For Quick Alerts
ALLOW NOTIFICATIONS  
For Daily Alerts

ಚಿಕ್ಕು ಜ್ಯೂಸ್ ಕುಡಿದರೆ ತ್ವಚೆ, ಕೂದಲು ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು

|

ಚಿಕ್ಕು ಅಥವಾ ಸಪೋಟಾ ಗಾಢ ಖಾಕಿ ಬಣ್ಣದ, ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ಸಿಹಿಯಾದ ಹಣ್ಣಾಗಿದೆ. ಸಪೋಟೇಸೀ (Sapotaceae)ಎಂಬ ಸಸ್ಯವರ್ಗಕ್ಕೆ ಸೇರಿದ ಈ ಸಸ್ಯದ ವೈಜ್ಞಾನಿಕ ಹೆಸರು Manilkara zapota.ಇದು ಮೆಕ್ಸಿಕೋ, ಮಧ್ಯ ಅಮೇರಿಕಾ ಹಾಗೂ ಕ್ಯಾರೆಬೆಯನ್ ಮೂಲದ ಹಣ್ಣಾಗಿದ್ದು ವಿದೇಶೀಯರ ಭಾರತ ದರ್ಶನದ ಸಮಯದಲ್ಲಿ ಇತರ ಹಣ್ಣುಗಳಂತೆಯೇ ಇಲ್ಲಿಗೂ ಆಗಮಿಸಿದೆ. ಚಿಕ್ಕು, ಲಮೂತ್, ನೋಸ್ ಬೆರ್ರಿ ಹಾಗೂ ಸಪೋತಿ ಎಂಬ ಹೆಸರುಗಳೂ ಈ ಹಣ್ಣಿಗಿವೆ.

chiku juice

ಈ ಹಣ್ಣಿನ ನಡುವಣ ಕೋಲಿನಂತಹ ಭಾಗವನ್ನು ಹಾಗೂ ಬೀಜಗಳನ್ನು ನಿವಾರಿಸಿದರೆ ನಿಸರ್ಗವೇ ಅಚ್ಚುಕಟ್ಟಾಗಿ ಕತ್ತರಿಸಿಟ್ಟಂತೆ ಇದರ ತಿರುಳಿದ್ದು ಇದು ಇನ್ನಷ್ಟು ಗಾಢ ಕಂದು ಬಣ್ಣ ಹೊಂದಿರುತ್ತದೆ. ತುಮ್ಬಾ ಸಿಹಿಯಾಗಿರುವ ಈ ತಿರುಳು ನಯವಾದ ರವೆಯಂತಿರುತ್ತದೆ. ಇದರ ಜ್ಯೂಸ್ ತಯಾರಿಸಲು ಸಿಪ್ಪೆ ನಿವಾರಿಸಿ ಕೇವಲ ತಿರುಳನ್ನು ಹಾಲಿನೊಂದಿಗೆ ಕಡೆದರೆ ಸಾಕು. ಸಕ್ಕರೆ ಬೆರೆಸುವ ಅಗತ್ಯವಿಲ್ಲ. ಸಪೋಟಾ ಜ್ಯೂಸ್, ಚಿಕ್ಕೂ ಜ್ಯೂಸ್ ಅಥವಾ ಸಾಪೋಡಿಲ್ಲಾ ಜ್ಯೂಸ್ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಪೇಯ ವಿಶಿಷ್ಟ ಸ್ವಾದ ಹೊಂದಿದ್ದು ಇದರ ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಪ್ರಮುಖವಾದ ಪ್ರಯೋಜನಗಳು ಇಂತಿವೆ

ಅವಶ್ಯಕ ಪೋಷಕಾಂಶಗಳ ಉತ್ತಮ ಮೂಲವಾಗಿದೆ

ಅವಶ್ಯಕ ಪೋಷಕಾಂಶಗಳ ಉತ್ತಮ ಮೂಲವಾಗಿದೆ

ಬಹುತೇಕ ಎಲ್ಲಾ ಹಣ್ಣಿನ ರಸಗಳಂತೆಯೇ ಚಿಕ್ಕು ಜ್ಯೂಸ್ ಸಹಾ ಹಲವಾರ ಅವಶ್ಯಕ ಪೋಷಕಾಂಶಗಳನ್ನೊಳ ಗೊಂಡಿದೆ. ವಿಶೇಷವಾಗಿ ವಿಟಮಿನ್ ಎ, ಬಿ ಮತ್ತು ಸಿ ಇವೆ. ಜೊತೆಗೇ ಉತ್ತಮ ಪ್ರಮಾಣದ ತಾಮ್ರ, ನಿಯಾಸಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಗಂಧಕಗಳೂ ಇವೆ.

ವಾಯುಪ್ರಕೋಪ ಮತ್ತು ಹೊಟ್ಟೆಯ ತೊಂದರೆಗಳನ್ನು ಸರಿಪಡಿಸುತ್ತದೆ

ವಾಯುಪ್ರಕೋಪ ಮತ್ತು ಹೊಟ್ಟೆಯ ತೊಂದರೆಗಳನ್ನು ಸರಿಪಡಿಸುತ್ತದೆ

ಚಿಕ್ಕೂ ಜ್ಯೂಸ್ ನಲ್ಲಿ ಟ್ಯಾನಿನ್ ಗಳೆಂಬ ನೈಸರ್ಗಿಕ ರೂಪದ ಪಾಲಿಫೆನಾಲ್ ಗಳಿವೆ. ಇವು ಕ್ಷಾರೀಯವಾಗಿದ್ದು ಪ್ರೋಟೀನುಗಳನ್ನು ಒಡೆಯುವ ಮೂಲಕ ಹೊಟ್ಟೆ ಮತ್ತು ಕರುಳುಗಳಲ್ಲಿ ಎದುರಾಗುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸುತ್ತವೆ. ಅಲ್ಲದೇ ಹೊಟ್ಟೆ ಕರುಳುಗಳಲ್ಲಿರುವ ಪರಾವಲಂಬಿ ಕ್ರಿಮಿಗಳನ್ನು ಹೊಡೆದೋಡಿಸುವ ಗುಣ, ಉರಿಯೂತ ನಿವಾರಕ ಗುಣ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನೂ ಹೊಂದಿದೆ. ವಿಶೇಷವಾಗಿ ಉರಿಯೂತ ನಿವಾರಕ ಗುಣ ವಾಯುಪ್ರಕೋಪ ಮತ್ತು ಇತರ ತೊಂದರೆಗಳನ್ನು ಸರಿಪಡಿಸುತ್ತದೆ ಹಾಗೂ ಕರುಳುಗಳಲ್ಲಿ ಜೀರ್ಣಕ್ರಿಯೆ ಸರಾಗವಾಗಿ ಜರುಗಲು ಮತ್ತು ವಿಸರ್ಜನಾ ಕಾರ್ಯವೂ ಸುಲಭವಾಗಿ ನಡೆಯಲು ನೆರವಾಗುತ್ತದೆ.

Most Read: ಶೌಚಾಲಯದಲ್ಲಿ ನೀವು ಸಹಾ ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಹಾಗಾದರೆ ನಾವು ಎಚ್ಚರಿಸಿರಲಿಲ್ಲ ಎಂದು ಬಳಿಕ ಹೇಳದಿರಿ!

ನಿರಾಳಗೊಳಿಸುವ ಗುಣ ಹೊಂದಿದೆ ಮತ್ತು ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ

ನಿರಾಳಗೊಳಿಸುವ ಗುಣ ಹೊಂದಿದೆ ಮತ್ತು ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ

ಈ ರಸದ ಸೇವನೆಯ ಬಳಿಕ ನರಗಳ ಒತ್ತಡ ಸಡಿಲಗೊಂಡು ಆರಾಮವಾಗುವ ಕಾರಣ ದೇಹ ಮತ್ತು ಮನಸ್ಸು ನಿರಾಳಭಾವನೆಯನ್ನು ಪಡೆಯುತ್ತವೆ. ಇದರಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿ ವಿಟಮಿನ್ ಬಿ ಇರುವ ಕಾರಣ ನರಗಳ ಒತ್ತಡ ನಿವಾರಿಸಲು ಹಾಗೂ ಆಯಾಸವನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸಲು ನೆರವಾಗುತ್ತವೆ.

ರೋಗ ನಿರೋಧಕ ಶಕ್ತಿಗೆ ಪ್ರಚೋದನೆ ನೀಡುತ್ತದೆ

ರೋಗ ನಿರೋಧಕ ಶಕ್ತಿಗೆ ಪ್ರಚೋದನೆ ನೀಡುತ್ತದೆ

ಚಿಕ್ಕು ಜ್ಯೂಸ್ ವಿಟಮಿನ್ ಸಿ ಯಿಂದ ಸಮೃದ್ದವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ ಹಲವಾರು ರೋಗಗಳ ವಿರುದ್ದ ರಕ್ಷಣೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಅಪಾಯಕಾರಿ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹೊಡೆದೋಡಿಸಲೂ ನೆರವಾಗುತ್ತದೆ. ವೈರಸ್, ಬ್ಯಾಕ್ಟೀರಿಯಾ ಹಾಗೂ ಪರಾವಲಂಬಿಗಳ ವಿರುದ್ದ ಗರಿಷ್ಟ ರಕ್ಷಣೆ ಪಡೆಯಲು ಹಾಗೂ ದೇಹದ ಒಳಗಣ ಎಲ್ಲಾ ಅಂಗಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನಿತ್ಯವೂ ಒಂದು ಲೋಟ ಸಪೋಟ ಜ್ಯೂಸ್ ಕುಡಿಯುವುದು ಉತ್ತಮ.

Most Read: ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಲೇಬಾರದು! ಯಾಕೆ ಗೊತ್ತೇ?

ಅಧಿಕ ವಿಟಮಿನ್ ಎ ಪ್ರಮಾಣ

ಅಧಿಕ ವಿಟಮಿನ್ ಎ ಪ್ರಮಾಣ

ನಮ್ಮ ಕಣ್ಣುಗಳ ಆರೋಗ್ಯ ಉತ್ತಮವಾಗಿರಲು ನಮ್ಮ ಆಹಾರದಲ್ಲಿ ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿರಬೇಕು. ಅಲ್ಲದೇ ತ್ವಚೆಯಲ್ಲಿ ಆರ್ದ್ರತೆ ಮತ್ತು ದೇಹದ ತೇವಭಾಗಗಳು ತೇವಾಂಶವನ್ನು ಉಳಿಸಿಕೊಳ್ಳಲೂ ವಿಟಮಿ ನೆ ಅಗತ್ಯವಾಗಿದೆ. ಹಾಗೂ ಶ್ವಾಸಕೋಶ ಮತ್ತು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲೂ ಈ ವಿಟಮಿನ್ ಎ ಅಗತ್ಯವಾಗಿದೆ.

ಚೈತನ್ಯವನ್ನು ಹೆಚ್ಚಿಸುತ್ತದೆ

ಚೈತನ್ಯವನ್ನು ಹೆಚ್ಚಿಸುತ್ತದೆ

ಸಪೋಟ ರಸದಲ್ಲಿ ಫ್ರುಕ್ಟೋಸ್ ಮತ್ತು ಸುಕ್ರೋಸ್ ಸಕ್ಕರೆಗಳು ಹೆಚ್ಚಿನ ಪ್ರಮಾಣದಲ್ಲಿವೆ ಹಾಗೂ ಇವು ಆರೋಗ್ಯಕರ ಸಕ್ಕರೆಗಳಾಗಿದ್ದು ದೇಹಕ್ಕೆ ಹೆಚ್ಚಿನ ಚೈತನ್ಯ ಮತ್ತು ಶಕ್ತಿಯನ್ನು ತಕ್ಷಣವೇ ಒದಗಿಸುತ್ತವೆ. ಇದೇ ಕಾರಣದಿಂದ ಕ್ರೀಡಾಪಟುಗಳು, ಗರ್ಭಿಣಿಯರು ಹಾಗೂ ಬೆಳೆಯುತ್ತಿರುವ ಮಕ್ಕಳಿಗೆ ಈ ಜ್ಯೂಸ್ ಅಮೃತಸಮಾನವಾಗಿದೆ.

ಅತ್ಯುತ್ತಮ ವಿರೇಚಕ

ಅತ್ಯುತ್ತಮ ವಿರೇಚಕ

ಸಪೋಟಾ ರಸದಲ್ಲಿ ಕರಗುವ ನಾರು ಸಮೃದ್ದವಾಗಿದೆ ಹಾಗೂ ಇದು ಮಲಬದ್ದತೆಯನ್ನು ಹೋಗಲಾಡಿಸಿ ವಿಸರ್ಜನಾಕ್ರಿಯೆಯನ್ನು ಸುಲಭಗೊಳಿಸುವ ಮೂಲಕ ಅತ್ಯುತ್ತಮ ನೈಸರ್ಗಿಕ ವಿರೇಚಕವಾಗಿದೆ. ಕೇವಲ ಮಲಬದ್ದತೆಯಿಂದ ರಕ್ಷಿಸುವುದು ಮಾತ್ರವಲ್ಲ, ಕರುಳು ಮತ್ತು ಗುದನಾಳದ ಒಳಭಾಗದ ತೇವಪದರಗಳಲ್ಲಿ ಕಲ್ಮಶಗಳ ಮೂಲಕ ಎದುರಾಗುವ ಕ್ಯಾನ್ಸರ್ ಕಾರಕ ವಿಷಕಾರಿ ವಸ್ತುಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಕೆಲವು ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ

ಕೆಲವು ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ

ಚಿಕ್ಕುವಿನ ರಸ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನೆರವಾಗುವ ಹಾಗೂ ಪ್ರಮುಖ ಪೋಷಕಾಂಶಗಳನ್ನು ಒದಗಿಸುವ ಮೂಲಕ ಮಧುಮೇಹ ಮತ್ತು ಹೃದಯಸಂಬಂಧಿ ರೋಗಗಳು ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಅಲ್ಲದೇ ಕರುಳುಗಳ ಕ್ಷಮತೆಯನ್ನೂ ಹೆಚ್ಚಿಸುತ್ತದೆ.

ಕೂದಲ ರಕ್ಷಣೆಗಾಗಿಯೂ ಸೈ

ಕೂದಲ ರಕ್ಷಣೆಗಾಗಿಯೂ ಸೈ

ನಿಯಮಿತವಾಗಿ ಸಪೋಟಾ ಜ್ಯೂಸ್ ಸೇವಿಸುತ್ತಾ ಬರುವ ಮೂಲಕ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ. ತನ್ಮೂಲಕ ಆರೋಗ್ಯಕರ ಕೂದಲು ಪಡೆಯಲು ಸಾಧ್ಯವಾಗುತ್ತದೆ. ಕೂದಲು ಸೌಮ್ಯ, ನುಣುಪು ಹಾಗೂ ಸುಲಭವಾಗಿ ಬಾಚಲು ಬರುವಂತೆ ಆರೋಗ್ಯಕರವಾಗುತ್ತದೆ.

ತಲೆಹೊಟ್ಟು ಮತ್ತು ಇತಲ ಕಲ್ಮಶಗಳ ನಿವಾರಣೆಗೆ ನೆರವಾಗುತ್ತದೆ

ತಲೆಹೊಟ್ಟು ಮತ್ತು ಇತಲ ಕಲ್ಮಶಗಳ ನಿವಾರಣೆಗೆ ನೆರವಾಗುತ್ತದೆ

ಸಪೋಟಾ ರಸದಲ್ಲಿರುವ ವಿಟಮಿನ್ ಸಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಮೂಲಕ ನೆತ್ತಿಯ ಚರ್ಮದಲ್ಲಿ ಎದುರಾಗಿದ್ದ ಬ್ಯಾಕ್ಟೀರಿಯಾಗಳ ಸೋಂಕನ್ನು ನಿವಾರಿಸಿ ತಲೆಹೊಟ್ಟಿನ ನಿವಾರಣೆಗೆ ನೆರವಾಗುತ್ತದೆ. ಒಣಗಿದ್ದ ಚರ್ಮದ ಪಕಳೆಗಳು ಸುಲಭವಾಗಿ ಉದುರಿಹೋಗುವ ಮೂಲಕ ತಲೆಗೂದಲ ಬುಡದಲ್ಲಿ ಸಂಗ್ರಹವಾಗಿದ್ದ ಕಲ್ಮಶವೂ ನಿವಾರಣೆಯಾಗಿ ಹೊಸ ಮತ್ತು ಆರೋಗ್ಯಕರ ಕೂದಲು ಹುಟ್ಟಲು ಸಾಧ್ಯವಾಗುತ್ತದೆ.

Most Read: ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಬಾಳೆಹಣ್ಣನ್ನು ತಿನ್ನಲೇಬೇಡಿ! ಇದು ಆರೋಗ್ಯಕ್ಕೆ ಒಳ್ಳೆಯದಲ್ಲ

ಕೂದಲ ಬೆಳವಣಿಗೆಗೆ ಪರೋಕ್ಷ ನೆರವು ನೀಡುತ್ತದೆ

ಕೂದಲ ಬೆಳವಣಿಗೆಗೆ ಪರೋಕ್ಷ ನೆರವು ನೀಡುತ್ತದೆ

ಕೂದಲ ಬೆಳವಣಿಗೆಯನ್ನು ಕುಂದಿಸಲು ಅಡ್ರಿನಲ್ ಗ್ರಂಥಿಯ ದೌರ್ಬಲ್ಯವೂ ಒಂದು ಕಾರಣ. ಸಪೋಟಾ ಈ ದೌರ್ಬಲ್ಯವನ್ನು ಸರಿಪಡಿಸಲು ನೆರವಾಗುವ ಮೂಲಕ ದೇಹದ ರಸದೂತಗಳ ಅಸಮತೋಲನವನ್ನು ಸರಿಪಡಿಸಲು ನೆರವಾಗುತ್ತದೆ. ತನ್ಮೂಲಕ ಪರೋಕ್ಷವಾಗಿ ಆರೋಗ್ಯಕರ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ಅಕಾಲಿಕ ಕೂದಲು ನೆರೆಯುವುದನ್ನು ತಡೆಯುತ್ತದೆ

ಅಕಾಲಿಕ ಕೂದಲು ನೆರೆಯುವುದನ್ನು ತಡೆಯುತ್ತದೆ

ಸಪೋಟದ ರಸದ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ನರಗಳೂ ಬಲಿಷ್ಟಗೊಳ್ಳುತ್ತವೆ. ಈ ಮೂಲಕ ಸೊಂಪಾದ ಹಾಗೂ ಆರೋಗ್ಯಕರವಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಈ ಕೂದಲು ತನ್ನ ನೈಜ ಬಣ್ಣವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಶಕ್ತವಾಗಿರುವ ಕಾರಣ ಅಕಾಲಿಕ ಕೂದಲು ನೆರೆಯುವುದನ್ನು ತಡೆಯಬಹುದು. ಹಾಗಾಗಿ ತಾರುಣ್ಯವನ್ನು ಹೆಚ್ಚು ಕಾಲ ಉಳಿಸಲು ನಿತ್ಯವೂ ಒಂದು ಲೋಟ ಸಪೋಟ ರಸವನ್ನು ಸೇವಿಸಬೇಕು. ತ್ವಚೆಯ ಆರೋಗ್ಯಕ್ಕೆ ಸಪೋಟ:

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಈ ರಸದಲ್ಲಿ ವಿಟಮಿನ್ ಸಿ ಮತ್ತು ಎ ಹಾಗೂ ಹಲವು ಅವಶ್ಯಕ ಖನಿಜಗಳಿವೆ. ಇವು ತ್ವಚೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ನೈಸರ್ಗಿಕ ಕಾಂತಿ ಹಾಗೂ ಸೆಳೆತವನ್ನು ಪಡೆಯಲು ನೆರವಾಗುವ ಮೂಲಕ ಸಹಜಕಾಂತಿ ಪಡೆಯಲು ನೆರವಾಗುತ್ತವೆ.

ಕೊಲ್ಯಾಜೆನ್ ಉತ್ಪಾದನೆಗೆ ನೆರವಾಗುತ್ತವೆ

ಕೊಲ್ಯಾಜೆನ್ ಉತ್ಪಾದನೆಗೆ ನೆರವಾಗುತ್ತವೆ

ಸಪೋಟಾದಲ್ಲಿರುವ ವಿಟಮಿನ್ ಎ ಮತ್ತು ಸಿ ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ನೀಡುತ್ತವೆ ಹಾಗೂ ಈ ಮೂಲಕ ಚರ್ಮ ಒಡೆಯುವ ಮತ್ತು ಪದರವೇಳುವುದನ್ನು ತಪ್ಪಿಸುತ್ತದೆ. ಅಲ್ಲದೇ ಈ ಪೋಷಕಾಂಶಗಳು ಚರ್ಮದ ಸೆಳೆತಕ್ಕೆ ಕಾರಣವಾಗುವ ಕೊಲ್ಯಾಜೆನ್ ಎಂಬ ಕಣದ ಉತ್ಪಾದನೆಗೂ ಅಗತ್ಯವಾಗಿವೆ. ಹೆಚ್ಚಿನ ಕೊಲ್ಯಾಜೆನ್ ಉತ್ಪಾದನೆಯ ಮೂಲಕ ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ಗಾಯಗಳಾದರೆ ಶೀಘ್ರ ಮಾಗಲೂ ನೆರವಾಗುತ್ತದೆ.

ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ

ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ

ಸಫೋಟಾದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ಼್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ ಹಾಗೂ ಈ ಮೂಲಕ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸುತ್ತದೆ. ನಿಯಮಿತ ಸಪೋಟ ಜ್ಯೂಸ್ ಸೇವನೆಯಿಂದ ನೆರಿಗೆ, ಸೂಕ್ಷ್ಮಗೆರೆ, ತ್ವಚೆ ಜೋಲು ಬೀಳುವುದು ಮೊದಲಾದವುಗಳು ಆಗಮಿಸುವುದು ತಡವಾಗುತ್ತವೆ.

Most Read: ರಾತ್ರಿ ಮಲಗುವ ಮುನ್ನ ಹಾಲು ಕುಡಿದು ಮಲಗಿದರೆ, ಕಣ್ತುಂಬ ನಿದ್ದೆ ಗ್ಯಾರಂಟಿ!

ಬಿಸಿಲಿನ ಹೊಡೆತದಿಂದ ರಕ್ಷಣೆ ನೀಡುತ್ತದೆ

ಬಿಸಿಲಿನ ಹೊಡೆತದಿಂದ ರಕ್ಷಣೆ ನೀಡುತ್ತದೆ

ಬಿಸಿಲು ಮತ್ತು ಗಾಳಿಯಲ್ಲಿರುವ ಕಲ್ಮಶಗಳ ಪ್ರಭಾವದಿಂದ ತ್ವಚೆಗೆ ಆಗುವ ಹಾನಿಯನ್ನು ಸಪೋಟ ರಸ ತಡೆಯುತ್ತದೆ. ಸತತವಾಗಿ ಸೂರ್ಯನ ಅತಿನೇರಳೆ ಕಿರಣಗಳಿಗೆ ಚರ್ಮವನ್ನು ಒಡ್ಡುವುದರಿಂದ ಎದುರಾಗುವ ಗಾಢವರ್ಣ ಮತ್ತು ಚರ್ಮದ ಕ್ಯಾನ್ಸರ್ ಗಳಿಂದ ರಕ್ಷಣೆ ಪಡೆಯಲು ಬಿಸಿಲಿಗೆ ಒಡ್ಡುವ ಚರ್ಮದ ಭಾಗದ ಮೇಲೆ ಸಪೋಟಾ ರಸವನ್ನು ನೇರವಾಗಿ ತೆಳುವಾಗಿ ಹಚ್ಚಿಕೊಳ್ಳಬೇಕು. ಅಲ್ಲದೇ ಚರ್ಮದಲ್ಲಿದ್ದ ಕಲೆಗಳು, ಮೊಡವೆ ಮಾಗಿದ ಬಳಿಕ ಉಳಿದ ಕಪ್ಪು ಕಲೆ, ಗಾಯದ ಗುರುತು ಇತ್ಯಾದಿಗಳನ್ನು ನಿವಾರಿಸಲೂ ಸಪೋಟದ ತಿರುಳನ್ನು ತೆಳುವಾಗಿ ಹಚ್ಚಿಕೊಳ್ಳಬಹುದು. ಸಪೋಟಾದಿಂದ ಇಷ್ಟೆಲ್ಲಾ ಪ್ರಯೋಜನವಿರುವಾಗ ಇದನ್ನು ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳದೇ ಇರಲು ಯಾವುದೇ ಕಾರಣ ಉಳಿಯುವುದಿಲ್ಲ. ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಲು ಮರೆಯದಿರಿ.

English summary

Benefits Of chiku juice For Skin, Hair And Health

Sapota is a tropical fruit, belonging to the Sapotaceae family. Its scientific name is Manilkara zapota and it is native to Mexico, Central America and the Caribbean. The other names of sapota are Chicku, lamoot, noseberry and sapoti. Sapota fruit has a grainy texture and a light musky flavor. Cut the fruit into two halves and scoop the flesh out to make a refreshing juice. The juice should be enjoyed without any additions to relish its unique flavor.
X
Desktop Bottom Promotion