For Quick Alerts
ALLOW NOTIFICATIONS  
For Daily Alerts

ಎಚ್ಚರ! ಸ್ನಾನದ ಸೋಪು ಕೂಡ ಆರೋಗ್ಯಕ್ಕೆ ಮಾರಕ!

|

ನಾವು ಸ್ನಾನ ಮಾಡಲು ಬಳಸುವ ಸೋಪು, ಇದು ದ್ರವರೂಪದಲ್ಲಿದ್ದರೂ ಘನರೂಪದಲ್ಲಿದ್ದರೂ ಸರಿ, ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಇದರ ಪರಿಣಾಮಗಳು ಅಲರ್ಜಿಯಿಂದ ತೊಡಗಿ ಕ್ಯಾನ್ಸರ್ ವರೆಗೂ ಇರಬಹುದು. ಸಾಮಾನ್ಯವಾಗಿ ನಾವು ಸೋಪು ಎಂದು ಕೊಳ್ಳುವ ಉತ್ಪನ್ನದ ಬೆಲೆಯನ್ನೇ ಗಮನಿಸುತ್ತೇವೆಯೋ ಹೊರತು ಇದರ ಗುಣಮಟ್ಟವಲ್ಲ. ಆದರೆ ಅಗ್ಗದ ಸೋಪು ತಯಾರಿಸಲು ಬಳಸುವ ಅಗ್ಗದ ಮತ್ತು ಪ್ರಬಲ ರಾಸಾಯನಿಕಗಳೇ ಈ ತೊಂದರೆಗೆ ಮೂಲ ಕಾರಣ.

ಸೋಪು ಎಂಬ ಈ ಉತ್ಪನ್ನ ಭಾರೀ ಪ್ರಮಾಣದ ಹಣದ ವಹಿವಾಟನ್ನು ಹೊಂದಿರುವ ಉದ್ಯಮವೇ ಆಗಿದ್ದು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಗ್ಗದ ಸೋಪುಗಳನ್ನು ಪೂರೈಸುತ್ತಿವೆ. ಇವನ್ನು ಅಗ್ಗವಾಗಿಸಲೆಂದೇ ಇದಕ್ಕೆ ಅಗತ್ಯವಿರುವ ನೈಸರ್ಗಿಕ ಸಾಮಾಗ್ರಿಗಳನ್ನು ಬದಲಿಸಿ ಇಲ್ಲಿ ಕೃತಕ, ಕೆಲವು ಸಂದರ್ಭಗಳಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ... ಮುಂದೆ ಓದಿ

ಸೋಪಿಗೆ ಪರಿಮಳ ನೀಡಲು ಬಳಸಲಾಗುವ ರಾಸಾಯನಿಕಗಳು

ಸೋಪಿಗೆ ಪರಿಮಳ ನೀಡಲು ಬಳಸಲಾಗುವ ರಾಸಾಯನಿಕಗಳು

ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಸೋಪಿಗೆ ಪರಿಮಳ ನೀಡಲು ಬಳಸಲಾಗುವ ರಾಸಾಯನಿಕಗಳು. ಸೋಪಿನ ಗುಣವನ್ನು ಇದರ ಪರಿಮಳ ನಿರ್ಧರಿಸಲಾರದು ಎಂದು ನಮಗೆ ಗೊತ್ತಿದೆ. ಆದರೂ ನಾವೆಲ್ಲರೂ ಸೋಪು ಕೊಳ್ಳುವಾಗ ಮೂಸಿ ನೋಡುತ್ತೇವೆ. ಇದೇ ಸೋಪು ಬಿಕರಿಯಾಗಲು ಉತ್ಪಾದಕರಿಗೆ ಪ್ರಮುಖ ಅಂಶವಾಗಿದೆ. ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗುವ ಪರಿಮಳಗಳನ್ನೇ ಕೃತಕ ರೂಪದಲ್ಲಿ ಸೋಪುಗಳಿಗೆ ಬೆರೆಸಲಾಗುತ್ತದೆ. ಖ್ಯಾತೆ ತಾರೆಯರನ್ನು ಬಳಸಿ ಈ ವಾಸನೆಗಳನ್ನೇ ಮೂಸಿ ಆಸ್ವಾದಿಸಿ ಆನಂದಿಸುವ ಭಾರೀ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ. ಐರಿಶ್ ಸ್ಪ್ರಿಂಗ್ ಮತ್ತು ಕೋಸ್ಟ್ ಎಂಬ ಎರಡೇ ಪರಿಮಳಗಳನ್ನು ಬಳಸಿದ ಸೋಪುಗಳ ಜಾಹೀರಾತಿಗೆ ವ್ಯಯಿಸಿದ ಬೆಲೆ ಕೋಟ್ಯಂತರ! ಇಂದು ಅತ್ಯಂತ ಹೆಚ್ಚು ಮಾರಾಟವಾಗುವುದರಿಂದ ಹಿಡಿದು ಗುಡಿಕೈಗಾರಿಕೆಯಲ್ಲಿ ನೈಸರ್ಗಿಕವಾಗಿ ತಯಾರಿಸಿದ ಸೋಪುಗಳು ಸಹಾ ಗ್ರಾಹಕರ ಈ ಬೇಡಿಕೆಯನ್ನು ಪೂರೈಸಲು ಅನಿವಾರ್ಯವಾಗಿ ಕೃತಕ ಸುಗಂಧಗಳನ್ನು ಬಳಸಲೇಬೇಕಾಗುತ್ತದೆ. ಈ ಕೃತಕ ಸುಗಂಧಗಳು ನೈಸರ್ಗಿಕ ಸುಗಂಧ ದ್ರವ್ಯಗಳಿಗಿಂತ ಎಷ್ಟೂ ಪಟ್ಟು ಅಗ್ಗವಾಗಿರುವುದು ಮತ್ತು ವಾಸನೆ ಹೆಚ್ಚು ಗಾಢವಾಗಿರುವುದು ಇವು ಅನಾರೋಗ್ಯಕರವಾಗಿದ್ದರೂ ಇವುಗಳ ಬಳಕೆಗೆ ಮೂಲ ಕಾರಣವಾಗಿದೆ.

Most Read: ವಸತಿ-ಗೃಹದಲ್ಲಿ ಅರ್ಧ ಉಳಿಸಿ ಬಿಟ್ಟ ಸೋಪನ್ನು ಏನು ಮಾಡುತ್ತಾರೆ ಗೊತ್ತೇ?

ವಿಷಕಾರಿ ರಾಸಾಯನಿಕಗಳು

ವಿಷಕಾರಿ ರಾಸಾಯನಿಕಗಳು

ಸಾಮಾನ್ಯವಾಗಿ ಈ ಕೃತಕ ಸುಗಂಧಗಳು ತೈಲ ಉದ್ಯಮದಲ್ಲಿ ಎಣ್ಣೆಯನ್ನು ಹಿಂಡಿ ತೆಗೆದ ಬಳಿಕ ಉಳಿದ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಪ್ರಾಥಮಿಕವಾಗಿ ಇವು ಸುಗಂಧಿತ ಗ್ಯಾಸೋಲೀನ್ ಆಗಿದ್ದು ಇದರಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ಬಗೆಯ ಮಾನವರಿಗೆ ಹಾನಿಯಾಗಬಲ್ಲ ವಿಷಕಾರಿ ರಾಸಾಯನಿಕಗಳಿವೆ. ನೈಸರ್ಗಿಕ ಸುಗಂಧಗಳನ್ನು ಹೂವು ಮತ್ತು ಎಲೆ ಹಾಗೂ ಮೊಗ್ಗುಗಳನ್ನು ಕುದಿಸಿ ಆವಿಯನ್ನು ತಣಿಸಿ ಭಟ್ಟಿ ಇಳಿಸಿ ಪ್ರತ್ಯೇಕಿಸಲಾಗುತ್ತದೆ. ಈ ವಿಧಾನದಲ್ಲಿ ಅತಿ ಕಡಿಮೆ ಪ್ರಮಾಣದ ಅಪ್ಪಟ ಸುಗಂಧ ದೊರಕುವ ಕಾರಣ ಇವು ತುಂಬಾ ದುಬಾರಿಯಾಗಿರುತ್ತವೆ ಹಾಗೂ ಅಗತ್ಯ ಮಟ್ಟದ ಸುಗಂಧವನ್ನು ಪಡೆಯಲು ಹೆಚ್ಚು ಸ್ಥಳದಲ್ಲಿ ಹೂವುಗಳನ್ನು ಬೆಳೆಸಬೇಕಾಗುತ್ತದೆ.

ಸೋಪುಕೊಳ್ಳುವಾಗ ಜಾಗೃತೆಯಾಗಿರಿ

ಸೋಪುಕೊಳ್ಳುವಾಗ ಜಾಗೃತೆಯಾಗಿರಿ

ಹಾಗಾಗಿ ಕೃತಕ ಸುಗಂಧಗಳನ್ನು ತಯಾರಿಸಿ ಸೋಪು ಉದ್ಯಮಗಳಿಗೆ ಅಗ್ಗದಲ್ಲಿ ಮಾರುವ ದೊಡ್ಡ ಸಂಸ್ಥೆಗಳು ಈ ಸುಗಂಧದಲ್ಲಿ ಯಾವ ವಿಷಕಾರಿ ವಸ್ತುಗಳಿವೆ ಎಂಬುದನ್ನು ಹೇಳುವುದೇ ಇಲ್ಲ. ಸೋಪು ತಯಾರಕ ಸಂಸ್ಥೆಗಳೂ ಈ ಬಗ್ಗೆ ವಿಚಾರಿಸುವುದಿಲ್ಲ, ವಿಚಾರಿಸಿ ತಮ್ಮ ಲಾಭವನ್ನು ಮೊಟಕುಗೊಳಿಸುವ ಕೆಲಸವನ್ನು ಮಾಡುವುದೂ ಇಲ್ಲ. ಕೇಳಿದರೂ ಇವು ಸುರಕ್ಷಿತ ಎಂಬ ಉತ್ತರವೇ ದೊರಕುತ್ತದೆ. ಹೀಗೆ ಸೋಪು ವಿಷಕಾರಿಯಲ್ಲದಿದ್ದರೂ ಇದರಲ್ಲಿ ಬೆರೆತ ಸುಗಂಧ ವಿಷಕಾರಿಯಾಗಿದ್ದು ಸೋಪು ಸಹಾ ವಿಷಕಾರಿಯಾಗಿರುತ್ತದೆ. ಅಲ್ಲದೇ ಬಹಳ ಹಿಂದಿನಿಂದಲೂ ಗುಡಿಕೈಗಾರಿಕೆಯಾಗಿ ತಯಾರಿಸಲ್ಪಡುತ್ತಿದ್ದ ಸೋಪುಗಳಲ್ಲಿಯೂ ಈ ಸುಗಂಧಗಳು ಬೆರೆತು ಇವನ್ನೂ ವಿಷಕಾರಿಯಾಗಿಸಿವೆ.

ಕ್ಯಾನ್ಸರ್‌ಕಾರಕ ವಿಷದಷ್ಟೇ ಅಪಾಯಕಾರಿ

ಕ್ಯಾನ್ಸರ್‌ಕಾರಕ ವಿಷದಷ್ಟೇ ಅಪಾಯಕಾರಿ

ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ಸ್ನಾನದ ಸಾಬೂನುಗಳು ವಾಸ್ತವವಾಗಿ ಬಟ್ಟೆ ಒಗೆಯುವ ಸಾಮರ್ಥವಿರುವ ಡಿಟರ್ಜೆಂಟ್ ಗಳಿಗೆ ಸಮನಾಗಿವೆ. ಇವುಗಳಲ್ಲಿ ನೈಸರ್ಗಿಕ ತೈಲಗಳ ಬದಲು Sodium Lauryl Sulfate (SLS) ಎಂಬ ರಾಸಾಯನಿಕ ಬೆರೆಸಲಾಗಿರುತ್ತದೆ. ಇದು ಬಟ್ಟೆಯ ಕಲೆಯನ್ನು ನಿವಾರಿಸುವ ಪ್ರಬಲ ರಾಸಾಯನಿಕವಾಗಿದ್ದು ಚರ್ಮಕ್ಕೆ ಉರಿಯುಂಟು ಮಾಡುತ್ತದೆ. ಇದರ ಸರಿಸಮನಾದ Sodium Laureth Sulfate ಎಂಬ ರಾಸಾಯನಿಕದಷ್ಟೇ ಸುರಕ್ಷಿತ ಎಂಬ ಉತ್ಪಾದಕರ ವಾದವನ್ನು ವಿಜ್ಞಾನಿಗಳು ಒಪ್ಪುತ್ತಿಲ್ಲ. ಆದರೆ Sodium Lauryl Sulfate ನಲ್ಲಿ 1,4 dioxane ಎಂಬ ವಿಷಕಾರಿ ವಸ್ತುವಿರುವುದು ಪ್ರಯೋಗಗಳಿಂದ ಸಾಬೀತಾಗಿದೆ. ಇದೊಂದು ಅಪ್ಪಟ ಕ್ಯಾನ್ಸರ್ ಕಾರಕ ವಿಷ!

ಬಹುತೇಕ ದೊಡ್ಡ ಸಂಸ್ಥೆಗಳ ಸೋಪುಗಳಲ್ಲಿರುವ ರಾಸಾಯನಿಕಗಳ ಹೆಸರು ಉದ್ದುದ್ದವಾಗಿದ್ದು ಹೆಚ್ಚಿನವು ಆರೋಗ್ಯ ಮತ್ತು ವಾತಾವರಣಕ್ಕೆ ಮಾರಕವಾಗಿವೆ.

ಎಂದಿಗೂ ಆಂಟಿ ಬ್ಯಾಕ್ಟೀರಿಯಲ್ ಎಂದು ಬರೆದಿರುವ ಉತ್ಪನ್ನಗಳನ್ನು ಕೊಳ್ಳದಿರಿ

ಎಂದಿಗೂ ಆಂಟಿ ಬ್ಯಾಕ್ಟೀರಿಯಲ್ ಎಂದು ಬರೆದಿರುವ ಉತ್ಪನ್ನಗಳನ್ನು ಕೊಳ್ಳದಿರಿ

ಆಂಟಿ ಬ್ಯಾಕ್ಟೀರಿಯಲ್ ಅಥವಾ ಬ್ಯಾಕ್ಟೀರಿಯಾ ನಿವಾರಕ ಎಂಬ ಪದವೇ ಒಂದು ದೊಡ್ಡ ಮೋಸ. ನಮಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸೋಪೇ ಆಗಬೇಕೆಂದಿಲ್ಲ, ಸಾಮಾನ್ಯ ಉಪ್ಪೇ ಸಾಕು. ನಿಜವಾಗಿ ನಮಗೆ ಬೇಕಾದದ್ದು ಆಂಟಿ ವೈರಲ್ ಅಥವಾ ವೈರಸ್ ನಿವಾರಕ ಗುಣ. ಈ ಗುಣವಿರುವ ಉತ್ಪನ್ನಗಳು ದುಬಾರಿಯಾದ ಕಾರಣ ಉತ್ಪಾದಕರು ಅಪ್ಪಿ ತಪ್ಪಿಯೂ ಈ ಪದವನ್ನು ಬಳಸದೇ ಆಂಟಿ ಬ್ಯಾಕ್ಟೀರಿಯಲ್ ಎಂಬ ಹೆಸರನ್ನೇ ಧಾರಾಳವಾಗಿ ಬಳಸಿಕೊಳುತ್ತವೆ. ಬ್ಯಾಕ್ಟೀರಿಯಾಗಳನ್ನೇ ನಿವಾರಿಸಬೇಕಿದ್ದರೆ ಯಾವುದೇ ಸೋಪು ಸಾಕು, ಇಲ್ಲದಿದ್ದರೆ ಉಪ್ಪು, ಅರಿಶಿನ ಪುಡಿ ಅದೂ ಬೇಡ, ಕೇವಲ ಬೆಚ್ಚನೆಯ ನೀರಿನಿಂದ ತೊಳೆದುಕೊಂಡರೂ ಸಾಕು. ಅಮೇರಿಕಾದ FDA ಸಲಹಾ ಸಂಸ್ಥೆ ಬ್ಯಾಕ್ಟೀರಿಯಾ ನಿವಾರಣೆಗಾಗಿ ಈ ಹಣೆಪಟ್ಟಿ ಇರುವ ಸೋಪು ಕೊಳ್ಳದಿರಿ, ಇದರಿಂದೇನೂ ಹೆಚ್ಚಿನ ಪ್ರಯೋಜನವಿಲ್ಲ ಎಂದು ಸಲಹೆ ಮಾಡಿದೆ.

ಅಧ್ಯಾಯನದ ಪ್ರಕಾರ

ಅಧ್ಯಾಯನದ ಪ್ರಕಾರ

ಈ ಸೋಪುಗಳಲ್ಲಿ Triclosan ಅಥವಾ Triclocarbon ಎಂಬ ರಾಸಾಯನಿಕಗಳಿವೆ. EPA ಪ್ರಕಾರ ಇದೊಂದು ಕೀಟನಾಶಕ! ಇವುಗಳ ಸೇವನೆಯಿಂದ ರಸದೂತಗಳೇ ಪರಿವರ್ತನೆಗೊಳ್ಳುತ್ತವೆ. ಪರಿಣಾಮವಾಗಿ ನಪುಂಸಕತ್ವ, ನಡವಳಿಕೆಯಲ್ಲಿ ಬದಲಾವಣೆ ಹಾಗೂ ಕಲಿಯುವಿಕೆಯಲ್ಲಿ ಹಿಂದುಳಿಯುವಿಕೆ ಎದುರಾಗುತ್ತದೆ ಹಾಗೂ ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಗೂ ಕಾರಣವಾಗಬಹುದು.

ಅಧ್ಯಾಯನದ ಪ್ರಕಾರ

ಅಧ್ಯಾಯನದ ಪ್ರಕಾರ

ಈ ಸೋಪುಗಳ ಇನ್ನೊಂದು ತೊಂದರೆ ಎಂದರೆ ಇವುಗಳ ಬಳಕೆಯಿಂದ ನಮ್ಮ ದೇಹದಲ್ಲಿರುವ ಪ್ರತಿರೋಧಕ ಶಕ್ತಿಯನ್ನು ಮೀರಿದ ಶಕ್ತಿ ಹೊಂದಿರುವ MRSA ಮೊದಲಾದ ಎಂಬ ಅತ್ಯಂತ ಮಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪ್ರಚೋದನೆ ದೊರಕುವುದಾಗಿದೆ. The Centers for Disease Control and Prevention ಎಂಬ ಸಂಸ್ಥೆ ಈ ತೊಂದರೆಯನ್ನು ವಿಶ್ವವ್ಯಾಪಿ ಆರೋಗ್ಯದ ಕಾಳಜಿಯನ್ನಾಗಿ ಪರಿಗಣಿಸಿದೆ. ಈ ಬ್ಯಾಕ್ಟೀರಿಯಾಗಳ ಮೂಲಕ ಎದುರಾಗುವ ಸೋಂಕುಗಳಿಂದಾಗಿ ಪ್ರತಿವರ್ಷ ಆಸ್ಪತ್ರೆಗಳಲ್ಲಿ 60,000 ಕ್ಕೂ ಹೆಚ್ಚು ಜನರು ದಾಖಲಾಗುತ್ತಿದ್ದಾರೆ. ಇವರಲ್ಲಿ ಪ್ರತಿ ನಾಲ್ವರಲ್ಲಿ ಮೂವರ ರಕ್ತದಲ್ಲಿ Triclosan ಅಂಶವಿರುವುದು ದೃಢಪಟ್ಟಿದೆ. ಹಲವು ದೊಡ್ಡ ಸಂಸ್ಥೆಗಳು FD&Cಎಂಬ ಬಣ್ಣಕಾರಕ ರಾಸಾಯನಿಕಗಳನ್ನು ಬಳಸಿ ಸೋಪು ಸುಂದರವಾದ ಬಣ್ಣ ಪಡೆಯುವಂತೆ ಮಾಡುತ್ತವೆ. ವಾಸ್ತವವಾಗಿ ಈ ರಾಸಾಯನಿಕಗಳು ತಯಾರಾಗುವುದು ನಮ್ಮ ರಸ್ತೆಗೆ ಬಳಿಯುವ ಡಾಂಬರಿನಿಂದ! ಇವೂ ಕ್ಯಾನ್ಸರ್ ಕಾಕರವಾಗಿವೆ.

Most Read: ಹೊಟ್ಟೆಯ ಎಲ್ಲಾ ಸಮಸ್ಯೆಗೆ ನೈಸರ್ಗಿಕ 'ಅಲೋವೆರಾದ' ಚಿಕಿತ್ಸೆ

ಹಾಗಾದರೆ ಆರೋಗ್ಯಕ್ಕೆ ಯಾವ ಸೋಪು ಒಳ್ಳೆಯದು?

ಹಾಗಾದರೆ ಆರೋಗ್ಯಕ್ಕೆ ಯಾವ ಸೋಪು ಒಳ್ಳೆಯದು?

ಆದಷ್ಟು ಗಿಡಮೂಲಿಕೆಯ ಸೋಪುಗಳನ್ನು ಬಳಸಿ, ಈ ಸೋಪುಗಳಲ್ಲಿ ಸೌಮ್ಯವಾದ ಗಿಡಮೂಲಿಕೆಗಳಾದ ಕ್ಯಾಮೋಮೈಲ್, ಲ್ಯಾವೆಂಡರ್, ಪುದಿನಾ, ಸ್ಪಿಯರ್ ಮಿಂಟ್, ಓಟ್ ಮೀಲ್ ಅಥವಾ ಬೆಣ್ಣೆಹಣ್ಣುಗಳಿರುತ್ತವೆ. ಕೆಲವು ಸೋಪುಗಳ ಮುಖ್ಯ ಪರಿಕರವಾಗಿ ಆಲಿವ್ ಎಣ್ಣೆ ಅಥವಾ ಶಿಯಾ ಬೆಣ್ಣೆಯನ್ನೂ ಬಳಸಲಾಗುತ್ತದೆ. ಚರ್ಮದ ಜೀವಕೋಶಗಳನ್ನು ಮರುನಿರ್ಮಿಸಲು ಆಲಿವ್ ಎಣ್ಣೆ ಉತ್ತಮವಾಗಿದ್ದು ಕಾಂತಿ ಹೆಚ್ಚಿಸಲು ಸಹಾ ನೆರವಾಗುತ್ತದೆ. ಅಲ್ಲದೇ ಆಲಿವ್ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ನುಗಳು ಕ್ಯಾನ್ಸರ್ ಕಾರಕ ಕಣಗಳನ್ನು ದೂರ ಇರಿಸುತ್ತವೆ. ಈ ಸೋಪುಗಳು ಒಣಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ. ಇದರಲ್ಲಿ ಲೋಳೆಸರ, ಕೋಕೋ ಬೆಣ್ಣೆ ಅಥವಾ ಬೆಣ್ಣೆಹಣ್ಣಿನ ಅಂಶಗಳಿದ್ದರೆ ಇನ್ನೂ ಉತ್ತಮವಾಗಿದೆ.

Most Read: ಕರಿಬೇವಿನ ಎಲೆ ಸೇವನೆಯಿಂದ ಒಂದೇ ತಿಂಗಳಲ್ಲಿ ತೂಕ ಕಳೆದುಕೊಳ್ಳಬಹುದಂತೆ!

ದುಬಾರಿ ಆದರೂ ಪರವಾಗಿಲ್ಲ, ನೈಸರ್ಗಿಕ ಸೋಪನ್ನೇ ಬಳಸಿ

ದುಬಾರಿ ಆದರೂ ಪರವಾಗಿಲ್ಲ, ನೈಸರ್ಗಿಕ ಸೋಪನ್ನೇ ಬಳಸಿ

ಕೇವಲ ಕೊಂಚ ದುಬಾರಿ ಎಂಬ ಕಾರಣಕ್ಕೇ ನೈಸರ್ಗಿಕ ಸೋಪುಗಳನ್ನು ಇಂದಿಗೂ ಪ್ರಯತ್ನಿಸದಿರುವವರು ನಮ್ಮ ನಡುವೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವುಗಳನ್ನೊಮ್ಮೆ ಬಳಸಿದ ಬಳಿಕ ಇದಕ್ಕೇಕೆ ಕೊಂಚ ದುಬಾರಿ ಬೆಲೆ ತೆರುತ್ತಿದ್ದೇವೆ ಎಂಬ ಅರಿವಾಗುತ್ತದೆ. ಇವು ಉತ್ತಮ ಪರಿಣಾಮವನ್ನು ನೀಡುವ ಜೊತೆಗೇ ಆರೋಗ್ಯವನ್ನೂ ಬಾಧಿಸುವುದಿಲ್ಲ. ತ್ವಚೆಯೂ ಮೃದು, ನುಣ್ಣಗೆ ಮತ್ತು ಆರೋಗ್ಯಕರವಾಗಿ ನಳನಳಿಸುತ್ತದೆ. ಆರೋಗ್ಯಕ್ಕಾಗಿ ಕೊಂಚ ಹಣ ವ್ಯಯಿಸುವುದಾದರೆ ಇದು ಸೂಕ್ತವಾದ ವ್ಯಯವಲ್ಲವೇ!

English summary

beware!Bath Soaps Can Be Harmful To Your Health

Your bath soap could be harmful to your health. It makes no difference if it is a liquid or a bar bath soap. They can cause health problems ranging from allergies to cancer. Most consumers want inexpensive bath soap and don't see the value in a soap that costs over dollars a bar when much cheaper soaps are available. The question is how much is your health worth to you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more