For Quick Alerts
ALLOW NOTIFICATIONS  
For Daily Alerts

ಪುರುಷರೇ ಇಂತಹ ಸಮಸ್ಯೆಗಳಿಗೆಲ್ಲ ನಾಚಿಕೆ ಪಟ್ಟುಕೊಳ್ಳಬೇಡಿ- ಆಮೇಲೆ ಚಿಂತಿಸಿ ಫಲವಿಲ್ಲ!

|

ಸಾಮಾನ್ಯವಾಗಿ ಪುರುಷರು ಲೈಂಗಿಕತೆಯಲ್ಲಿಯೂ ವೈವಿಧ್ಯತೆಯನ್ನು ಬಯಸುವವರಾಗಿದ್ದು ಸಾಮಾನ್ಯ ಅನುಭವಕ್ಕೂ ಮೀರಿದ ಅನುಭವವನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರಲ್ಲಿಯೂ ಲೈಂಗಿಕ ಸಾಮರ್ಥ್ಯ, ಶಕ್ತಿ ಹಾಗೂ ಕ್ಷಮತೆ ಭಿನ್ನವಾಗಿದ್ದು ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಅಥವಾ ಹಿಂದೆ ಸಾಧ್ಯವಾಗುತ್ತಿದ್ದುದು ಈಗ ಆ ಕ್ಷಮತೆಯನ್ನು ಪಡೆಯಲಾಗದೇ ಹೋದರೆ, ಈಗ ತಜ್ಞರ ಸಲಹೆಯನ್ನು ಪಡೆಯುವ ಸಮಯವಾಗಿದೆ.

ಸಾಮರ್ಥ್ಯದಲ್ಲಿ ಎದುರಾಗುವ ಕೊರತೆ ಯಾವುದೇ ಪುರುಷನ ಅಹಮ್ಮಿಕೆಯನ್ನೇ ಅಲ್ಲಾಡಿಸಿಬಿಡುತ್ತದೆ ಹಾಗೂ ಲೈಂಗಿಕ ತೊಂದರೆಗಳು ಆರೋಗ್ಯವನ್ನೂ ಇತರ ರೀತಿಗಳಲ್ಲಿ ಬಾಧಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆ ಹಾಗೂ ಈ ಬಗ್ಗೆ ಕುಟುಂಬ ವೈದ್ಯರಲ್ಲಿ ಹೇಳಿಕೊಳ್ಳಲು ಎಂದಿಗೂ ಹಿಂಜರಿಯಬಾರದು ಹಾಗೂ ನಿಮ್ಮ ಅರಿವಿಗೆ ಬಾರದ ಕಾರಣವನ್ನು ವೈದ್ಯರು ಸೂಕ್ತ ಪರೀಕ್ಷೆಯ ಮೂಲಕ ಕಂಡುಕೊಂಡು ಚಿಕಿತ್ಸೆಯನ್ನು ಸೂಚಿಸಬಹುದು. ಪುರುಷರು ಹೇಳಿಕೊಳ್ಳಲು ಹಿಂಜರಿಯುವ ಹಾಗೂ ಮುಜುಗರ ಅನುಭವಿಸುವ ಐದು ಸಾಮಾನ್ಯ ಕಾರಣಗಳನ್ನು ಇಂದಿನ ಲೇಖನದಲ್ಲಿ ಚರ್ಚಿಸಲಾಗಿದೆ...

ನಿಮಿರು ದೌರ್ಬಲ್ಯ

ನಿಮಿರು ದೌರ್ಬಲ್ಯ

ನಿಮಿರು ದೌರ್ಬಲ್ಯ ಅಥವಾ ನಪುಂಸಕತನ ಎಂದರೆ ಪುರುಷರ ಜನನಾಂಗ ಅಗತ್ಯ ರಕ್ತಪರಿಚಲನೆಯನ್ನು ಪಡೆಯದೇ ಲೈಂಗಿಕ ಕ್ರಿಯೆಗೆ ಅಗತ್ಯವಾದ ಹಿರಿದಾಗುವಿಕೆಯ ಗುಣವನ್ನು ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಈ ತೊಂದರೆ ಇರುವ ಪುರುಷರು ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಅಗತ್ಯ ನಿಮಿರುತನವನ್ನು ಪಡೆಯಲು ಅಗತ್ಯಪ್ರಮಾಣದ ರಕ್ತಪರಿಚಲನೆಯೂ ಅಗತ್ಯವಿದ್ದು ನಿಮಿರುತನ ಸಾಧ್ಯವಾಗುತ್ತಿಲ್ಲವೆಂದರೆ ಇದಕ್ಕೆ ಸಂಭಾವ್ಯ ಹೃದ್ರೋಗ ಅಥವಾ ನರಗಳಿಗೆ ಸಂಬಂಧಿಸಿದ ಯಾವುದೋ ಕಾಯಿಲೆಯೂ ಕಾರಣವಾಗಿರಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಪುರುಷರ ನಿಮಿರು ದೌರ್ಬಲ್ಯ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

ಟೆಸ್ಟೋಸ್ಟೆರಾನ್ ಕೊರತೆಯ ಲಕ್ಷಣ (TESTOSTERONE DEFICIENCY SYNDROME)

ಟೆಸ್ಟೋಸ್ಟೆರಾನ್ ಕೊರತೆಯ ಲಕ್ಷಣ (TESTOSTERONE DEFICIENCY SYNDROME)

ಹೈಪೋಗೋನಾಡೈಸಂ ಎಂದೂ ಕರೆಯಲಾಗುವ ಈ ತೊಂದರೆ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಕಸಿದುಕೊಳ್ಳುವುದು ಮಾತ್ರವಲ್ಲ ಮೂಳೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ಸ್ನಾಯುಗಳ ಶಕ್ತಿ ಹಾಗೂ ಮನೋಭಾವವನ್ನೂ ಬಾಧೆಗೊಳಿಸುತ್ತದೆ. ಒಂದು ವೇಳೆ ನಿಮಿರುತನ ಪಡೆಯಲು ಪುರುಷರು ವಿಫಲಗೊಳ್ಳುತ್ತಿದ್ದರೆ ಇದಕ್ಕೆ ಕಾರಣವನ್ನು ಕಂಡುಕೊಳ್ಳಲು ವೈದ್ಯರು ಮುಂಜಾನೆ ಖಾಲಿಹೊಟ್ಟೆಯಲ್ಲಿ ಸಂಗ್ರಹಿಸಲಾದ ರಕ್ತದ ಪರೀಕ್ಷೆಯ ಮೂಲಕ ಕಡಿಮೆ ಟೆಸ್ಟ್ರೊಸ್ಟೆರಾನ್ ಮಟ್ಟವೇನಾದರೂ ಈ ತೊಂದರೆಗೆ ಕಾರಣವೇ ಎಂಬುದನ್ನು ಮೊದಲಾಗಿ ಪರೀಕ್ಷಿಸುತ್ತಾರೆ. ಒಂದು ವೇಳೆ ಕೊರತೆ ಇದೆ ಎಂದಾದರೆ ಇದಕ್ಕೆ ಟೆಸ್ಟ್ರೊಸ್ಟೆರಾನ್ ಬದಲಿ ಚಿಕಿತ್ಸೆ (Testosterone replacement therapy) -ಉದಾಹರಣೆಗೆ ಜೆಲ್ ರೂಪದ ಟೆಸ್ಟ್ರೊಸ್ಟೆರಾನ್ ಬಳಕೆಯಿಂದ ಈ ತೊಂದರೆ ನಿವಾರಣೆ ಸಾಧ್ಯವೇ ಎಂದು ಪರಿಶೀಲಿಸುತ್ತಾರೆ. ಈ ತೊಂದರೆಯ ಚಿಕಿತ್ಸೆಗೆ ಕೊಂಚ ಹೆಚ್ಚಿನ ಕಾಲದ ಅವಶ್ಯಕತೆ ಇದ್ದು ನಿಯಮಿತವಾಗಿ ಆರೋಗ್ಯವನ್ನು ಪರಿಶೀಲಿಸಿಕೊಳ್ಳುತ್ತಿರಬೇಕು ಹಾಗೂ ಅಗತ್ಯ ಮಟ್ಟದ ಟೆಸ್ಟ್ರೊಸ್ಟೆರಾನ್ ದೇಹದಲ್ಲಿ ಲಭ್ಯವಾಗುವವರೆಗೂ ಮುಂದುವರೆಸಬೇಕಾಗುತ್ತದೆ. ಆದರೆ ಲೈಂಗಿಕ ಕೊರತೆಗೆ ಕೇವಲ ಟೆಸ್ಟ್ರೊಸ್ಟೆರಾನ್ ಕೊರತೆಯೊಂದೇ ಕಾರಣವಾಗುವುದಿಲ್ಲ, ಟೆಸ್ಟ್ರೊಸ್ಟೆರಾನ್ ಮಟ್ಟ ಕಡಿಮೆ ಇದ್ದೂ ಕ್ಷಮತೆ ಕಡಿಮೆ ಇರದೇ ಇದ್ದಲ್ಲಿ ಇದರ ತಂಟೆಗೆ ಹೋಗದಿರುವುದೇ ವಾಸಿ.

ಪೀರೋನಿ ಕಾಯಿಲೆ (PEYRONIE’S DISEASE)

ಪೀರೋನಿ ಕಾಯಿಲೆ (PEYRONIE’S DISEASE)

ಈ ಕಾಯಿಲೆ ಇರುವ ಪುರುಷರ ಜನನಾಂಗ ನಿಮಿರಿದ ಸ್ಥಿತಿಯಲ್ಲಿದ್ದಾಗ ಸಹಜ ಗಾತ್ರವನ್ನು ಪಡೆಯದೇ ಬುಡದಲ್ಲಿ ದಪ್ಪ ಹಾಗೂ ತುದಿಯಲ್ಲಿ ಸಪೂರವಾಗಿರುತ್ತದೆ ಅಥವಾ ಒಂದು ಕಡೆಯಲ್ಲಿ ವಿಪರೀತವಾಗಿ ಬಾಗಿರುತ್ತದೆ. ಇವರಿಗೆ ಲೈಂಗಿಕ ಕ್ರಿಯೆಯಲ್ಲಿ ನೋವಿನ ಅನುಭವವಾಗುತ್ತಿದ್ದು ಲೈಂಗಿಕ ಚಟುವಟಿಕೆಯಿಂದ ಅನಿವಾರ್ಯವಾಗಿ ವಿಮುಖರಾಗಬೇಕಾಗುತ್ತದೆ. ಜನನಾಂಗದ ಈ ಲಕ್ಷಣಕ್ಕೆ ಹಿಂದೆಂದೋ ಆದ ಪಟ್ಟು, ವಿಶೇಷವಾಗಿ ಜನನಾಂಗದ ಮೇಲ್ಭಾಗದಲ್ಲಿ ಚಿಕ್ಕ ಗಡ್ಡೆಯ ರೂಪದಲ್ಲಿರುತ್ತದೆ. ಸಾಮಾನ್ಯವಾಗಿ ಈ ನೋವು ಪೆಟ್ಟು ಆದ ಒಂದರಿಂದ ಎರಡು ವರ್ಷದಲ್ಲಿ ತಾನಾಗಿಯೇ ಕಡಿಮೆಯಾಗುತ್ತದೆ, ಆದರೆ ಬಾಗುವಿಕೆ ಮಾತ್ರ ಹಾಗೇ ಉಳಿದುಕೊಳ್ಳುತ್ತದೆ.

ಈ ತೊಂದರೆಗೆ ಇತ್ತೀಚಿನವರೆಗೂ ಕೇವಲ ಶಸ್ತ್ರಚಿಕಿತ್ಸೆಯೊಂದೇ ಆಯ್ಕೆಯಾಗಿತ್ತು. ಇದರಲ್ಲಿ ಸಂಭಾವ್ಯ ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗುತ್ತಿತ್ತು. ಇಂದು ಆಧುನಿಕ ವೈದ್ಯವಿಜ್ಞಾನ ಹೊಸ ಚಿಕಿತ್ಸೆಗಳನ್ನು ಪರಿಚಯಿಸಿದ್ದು ಹೆಚ್ಚಿನವು ಪ್ರಾಯೋಗಿಕ ಹಂತದಲ್ಲಿವೆ. ಇದರಲ್ಲಿ ಜನನಾಂಗದ ಬಾಗಿರುವ ಭಾಗದಲ್ಲಿ ಜನನಾಂಗದೊಳಗಿನ ಅಂಗಾಂಶಕ್ಕೆ ಸರಿಸಮನಾದ ಸಂಯುಕ್ತಗಳನ್ನು ಇಂಜೆಕ್ಷನ್ ಮೂಲಕ ಅಳವಡಿಸಿ ಗಾತ್ರವನ್ನು ಸರಿಪಡಿಸುವುದೂ ಒಂದಾಗಿದೆ.

ನಿಮಿರುತನ ಹೆಚ್ಚು ಕಾಲ ಇರುವುದು (PROLONGED ERECTION (PRIAPISM)

ನಿಮಿರುತನ ಹೆಚ್ಚು ಕಾಲ ಇರುವುದು (PROLONGED ERECTION (PRIAPISM)

ಸಾಮಾನ್ಯ ಸ್ಥಿತಿಯಲ್ಲಿ ಸ್ಖಲನಗೊಂಡ ಬಳಿಕ ಪುರುಷರ ಜನನಾಂಗ ಅನುದ್ರೇಕದ ಸ್ಥಿತಿಗೆ ಹಿಂದಿರುಗಬೇಕು. ಕೆಲವರಲ್ಲಿ ಈ ನಿಮಿರುತನ ಹೆಚ್ಚು ಕಾಲ ಉಳಿದಿರುತ್ತದೆ. ಇದನ್ನು ಲೈಂಗಿಕ ಸಾಮರ್ಥ್ಯವೆಂದು ಕರೆಯಬಹುದಾದರೂ ಒಂದು ವೇಳೆ ಈ ನಿಮಿರುತನ ನಾಲ್ಕು ಘಂಟೆಗಳಿಗೂ ಹೆಚ್ಚು ಕಾಲ ಇಳಿಯದೇ ಇದ್ದರೆ ಮಾತ್ರ ತಕ್ಷಣ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಒಂದು ವೇಳೆ ನಿಮಿರಿದ್ದ ಜನನಾಂಗ ಎಂಟು ಘಂಟೆಗಳಿಗೂ ಹೆಚ್ಚು ಕಾಲ ಇದೇ ಸ್ಥಿತಿಯಲ್ಲಿದ್ದರೆ ಶಾಶ್ವತವಾಗಿ ಹಾಗೇ ಇರುವ ಸಾಧ್ಯತೆ ಇರುವ ಕಾರಣ ಈ ಅವಧಿಯೊಳಗೇ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಈ ಸ್ಥಿತಿಗೆ ಬರಲು ಉಪಯೋಗಿಸುವ ಔಷಧಿಗಳು. ವಾಯಾಗ್ರಾದಂತಹ ಮಾತ್ರೆಗಳ ಸೇವನೆಯಿಂದ ಈ ಅಡ್ಡಪರಿಣಾಮ ಅಪರೂಪವಾಗಿ ಕಂಡುಬರಬಹುದು ಹಾಗೂ ನಿಮಿರುತನ ಪಡೆಯಲು ಶಿಶ್ನಕ್ಕೇ ನೇರವಾಗಿ ಇಂಜೆಕ್ಷನ ಮೂಲಕ ನಿಡಲಾಗುವ ಔಷಧಿಗಳೂ ಕಾರಣವಾಗಬಹುದು. ಕೆಲವೊಮ್ಮೆ ಮಾನಸಿಕ ತೊಂದರೆಗಳಿಗಾಗಿ ನೀಡಲಾಗುವ ಸ್ಟೆರಾಯ್ಡುಗಳು, ಮಾದಕ ಪದಾರ್ಥಗಳಾದ ಕೋಕೇಯ್ನ್ ಸೇವನೆ ಅಥವಾ ಸಿಕಲ್ ಸೆಲ್ ಕಾಯಿಲೆ (ರಕ್ತದ ಕೆಂಪುಕಣಗಳ ಅಸಾಮರ್ಥ್ಯತೆ) ಇರುವ ವ್ಯಕ್ತಿಗಳಲ್ಲಿಯೂ ಈ ತೊಂದರೆ ಕಾಣಿಸಿಕೊಳ್ಳಬಹುದು.

ಈ ತೊಂದರೆಗಳು ಕಾಡದೇ ಇರಲು ಪುರುಷರು ಕೈಗೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು:

ಈ ತೊಂದರೆಗಳು ಕಾಡದೇ ಇರಲು ಪುರುಷರು ಕೈಗೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು:

ಪುರುಷರು ಎದುರಿಸುವ ಹಲವಾರು ಲೈಂಗಿಕ ತೊಂದರೆಗಳನ್ನು ಆದಷ್ಟೂ ತಡವಾಗಿಸಲು ಅಥವಾ ಬಾರದಂತೆ ತಡೆಗಟ್ಟಲು ಸಾಮಾನ್ಯ ಮುನ್ನೆಚ್ಚರಿಕೆಗಳಾದ ಆರೋಗ್ಯಕರ ಆಹಾರಕ್ರಮ, ನಿಯಮಿತ ವ್ಯಾಯಾಮ, ಧೂಮಪಾನ ನಿಲ್ಲಿಸುವುದು, ತೂಕ ಕಡಿಮೆ ಇರಿಸಿಕೊಳ್ಳುವುದು ಮೊದಲಾದವೇ ಸಾಕಾಗುತ್ತದೆ ಎಂದು ಡಾ. ಕಾರ್ಸನ್ ತಿಳಿಸುತ್ತಾರೆ.ಕೆಲವು ತೊಂದರೆಗಳು ಎದುರಾದ ಬಳಿಕ ವೈದ್ಯಕೀಯ ಚಿಕಿತ್ಸೆ ಅನಿವಾರ್ಯವಾದರೂ ಆಹಾರಕ್ರಮದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಮದ ಮೂಲಕ ದೇಹದಲ್ಲಿ ಟೆಸ್ಟೊಸ್ಟೆರಾನ್ ಮಟ್ಟವನ್ನು ಏರಿಸುವುದು ಹಾಗೂ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿ ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಇತರ ಅನಾರೋಗ್ಯಗಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಈ ತೊಂದರೆಗಳು ಕಾಡದೇ ಇರಲು ಪುರುಷರು ಕೈಗೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು:

ಈ ತೊಂದರೆಗಳು ಕಾಡದೇ ಇರಲು ಪುರುಷರು ಕೈಗೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು:

ಈ ತೊಂದರೆ ಇರುವ ಪುರುಷರು ಹಿಂಜರಿಕೆಯನ್ನು ಮರೆತು ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆಗೆ ಒಳಪಡಬೇಕು ಹಾಗೂ ಹೃದ್ರೋಗ ಮತ್ತು ಇತರ ಸಂಬಂಧಿತ ರೋಗಗಳು ಆವರಿಸುವ ಸಾಧ್ಯತೆಯನ್ನೂ ಪರಿಶೀಲಿಸಿಕೊಳ್ಳಬೇಕು. ಪುರುಷರಲ್ಲಿ ಈ ತೊಂದರೆಗೆ ದೈಹಿಕ ಕಾರಣಗಳಿಗೂ ಹೊರತಾಗಿ ಮಾನಸಿಕ ಕಾರಣಗಳಿರಬಹುದು ಎಂದು ಡಾ. ಕಾರ್ಸನ್ ತಿಳಿಸುತ್ತಾರೆ. ಒಂದು ವೇಳೆ ಈ ತೊಂದರೆ ಎಂದಾದರೆ ಪುರುಷರು ತಮ್ಮ ದೈಹಿಕ ಆರೋಗ್ಯದ ಜೊತೆಗೇ ಮಾನಸಿಕ ಚಿಕಿತ್ಸೆಯನ್ನೂ ಪಡೆಯಬೇಕಾಗಿ ಬರಬಹುದು.

English summary

Embarrassing Male Sexual Issues You're not disscussed!

If you want to keep bringing your A-game to the bedroom Opens a New Window.,sometimes you need more than just experience and time on the “field.” When facing a “batting slump” Opens a New Window. or other problems that prevents you from having sex Opens a New Window. , it’s time to call in an expert. In addition to damaging your ego, sexual issues may signal more serious health conditions. In most cases, these can be treated. Don’t be afraid to talk to your doctor early on to determine the underlying cause, and develop a plan of action. here the the five most common sexual problems men encounter, and what you can do about them.
Story first published: Friday, August 24, 2018, 16:00 [IST]
X
Desktop Bottom Promotion