆಲ್ಲಾ ಆವರಿಸಿ invasive candidiasis ಎಂಬ ಸ್ಥಿತಿ ಎದುರಾಗಲು ಕಾರಣವಾಗುತ್ತದೆ. ಈ ಸೋಂಕು ಇನ್ನೂ ಮುಂದುವರೆದರೆ ಇತರ ಪ್ರಮುಖ ಅಂಗಗಳಾದ ಮೆದುಳು ಮತ್ತು ಮೆದುಳುಬಳ್ಳಿ (meningitis),ಅನ್ನನಾಳ (esophagitis) ಹಾಗೂ ಕಣ್ಣಿನ ಒಳಭಾಗದ (endophthalmitis) ಸೋಂಕುಗಳಿಗೆ ಕಾರಣವಾಗುತ್ತದೆ. ಇತರ ಪ್ರಕರಣಗಳಲ್ಲಿ, ಕ್ಯಾಂಡಿಡಾ ಶಿಲೀಂಧ್ರ ರಕ್ತದಲ್ಲಿಯೇ ಸೋಂಕನ್ನು ಉಂಟುಮಾಡಬಹುದು. ಈ ಸ್ಥಿತಿಗೆ candidemia ಎಂದು ಕರೆಯುತ್ತಾರೆ.

ಯೋನಿನಾಳದ ಶಿಲೀಂಧ್ರದ ಸೋಂಕಿಗೆ ಒಳಗಾಗದಿರಲು ಯಾವ ಮುನ್ನೆಚ್ಚರಿಕೆ ವಹಿಸಬೇಕು?

ಯೋನಿನಾಳದ ಶಿಲೀಂಧ್ರದ ಸೋಂಕಿಗೆ ಒಳಗಾಗದಿರಲು ಯಾವ ಮುನ್ನೆಚ್ಚರಿಕೆ ವಹಿಸಬೇಕು?

* ಸದಾ ಬೆವರನ್ನು ಹೀರಿಕೊಳ್ಳುವ ಉತ್ತಮ ಗುಣಮಟ್ಟದ ಹತ್ತಿಯ ಒಳ ಉಡುಪುಗಳನ್ನೇ ತೊಡಿ, ಬಿಗಿಯಾದ ಒಳ ಉಡುಪುಗಳನ್ನು ತೊಡದಿರಿ.

* ಒಂದು ವೇಳೆ ನೀವು ಈಜಲು ಹೋದರೆ ಹಿಂದಿರುಗಿದ ತಕ್ಷಣವೇ ಒದ್ದೆಬಟ್ಟೆಗಳನ್ನು ಬದಲಿಸಿ ಸೂಕ್ಷ್ಮಭಾಗಗಳನ್ನು ಸ್ವಚ್ಛವಾಗಿ ಒಣಬಟ್ಟೆಯಿಂದ ಒರೆಸಿಕೊಂಡು ಒಣಬಟ್ಟೆಗಳನ್ನು ಧರಿಸಿ. ತೇವವಾಗಿರುವ ಭಾಗದಲ್ಲಿ ಶಿಲೀಂಧ್ರದ ಸೋಂಕು ಸುಲಭವಾಗಿ ಆವರಿಸಿಕೊಳ್ಳುತ್ತದೆ.

* ಬಿಸಿನೀರಿನ ಸ್ನಾನದಿಂದ ಆದಷ್ಟೂ ದೂರವಿರಿ.

* ಅತಿಯಾದ ಪ್ರತಿಜೀವಕ ಔಷಧಿಗಳನ್ನು (antibiotics) ಸೇವಿಸುವುದನ್ನು ನಿಲ್ಲಿಸಿ. ಇವು ದೇಹದಲ್ಲಿ, ವಿಶೇಷವಾಗಿ ಯೋನಿಯಲ್ಲಿ ಇರಬೇಕಾದ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನೂ ಕೊಂದು ಸಮತೋಲನವನ್ನು ಏರುಪೇರುಗೊಳಿಸುತ್ತದೆ.

* ಯೋನಿಯೊಳಗಣ ಭಾಗವನ್ನು ಸ್ವಚ್ಛಗೊಳಿಸುವ ಕ್ರಮವನ್ನು (douching) ಅನುಸರಿಸದಿರಿ ಅಥವಾ ಯೋನಿಯನ್ನು ಸ್ವಚ್ಛಗೊಳಿಸುವ ದ್ರಾವಣಗಾಳಾದ ಅಡುಗೆ ಸೋಡಾ, ಶಿರ್ಕಾ ಮೊದಲಾದವುಗಳನ್ನು ಬಳಸದಿರಿ, ಇವು ಯೋನಿಯೊಳಗಣ ಆಮ್ಲೀಯ-ಕ್ಷಾರೀಯ ಮಟ್ಟದ ಸಮತೋಲನವನ್ನು (pH balance) ಏರುಪೇರುಗೊಳಿಸಬಹುದು. ಈ ಲೇಖನ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳಿ.

English summary

Everything You Need To Know About Vaginal Yeast Infection

Yeast infection occurs due to the overgrowth of the yeast called Candida. This fungus lives on the skin and inside the body such as mouth, throat, gut and vagina which doesn't normally affect your health. But, when they grow out of control, they cause infections. Candida albicans, C. glabrata, C. tropicalis are some species that cause infection.
X
Desktop Bottom Promotion