For Quick Alerts
ALLOW NOTIFICATIONS  
For Daily Alerts

ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜ ಸಾಕು!

By Hemanth
|

ಪುರುಷರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಕಡಿಮೆ. ಅವರ ಆರೋಗ್ಯದ ಬಗ್ಗೆ ಬೇರೆ ಯಾರಾದರೂ ಗಮನಹರಿಸಬೇಕಾಗುತ್ತದೆ. ಇದು ತಾಯಿ, ಪತ್ನಿ ಅಥವಾ ಸೋದರಿಯಾಗಿರಬಹುದು. ಕೆಲವು ಪುರುಷರು ಜಿಮ್ ಗೆ ಹೋದರೆ ಮಾತ್ರ ಆರೋಗ್ಯ ಎಂದು ಭಾವಿಸಿದಂತಿದೆ. ಇದರಿಂದ ಪ್ರತನಿತ್ಯ ಜಿಮ್ ಹೋಗುವರು. ಆದರೆ ಬೇರೆ ಕೆಲವೊಂದು ವಿಧಾನಗಳಿಂದಲೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೆಚ್ಚಿನ ಪುರುಷರಿಗೆ ತಿಳಿದಿಲ್ಲ.

ಅದರಲ್ಲೂ ಕೆಲವೊಂದು ನೈಸರ್ಗಿಕ ವಿಧಾನಗಳ ಮೂಲಕ ಆರೋಗ್ಯ ಕಾಪಾಡಬಹುದು. ಇದರಲ್ಲಿ ಪ್ರಮುಖವಾಗಿ ನಮ್ಮ ಸುತ್ತಮುತ್ತಲು ಸಿಗುವಂತಹ ಹಣ್ಣು ಹಾಗೂ ತರಕಾರಿಗಳಿಂದ. ಕುಂಬಳಕಾಯಿ ಪ್ರತಿಯೊಬ್ಬರಿಗೂ ಪರಿಚಯವಿರುವ ತರಕಾರಿ. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಕೇವಲ ಕಾಯಿ ಮಾತ್ರವಲ್ಲದೆ ಇದರ ಬೀಜದಿಂದಲೂ ಪುರುಷರು ತಮ್ಮ ಆರೋಗ್ಯ ಕಾಪಾಡಬಹುದು. ಹೌದು, ಕುಂಬಳಕಾಯಿಯಿಂದ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಈ ಲೇಖನ ಮೂಲಕ ನೀವು ತಿಳಿಯಿರಿ.

ಕುಂಬಳಕಾಯಿ ಬೀಜದಲ್ಲಿರುವ ಪೋಷಕಾಂಶಗಳು
ಕುಂಬಳಕಾಯಿ ಬೀಜವು ಪೋಷಕಾಂಶಗಳ ಆಗರವಾಗಿದ್ದು, ಸತು, ಮೆಗ್ನಿಶಿಯಂ, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಸೆಲೆನಿಯಂ, ಕ್ಯಾಲ್ಸಿಯಂ ಮತ್ತು ಫೋಸ್ಪರಸ್ ಇದರಲ್ಲಿದೆ. ಇಷ್ಟು ಮಾತ್ರವಲ್ಲದೆ ಉನ್ನತ ಮಟ್ಟದ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಬಿ, ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಇದೆ.

ಸಿಪ್ಪೆ ಇಲ್ಲದೆ ಇರುವಂತಹ 28 ಗ್ರಾಂ ಕುಂಬಳಕಾಯಿಯಲ್ಲಿ ಕೊಬ್ಬು ಹಾಗೂ ಪ್ರೋಟೀನ್ ಸಹಿತ 151 ಕ್ಯಾಲರಿಯಿದೆ. ಇದರಲ್ಲಿ 1.7 ಗ್ರಾಂ ನಾರಿನಾಂಶ ಮತ್ತು 5 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ.
ಕುಂಬಳಕಾಯಿಯಲ್ಲಿ ಇರುವಂತಹ ಮೆಗ್ನಿಶಿಯಂ ಹೃದಯಾಘಾತದ ಅಪಾಯ ಕಡಿಮೆ ಮಾಡುವುದು, ರಕ್ತದೊತ್ತಡ ನಿಭಾಯಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಡುವುದು, ನಿದ್ರೆಯ ಗುಣಮಟ್ಟ ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು.

ಈ ಕುಂಬಳದ ಬೀಜಗಳು ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!!

ಒಮೆಗಾ-3 ಕೊಬ್ಬಿನಾಮ್ಲದಿಂದಾಗಿ ಇದು ಹಾರ್ಮೋನುಗಳನ್ನು ಸಮತೋಲನದಲ್ಲಿಡುವುದು ಮತ್ತು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಇಡುವುದು. ಇತರ ವಿಟಮಿನ್ ಗಳು ಮತ್ತು ಖನಿಜಾಂಶಗಳು ಮೂಳೆಗಳನ್ನು ಬಲಗೊಳಿಸುವುದು, ಕೆಂಪುರಕ್ತ ಕಣ ಉತ್ಪಾದಿಸುವುದು ಮತ್ತು ಉರಿಯೂತ ಕಡಿಮೆ ಮಾಡುವುದು. ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜಗಳು ಹೇಗೆ ಸಹಕಾರಿ?

ಫಲವತ್ತತೆ ಹೆಚ್ಚಿಸುವುದು

ಫಲವತ್ತತೆ ಹೆಚ್ಚಿಸುವುದು

ಕುಂಬಳಕಾಯಿ ಬೀಜದಲ್ಲಿರುವ ಸತು ಸಂಪೂರ್ಣ ವೀರ್ಯದ ಗುಣಮಟ್ಟ ಮತ್ತು ಪುರುಷರ ಫಲವತ್ತತೆ ಹೆಚ್ಚಿಸುವುದು. ಆರೋಗ್ಯಕರ ಟೆಸ್ಟೊಸ್ಟೆರಾನ್ ಮಟ್ಟವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಕುಂಬಳಕಾಯಿ ಬೀಜದಲ್ಲಿ ಉನ್ನತ ಮಟ್ಟದ ಪ್ರೋಟೀನ್, ಮೆಗ್ನಿಶಿಯಂ, ಮ್ಯಾಂಗನೀಸ್, ಫೋಸ್ಪರಸ್, ಕಬ್ಬಿಣ, ಸತು ಮತ್ತು ಪೊಟಾಶಿಯಂ ಇದ್ದು, ಇದು ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಸುಧಾರಿಸುವುದು.

ಜನನೇಂದ್ರಿಯ ಆರೋಗ್ಯ ವೃದ್ಧಿ

ಜನನೇಂದ್ರಿಯ ಆರೋಗ್ಯ ವೃದ್ಧಿ

ಕುಂಬಳಕಾಯಿ ಬೀಜಗಳ ಸೇವನೆ ಮಾಡುವುದರಿಂದ ಜನನೇಂದ್ರಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಇಂಡಿಯನ್ ಜರ್ನಲ್ ಆಫ್ ಯುರೋಲಾಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ. ಕುಂಬಳಕಾಯಿ ಬೀಜಗಳ ಸೇವನೆ ಮಾಡುವುದರಿಂದ ಜನನೇಂದ್ರಿಯ ಗ್ರಂಥಿಗಳು ಬಲಗೊಂಡು, ಪುರುಷರಲ್ಲಿ ಆರೋಗ್ಯಕರ ಹಾರ್ಮೋನು ಕಾರ್ಯನಿರ್ವಹಿಸಲು ನೆರವಾಗುವುದು. ಜನನೇಂದ್ರಿಯ ಗ್ರಂಥಿಗಳು ಹಿಗ್ಗಿಕೊಂಡು ಮೂತ್ರವಿಸರ್ಜನೆ ವೇಳೆ ಆಗುವಂತಹ ಸಮಸ್ಯೆಯಾದ ಪ್ರಾಸ್ಟಟಿಕ್ ಹೈಪರ್ಪ್ಲಾಸಿಯಾ(ಬಿಪಿಎಚ್)ವನ್ನು ಕುಂಬಳಕಾಯಿ ಬೀಜವು ನಿವಾರಿಸುವುದು. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಬಿಪಿಎಚ್ ಸಮಸ್ಯೆ ಕಡಿಮೆಯಾಗುವುದು.

ಸ್ನಾಯುಗಳ ಆರೋಗ್ಯ

ಸ್ನಾಯುಗಳ ಆರೋಗ್ಯ

ಸ್ನಾಯುಗಳ ಬೆಳವಣಿಗೆ ಮತ್ತು ಸರಿಪಡಿಸಲು ಪ್ರೋಟೀನ್ ಅತ್ಯಗತ್ಯವಾಗಿ ಬೇಕು. ಕುಂಬಳಕಾಯಿ ಬೀಜದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. 100ಗ್ರಾಂ ಕುಂಬಳಕಾಯಿ ಬೀಜದಲ್ಲಿ ಸುಮಾರು 23.33 ಗ್ರಾಂನಷ್ಟು ಪ್ರೋಟೀನ್ ಇದೆ ಎಂದು ಅಮೆರಿಕಾದ ಕೃಷಿ ಇಲಾಖೆಯ ಪೋಷಕಾಂಶ ಪಟ್ಟಿಯು ಹೇಳುತ್ತದೆ. ಬೆಳಗ್ಗೆ ಸ್ಮೂಥಿ ಜತೆಗೆ ಇದನ್ನು ಮಿಶ್ರಣ ಮಾಡಿಕೊಂಡು ಸೇವಿಸಿ.

ಫ್ಲೂ, ಶೀತ ಮತ್ತು ಇತರ ರೋಗಗಳಿಂದ ರಕ್ಷಿಸುತ್ತದೆ

ಫ್ಲೂ, ಶೀತ ಮತ್ತು ಇತರ ರೋಗಗಳಿಂದ ರಕ್ಷಿಸುತ್ತದೆ

ಈ ಬೀಜಗಳಲ್ಲಿ ಅಧಿಕ ಪ್ರಮಾಣದ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಹಾಗೂ ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ವಿಶೇಷವಾಗಿ ವೈರಸ್ ಮೂಲಕ ಎದುರಾಗುವ ಫ್ಲೂ, ಶೀತ ಮತ್ತು ಇತರ ರೋಗಗಳಿಂದ ರಕ್ಷಿಸುತ್ತದೆ.

ದೇಹದ ತೂಕ ಇಳಿಸುತ್ತದೆ

ದೇಹದ ತೂಕ ಇಳಿಸುತ್ತದೆ

ಕುಂಬಳದ ಬೀಜಗಳು ತೂಕ ಇಳಿಸುವವರಿಗೆ ಸೂಕ್ತವಾದ ಆಹಾರವಾಗಿದೆ. ಇವು ಹೆಚ್ಚಿನ ಸಾಂದ್ರತೆಯಿಂದ ಕೂಡಿರುವ ಆಹಾರವಾಗಿರುವ ಕಾರಣ ಕೊಂಚ ಪ್ರಮಾಣದಲ್ಲಿ ಸೇವಿಸಿದರೂ ಹೊಟ್ಟೆ ತುಂಬಿದಂತಾಗಿ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯುತ್ತದೆ. ಈ ಮೂಲಕ ಅನಗತ್ಯ ಆಹಾರ ಸೇವಿಸುವುದರಿಂದ ರಕ್ಷಿಸಿ ದ ಹೆಚ್ಚಳವನ್ನು ತಡೆಯುತ್ತದೆ. ಅಲ್ಲದೇ ಇವುಗಳಲ್ಲಿ ಕರಗದ ನಾರು ಸಾಹಾ ಹೆಚ್ಚಿನ ಪ್ರಮಾಣದಲ್ಲಿದ್ದು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಆಹಾರ ಸೇವನೆಯ ಬಯಕೆಗಳನ್ನು ಹತ್ತಿಕ್ಕುತ್ತದೆ.

ಸ್ನಾಯುಗಳ ಆರೋಗ್ಯ ಕುಂಬಳಕಾಯಿ ಬೀಜದ ಇತರ ಆರೋಗ್ಯ ಲಾಭಗಳು

ಸ್ನಾಯುಗಳ ಆರೋಗ್ಯ ಕುಂಬಳಕಾಯಿ ಬೀಜದ ಇತರ ಆರೋಗ್ಯ ಲಾಭಗಳು

ಕುಂಬಳಕಾಯಿ ಬೀಜದಲ್ಲಿ ಇರುವಂತಹ ಸತುವು ಹೊಸ ಕೋಶಗಳ ಬೆಳವಣಿಗೆಗೆ ಉತ್ತೇಜಿಸುವುದು ಮತ್ತು ಅವುಗಳನ್ನು ದುರಸ್ತಿ ಮಾಡುವುದು. ಇದು ಆರೋಗ್ಯಕರ ಹಾಗೂ ಕಾಂತಿಯುತ ಕೂದಲಿಗೂ ನೆರವಾಗುವುದು. ಇದರಲ್ಲಿ ಇರುವಂತಹ ಫೋಸ್ಪರಸ್ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹಕ್ಕೆ ಶಕ್ತಿ ನೀಡುವುದು. ಕುಂಬಳಕಾಯಿ ಬೀಜಗಳು ಉರಿಯೂತ ಶಮನಕಾರಿಯಾಗಿದ್ದು, ಅಜೀರ್ಣ ನಿವಾರಿಸುವುದು.

ಆಹಾರದಲ್ಲಿ ಕುಂಬಳಕಾಯಿ ಬೀಜದ ಸೇವನೆ ಹೇಗೆ?

ಆಹಾರದಲ್ಲಿ ಕುಂಬಳಕಾಯಿ ಬೀಜದ ಸೇವನೆ ಹೇಗೆ?

* ಈ ಅದ್ಭುತ ಬೀಜವನ್ನು ಸ್ಮೂಥಿ, ಸಿರೇಲ್, ಗ್ರಾನೊಲಾ, ಸೂಪ್ ಮತ್ತು ಇತರ ಸಲಾಡ್ ಗಳಲ್ಲಿ ಬಳಕೆ ಮಾಡಬಹುದು.

* ತರಕಾರಿಗಳೊಂದಿಗೆ ಫ್ರೈ ಮಾಡಿ ಅಥವಾ ರೋಸ್ಟ್ ಮಾಡಿಕೊಂಡು ಇದನ್ನು ಸೇವಿಸಬಹುದು.

* ಕುಕ್ಕಿಸ್ ಅಥವಾ ಮಫಿನ್ಸ್ ಮಾಡುವಾಗ ಇದನ್ನು ಸೇರಿಸಿ.

ಸೂಚನೆ

ಇದರಲ್ಲಿ ನಾರಿನಾಂಶವು ಅಧಿಕವಾಗಿದ್ದು. ಅತಿಯಾಗಿ ಸೇವನೆ ಮಾಡಿದರೆ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಾಣಿಸಬಹುದು. ಒಂದೇ ಸಲ ಅತಿಯಾಗಿ ತಿಂದರೆ ಮಲಬದ್ಧತೆಯು ಉಂಟಾಗಬಹುದು.

English summary

Benefits Of Pumpkin Seeds For Men's Health

Pumpkin seeds are an excellent source of zinc, magnesium, manganese, copper, iron, selenium, calcium and phosphorous. They are a great source of protein, omega-3 fatty acids, B vitamins, beta-carotene and vitamin A. Pumpkin seeds are normally dark green in colour and oval in shape and are available all year round.
X
Desktop Bottom Promotion