For Quick Alerts
ALLOW NOTIFICATIONS  
For Daily Alerts

ಶೌಚಾಲಯದಲ್ಲಿ ನೀವು ಸಹಾ ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಹಾಗಾದರೆ ನಾವು ಎಚ್ಚರಿಸಿರಲಿಲ್ಲ ಎಂದು ಬಳಿಕ ಹೇಳದಿರಿ!

|

ಶೌಚಾಲಯವೆಂದರೆ ನಾವೆಲ್ಲಾ ಕೊಂಚ ಅಸಹ್ಯ ಭಾವನೆ ಹೊಂದಿದ್ದರೂ ಇದೊಂದು ತುಂಬಾ ಅಗತ್ಯವಾದ ನಿತ್ಯಕರ್ಮವಾಗಿದೆ. ತೀರಾ ಖಾಸಗಿಯಾಗಿ ಜರುಗುವ ಈ ಕಾರ್ಯದಲ್ಲಿಯೂ ತಪ್ಪುಗಳನ್ನೆಸಗುತ್ತಿರಬಹುದೆಂಬ ಆಲೋಚನೆ ಬಂದಿದ್ದಾದರೂ ಹೇಗೆ? ಆರೋಗ್ಯ ಚೆನ್ನಾಗಿದ್ದರೆ ಶೌಚಕ್ರಿಯೆಯೂ ಸುಲಭವಾಗಿ ಮತ್ತು ಸುಖಕರವಾಗಿಯೇ ನಡೆಯುತ್ತದೆ.

Are you also making these mistakes in the toilet?

ಶೌಚಕ್ರಿಯೆಯಲ್ಲಿಯೂ ಒತ್ತಡ ಅಥವ ನೋವು ಅನುಭವಿಸಬೇಕಾಗಿ ಬಂದರೆ ಇದು ಅನಾರೋಗ್ಯದ ಸೂಚನೆಯೂ ಆಗಿದೆ. ಕೆಲವೊಮ್ಮೆ ನಮಗರಿವಿಲ್ಲದೇ ಶೌಚಾಲಯದಲ್ಲಿ ನಡೆಸುವ ಕಾರ್ಯಗಳಲ್ಲಿ ನಮ್ಮಿಂದ ತಪ್ಪಾಗುತ್ತಿದ್ದಿರಬಹುದು. ಇದುವರೆಗೆ ನಿಮಗೆ ಯಾರೂ ಹೇಳದಿದ್ದ ಈ ವಿಷಯಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಅನಿವಾರ್ಯವಾಗಿ ಪಾಲಿಸಲೇಬೇಕಾದ ಕ್ರಮಗಳಾಗಿವೆ.

ತುಂಬಾ ಹೊತ್ತಿನವರೆಗೆ ಕುಳಿತಿರುವುದು

ತುಂಬಾ ಹೊತ್ತಿನವರೆಗೆ ಕುಳಿತಿರುವುದು

ಸಾಮಾನ್ಯವಾಗಿ ಶೌಚಾಲಯದಲ್ಲಿ ಹೆಚ್ಚು ಕಾಲ ಕಳೆಯುವುದು ಕೆಲವರಿಗೆ ಇಷ್ಟವಾದ ಕೆಲಸವಾಗಿದ್ದು ಈ ಸಮಯದಲ್ಲಿ ಅವರು ಮಾನಸಿಕ ನೆಮ್ಮದಿಯನ್ನು ಅನುಭವಿಸುತ್ತಾರೆ. ಆದರೆ ಹೀಗೆ ಅಗತ್ಯಕ್ಕೂ ಹೆಚ್ಚು ಹೊತ್ತು ಒಂದೇ ಭಂಗಿಯಲ್ಲಿ ಕುಳಿತೇ ಇರುವ ಮೂಲಕ ತೊಡೆಗಳ ಮೇಲ್ಭಾಗ ಹಾಗೂ ಗುದದ್ವಾರದ ಕೆಲವು ನರಗಳ ಮೇಲೆ ತಾಳಿಕೊಳ್ಳುವ ಸಾಮರ್ಥ್ಯಕ್ಕೂ ಮೀರಿದ ಒತ್ತಡ ಹೆಚ್ಚು ಹೊತ್ತು ಬಿದ್ದು ನಿಧಾನವಾಗಿ ಇವು ಊದಿಕೊಳ್ಳಲು ಪ್ರಾರಂಭಿಸುತ್ತವೆ ಹಾಗೂ ಕೊನೆಗೊಮ್ಮೆ ಗುಳ್ಳೆಗಳಂತೆ ಊದಿ ಗಂಟುಗಳಾಗಲು ತೊಡಗುತ್ತವೆ. ಈ ಭಾಗದಲ್ಲಿ ಸೋಂಕು ಹರಡಿ ತೀರಾ ನೋವು ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ ಈ ಸ್ಥಿತಿಗೆ haemorrhoids ಅಥವಾ ಮೂಲವ್ಯಾಧಿ ಎಂದು ಕರೆಯುತ್ತಾರೆ. ನಿಧಾನಕ್ಕೆ ಪ್ರಾರಂಭವಾಗುವ ಈ ತೊಂದರೆ ಉಲ್ಬಣಗೊಂಡಂತೆ ಸಹಿಸಲಸಾಧ್ಯವಾದ ನೋವನ್ನೂ, ನಿತ್ಯಕರ್ಮಗಳನ್ನು ಮುಗಿಸಲು, ನಿತ್ಯದ ಕೆಲಸಗಳನ್ನು ಪೂರೈಸಲು ಅತಿ ಕಷ್ಟಕರವಾಗಿಸುತ್ತದೆ.

ಶೌಚಾಲಯಕ್ಕೆ ಮೊಬೈಲ್ ಫೋನ್ ಅನ್ನು ಕೊಂಡೊಯ್ಯುವುದು

ಶೌಚಾಲಯಕ್ಕೆ ಮೊಬೈಲ್ ಫೋನ್ ಅನ್ನು ಕೊಂಡೊಯ್ಯುವುದು

ಇಂದಿನ ಯುಗದಲ್ಲಿ ನಮ್ಮ ಸಮಯವನ್ನೆಲ್ಲಾ ನಮ್ಮ ಮೊಬೈಲ್ ಫೋನ್ ಆಕ್ರಮಿಸಿಬಿಟ್ಟಿದೆ. ಬೆಳಿಗ್ಗೆ ಕಣ್ಣು ತೆರೆದಾಗಿನಿಂದ ರಾತ್ರಿ ಮಲಗುವವರೆಗೂ ಬಹುತೇಹ ಹೊತ್ತು ನಾವು ಈ ಪರದೆಯನ್ನು ವೀಕ್ಷಿಸುತ್ತಿರುತ್ತೇವೆ. ಆದರೆ ಶೌಚಾಲಯಕ್ಕೆ ಹೋಗುವಾಗ ಮೊಬೈಲನ್ನು ತೆಗೆದುಕೊಂಡು ಹೋಗಬಾರದು! ಏಕೆಂದರೆ ಶೌಚಾಯಲದಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ ಮತ್ತು ಕ್ರಿಮಿಗಳಿದ್ದು ಇವು ಹಾರಾಡುತ್ತಿರುತ್ತವೆ ಹಾಗೂ ಮೊಬೈಲಿನ ಅಂಚುಗಳಲ್ಲಿ ಹಾಗೂ ಸ್ಪೀಕರ್ ಇರುವ ಖಾಲಿ ಜಾಗಗಳಲ್ಲಿ ಕುಳಿತುಕೊಳ್ಳಬಹುದು. ಇವನ್ನು ಹಾಗೇ ಹೊತ್ತು ತಂದು ದಿನವಿಡೀ ಪರದೆಯನ್ನು ಸವರುತ್ತಾ ಈ ಕ್ರಿಮಿಗಳನ್ನು ನೀವೇ ಕೈಯಾರೆ ನಿಮ್ಮ ಮೂಗು ಬಾಯಿಗಳತ್ತ ಕೊಂಡೊಯ್ದು ಮೈ ಮೇಲೆ ಹತ್ತಿಸಿಕೊಳ್ಳಲು ನೆರವಾಗುತ್ತೀರಿ. ಪರಿಣಾಮ ಏನಾಗಬಹುದು ಎಂದು ಜಾಣರಾದ ನಿಮಗೆ ಗೊತ್ತು!

ಮಲವಿಸರ್ಜನೆಗೆ ಹೆಚ್ಚಿನ ಒತ್ತಡ ಕೊಡುವುದು

ಮಲವಿಸರ್ಜನೆಗೆ ಹೆಚ್ಚಿನ ಒತ್ತಡ ಕೊಡುವುದು

ಮಲಬದ್ದತೆ ಎದುರಾದಾಗ ಮಲವಿಸರ್ಜನೆ ತುಂಬಾ ಕಷ್ಟವಾಗುತ್ತದೆ. ಗಟ್ಟಿಯಾಗಿರುವ ಹೊರಗೆ ಹಾಕಲೇಬೇಕಾದ ಅನಿವಾರ್ಯತೆಯಿಂದ ಅಥವಾ ಮಲ ಒಂದೇ ಗಾತ್ರದಲ್ಲಿರಬೇಕೆಂಬ ಯಾವುದೋ ಹಿಂದಿನ ನಂಬಿಕೆಯಿಂದ ಕೆಲವರು ಅತಿ ಹೆಚ್ಚು ಒತ್ತಡ ನೀಡುತ್ತಾರೆ. ಆದರೆ ಹೀಗೆ ಮಾಡುವುದನ್ನು ವೈದ್ಯವಿಜ್ಞಾನ ಖಂಡಿಸುತ್ತದೆ. ಹೆಚ್ಚಿನ ಒತ್ತಡ ನೀಡುವ ಮೂಲಕ ಗುದದ್ವಾರದ ಸ್ನಾಯುಗಳ ಮೇಲೆ ಹಾಗೂ ದೊಡ್ಡಕರುಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಘಾಸಿಯುಂಟಾಗಬಹುದು. ಹೀಗೆ ಮಾಡುವ ಬದಲು ಬದಲಿ ಕ್ರಮಗಳನ್ನು ಅನುಸರಿಸಬಹುದು. ಮಲವಿಸರ್ಜನೆಗೂ ಮುನ್ನ ಕೆಲವು ಬಾರಿ ಬಸ್ಕಿ ಹೊಡೆಯುವುದು, ಸಾಕಷ್ಟು ನೀರು ಕುಡಿಯುವುದು, ನಿತ್ಯವೂ ಆಹಾರದಲ್ಲಿ ಸಾಕಷ್ಟು ನಾರು ಇರುವಂತೆ ನೋಡಿಕೊಳ್ಳುವುದು ಮೊದಲಾದವುಗಳನ್ನು ಅನುಸರಿಸುವ ಮೂಲಕ ಈ ಕ್ರಿಯೆಯನ್ನು ಸುಲಭವಾಗಿಸಬಹುದು.

ವಿಸರ್ಜನೆಯ ಬಳಿಕ ಮಲದೆಡೆ ನೋಡದೇ ಇರುವುದು

ವಿಸರ್ಜನೆಯ ಬಳಿಕ ಮಲದೆಡೆ ನೋಡದೇ ಇರುವುದು

ಇದೆಂಥಾ ಅಸಂಬದ್ದ ಪ್ರಶ್ನೆ? ಒಂದು ವೇಳೆ ನೋಡದೇ ಇದ್ದರೆ ನಿಮ್ಮಿಂದ ದೊಡ್ಡ ಪ್ರಮಾದವಾಗಿದೆ ಎಂದೇ ತಿಳಿಯಬಹುದು. ಕಾರ್ಯದ ಬಳಿಕ ಮಲವನ್ನು ನೋಡಿ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಿಜವಾಗಿಯೂ ಆರೋಗ್ಯಕರ ಅಭ್ಯಾಸವಾಗಿದೆ ಹಾಗೂ ನಮ್ಮ ಜೀರ್ಣಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮನನ ಮಾಡಿಕೊಳ್ಳಬಹುದು. ಒಂದು ವೇಳೆ ನಮಗೆ ಅರಿವಿಲ್ಲ ಯಾವುದೋ ಕಾಯಿಲೆಯಿಂದ ಮಲದಲ್ಲಿ ಏನಾದರೂ ಅಸಹಜವಾದುದು ಕಂಡುಬಂದರೆ ತಕ್ಷಣ ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಪಡೆಯಬಹುದು. ಕೆಲವೊಮ್ಮೆ ಸಣ್ಣ ಕರುಳಿನ ತೊಂದರೆ ಅಥವಾ ಒಗ್ಗದ ಆಹಾರದ ಸೂಚನೆಯೂ ಆಗಿರಬಹುದು. ಒಂದು ಉದಾಹರಣೆಯಲ್ಲಿ ಜಿಯಾರ್ಡಿಯಾಸಿಸ್ (Giardiasis)ಎಂಬ ಕಾಯಿಲೆ ಸಣ್ಣ ಕರುಳಿನಲ್ಲಿ Giardia lambliaಎಂಬ ಪರಾವಲಂಬಿ ಕ್ರಿಮಿ ಆಶ್ರಯ ಪಡೆದು ಕರುಳಿನ ಒಳಪದರವನ್ನು ಕಚ್ಚಿ ಹಿಡಿದು ರಕ್ತ ಕುಡಿಯುತ್ತಿರುತ್ತದೆ. ಜಿಗಣೆಯಂತೆ ಇದರಲ್ಲಿಯೂ ನಮಗೆ ನೋವಿನ ಅನುಭವವಾಗುವುದಿಲ್ಲ. ಆದರೆ ರಕ್ತ ಮಾತ್ರ ಸತತವಾಗಿ ಸೋರುತ್ತಿರುತ್ತದೆ. ಇದು ಮರುದಿನದ ಮಲವಿಸರ್ಜನೆಯನ್ನು ಗಮನಿಸಿದಾಗ ಮಲದ ಹೊರಭಾಗದಲ್ಲಿ ಗೆರೆಗಳಂತೆ ರಕ್ತ ಅಂಟಿಕೊಂಡಿರುವುದು ಕಾಣುತ್ತದೆ. ಮಲವನ್ನು ಗಮನಿಸದೇ ಹೋದರೆ ಹೀಗೊಂದು ತೊಂದರೆ ಇದ್ದುದೇ ಗೊತ್ತಾಗುವುದಿಲ್ಲ. ಈ ಲಕ್ಷಣವನ್ನು ವೈದ್ಯರಿಗೆ ತಿಳಿಸಿದರೆ ತಕ್ಷಣವೇ ಈ ಪರಾವಲಂಬಿ ಕ್ರಿಮಿಯನ್ನು ನಿವಾರಿಸಲು ಸೂಕ್ತ ಔಷಧಿಗಳನ್ನು ನೀಡುತ್ತಾರೆ. ಒಂದು ವೇಳೆ ಹೀಗೆ ಗಮನಿಸದೇ ಹೋಗಿದ್ದರೆ ಈ ಪ್ರಮಾಣ ನಿಧಾನವಾಗಿ ಉಲ್ಬಣಗೊಳ್ಳುತ್ತಾ ಕರುಳಿನ ಅಲ್ಸರ್ ಹಾಗೂ ಇತರ ಗಂಭೀರ ಕಾಯಿಲೆ ಎದುರಾಗಬಹುದು

ಸ್ವಚ್ಛಗೊಳಿಸಲು ಹೆಚ್ಚಿನ ಬಿಳಿಚುಪುಡಿ (bleach)ಬಳಸುವುದು

ಸ್ವಚ್ಛಗೊಳಿಸಲು ಹೆಚ್ಚಿನ ಬಿಳಿಚುಪುಡಿ (bleach)ಬಳಸುವುದು

ಶೌಚಾಲಯ ಸ್ವಚ್ಛವಾಗಿರಬೇಕೆಂದು ಹೆಚ್ಚಿನ ಬಿಳಿಚುಪುಡಿ ಇರುವ ಮಾರ್ಜಕಗಳನ್ನು ಬಳಸಿ ಫಳಫಳನೆ ತೊಳೆಯುವವರು ನಮ್ಮಲ್ಲಿದ್ದಾರೆ. ಆದರೆ ತೊಳೆದ ಬಳಿಕವೂ ಈ ಬಿಳಿಚುಪುಡಿಯ ಸೂಕ್ಷ್ಮಪುಡಿ ಗಾಳಿಯಲ್ಲಿ ಹಾರಾಡುತ್ತಾ ಶೌಚಾಲಯ ಪ್ರವೇಶಿಸಿದವರ ಎದೆ,ಮೂಗು ಕಣ್ಣುಗಳಲ್ಲಿ ಉರಿ, ಚರ್ಮ ಕೆಂಪಗಾಗುವುದು, ಉಸಿರಾಟದ ತೊಂದರೆ ಮೊದಲಾದವುಗಳನ್ನು ಹಬ್ಬಿಸಬಹುದು. ಹಾಗಾಗಿ ನೈಸರ್ಗಿಕ ಸಾಮಾಗ್ರಿಗಳನ್ನುಳ್ಳ ಹಾಗೂ ಕಡಿಮೆ ಬಿಳಿಚುಕಾರಕವಿರುವ ಉತ್ಪನ್ನಗಳನ್ನೇ ಕೊಳ್ಳುವುದು ಉತ್ತಮ

ಅತಿಯಾದ ಘರ್ಷಣೆಯಿಂದ ತೊಳೆದುಕೊಳ್ಳುವುದು

ಅತಿಯಾದ ಘರ್ಷಣೆಯಿಂದ ತೊಳೆದುಕೊಳ್ಳುವುದು

ಪ್ರಾಯಶಃ ಜೀವಿಗಳಲ್ಲೆಲ್ಲಾ ಮಲವಿಸರ್ಜನೆಯ ಬಳಿಕ ನೀರಿನಿಂದ/ಟಾಯ್ಲೆಟ್ ಕಾಗದದಿಂದ ತೊಳೆದುಕೊಳ್ಳುವ ಜೀವಿ ಎಂದರೆ ಮನುಷ್ಯನೊಬ್ಬನೇ ಇರಬಹುದು. ಸ್ವಚ್ಛಗೊಳಿಸಲು ನೀರು ಅತ್ಯುತ್ತಮವಾಗಿದೆ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಕಾಗದ ಬಳಸಬೇಕಾಗಿ ಬಂದಾಗ ಸರಿಯಾದ ವಿಧಾನದಲ್ಲಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ಆದರೆ ಹೆಚ್ಚಿನ ಒತ್ತಡದಿಂದ ಉಜ್ಜಿಕೊಳ್ಳುವುದು ಅಥವಾ ಗಡಸು ಸೋಪನ್ನು ಬಳಸಿ ತೊಳೆದುಕೊಳ್ಳುವುದು ಮೊದಲಾದವು ಅಲರ್ಜಿ ತರಿಸಬಹುದು. ಹಾಗಾಗಿ ಈ ಭಾಗವನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಸೋಪುಗಳೇ ಸಾಕು. ಮಹಿಳೆಯರಲ್ಲಿ ಹೆಚ್ಚಿನ ಸ್ವಚ್ಛತೆಗಾಗಿ ಇಂದು ದೇಹದೊಳಗೆ ತೂರಿಸಿಕೊಂಡು ಸ್ವಚ್ಛಗೊಳಿಸುವ doucheಎಂಬ ಉಪಕರಣಗಳು ಬಂದಿವೆ. ಇವುಗಳನ್ನು ಬಳಸಿ ಅಥವ ಇತರ ವಿಧಾನಗಳಿಂದ ಜನನಾಂಗಗಳ ಒಳಭಾಗದಲ್ಲಿ ಸ್ವಚ್ಛಗೊಳಿಸುವುದು ನಿಜವಾಗಿ ಹೇಳಬೇಕೆಂದರೆ ಅಗತ್ಯವಿಲ್ಲ, ನಿಸರ್ಗವೇ ಇದಕ್ಕೆ ವ್ಯವಸ್ಥೆ ಕಲ್ಪಿಸಿದ್ದು ಕೇವಲ ಹೊರಭಾಗದ ನೈರ್ಮಲ್ಯ ಕಾಪಾಡಿಕೊಂಡರೆ ಸಾಕು.

ಬಳಕೆಯ ಬಳಿಕ ಮುಚ್ಚಳ ಮುಚ್ಚದೇ ಇರುವುದು

ಬಳಕೆಯ ಬಳಿಕ ಮುಚ್ಚಳ ಮುಚ್ಚದೇ ಇರುವುದು

ಸಾಮಾನ್ಯವಾಗಿ ಹೆಚ್ಚಿನವರಿಂದ ಆಗುವ ತಪ್ಪು ಇದು. ತಮ್ಮ ಕೆಲಸವಾದ ಬಳಿಕ ಕಮೋಡ್ ನ ಮುಚ್ಚಳವನ್ನು ತೆರೆದಿದ್ದಂತೆಯೇ ಹೋಗುವುದು. ಇದರಿಂದ ಹಲವಾರು ಬಗೆಯ ಆರೋಗ್ಯ ಸಂಬಂಧಿತ ತೊಂದರೆಗಳನ್ನು ನಾವಾಗಿ ಆಹ್ವಾನಿಸಿದಂತೆ! ಶೌಚಕಾರ್ಯದ ಬಳಿಕ ನೀರನ್ನು ಹೊರದಬ್ಬಲು ಅಥವಾ ಫ್ಲಶ್ ಮಾಡುವ ಹೊತ್ತಿನಲ್ಲಿ ಮುಚ್ಚಳವನ್ನು ಮುಚ್ಚಬೇಕು. ಇಲ್ಲದಿದ್ದರೆ ನೀರಿನ ಚಿಮ್ಮುವಿಕೆಯ ಮೂಲಕ ನೀರಿನ ಕಣಗಳು, ಇದರೊಂದಿಗೆ ಕ್ರಿಮಿಗಳು ಮತ್ತು ಉಚ್ಚಿಷ್ಠವೂ ಗಾಳಿಗೆ ತೂರಿಕೊಳ್ಳುತ್ತವೆ ಹಾಗೂ ಇವುಗಳಲ್ಲಿರುವ ಕ್ರಿಮಿಗಳು ಅಪಾಯಕಾರಿಯಾಗಿ ಪರಿಣಮಿಸಬಹುದು. ಹಾಗಾಗಿ, ಪ್ರತಿಬಾರಿ ಮುಚ್ಚಳ ಮುಚ್ಚವುದನ್ನು ಮರೆಯದಿರಿ.

ಟಾಯ್ಲೆಟ್ ಕಾಗದಗಳನ್ನು ಕಮೋಡ್ ನಲ್ಲಿ ಹಾಕುವುದು!

ಟಾಯ್ಲೆಟ್ ಕಾಗದಗಳನ್ನು ಕಮೋಡ್ ನಲ್ಲಿ ಹಾಕುವುದು!

ಸಾಮಾನ್ಯವಾಗಿ ನಷ್ಟಪಡಿಸಬೇಕಾದ ಕ್ರಿಯೆಗೆ "flushing everything down the drain" ಎಂಬ ನಾಣ್ಣುಡಿಯನ್ನು ಬಳಸಲಾಗುತ್ತದೆ. ಆದರೆ ಶೌಚಾಲಯದ ಕಮೋಡ್ ನಲ್ಲಿ ಟಾಯ್ಲೆಟ್ ಕಾಗದವನ್ನು ಹಾಕುವುದು ಅತ್ಯಂದ ತೊಡ್ಡ ತಪ್ಪು ಮಾತ್ರವಲ್ಲ, ಇದರಿಂದ ಆ ಕಟ್ಟಡ ಮತ್ತು ಸುತ್ತಮುತ್ತಲಿನವರಿಗೆ ಭಾರೀ ಅನಾನುಕೂಲಕ್ಕೂ ಕಾರಣವಾಗುತ್ತದೆ. ವಾಸ್ತವವೆಂದರೆ ಕಾಗದ ನೀರಿನಲ್ಲಿ ನೆನೆಯುತ್ತದೆಯೇ ಹೊರತು ಕರಗುವುದಿಲ್ಲ. ಹಾಗಾಗಿ ಶೌಚಾಲಯದ ಕೊಳವೆಯಿಂದ ಹೊರಹೋದರೂ ಮುಂದೆ ತಿರುವು ಅಥವಾ ಕವಲುಗಳಿರುವಲ್ಲಿ ಸಿಲುಕಿಕೊಂಡು ನಂತರ ಬರುವಂತಹ ಇತರ ವಸ್ತುಗಳನ್ನೂ ತಡೆದು ನೀರು ಹರಿಯದಂತೆ ಮಾಡುತ್ತದೆ. ಅರಿವಿಲ್ಲದೇ ಜನರು ಹೀಗೆ ಹಾಕುವ ವಸ್ತುಗಳಲ್ಲಿ ಟಿಶ್ಯೂ ಕಾಗದ, ಸ್ವಚ್ಛಗೊಳಿಸಿದ ಬಟ್ಟೆಗಳು, ಮಹಿಳೆಯರು ಮಾಸಿಕ ದಿನಗಳಲ್ಲಿ ಬಳಸುವ ನೈರ್ಮಲ್ಯ ದಿಂಬುಗಳು ಅಷ್ಟೇ ಅಲ್ಲ, ಕೆಲವರು ಬಳಸಿದ ಕಾಂಡಮ್ಮುಗಳನ್ನೂ ಹಾಕುತ್ತಾರೆ. ಶೌಚಾಲಯದ ಕಮೋಡ್ ನಲ್ಲಿ ನೀರಿನ ಹೊರತಾಗಿ ಇನ್ನಾವುದೇ ವಸ್ತುವನ್ನು ದಯವಿಟ್ಟು ಹಾಕದಿರಿ.

English summary

Are you also making these mistakes in the toilet?

Are you also making these mistakes in the toilet? Don't tell us we didn't warn you Are you also making these mistakes in the toilet? Don't tell us we didn't warn you Going to the toilet is such a regular, everyday thing that we never ever think we may be doing something wrong? If you don't get a stress free bathroom experience, it can also hamper your health. So here are some common toilet mistakes you must avoid doing at all costs?
X
Desktop Bottom Promotion