For Quick Alerts
ALLOW NOTIFICATIONS  
For Daily Alerts

ಕೇವಲ ಸ್ನಾನ ಮಾಡಿದರೇ ಸಾಲದು! ದೇಹದ ಈ ಅಂಗಗಳನ್ನು ಸರಿಯಾಗಿ ಸ್ವಚ್ಛ ಮಾಡುತ್ತಿದ್ದೀರಾ?

|

ದೇಹದ ನೈರ್ಮಲ್ಯತೆ ಕಾಪಾಡಲು ಸ್ನಾನ ಎಷ್ಟು ಅವಶ್ಯಕ ಎಂದು ನಾವೆಲ್ಲರೂ ಅರಿತಿದ್ದೇವೆ. ಎಷ್ಟೇ ಸೋಮಾರಿತನವಾದರೂ ಸರಿ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೊಂದು ಬಾರಿ ಸ್ನಾನ ಮಾಡಿಕೊಳ್ಳಲೇಬೇಕು. ನೀವು ನಿತ್ಯವೂ ಸ್ನಾನ ಮಾಡುತ್ತಿದ್ದಿರಬಹುದು, ಆದರೆ ನಿಮ್ಮ ದೇಹದ ಎಲ್ಲಾ ಅಂಗಗಳನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸುತ್ತಿದ್ದೀರೇ ಎಂಬುದು ಮುಖ್ಯ. ಕೆಲವು ಸಂದರ್ಭಗಳಲ್ಲಿ ನಾವು ಅರಿವಿಲ್ಲದೇ ಈ ಅಂಗಗಳಿಗೆ ಘಾಸಿಯುಂಟು ಮಾಡುತ್ತಿರಬಹುದು. ಬನ್ನಿ, ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ನೋಡೋಣ...

ಹಸ್ತಗಳು

ಹಸ್ತಗಳು

ಹಸ್ತಗಳನ್ನು ಸರಿಯಾಗಿ ತೊಳೆದುಕೊಳ್ಳುತ್ತಿಲ್ಲ ಎಂಬ ನಿಮ್ಮ ಊಹೆ ಸರಿಯಾಗಿಯೇ ಇದೆ. ಸಾಮಾನ್ಯವಾಗಿ ನಾವು ಶೌಚಾಲಯ ಬಳಸುವ ಮುನ್ನ ಮತ್ತು ಬಳಿಕ, ಊಟಕ್ಕೂ ಮೊದಲು ಮತ್ತು ನಂತರ ಹಾಗೂ ಧೂಳು ಬ್ಯಾಕ್ಟೀರಿಯಾಗಳಿರುವ ಸ್ಥಳಗಳನ್ನು ಮುಟ್ಟಿದ ಬಳಿಕ ಕೈ ತೊಳೆದುಕೊಳ್ಳುತ್ತೇವೆ. ಇದರಿಂದ ಎದರಾಗುವ ಸೋಂಕುಗಳಿಂದ ರಕ್ಷಣೆ ಪಡೆಯುತ್ತೇವೆ. ಆದರೆ ಹಸ್ತಗಳನ್ನು ಸರಿಯಾಗಿ ತೊಳೆದುಕೊಳ್ಳುತ್ತಿದ್ದೆವೆಯೇ?

ಹಸ್ತಗಳನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಹಸ್ತಗಳನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಹಸ್ತಗಳನ್ನು ತೊಳೆದುಕೊಳ್ಳಲೆಂದೇ ಇಂದು ಮಾರುಕಟ್ಟೆಯಲ್ಲಿ ಅಂಟಿ ಬ್ಯಾಕ್ಟೀರಿಯಲ್ ಹ್ಯಾಂಡ್ ವಾಶ್ ಎಂಬ ಉತ್ಪನ್ನ ದುಬಾರಿ ಬೆಲೆಗೆ ದೊರಕುತ್ತಿದೆ. ಆದರೆ ವಾಸ್ತವವಾಗಿ ಇದೊಂದು ಮಾರುಕಟ್ಟೆಯ ತಂತ್ರವೇ ಹೊರತು ನಿಜವಾಗಿ ನಮಗೆ ಇದರ ಅಗತ್ಯವಿಲ್ಲ. ಯಾವುದೇ ಸಾಮಾನ್ಯ ಸೋಪು ಅಥವಾ ಕೇವಲ ಉಪ್ಪು ಆದರೂ ಸಾಕು, ಕೈಗಳನ್ನು ತೊಳೆದುಕೊಳ್ಳಲು ಸಾಕು. ಆದರೆ ಕನಿಷ್ಟ ಇಪ್ಪತ್ತು ಸೆಕೆಂಡ್ ಆದರೂ ಹಸ್ತದ ಎಲ್ಲಾ ಭಾಗಗಳು, ವಿಶೇಷವಾಗಿ ಬೆರಳುಗಳ ಸಂದು, ಬುಡಭಾಗ, ಹೆಬ್ಬೆರಳಿನ ಸುತ್ತ, ಬೆರಳುಗಳ ತುದಿ, ಉಗುರುಗಳ ಅಡಿ, ಹಸ್ತ ಹಿಂಭಾಗ ಮೊದಲಾದವನ್ನೆಲ್ಲಾ ಸತತವಾಗಿ ಹೆಚ್ಚಿನ ಒತ್ತಡವಿಲ್ಲದೇ ಒತ್ತಿ ನೊರೆ ಬರಿಸಿ ತೊಳೆದುಕೊಳ್ಳಬೇಕು.

ಮುಖ

ಮುಖ

ನಮ್ಮ ದೇಹದ ಚರ್ಮದ ವಿಸ್ತಾರದಲ್ಲಿ ಮುಖದ ಚರ್ಮ ಹೆಚ್ಚು ಸೂಕ್ಷ್ಮಸಂವೇದಿಯಾಗಿದೆ ಹಾಗೂ ಇದರ ಆರೈಕೆಗೆಂದು ಇಂದು ಮಾರುಕಟ್ಟೆಯಲ್ಲಿ ನೂರಾರು ಬಗೆಯ ಪ್ರಸಾಧನಗಳಿವೆ. ಇವುಗಳಲ್ಲಿ ಕೆಲವನ್ನಾದರೂ ಬಳಸಿಕೊಂಡು ನಾವು ಕೆಲವೊಮ್ಮೆ ಅನಗತ್ಯವಾಗಿಯೇ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತೇವೆ, ಪರಿಣಾಮವಾಗಿ ಸ್ವಚ್ಛತೆಯ ಹೆಸರಿನಲ್ಲಿ ಚರ್ಮಕ್ಕೆ ಘಾಸಿಯುಂಟುಮಾಡುತ್ತಿರಬಹುದು.

ಮುಖವನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಮುಖವನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಮುಖವನ್ನು ತೊಳೆದುಕೊಳ್ಳುವ ಸೌಮ್ಯ ಮಾರ್ಜಕವನ್ನು ಮೊದಲು ಕೊಂಚ ಹಸ್ತಗಳ ಮೇಲೆ ಸುರಿದುಕೊಂಡು ಹಸ್ತಗಳನ್ನು ಕೊಂಚವೇ ನೀರಿನೊಂದಿಗೆ ಚೆನ್ನಾಗಿ ಉಜ್ಜಿ ನೊರೆ ಬರಿಸಿಕೊಳ್ಳಬೇಕು. ಬಳಿಕ ಈ ನೊರೆಯನ್ನು ಬೆರಳುಗಳಿಂದ ವೃತ್ತಾಕಾರದಲ್ಲಿ ನಯವಾಗಿ ಮಸಾಜ್ ಮಾಡುತ್ತಾ ಮುಖದ ಮೇಲೆ ಹಚ್ಚಿಕೊಳ್ಳಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಒಣ ಮತ್ತು ಮೃದು ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿಕೊಳ್ಳಬೇಕು, ಒರೆಸಬಾರದು. ಸತ್ತ ಜೀವಕೋಶಗಳನ್ನು ನಿವಾರಿಸುವ ಎಕ್ಸ್ ಫೋಲಿಯೇಶನ್ ವಿಧಾನವನ್ನು ಪ್ರತಿದಿನ ಮಾಡಬಾರದು, ವಾರಕ್ಕೆ ಎರಡು ಅಥವಾ ಮೂರು ಬಾರಿ ನಿರ್ವಹಿಸಿಕೊಂಡರೆ ಬೇಕಾದಷ್ಟಾಯಿತು.

Most Read:ಸಡನ್ ಆಗಿ ಎದೆ ನೋವು ಕಾಣಿಸಿಕೊಂಡರೆ ಯಾವತ್ತೂ ನಿರ್ಲಕ್ಷಿಸಬೇಡಿ!

ಹಲ್ಲುಗಳು

ಹಲ್ಲುಗಳು

ಹಲ್ಲುಗಳನ್ನು ಉಜ್ಜಿಕೊಳ್ಳುವುದು ನಮ್ಮ ನಿತ್ಯಕರ್ಮಗಳಲ್ಲಿ ಪ್ರಮುಖವಾಗಿದೆ. ಆದರೆ ಸರಿಯಾದ ಕ್ರಮದಲ್ಲಿ ಎಷ್ಟು ಜನರು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಅರಿತರೆ ನಿಮಗೆ ಅಚ್ಚರಿಯಾಗಬಹುದು. ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇದ್ದರೆ ಬಾಯಿಯ ಸ್ವಚ್ಛತೆಯೂ ಸರಿಯಾಗಿ ಆಗದೇ ಬಾಯಿಯೊಳಗಿನ ಆಮ್ಲೀಯ-ಕ್ಷಾರೀಯ ಸಮತೋಲನ ಏರುಪೇರಾಗುತ್ತದೆ ಹಾಗೂ ಇದು ಹಲ್ಲುಗಳ ಹೊರಕವಚವನ್ನು ಕಗರಿಸಬಹುದು.

ಹಲ್ಲುಗಳನ್ನು ಸ್ವಚ್ಛಗೊಳಿಸುವ ಸರಿಯಾದ ಕ್ರಮ

ಹಲ್ಲುಗಳನ್ನು ಸ್ವಚ್ಛಗೊಳಿಸುವ ಸರಿಯಾದ ಕ್ರಮ

ಹಲ್ಲುಗಳಿಗೆ ಬ್ರಶ್ ಸುಮಾರು ನಲವತ್ತೈದು ಡಿಗ್ರಿ ಕೋನದಲ್ಲಿರಿಸಿ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಬೇಕು. ಹೆಚ್ಚಿನವರು ಅಡ್ಡಲಾಗಿ ರಭಸದಿಂದ ಉಜ್ಜಿಕೊಳ್ಳುತ್ತಾರೆ. ಆದರೆ ಇದು ಅತ್ಯಂತ ತಪ್ಪು ಕ್ರಮವಾಗಿದ್ದು ಸತತವಾದ ಉಜ್ಜುವಿಕೆಯಿಂದ ಒಸಡು ಮತ್ತು ಹಲ್ಲುಗಳ ನಡುವಣ ಅಂಚಿನಲ್ಲಿ ಸವೆತವುಂಟಾಗಿ ಗರಗಸದಲ್ಲಿ ಕುಯ್ದಂತೆ ಹಲ್ಲುಗಳ ಉದ್ದಕ್ಕೂ ದಾರಿಯೊಂದು ಮೂಡಬಹುದು. ವೃತ್ತಾಕಾರದಲ್ಲಿಯೇ, ಎಲ್ಲಾ ಹಲ್ಲುಗಳ ಮುಂಭಾಗ ಮತ್ತು ಹಿಂಭಾಗಗಳನ್ನು ಸ್ವಚ್ಛಗೊಳಿಸಬೇಕು. ಎಂದಿಗೂ ಗಡಸು ಬ್ರಶ್ ಬಳಸದಿರಿ ಹಾಗೂ ಫ್ಲಾಸ್ ಎಂಬ ದಾರದಿಂದ ಸ್ವಚ್ಛ ಗೊಳಿಸುವುದೂ ಅಪಾಯದಿಂದ ಹೊರತಲ್ಲ.

ಕಿವಿ

ಕಿವಿ

ಸ್ನಾನದ ಸಮಯದಲ್ಲಿ ಹೊರಕಿವಿಯನ್ನು ಸ್ವಚ್ಛಗೊಳಿಸಿದರೂ ಒಳಗಿವಿಯನ್ನು ಸ್ವಚ್ಛಗೊಳಿಸಲು ನಾವು ಪಿನ್ನು, ಕಿವಿಚಮಚ ಅಥವಾ ಬೇರಾವುದೋ ಚೂಪಾದ ವಸ್ತುಗಳಿಂದ ಕಿವಿಗಳ ಒಳಭಾವನ್ನು ಕೆರೆದುಕೊಳುತ್ತೇವೆ. ಆದರೆ ಇದರಿಂದ ಕಿವಿಯ ತಮಟೆಗೆ ಘಾಸಿಯಾಗಬಹುದು ಹಾಗೂ ಇದು ನಮ್ಮ ಶ್ರವಣ ಸಾಮರ್ಥ್ಯವನ್ನೂ ಕುಂದಿಸಬಹುದು.

ಕಿವಿಗಳನ್ನು ಸ್ವಚ್ಛಗೊಳಿಸುವ ಸರಿಯಾದ ಕ್ರಮ

ಕಿವಿಗಳನ್ನು ಸ್ವಚ್ಛಗೊಳಿಸುವ ಸರಿಯಾದ ಕ್ರಮ

ಕಿವಿಯ ವಿಷಯಕ್ಕೆ ಬಂದಾಗ ನಮ್ಮ ಕಿವಿಗಳ ಹೊರಗಿವಿಗಳ ಬಗ್ಗೆ ಗಮನ ನೀಡಿದರೆ ಸಾಕು. ಒಳಗಿವಿಯನ್ನು ದೇಹ ತಾನಾಗಿಯೇ ಸ್ವಚ್ಛಗೊಳಿಸುತ್ತದೆ. ಹೊರಗಿವಿಯನ್ನು ಸ್ವಚ್ಛಗೊಳಿಸಲು ಎರಡು ಬೆರಳುಗಳ ನಡುವೆ ಸೋಪಿನ ನೊರೆಯನ್ನು ದಪ್ಪನಾಗಿಸಿ ಕಿವಿಯ ಹೊರಭಾಗ ಮತ್ತು ಒಳಭಾಗದ ಒಳಗೆ ಮೃದುವಾಗಿ ಒತ್ತಿ ಉಜ್ಜಿಕೊಳ್ಳಬೇಕು. ಎಂದಿಗೂ ಕಿವಿಯ ಒಳಗೆ ನೀರು ಅಥವಾ ಸೋಪು ಹೋಗಬಾರದು. ವಿಶೇಷವಾಗಿ ಕಿವಿಗಳ ಹಿಂಭಾಗ ಮತ್ತು ಹಿಂಭಾಗದ ತಲೆಬುರುಡೆಯ ಮೂಳೆಯ ಭಾಗವನ್ನೂ ಸ್ವಚ್ಛಗೊಳಿಸಬೇಕು.

Most Read:ವೈದ್ಯರ ಪ್ರಕಾರ ದೇಹದ ಈ 7 ಅಂಗಗಳನ್ನು ಮುಟ್ಟಲೇಬಾರದಂತೆ! ಯಾಕೆ ಗೊತ್ತೇ?

ನೆತ್ತಿ

ನೆತ್ತಿ

ತಲೆಯನ್ನು ಸ್ವಚ್ಚಗೊಳಿಸುವುದೆಂದರೆ ನಾವೆಲ್ಲಾ ಕೂದಲನ್ನು ಸ್ವಚ್ಛಗೊಳಿಸುವುದೆಂದೇ ಭಾವಿಸಿದ್ದೇವೆ. ತಲೆಗೂದಲು ಸೊಂಪಾಗಿರುವವರಂತೂ ನೆತ್ತಿಯ ಚರ್ಮದ ಸ್ವಚ್ಛತೆಗೆ ಆದ್ಯತೆಯನ್ನೇ ನೀಡದಿರುವುದನ್ನು ಗಮನಿಸಲಾಗಿದೆ. ಕೆಲವೊಮ್ಮೆ ನಾವು ಶಾಂಪೂ ಮತ್ತು ಕಂಡೀಶನರ್ ದ್ರವಗಳು ಸರಿಯಾಗಿ ಕಾರ್ಯನಿರ್ವಹಿಸಲು ಆಗತ್ಯವಾದ ನೀರಿನಿಂದ ತಲೆಯನ್ನು ತೋಯ್ದಿರಿಸುವುದೇ ಇಲ್ಲ.

ನೆತ್ತಿಯನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ನೆತ್ತಿಯನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಒಂದು ವೇಳೆ ನಿಮ್ಮ ತಲೆಗೂದಲು ದಟ್ಟವಾಗಿದ್ದರೆ ಮೊದಲು ನಿಮ್ಮ ಕೂದಲನ್ನು ಪೂರ್ಣವಾಗಿ ಬಿಡಿಸಿಕೊಳ್ಳುವುದು ಅಗತ್ಯ. ಬಳಿಕ ತಲೆಯ ಚರ್ಮವೂ ಪೂರ್ಣವಾಗಿ ತೋಯುವಂತೆ ನೀರನ್ನು ಹೊಯ್ದುಕೊಳ್ಳಬೇಕು. ಇದಕ್ಕಾಗಿ hair rinsing pad ಉಪಕರಣವನ್ನೂ ಬಳಸಬಹುದು. ಬಳಿಕವೇ ಸೌಮ್ಯ ಶಾಂಪೂವನ್ನು ಹಚ್ಚಿಕೊಂದು ಬೆರಳುಗಳ ತುದಿಯಿಂದ ತಲೆಗೂದಲ ಬುಡವನ್ನೂ ನವಿರಾಗಿ ಉಜ್ಜಿಕೊಂಡು ಸ್ವಚ್ಛಗೊಳಿಸಬೇಕು. ಸದಾ ಒಂದೇ ಬಗೆಯ ಉತ್ಪನ್ನಗಳನ್ನು ಬಳಸುವುದು ಉತ್ತಮ, ಹಲವಾರು ಬಗೆಯ ಪ್ರಸಾಧನಗಳ ಪ್ರಯೋಗ ಬೇಡ.

ಹೊಕ್ಕಳು

ಹೊಕ್ಕಳು

ಈ ಭಾಗವನ್ನು ಸ್ವಚ್ಛಗೊಳಿಸುವುದನ್ನೇ ಹೆಚ್ಚಿನವರು ಮರೆಯುತ್ತಾರೆ. ವಾಸ್ತವವಾಗಿ ಈ ಭಾಗದಲ್ಲಿ ಸ್ನಾನದ ಬಳಿಕ ಕೊಂಚವಾದರೂ ನೀರು ನಿಂತು ಬ್ಯಾಕ್ಟೀರಿಯಾಗಳು ವೃದ್ದಿಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.

Most Read ಹೊಟ್ಟೆಯ ಹೊಕ್ಕಳು-ಕೆಲವು ಗುಟ್ಟಿನ ಸಂಗತಿಗಳನ್ನು ಬಿಚ್ಚಿಡುತ್ತದೆ!!

ಹೊಕ್ಕುಳನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಹೊಕ್ಕುಳನ್ನು ತೊಳೆದುಕೊಳ್ಳುವ ಸರಿಯಾದ ಕ್ರಮ

ಈ ಭಾಗದ ಒಳಗೆ ತಲುಪುವಂತೆ ಉಗುರುಬೆಚ್ಚನಿಗ ನೀರನ್ನು ಹೊಯ್ದುಕೊಂಡು ಒಂದು ಹತ್ತಿಯುಂಡೆಯನ್ನು ಕೊಂಚ ಸೋಪಿನಿಂದ ತೋಯಿಸಿ ಒಳಭಾಗವನ್ನು ಸ್ವಚ್ಛಗೊಳಿಸಬೇಕು. ಎಂದಿಗೂ ಬೆರಳು ತೂರಿಸಬಾರದು.

English summary

Are you Cleaning These Body Parts Correctly?

Regardless of what lazy people say, daily bath is absolutely essential and important for your hygiene. Yet, despite having regular baths, there are certain body parts that are not washed in the right way, which can be damaging in some conditions. Here's where you are going wrong...
X
Desktop Bottom Promotion