For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಳಿಕ ದೇಹಲ್ಲಿ ಎದುರಾಗುವ ಕೆಲವೊಂದು ವಿಚಿತ್ರ ಸಂಗತಿಗಳು

|

ಸಮಾಮಗ ಅಥವಾ ಸೆಕ್ಸ್ ಎಂಬುದು ನಿಸರ್ಗದ ಒಂದು ನಿಯಮವಾಗಿದ್ದು ಇದನ್ನು ನಿರ್ವಹಿಸಿದ ಬಳಿಕ ಪ್ರತಿ ಜೀವಿಯಲ್ಲಿಯೂ ಹಲವಾರು ಬದಲಾವಣೆಗಳು ಕಂಡುಬರುತ್ತವೆ ಹಾಗೂ ಇವುಗಳಲ್ಲಿ ಕೆಲವು ವಿಚಿತ್ರವೂ ಆಗಿರುತ್ತವೆ. ಕೆಲವು ಪ್ರಾಣಿಗಳಲ್ಲಿ ವಿಚಿತ್ರ ನಡವಳಿಕೆಯನ್ನು ಗಮನಿಸಲಾಗಿದೆ. ಅಂತೆಯೇ ಮನುಷ್ಯರಲ್ಲಿಯೂ ಕೆಲವು ವಿಚಿತ್ರವಾದ ದೈಹಿಕ ನಡವಳಿಕೆಯನ್ನು ಗಮನಿಸಬಹುದು, ಕೆಲವು ಬಾರಿ ಉರಿಯ ಅನುಭವವೂ ಆಗಬಹುದು.

ಅಮೇರಿಕಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಪ್ರಕಾರ ಶೇಖಡಾ 75ರಷ್ಟು ಮಹಿಳೆಯರು ತಮ್ಮ ಜೀವಮಾನದಲ್ಲೆಂದಾದರೂ ಸರಿ, ಸಮಾಗಮದ ಸಮಯದಲ್ಲಿ ನೋವನ್ನು ಅನುಭವಿಸಿಯೇ ಇದ್ದಾರೆ. ಸಮಾಗಮದ ಬಳಿಕ ನಡೆಯಲೂ ಆಗದಷ್ಟು ನಿತ್ರಾಣ ಆವರಿಸಿದರೆ ಇದು ಉಳಿದವರಿಗೆ ತಮಾಷೆಯ ವಿಷಯವಾಗಿ ಪರಿಣಮಿಸಬಹುದು. ಆದರೆ ಒಂದು ವೇಳೆ ನಿಜವಾಗಿಯೂ ಸಮಾಗಮದ ಬಳಿಕ ಎದುರಾಗುವ ಸಂಗತಿಗಳು ನಿಜಕ್ಕೂ ಕಳವಳಕಾರಿಯಾಗಿದ್ದರೆ? ರಕ್ತಸ್ರಾವ ಕಂಡುಬಂದರೆ? ಭಾರೀ ಉರಿ ಎದುರಾದರೆ? ಈ ಬಗ್ಗೆ ಚಿಂತಿಸದಿರಲು ಸಾಧ್ಯವೇ?

ಸಮಾಗಮದ ಬಳಿಕ ದೇಹದಲ್ಲಿ ಎದುರಾಗುವ ಬದಲಾವಣೆಗಳು ಹಾಗೂ ಇವುಗಳ ಇರುವಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು, ದೇಹ ಈ ಬದಲಾವಣೆಗಳಿಗೆ ತೋರುವ ಸ್ಪಂದನಗಳು ಮೊದಲಾದ ವಿಷಯಗಳ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾದ ಈ ವಿಷಯಗಳನ್ನು ಅವರು ವಿವರಿಸುತ್ತಾರೆ...

ಬೆವರು ಧಾರಾಕಾರವಾಗಿ ಹರಿಯುತ್ತದೆ

ಬೆವರು ಧಾರಾಕಾರವಾಗಿ ಹರಿಯುತ್ತದೆ

ಸಾಮಾನ್ಯವಾಗಿ ಧಾರಾಕಾರ ಬೆವರುವಿಕೆ ಮಿಲನಕ್ರಿಯೆಯ ಬಳಿಕ ಕಂಡುಬರುತ್ತದೆ. ಸಾಮಾನ್ಯವಾಗಿ ಇಷ್ಟೇ ಬೆವರು ಹೊರಹರಿಯಬೇಕಾದರೆ ಹೆಚ್ಚು ಹೊತ್ತು ಸತತವಾಗಿ ಭಾರೀ ವ್ಯಾಯಾಮಗಳನ್ನೇ ಮಾಡಬೇಕಾಗುತ್ತದೆ. "ಯಾವುದೇ ದೈಹಿಕ ಚಟುವಟಿಕೆಯಿಂದ, ಇದರಲ್ಲಿ ಲೈಂಗಿಕ ಕ್ರೀಡೆಯನ್ನೂ ಸೇರಿಸಿ, ದೇಹದಲ್ಲಿ ತಾಪಮಾನ ಹೆಚ್ಚುತ್ತದೆ. ಮಿಲನಕ್ರಿಯೆಯ ಬಳಿಕ ಹೃದಯದ ಬಡಿತ ನಿಧಾನವಾಗುತ್ತದೆ ಹಾಗೂ ಕಡಿಮೆ ರಕ್ತವನ್ನು ತ್ವಚೆಗೆ ಪೂರೈಸತೊಡಗುತ್ತದೆ.

ಬೆವರು ಧಾರಾಕಾರವಾಗಿ ಹರಿಯುತ್ತದೆ

ಬೆವರು ಧಾರಾಕಾರವಾಗಿ ಹರಿಯುತ್ತದೆ

ಸ್ನಾಯುಗಳ ತಾಪಮಾನ ಹೆಚ್ಚಿದಂತೆ ಇದರ ಸುತ್ತ ಹರಿಯುತ್ತಿರುವ ರಕ್ತದ ತಾಪಮಾನವೂ ಏರುತ್ತದೆ. ಇದನ್ನು ತಂಪುಗೊಳಿಸಲು ಚರ್ಮದಿಂದ ಹೆಚ್ಚೇ ಬೆವರನ್ನು ಹೊರಹರಿಸಿ ತಂಪುಮಾಡುವುದು ಶರೀರಕ್ಕೆ ಅನಿವಾಯವಾಗುತ್ತದೆ. ಇದೇ ಕಾರಣಕ್ಕೆ ವ್ಯಾಯಾಮಕ್ಕೂ ಹೆಚ್ಚಿನ ಬೆವರನ್ನು ಮಿಲನಕ್ರಿಯೆಯ ಬಳಿಕ ಕಾಣಬಹುದು, ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Most Read:ಆರೋಗ್ಯಕರ ಸೆಕ್ಸ್ ಬಗ್ಗೆ ಇರುವ ಕೆಲವೊಂದು ತಪ್ಪು ನಂಬಿಕೆಗಳು

ಹೃದಯದ ಬಡಿತದ ವೇಗ ಹೆಚ್ಚುತ್ತದೆ

ಹೃದಯದ ಬಡಿತದ ವೇಗ ಹೆಚ್ಚುತ್ತದೆ

ಹೃದಯದ ಬಡಿತವನ್ನು ಹೆಚ್ಚಿಸುವ ಯಾವುದೇ ಚಟುವಟಿಕೆಯನ್ನು ಕಾರ್ಡಿಯೋ ಎಂದು ಕರೆಯಲಾಗುತ್ತದೆ. ಮಿಲನಕ್ರಿಯೆಯ ಬಳಿಕ ತಲುಪುವ ಕಾಮಪರಾಕಷ್ಠೆಯ ಸಮಯದಲ್ಲಿ ಉಂಟಾಗುವ ವ್ಯಾಯಾಮ ಒಂದು ಮೈಲು ಓಡಿದಾದ ಆಗುವಷ್ಟು ಕಾರ್ಡಿಯೋದಲ್ಲಿರುತ್ತದೆ. "ನಿಮ್ಮ ಮಿಲನಕ್ರಿಯೆ ಎಷ್ಟು ರಭಸದಲ್ಲಿ ಮುಂದುವರೆಯುತ್ತಿದೆ ಎಂಬುದನ್ನು ಆಧರಿಸಿ ನಿಮ್ಮ ದೇಹ ಹೆಚ್ಚು ಹೆಚ್ಚು ಕಾರ್ಡಿಯೋ ಪ್ರಯೋಜನಗಳನ್ನು ಪಡೆಯುತ್ತದೆ ಹಾಗೂ ಹೃದಯ ಹೆಚ್ಚು ತೀವ್ರವಾಗಿ ಹಾಗೂ ಹೆಚ್ಚು ದೀರ್ಘ ಅಂತರಗಳಲ್ಲಿ ಬಡಿಯತೊಡಗುತ್ತದೆ.

ಹೃದಯದ ಬಡಿತದ ವೇಗ ಹೆಚ್ಚುತ್ತದೆ

ಹೃದಯದ ಬಡಿತದ ವೇಗ ಹೆಚ್ಚುತ್ತದೆ

ಅಲ್ಲದೇ ಈ ಸಮಯದಲ್ಲಿ ಹೃದಯದ ಬಡಿತ ಹೆಚ್ಚಲು ಇನ್ನೊಂದು ಕಾರಣವೆಂದರೆ ನಿರ್ಜಲೀಕರಣ. ಆದ್ದರಿಂದ ಮಿಲನಕ್ರಿಯೆಯ ಬಳಿಕ ಕೊಂಚ ತಣ್ಣೀರನ್ನು ಕುಡಿಯುವುದರಿಂದ ಶರೀರ ಶೀಘ್ರವಾಗಿ ತಣ್ಣಗಾಗಲು ಮತ್ತು ಸಹಜಸ್ಥಿತಿಗೆ ಮರಳು ಸಾಧ್ಯವಾಗುತ್ತದೆ " ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು

ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು

ಮಿಲನಕ್ರಿಯೆಯ ಬಳಿಕ ಹಲವರಲ್ಲಿ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಇದು ಅಲ್ಪವಾಗಿದ್ದರೆ ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿರಬಹುದು. "ವಿಶೇಷವಾಗಿ, ತಾಯಂದಿರಿಗೆ 'pelvic congestion syndrome' ಎಂಬ ಸ್ಥಿತಿ ಕಾಡುತ್ತದೆ ಹಾಗೂ ಇದು ಭಾರೀ ನೋವಿಗೆ ಕಾರಣವಾಗುತ್ತದೆ, ಅದರಲ್ಲೂ ಸೊಂಟದ ಎಡಭಾಗದಲ್ಲಿ ಹೆಚ್ಚೇ ನೋವು ಕಾಣಿಸಿಕೊಳ್ಳುತ್ತದೆ. ಪ್ರವೇಶ ಆಳವಾಗಿದ್ದಷ್ಟೂ ಈ ನೋವು ಸಹಾ ಹೆಚ್ಚೇ ಇರುತ್ತದೆ.

ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು

ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು

ಸೊಂಟದ ಭಾಗದಲ್ಲಿ ಎದುರಾಗುವ ನರಗಳ ತಿರಿಚುವಿಕೆ (varicose veins)ಗೆ ಮಿಲನಕ್ರಿಯೆಯ ಮೂಲಕ ಇನ್ನಷ್ಟು ತಿರುಚಲು ಅನುವು ಮಾಡಿಕೊಟ್ಟಂತಾಗುತ್ತದೆ ಹಾಗೂ ಮಿಲನಕ್ರಿಯೆಯ ಸಮಯದಲ್ಲಿ ದೇಹದಲ್ಲಿ ಎದುರಾಗುವ ರಸದೂತಗಳ ಸ್ರಾವದಲ್ಲಿ ಏರಿಕೆಯಿಂದ್ ಈಗಾಗಲೇ ತಿರುಚಿಕೊಂಡಿರುವ ನರಗಳು ರಕ್ತದ ಒತ್ತಡ ತಾಳಲಾರದೇ ಉಬ್ಬುತ್ತವೆ ಹಾಗೂ ಇವು ತೀವ್ರಸಂವೇದಿ ಹಾಗೂ ನೋವನ್ನುಂಟುಮಾಡುತ್ತವೆ. ಇದೊಂದು ಅಪಾಯಕಾರಿ ಸ್ಥಿತಿಯಲ್ಲದಿದ್ದರೂ ಇದರಿಂದ ನಿಮ್ಮ ಮಿಲನಕ್ರಿಯೆಯ ಸಹಜ ತೃಪ್ತಿಯನ್ನು ಪಡೆಯಲು ಸಾಧ್ಯವಾಗಿಸದೇ ಹೋಗಬಹುದು, ಹಾಗಾಗಿ ತಜ್ಞರಿಂದ ತಪಾಸಣೆಗೊಳಗಾಗುವುದು ಅಗತ್ಯ" ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ

ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ

ಕೆಲವೊಮ್ಮೆ ಮಾಸಿಕ ದಿನಗಳು ಕಳೆದ ಬಳಿಕವೂ ಮಿಲನಕ್ರಿಯೆಯ ಬಳಿಕ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಆದರೆ ಇದರಿಂದ ಚಿಂತೆಗೇನೂ ಆಸ್ಪದವಿಲ್ಲ. ಆದರೆ ಇದು ಮುಂದಿನ ದಿನಗಳಲ್ಲಿಯೂ ಮುಂದುವರೆದರೆ ಮಾತ್ರ ವೈದ್ಯರ ಸಲಹೆ ಅಗತ್ಯ. ಇದು ಸೊಂಟದ ಇತರ ಸ್ಥಿತಿಗಳನ್ನು ತಿಳಿಸುತ್ತಿರಬಹುದು. "ಒಂದು ವೇಳೆ ಮಾಸಿಕ ದಿನಗಳ ಸ್ರಾವ ಸಾಮಾನ್ಯಕ್ಕಿಂತಲೂ ಹೆಚ್ಚು ದಿನಗಳಿಗೆ ಮುಂದುವರೆದರೆ ಹಾಗೂ ಹೆಚ್ಚು ದಿನಗಳವರೆಗೆ ಸ್ವಚ್ಛತಾ ಕ್ರಮಗಳಾದ ಪ್ಯಾಡ್, ಟ್ಯಾಂಪೋನ್ ಮೊದಲಾದವುಗಳನ್ನು ಮುಂದುವರೆಸಬೇಕಾದರೆ ಇದು ಯಾರಿಗೂ ಇಷ್ಟವಾಗುವುದಿಲ್ಲ. ಕೆಲವು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಇದು ಸಂಪೂರ್ಣವಾಗಿ ಸಹಜ ಎಂದು ಪರಿಗಣಿಸಬಹುದಾದರೂ ಮಿಲನಕ್ರಿಯೆಯಿಂದಲೂ ವಿಮುಖರಾಗುವುದು ಹೆಚ್ಚಿನವರಿಗೆ ಬೇಸರ ತರಿಸಬಹುದು. ಆದರೆ ಇದು ಪ್ರತಿತಿಂಗಳೂ ಮುಂದುವರೆದರೆ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ ಹಾಗೂ ಇದು ಬೇರಾವುದಾದರೂ ಸೊಂಟದ ತೊಂದರೆ ಇಲ್ಲವೆಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿಯಾದರೂ ಅಗತ್ಯವಾಗಿದೆ"

ಉರಿಯುತ್ತಿರುವ ಭಾವನೆ

ಉರಿಯುತ್ತಿರುವ ಭಾವನೆ

ಇದು ಎಲ್ಲರಲ್ಲಿಯೂ ಕಾಣಬರದ ಸಂಗತಿಯಾಗಿದ್ದರೂ ಯಾರಿಗೆ ಎದುರಾಯ್ತೋ ಅವರಿಗೆ ಭಾರೀ ಉರಿಯನ್ನು ತಂದೊಡ್ಡುತ್ತದೆ. ಕೆಲವರಲ್ಲಿ ಮಿಲನಕ್ರಿಯೆಯ ಬಳಿಕ ಬೆಂಕಿ ಹತ್ತಿದಂತೆ ಉರಿಯುತ್ತದೆ. ಈ ಪರಿಯ ಉರಿ ಲೈಂಗಿಕವಾಗಿ ಹರಡುವ ರೋಗದ ಸೂಚನೆ ಆಗಿದ್ದರೆ ಎಂಬ ಚಿಂತೆ ಮೂಡಬಹುದು. ಹಾಗಾಗಿ ವೈದ್ಯರಿಂದ ತಪಾಸಣೆ ಅಗತ್ಯ. "ಮಿಲನಕ್ರಿಯೆಯ ಬಳಿಕ ಈ ಭಾಗದಲ್ಲಿ ಉರಿ ಕಾಣಿಸಿಕೊಳ್ಳಬಾರದು. ಉರಿ ಯಾವುದೇ ಪ್ರಮಾಣದಲ್ಲಿದ್ದರೂ ಸರಿ, ತಕ್ಷಣ ವೈದ್ಯರನ್ನು ಕಾಣಬೇಕು" ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

Most Read:ಖಾಲಿ ಹೊಟ್ಟೆ ಅಥವಾ ತುಂಬಿದ ಹೊಟ್ಟೆ? ಸೆಕ್ಸ್ ಗೆ ಯಾವುದು ಒಳ್ಳೆಯದು?

ಯೋನಿಯಿಂದ ಹೊರಡುವ ಸ್ರಾವ ಹೆಚ್ಚುತ್ತದೆ

ಯೋನಿಯಿಂದ ಹೊರಡುವ ಸ್ರಾವ ಹೆಚ್ಚುತ್ತದೆ

ಸಾಮಾನ್ಯವಾಗಿ ಮಿಲನಕ್ರಿಯೆಯ ಬಳಿಕ ಈಗಾಗಲೇ ಇರುವ ಸ್ರಾವದ ಪ್ರಮಾಣದಲ್ಲಿ ಹೆಚ್ಚಳವಾಗುವುದು ಸಾಮಾನ್ಯವಾಗಿದೆ. "ಇದರ ಅರ್ಥವೆಂದರೆ ನೀವು ಕಾಮಪರಾಕಾಷ್ಠೆಯನ್ನು ಅನುಭವಿಸಿದ್ದೀರಿ ಹಾಗೂ ಈ ಮೂಲಕ ಸಂತೋಷದ ರಸಗಳನ್ನು ನಿಮ್ಮ ದೇಹ ಸ್ರವಿಸಿದೆ ಎಂದೇ ಅರ್ಥ" ಎಂದು ತಜ್ಞರು ತಿಳಿಸುತ್ತಾರೆ. ರಜೋನಿವೃತ್ತಿ ಪಡೆದಿರುವ ಮಹಿಳೆಯರ ದೇಹದಲ್ಲಿ ಈಸ್ಟ್ರೋಜೆನ್ ಪ್ರಮಾಣ ಕಡಿಮೆಯಾಗಿರುತ್ತದೆ ಹಾಗಾಗಿ ಇವರಲ್ಲಿ ಯೋನಿಯ ಸ್ರಾವವೂ ಕಡಿಮೆಯೇ ಆಗಿರುತ್ತದೆ. ಪರಿಣಾಮವಾಗಿ ಒಣಗುವಿಕೆ ಹಾಗೂ ಸಂಕುಚನ (vaginal atrophy) ಸಹಾ ಕಾಣಿಸಿಕೊಳ್ಳಬಹುದು.

ಹೊಟ್ಟೆಯ ಭಾಗದಲ್ಲಿ ಸೆಡೆತ ಕಾಣಿಸಿಕೊಳ್ಳಬಹುದು

ಹೊಟ್ಟೆಯ ಭಾಗದಲ್ಲಿ ಸೆಡೆತ ಕಾಣಿಸಿಕೊಳ್ಳಬಹುದು

ಪ್ರತಿಬಾರಿಯ ಮಿಲನದ ಬಳಿಕ ಕಾಣಿಸಿಕೊಂಡರೂ ಅಪರೂಕ್ಕಾದರೂ ನೋವು ಕಾಣಿಸಿಕೊಳ್ಳಬಹುದು. ಕಾಮಪರಾಕಾಷ್ಠೆಯ ಸಮಯದಲ್ಲಿ ಗರ್ಭಾಶಯ ಸಂಕುಚನ ಗೊಳ್ಳುವುದು ಸಹಜವಾಗಿದ್ದು ಇದು ಕೊಂಚ ನೋವು ತರಿಸಬಹುದು ಹಾಗೂ ಕೊಂಚವೇ ಹೊತ್ತಿನಲ್ಲಿ ಇದು ಸಹಜಸ್ಥಿತಿಗೆ ಮರಳುವ ಮೂಲಕ ನೋವು ಸಹಾ ಇಲ್ಲವಾಗುತ್ತದೆ. ಆದರೆ ಇದು ಪ್ರತಿ ಬಾರಿಯೂ ಜರುಗಿದರೆ ವೈದ್ಯರಿಂದ ಸಲಹೆ ಪಡೆಯಬೇಕು. ಏಕೆಂದರೆ ಗರ್ಭಾಶಯದ ಭಾಗದಲ್ಲಿ ದ್ರಾಕ್ಷಿಗೊಂಚಲಿನಂತಹ ಬೆಳವಣಿಗೆಯಾಗಿರಬಹುದು (fibroids) ಅಥವಾ ಗರ್ಭಾಶಯದಲ್ಲಿ ಕ್ಯಾನ್ಸರ್ ಮೊದಲಾದ ಗಂಭೀರ ತೊಂದರೆಗಳು ಪ್ರಾರಂಭವಾಗಿರುವ ಸೂಚನೆಯೂ ಆಗಿರಬಹುದು.

English summary

Crazy Things Happen To Your Body Right AFTER You Have Sex

We'd like to say everything about sex is always wonderful and perfect, but sometimes weird stuff does happen. You may feel a bit strange after or see strange physical reactions. You may even feel some burning or pain.
X
Desktop Bottom Promotion