For Quick Alerts
ALLOW NOTIFICATIONS  
For Daily Alerts

ಚಿಕ್ಕವರು ಹಾಗೂ ದೊಡ್ಡವರಿಗೆ ಕಾಡುವ ಕಿವಿ ನೋವಿಗೆ ಮನೆಮದ್ದುಗಳು

|

ಮೂಗು ಕಟ್ಟುವಿಕೆ, ಕೆಮ್ಮು ಹಾಗೂ ಗಂಟಲು ನೋವು ಇರುವಾಗ ಇವುಗಳೊಂದಿಗೆ ಸಾಮಾನ್ಯವಾಗಿ ಬಾಧಿಸುವ ಮತ್ತೊಂದು ಸಮಸ್ಯೆ ಎಂದರೆ ಕಿವಿ ನೋವು. ಹೀಗೆ ಕಿವಿ ನೋವು ಕಾಣಿಸಿಕೊಂಡಾಗ ಮನೆಯಲ್ಲಿಯೇ ಕೆಲ ಮದ್ದುಗಳ ಮೂಲಕ ನೋವು ಉಪಶಮನಗೊಳಿಸಿಕೊಳ್ಳಲು ಸಾಧ್ಯವಿದೆ. ಕಿವಿ ನೋವು ಚಿಕ್ಕವರು ಹಾಗೂ ದೊಡ್ಡವರು ಇಬ್ಬರಿಗೂ ಬಾಧಿಸುತ್ತದೆ. ಇಂಥ ನೋವಿಗೆ ಉಪಶಮನಕ್ಕಾಗಿ 12 ರೀತಿಯ ಮನೆಮದ್ದುಗಳನ್ನು ಈ ಅಂಕಣದಲ್ಲಿ ವಿವರವಾಗಿ ತಿಳಿಸಲಾಗಿದೆ. ಕಿವಿ ಸೋಂಕು ತಡೆಗಟ್ಟುವ ಬಗ್ಗೆ ಸಹ ಹಲವಾರು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ...

ಕಿವಿ ನೋವು ಹೇಗೆ ಬರುತ್ತದೆ?

ಕಿವಿ ನೋವು ಹೇಗೆ ಬರುತ್ತದೆ?

ಪ್ರಥಮವಾಗಿ ಕಿವಿಯಲ್ಲಿ ನೋವು ಯಾಕೆ ಉಂಟಾಗುತ್ತದೆ ಎಂಬುದನ್ನು ತಿಳಿಯೋಣ. ಕಿವಿ ತಮಟೆಯ ಹಿಂಭಾಗದಲ್ಲಿ ಮೇಣ ಸಂಗ್ರಹವಾಗುತ್ತಿರುತ್ತದೆ. ಕೆಲವೊಮ್ಮೆ ಈ ಭಾಗದಲ್ಲಿ ಸೋಂಕು ತಗಲುವುದರಿಂದ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಆದರೂ ಬಹುತೇಕ ಸಮಯದಲ್ಲಿ ಕಿವಿ ನೋವು ಯಾವುದೇ ಉಪಚಾರ ಮಾಡದಿದ್ದರೂ ತಾನಾಗಿಯೇ ವಾಸಿಯಾಗುತ್ತದೆ. ಅಂದರೆ ಸಾಮಾನ್ಯವಾಗಿ ಇದಕ್ಕೆ ಆಂಟಿ ಬಯಾಟಿಕ್ ಔಷಧಿಗಳ ಬಳಕೆ ಬೇಕಾಗುವುದಿಲ್ಲ. ಕಿವಿ ನೋವು ಶಮನಕ್ಕೆ ಸಾಮಾನ್ಯವಾಗಿ ಅಮೊಕ್ಸಿಲಿನ್ ಎಂಬ ಆಂಟಿ ಬಯಾಟಿಕ್ ಔಷಧಿಯನ್ನು ವೈದ್ಯರು ನೀಡುತ್ತಾರೆ. ಆದರೆ ಇದು ನೋವು ಕಡಿಮೆ ಮಾಡುತ್ತದೆ ಎಂಬ ಮಾನಸಿಕ ಸಮಾಧಾನ ಮೂಡಿಸುವುದನ್ನು ಬಿಟ್ಟರೆ ಕಿವಿ ನೋವು ಶಮನಕ್ಕೆ ಔಷಧಿಯಾಗಿ ಪರಿಣಾಮ ಬೀರಲಾರದು ಎಂಬುದು ಹಲವಾರು ವೈದ್ಯಕೀಯ ಅಧ್ಯಯನಗಳಿಂದ ಸಾಬೀತಾಗಿದೆ. ಕೆಲ ಬಾರಿ ಗಾಯ, ಅಥವಾ ನೀರು ಮತ್ತು ಕಿವಿಯೊಳಗೆ ಸೇರಿದ ದ್ರವ ಪದಾರ್ಥಗಳಿಂದಲೂ ಕಿವಿ ಬೇನೆ ಬರುತ್ತದೆ. ಆದರೆ ಈ ಅಂಕಣದಲ್ಲಿ ಶೀತ, ಸೋಂಕು ಮತ್ತು ಉರಿಯೂತದಿಂದ ಉಂಟಾಗುವ ಕಿವಿ ಬೇನೆಗಳಿಗೆ ಮಾತ್ರ ಉಪಶಮನ ನೀಡುವ ಮನೆಮದ್ದುಗಳನ್ನು ತಿಳಿಸಿದ್ದೇವೆ.

ಕಿವಿ ನೋವು ಚಿಕಿತ್ಸೆ ಸಂದರ್ಭದಲ್ಲಿ ಈ ಅಂಶಗಳು ಗಮನದಲ್ಲಿರಲಿ

ಕಿವಿ ನೋವು ಚಿಕಿತ್ಸೆ ಸಂದರ್ಭದಲ್ಲಿ ಈ ಅಂಶಗಳು ಗಮನದಲ್ಲಿರಲಿ

ಚಿಕ್ಕ ಮಕ್ಕಳಿಗೆ ಬರುವ ಕಿವಿ ನೋವು ಶಮನಕ್ಕೆ ಬಿಸಿ ಅಥವಾ ಹಬೆಯ ಚಿಕಿತ್ಸಾ ವಿಧಾನ ಮತ್ತು ಉಗುರು ಬೆಚ್ಚಗಿನ ಆಲಿವ್ ಎಣ್ಣೆ ಅಥವಾ ತೆಂಗಿನೆಣ್ಣೆ ಬಳಸುವ ವಿಧಾನಗಳು ಪ್ರಯೋಜನ ಕಾರಿಯಾಗಿವೆ. ವಯಸ್ಕ ಮಕ್ಕಳು ಹಾಗೂ ದೊಡ್ಡವರು ಸೂಕ್ತವಾದ ಯಾವುದೇ ಚಿಕಿತ್ಸಾ ವಿಧಾನವನ್ನು ಬಳಸಬಹುದು. ಕಿವಿ ತಮಟೆಯಲ್ಲಿ ರಂಧ್ರವಾಗಿರುವ ಅತಿ ಚಿಕ್ಕ ಮಕ್ಕಳ ಕಿವಿಗೆ ಇಯರ್ ಡ್ರಾಪ್ಸ್ ಅಥವಾ ಯಾವುದೇ ಎಣ್ಣೆಯನ್ನು ಹಾಕಕೂಡದು. ಕಿವಿಯ ಆಳದಲ್ಲಿ ಜಿಗುಟಾಗಿ ಅಂಟಿಕೊಳ್ಳುವಂಥ ಯಾವುದೇ ದ್ರವವನ್ನು ಸಹ ಕಿವಿಗೆ ಹಾಕಬಾರದು. ಒಂದೊಮ್ಮೆ ಮಗುವಿನ ಕಿವಿ ನೋವಿನ ತೀವ್ರತೆ ಅತಿಯಾಗಿದ್ದಲ್ಲಿ ಅಥವಾ ಮಗುವಿಗೆ 100.4 ಡಿಗ್ರಿ ಫ್ಯಾರನ್ ಹೀಟ್ ಗೂ ಹೆಚ್ಚು ಜ್ವರ ಇದ್ದಲ್ಲಿ ಅಥವಾ ಕಿವಿ ಸೋರುತ್ತಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದು ಗಮನದಲ್ಲಿರಲಿ. ಕಿವಿ ನೋವು ಶಮನಕ್ಕೆ ಮನೆ ಮದ್ದು ವಿಧಾನಗಳು...

Most Read:ತೂಕ ಇಳಿಕೆಗೆ ಯಾವುದು ಒಳ್ಳೆಯದು? ಅನ್ನವೋ ಅಥವಾ ಚಪಾತಿಯೋ?

ಬಿಸಿ ವಿಧಾನ

ಬಿಸಿ ವಿಧಾನ

ಚಿಕ್ಕ ಮಕ್ಕಳಿಗೆ ಕಿವಿ ನೋವು ಕಾಣಿಸಿಕೊಂಡಾಗ ಈ ಬಿಸಿ ವಿಧಾನವನ್ನು ಪ್ರಯೋಗಿಸಬಹುದು. ಹಿಂದಿನ ಕಾಲದಲ್ಲಿ ಹಳೆ ತಲೆದಿಂಬನ್ನು ಬೆಚ್ಚಗೆ ಮಾಡಿ ಅದರ ಮೇಲೆ ತಲೆ ಇಟ್ಟು ಮಕ್ಕಳನ್ನು ಮಲಗಿಸುತ್ತಿದ್ದರು. ಇದು ನೋವನ್ನು ನಿಧಾನವಾಗಿ ಶಮನಗೊಳಿಸುವ ಪರಿಣಾಮಕಾರಿ ವಿಧಾನವಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿ ಮೈಕ್ರೊವೇವ್ ಓವನ್ ಗಳು ಇರುವುದರಿಂದ ಹಾಟ್ ಪ್ಯಾಕ್ ತಯಾರಿಸುವುದು ಸುಲಭವಾಗಿದೆ. ಒಂದು ಹಳೆಯ ಕಾಲು ಚೀಲ (ಸಾಕ್ಸ್) ತೆಗೆದುಕೊಂಡು ಅದರೊಳಗೆ ಪಾಪ್ ಕಾರ್ನ್ ತಯಾರಿಸುವ ಮೆಕ್ಕೆಜೋಳ ಅಥವಾ ಅಕ್ಕಿ ಕಾಳು ತುಂಬಿಸಬೇಕು. ಇದನ್ನು ಓವನ್ ಒಳಗೆ ಇಟ್ಟು ಪಾಪ್ ಕಾರ್ನ್ ಸಿಡಿಸಬೇಕು. ಹೀಗೆ ಬೆಚ್ಚಗಾಗಿರುವ ಸಾಕ್ಸ್ ಅನ್ನು ಕಿವಿಯ ಬಳಿ ಇಟ್ಟುಕೊಂಡರೆ ನೋವು ಕಡಿಮೆ ಮಾಡಬಹುದು. ಅಲ್ಲದೆ ಬಾಟಲಿಯಲ್ಲಿ ಬೆಚ್ಚಗಿನ ನೀರು ಹಾಕಿ ಸಹ ಬಳಸಬಹುದು. ಆದರೆ ನೀರು ತೀರಾ ಬಿಸಿಯಾಗಿರದಂತೆ ನೋಡಿಕೊಳ್ಳಬೇಕು.

ಹಬೆಯ ವಿಧಾನ

ಹಬೆಯ ವಿಧಾನ

ಒಂದೊಮ್ಮೆ ಮಗು ಕಿವಿಯ ಮೇಲೆ ಯಾವುದೇ ಹಾಟ್ ಪ್ಯಾಕ್ ಇಟ್ಟುಕೊಳ್ಳಲು ನಿರಾಕರಿಸಿದರೆ ಹಬೆಯ ವಿಧಾನ ಬಳಸಬಹುದು. ಶವರ್ ಕೆಳಗೆ ಬೆಚ್ಚಗಿನ ಸ್ನಾನ ಮಾಡಿಸಿ ಹಬೆಯಿಂದ ನೋವು ಶಮನಗೊಳಿಸಬಹುದು. ಈ ಚಿಕಿತ್ಸಾ ವಿಧಾನ ದೊಡ್ಡವರಿಗೂ ಪ್ರಯೋಜನಕರವಾಗಿದೆ. ಶೀತ ಹಾಗೂ ಗಂಟಲು ನೋವಿನಿಂದ ದೇಹದ ವಾಯು ನಾಳಗಳಲ್ಲಿ ಉರಿಯೂತ ಉಂಟಾಗುತ್ತದೆ. ಬೆಚ್ಚಗಿನ ಹಬೆಯ ಸ್ನಾನದಿಂದ ಈ ವಾಯು ನಾಳಗಳ ಉರಿಯೂತ ಕಡಿಮೆಯಾಗಿ ಇವು ಸರಾಗವಾಗಿ ಕೆಲಸ ಮಾಡಲಾರಂಭಿಸುತ್ತವೆ. ಇದರಿಂದ ಕಿವಿಯಲ್ಲಿನ ಒತ್ತಡ ಹಾಗೂ ನೋವು ಶಮನವಾಗಿ ರಿಲೀಫ್ ಸಿಗುವಂತಾಗುತ್ತದೆ.

ಬೆಳ್ಳುಳ್ಳಿ ಎಣ್ಣೆ

ಬೆಳ್ಳುಳ್ಳಿ ಎಣ್ಣೆ

ಕಿವಿ ನೋವಿಗೆ ಆಲಿವ್ ಎಣ್ಣೆಯೊಂದಿಗೆ ಬೆಳ್ಳುಳ್ಳಿ ಎಣ್ಣೆಯನ್ನು ಮಿಶ್ರಣ ಮಾಡಿ ಬಳಸುವ ಹಲವಾರು ವಿಧಾನಗಳಿವೆ. ಚಿಕ್ಕ ಮಕ್ಕಳಿಗಾಗಿಯೇ ಪ್ರಯೋಜನಕಾರಿಯಾದ ಕಿವಿ ಡ್ರಾಪ್ಸ್ ತಯಾರಿಸಿ ಬಳಸುವ ವಿಧಾನ ಸೂಕ್ತವಾಗಿದೆ. ನೀಲಗಿರಿ ಎಣ್ಣೆ ಹಾಗೂ ಬೆಳ್ಳುಳ್ಳಿ ಎಣ್ಣೆಯ ಮಿಶ್ರಣವು ಕಿವಿ ನೋವಿಗೆ ಪರಿಣಾಮಕಾರಿ ಆಂಟಿ ಬಯಾಟಿಕ್, ಸೋಂಕು ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣವನ್ನು ತಯಾರಿಸಿ ಕಪ್ಪು ವರ್ಣದ ಗಾಜಿನ ಬಾಟಲಿಯಲ್ಲಿ ಹಾಕಿ ಕಡಿಮೆ ಬೆಳಕಿರುವ ಸ್ಥಳದಲ್ಲಿ ಅಥವಾ ಅದನ್ನು ಫ್ರಿಜ್‌ನಲ್ಲಿ ಶೇಖರಿಸಿ ಇಡಬಹುದು. ಈ ಮಿಶ್ರಣವನ್ನು ತಯಾರಿಸಿದ ಎರಡು ವಾರಗಳೊಳಗೆ ಮಾತ್ರ ಬಳಸತಕ್ಕದ್ದು. ಚಿಕ್ಕ ಮಕ್ಕಳ ಇಯರ್ ಡ್ರಾಪ್ಸ್ :

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

5 ಎಸಳು ಸಣ್ಣಗೆ ತುರಿದ ಬೆಳ್ಳುಳ್ಳಿ

ಅರ್ಧ ಲೋಟ ಉತ್ತಮ ಗುಣಮಟ್ಟದ ಆಲಿವ್ ಎಣ್ಣೆ

20 ಹನಿ ನೀಲಗಿರಿ ಎಣ್ಣೆ

ತಯಾರಿಸುವ ವಿಧಾನ:

ಒಂದು ಪ್ಯಾನ್ ಅನ್ನು ಮಂದ ಬಿಸಿಯ ಒಲೆಯ ಮೇಲೆ ಇಟ್ಟು ಅದರಲ್ಲಿ ಆಲಿವ್ ಎಣ್ಣೆ ಹಾಗೂ ಬೆಳ್ಳುಳ್ಳಿ ಹಾಕಿ. ಇದನ್ನು ಸುಮಾರು ಏಳೆಂಟು ಗಂಟೆಗಳ ಕಾಲ ನಿಧಾನವಾಗಿ ಬಿಸಿ ಮಾಡಿ. ನಂತರ ಮಿಶ್ರಣವನ್ನು ಸೋಸಿ ಬೆಳ್ಳುಳ್ಳಿ ಎಣ್ಣೆಯನ್ನು ತೆಗೆದಿರಿಸಿಕೊಳ್ಳಿ. ಇದಕ್ಕೆ ನೀಲಗಿರಿ ಎಣ್ಣೆಯನ್ನು ಸೇರಿಸಿ ಕಡು ಬಣ್ಣದ ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಿ.

ಬಳಸುವ ವಿಧಾನ :

ಗಾಜಿನ ಐ ಡ್ರಾಪರ್ ಒಂದನ್ನು ಬಿಸಿ ನೀರಿನಲ್ಲಿ ಒಂದು ನಿಮಿಷದವರೆಗೆ ಇಡಿ. ಡ್ರಾಪರ್ ಅನ್ನು ಬಿಸಿ ಮಾಡಲು ಇದು ಅವಶ್ಯಕ. ತಕ್ಷಣ ಡ್ರಾಪರ್ ಅನ್ನು ಒಣಗಿಸಿ ಅದು ಬೆಚ್ಚಗಿರುವಾಗಲೇ ಬಾಟಲಿಯಲ್ಲಿ ಶೇಖರಿಸಿ ಇಟ್ಟ ಇಯರ್ ಡ್ರಾಪ್ಸ್ ಅನ್ನು ಡ್ರಾಪರ್‌ನಿಂದ ತೆಗೆದುಕೊಳ್ಳಿ. ಪ್ರತಿ ಅರ್ಧ ಗಂಟೆಗೊಮ್ಮೆ ಎರಡೂ ಕಿವಿಗಳಲ್ಲಿ ಎರಡು ಹನಿ ಈ ಎಣ್ಣೆಯನ್ನು ಹಾಕಿ. ಈ ವಿಧಾನವನ್ನು ನೋವಿನ ತೀವ್ರತೆ ಅನುಸರಿಸಿ 2 ರಿಂದ 7 ದಿನಗಳವರೆಗೆ ಮುಂದುವರಿಸಬಹುದು. ಈಗಾಗಲೇ ಹೇಳಿದಂತೆ ಕಿವಿ ರಂಧ್ರಕ್ಕೆ ತೂತು ಆಗಿದ್ದಲ್ಲಿ ಮಾತ್ರ ಕಿವಿಗೆ ಯಾವುದೇ ದ್ರವವನ್ನು ಹಾಕಕೂಡದು ಎಂಬ ಜಾಗೃತಿ ಇರಲಿ.

 ಸ್ವರ್ಣ ಧಾನ್ಯ ತೈಲ (ಮುಲ್ಲೆನ್ ಆಯಿಲ್)

ಸ್ವರ್ಣ ಧಾನ್ಯ ತೈಲ (ಮುಲ್ಲೆನ್ ಆಯಿಲ್)

ಉಸಿರಾಟದ ಸಮಸ್ಯೆ ಹಾಗೂ ಇನ್ನಿತರ ಹಲವಾರು ರೋಗಗಳ ನಿವಾರಣೆಗೆ ಸ್ವರ್ಣ ಧಾನ್ಯ ತೈಲವನ್ನು ಉಪಯೋಗಿಸಲಾಗುತ್ತದೆ. ಕಿವಿ ನೋವು ಶಮನಕ್ಕೂ ಇದನ್ನು ಬಳಸಬಹುದು. ಸ್ವರ್ಣ ಧಾನ್ಯ (ಮುಲ್ಲೆನ್) ಗಿಡದ ಹೂ ಮತ್ತು ಮೊಗ್ಗುಗಳನ್ನು ಆಲಿವ್ ಎಣ್ಣೆಯಲ್ಲಿ ಸೇರಿಸಿ ಮಿಶ್ರಣ ಮಾಡಿ ಇದನ್ನು ಕಿವಿ ನೋವಿಗೆ ಔಷಧಿಯಾಗಿ ಬಳಸಬಹುದು. ಇದನ್ನು ಬಳಸುವ ವಿಧಾನ ಬೆಳ್ಳುಳ್ಳಿ ಎಣ್ಣೆಯ ವಿಧಾನದಂತೆಯೇ ಇದೆ.

ತಯಾರಿಸುವ ವಿಧಾನ:

ಸ್ವರ್ಣ ಧಾನ್ಯ ಗಿಡದಿಂದ ಕೆಲ ಹೂಗಳನ್ನು ಸಂಗ್ರಹಿಸಿ ಅದನ್ನು ಅಗಲ ಬಾಟಲಿಯಲ್ಲಿ ಹಾಕಿ. ಇದಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ಮುಚ್ಚಳ ಬಿಗಿ ಮಾಡಿ ಒಂದೆರಡು ವಾರ ಹಾಗೆಯೇ ಬಿಡಿ. ನಂತರ ಎಣ್ಣೆಯನ್ನು ಸೋಸಿ ಇದನ್ನು ಕಡು ವರ್ಣದ ಬಾಟಲಿಗೆ ಹಾಕಿ ಶೇಖರಿಸಿ ಇಡಿ. ಹೂವಿನಲ್ಲಿರುವ ಯಾವುದೇ ಕೀಟಗಳು ಎಣ್ಣೆಗೆ ಸೇರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕೆ ಒಂದಿಷ್ಟು ಬೆಳ್ಳುಳ್ಳಿ ಎಣ್ಣೆಯನ್ನು ಸೇರಿಸಿದಲ್ಲಿ ಇದು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಒಂದೊಮ್ಮೆ ನಿಮಗೆ ಸ್ವರ್ಣ ಧಾನ್ಯದ ಗಿಡಗಳು ಸಿಗದೇ ಇದ್ದಲ್ಲಿ ಮಾರುಕಟ್ಟೆಯಲ್ಲಿ ದೊರಕುವ ತಯಾರಾದ ಮುಲ್ಲೆನ್ ಆಯಿಲ್ ಇಯರ್ ಡ್ರಾಪ್ಸ್ ಖರೀದಿಸಿ ಬಳಸಬಹುದು.

Most Read:ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತೇ?

ಎಣ್ಣೆ ಮಸಾಜ್ ವಿಧಾನ

ಎಣ್ಣೆ ಮಸಾಜ್ ವಿಧಾನ

ಕಿವಿ ನೋವು ಶಮನಕ್ಕೆ ಎಣ್ಣೆ ಮಸಾಜ್ ವಿಧಾನ ಮತ್ತೊಂದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆದರೆ ಯಾವುದೇ ಎಣ್ಣೆಯನ್ನು ತಿಳಿಗೊಳಿಸದೆ ನೇರವಾಗಿ ಚರ್ಮಕ್ಕೆ ತಾಕಿಸಬಾರದು. ಗಡುಸಾಗಿರುವ ಎಣ್ಣೆಗಳನ್ನು ಮತ್ತೊಂದು ಮೃದುವಾದ ಎಣ್ಣೆಯೊಂದಿಗೆ ಸೇರಿಸಿ ತಿಳಿಗೊಳಿಸಿದ ನಂತರವೇ ಬಳಸ ಬೇಕಾಗುತ್ತದೆ. ಇಲ್ಲಿ ತಿಳಿಸಲಾದ ಎಣ್ಣೆ ಮಸಾಜ್ ವಿಧಾನ ತೀರಾ ಚಿಕ್ಕ ಮಕ್ಕಳಿಗೆ ಬಳಸುವಂತಿಲ್ಲ. ಕಿವಿಯ ಬಳಿ ಹಚ್ಚಿದ ಎಣ್ಣೆಯನ್ನು ಕೈಯಿಂದ ತಿಕ್ಕಿಕೊಂಡು ಅದೇ ಕೈಯಿಂದ ಚಿಕ್ಕ ಮಕ್ಕಳು ಕಣ್ಣು ಉಜ್ಜಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಚಿಕಿತ್ಸಾ ವಿಧಾನವನ್ನು ದೊಡ್ಡವರು ಹಾಗೂ ವಯಸ್ಕ ಮಕ್ಕಳಿಗೆ ಮಾತ್ರ ಬಳಸಬಹುದಾಗಿದೆ.

ಮಸಾಜ್ ಎಣ್ಣೆ ತಯಾರಿಸುವ ವಿಧಾನ

ಮಸಾಜ್ ಎಣ್ಣೆ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು:

ಕಾಲು ಬಟ್ಟಲು ಆಲಿವ್ ಎಣ್ಣೆ

*10 ಹನಿ ಟೀ ಟ್ರೀ ಎಣ್ಣೆ

*10 ಹನಿ ಲ್ಯಾವೆಂಡರ್ ಎಣ್ಣೆ

ಮೇಲೆ ತಿಳಿಸಲಾದ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೋವಿರುವ ಕಿವಿಯ ಸುತ್ತಲೂ ನಿಧಾನವಾಗಿ ಹಚ್ಚಿಕೊಳ್ಳಿ. ಇದರಿಂದ ಕಿವಿಯ ಸೋಂಕು ಕಡಿಮೆಯಾಗಿ ನೋವು ಶಮನವಾಗುತ್ತದೆ.

ಮೂಲಿಕೆಗಳ ಹಬೆ ತೆಗೆದುಕೊಳ್ಳುವ ವಿಧಾನ

ಮೂಲಿಕೆಗಳ ಹಬೆ ತೆಗೆದುಕೊಳ್ಳುವ ವಿಧಾನ

ಗಿಡಮೂಲಿಕೆಗಳ ಹಬೆಯನ್ನು ಉಸಿರಾಡುವುದರಿಂದ ಶೀತದಿಂದ ಉಂಟಾದ ಮೂಗಿನೊಳಗಿನ ಬಾವು ಕಡಿಮೆಯಾಗಿ ಉಸಿರಾಟ ಸರಾಗವಾಗುತ್ತದೆ. ಈ ಚಿಕಿತ್ಸಾ ವಿಧಾನ ಅನುಸರಿಸಲು ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕಾಯಿಸಿ ಅದನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ. ಈ ನೀರಿಗೆ ಜರ್ಮನ್ ಚಮೊಮೈಲ್, ಎಲ್ಡರ್‌ಬೆರ್ರಿ ಹೂ ಮತ್ತು ಲೆಮನ್ ಬಾಮ್ ಸೇರಿಸಿ. ಈಗ ಬಿಸಿ ನೀರಿನ ಮೇಲೆ ಬಾಗಿ ನಿಧಾನವಾಗಿ ಹಬೆಯನ್ನು ಉಸಿರಾಡಬೇಕು. ತಲೆಯ ಮೇಲಿಂದ ಟವೆಲ್ ಒಂದನ್ನು ಕವರ್ ಮಾಡಿ ಹಬೆ ತೆಗೆದುಕೊಳ್ಳುವುದು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ನೀರು ಬಿಸಿಯಾಗಿರುವುದರಿಂದ ದೇಹಕ್ಕೆ ಯಾವುದೇ ಅಪಾಯವಾಗದಂತೆ ಜಾಗೃತಿ ವಹಿಸಬೇಕಾಗುತ್ತದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಅನ್ನು ಹಲವಾರು ರೀತಿಯ ನೋವು ನಿವಾರಕವಾಗಿ ಬಳಸಲಾಗುತ್ತದೆ. ಇದು ಕಿವಿ ನೋವು ಶಮನಕ್ಕೂ ಸಹಕಾರಿಯಾಗಿದೆ. ತಜ್ಞರ ಸಲಹೆಯ ಪ್ರಕಾರ, ನೋವಿರುವ ಕಿವಿಯಲ್ಲಿ ಆಪಲ್ ಸೈಡರ್ ವಿನೆಗರ್‌ನ ಕೆಲ ಹನಿಗಳನ್ನು ಹಾಕಬೇಕು. ಕೆಲ ಹೊತ್ತಿನ ನಂತರ ಇದನ್ನು ಹೊರ ಬರುವಂತೆ ಮಾಡಬೇಕು. ಈ ವಿಧಾನವನ್ನು ನೋವಿನ ತೀವ್ರತೆ ಅನುಸರಿಸಿ ಪ್ರತಿ 12 ಗಂಟೆಗಳಿಗೊಮ್ಮೆ ಬಳಸಿ ಉಪಶಮನ ಪಡೆಯಬಹುದು.

ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್

ಕಿವಿ ನೋವು ನಿವಾರಣೆಗೆ ಹೈಡ್ರೋಜನ್ ಪೆರಾಕ್ಸೈಡ್ ವಿಧಾನ ಕೂಡ ಸಹಕಾರಿಯಾಗಿದೆ. ಒಂಚೂರು ಹತ್ತಿಯನ್ನು ಹೈಡ್ರೋಜನ್ ಪೆರಾಕ್ಸೈಡ್‌ನಲ್ಲಿ ಅದ್ದಿ ಅದರಿಂದ ಒಂದೆರಡು ಹನಿ ಕಿವಿಯೊಳಗೆ ಹಾಕಿಕೊಳ್ಳಬೇಕು. ಇದು ಕಿವಿಯೊಳಗೆ ಆಂಟಿಕೊಡಿರುವ ಕೊಳೆಯನ್ನು ಹೊರತೆಗೆದು ನೋವು ಉಪಶಮನಗೊಳಿಸುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಬಳಸಿದ ನಂತರ ಬೆಚ್ಚಗಿನ ನೀರಿನಿಂದ ಕಿವಿ ತೊಳೆದುಕೊಳ್ಳುವುದರಿಂದ ಉತ್ತಮ ಪರಿಣಾಮ ಕಾಣಲು ಸಾಧ್ಯ.

ಬಿಸಿ ಹರ್ಬಲ್ ಟೀ

ಬಿಸಿ ಹರ್ಬಲ್ ಟೀ

ಕಿವಿ ನೋವಿಗೆ ಹೊರಗಿನಿಂದ ಬಿಸಿಯ ಚಿಕಿತ್ಸೆ ನೀಡುವ ಹಾಗೆಯೇ ದೇಹದ ಒಳಗಿನಿಂದಲೂ ಚಿಕಿತ್ಸೆ ಮಾಡಬಹುದು. ಎಕಿನೇಶಿಯಾ, ಜರ್ಮನ್ ಚಮೊಮೈಲ್ ಹಾಗೂ ತುಳಸಿಯ ಕಷಾಯವನ್ನು ಸೇವಿಸಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಹರ್ಬಲ್ ಟೀಯಿಂದ ಮೂಗು, ಕಿವಿ ಹಾಗೂ ಗಂಟಲಿನಲ್ಲಿನ ಸೋಂಕು ನಿವಾರಣೆಯಾಗುತ್ತದೆ.

 ಈರುಳ್ಳಿ

ಈರುಳ್ಳಿ

ಕಿವಿ ನೋವು ನಿವಾರಣೆಗೆ ಬಹು ಹಿಂದಿನ ಕಾಲದಿಂದಲೂ ಈರುಳ್ಳಿಯನ್ನು ಬಳಸಲಾಗುತ್ತಿದೆ. ಕತ್ತರಿಸಿದ ಅರ್ಧ ಈರುಳ್ಳಿಯನ್ನು ನೋವಿರುವ ಕಿವಿಯ ಮೇಲಿಟ್ಟುಕೊಳ್ಳುವುದರಿಂದ ನೋವು ಕಡಿಮೆ ಮಾಡಬಹುದು. ಇನ್ನು ಈರುಳ್ಳಿಯನ್ನು ಬಿಸಿ ಮಾಡಿ ಅದರ ರಸವನ್ನು ಕಿವಿಗೆ ಹಿಂಡುವ ಮೂಲಕ ಸಹ ನೋವು ಕಡಿಮೆಗೊಳಿಸಬಹುದಾಗಿದೆ. ಬಿಸಿ ನೀರಲ್ಲಿ ಒದ್ದೆ ಮಾಡಿದ ಬಟ್ಟೆಯಲ್ಲಿ ಈರುಳ್ಳಿಯನ್ನು ಸುತ್ತಿ ಅದನ್ನು ಕಿವಿಯ ಮೇಲೆ ಇಡುವುದು ಸಹ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಈರುಳ್ಳಿಯನ್ನು ಹಿಂಡಿ ರಸ ತೆಗೆದು ಅದನ್ನು ಬಿಸಿ ಮಾಡಬೇಕು. ನಂತರ ಆರಿಸಿದ ರಸವನ್ನು ಕಿವಿಗೆ ಹಾಕುವುದರಿಂದ ನೋವು ಶಮನ ಮಾಡಬಹುದು. ಬಿಸಿ ಈರುಳ್ಳಿ ಪ್ಯಾಕ್ ಬಳಸುವಾಗ ಈರುಳ್ಳಿಯನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ಕಿವಿಯ ಮೇಲಿಟ್ಟು ನಂತರ ತೆಗೆಯಬೇಕು. ಚಿಕಿತ್ಸೆ ಪಡೆಯುವಾಗ ನೆಮ್ಮದಿಯ ಭಾವನೆಯಿಂದ ರೆಸ್ಟ್ ಮಾಡುವುದು ಅಗತ್ಯ. ಈರುಳ್ಳಿ ಚಿಕಿತ್ಸೆಯ ನಂತರ ಬೆಚ್ಚಗಿನ ನೀರಿನಿಂದ ಕಿವಿಗಳನ್ನು ಶುಚಿಗೊಳಿಸಬೇಕು.

ಹೋಮಿಯೋಪತಿ ವಿಧಾನ

ಹೋಮಿಯೋಪತಿ ವಿಧಾನ

ಕಿವಿ ನೋವು ಶಮನಕ್ಕೆ ಹೋಮಿಯೋಪತಿ ಚಿಕಿತ್ಸಾ ವಿಧಾನವನ್ನು ಸಹ ಅನುಸರಿಸಬಹುದು. ಹೋಮಿಯೋಪತಿಯ 'ಸಿಮಿಲಾಸನ್' ಹೆಸರಿನ ಇಯರ್ ಡ್ರಾಪ್ ಅನ್ನು ಬಳಸಿ ನೋವಿನಿಂದ ಉಪಶಮನ ಪಡೆದುಕೊಳ್ಳಬಹುದು. 'ಸಿಮಿಲಾಸನ್' ಇಯರ್ ಡ್ರಾಪ್ ನಲ್ಲಿರುವ ಅಂಶಗಳು ಹಾಗೂ ಅವುಗಳ ಉಪಯೋಗ ಹೀಗಿವೆ: ಚಮೋಮಿಲ್ಲಾ 10X : ಶೀತಗಾಳಿಯ ಸೋಂಕು ತಡೆಗಟ್ಟುತ್ತದೆ ಮರ್ಕ್ಯೂರಿಯಸ್ ಸೊಲುಬಿಲಿಸ್ 15X : ಮೂಗು ಕಟ್ಟುವಿಕೆ ಹಾಗೂ ಶೀತ ನಿವಾರಿಸುತ್ತದೆ ಸಲ್ಫರ್ 12X : ತುರಿಕೆ ಹಾಗೂ ನೀರಿನಿಂದ ಉಂಟಾಗುವ ಸೋಂಕು ಕಡಿಮೆ ಮಾಡುತ್ತದೆ.

Most Read:ಹೊಟ್ಟೆಯ ಎಲ್ಲಾ ಸಮಸ್ಯೆಗೆ ನೈಸರ್ಗಿಕ 'ಅಲೋವೆರಾದ' ಚಿಕಿತ್ಸೆ

ಮೆಡಿಕಲ್ ಶಾಪ್ ನೋವು ನಿವಾರಕ ಔಷಧಿಗಳು

ಮೆಡಿಕಲ್ ಶಾಪ್ ನೋವು ನಿವಾರಕ ಔಷಧಿಗಳು

ಉರಿಯೂತದಿಂದ ಉಂಟಾಗಿರುವ ಕಿವಿ ನೋವು ಶಮನಕ್ಕೆ ಸ್ಟೆರಾಯ್ಡ್ ರಹಿತ ನೋವು ನಿವಾರಕ ಐಬುಪ್ರೊಫೆನ್ (ಆಡ್ವಿಲ್, ಅಲೆವೆ, ಮಾಟ್ರಿನ್) ಔಷಧಿಯನ್ನು ಮೆಡಿಕಲ್ ಶಾಪ್‌ನಿಂದ ಖರೀದಿಸಿ ಬಳಸಬಹುದು. ಆದರೂ ಕಿವಿಯೊಳಗಿನ ಸೋಂಕು ನಿವಾರಣೆ ಆಗುವವರೆಗೂ ನೋವು ಸಂಪೂರ್ಣ ವಾಸಿಯಾಗುವುದಿಲ್ಲ ಎಂಬುದು ಗೊತ್ತಿರಲಿ. ಆದರೂ ನೋವು ನಿವಾರಕ ಔಷಧಿಗಳು ತುಸು ಹೊತ್ತಿನವರೆಗಾದರೂ ನೋವು ಕಡಿಮೆ ಮಾಡಿ ರೆಸ್ಟ್ ಮಾಡಲು ಅನುಕೂಲ ಮಾಡಿಕೊಡುತ್ತವೆ.

English summary

Ear Pain Relief for Kids and Adults

Ear pain is most commonly associated with fluid buildup behind the ear drum linked to an ear infection. Thankfully, most ear infections get better without treatment, antibiotics are not required. In fact, clinical studies have noted that the most commonly prescribed antibiotic, amoxicillin, is no more effective than a placebo.Sometimes ear pain is caused by injury, or water or other fluid trapped in the ear. The focus of this post is earache due to colds/infection and inflammation.
X
Desktop Bottom Promotion