For Quick Alerts
ALLOW NOTIFICATIONS  
For Daily Alerts

ಚಿಕನ್ ಕಾಲಿನ ರಸಭರಿತ ಮಾಂಸ ಆರೋಗ್ಯಕ್ಕೆ ಬಹಳ ಒಳ್ಳೆಯದು! ಚಪ್ಪರಿಸಿ ತಿನ್ನಿ

|

ಮಾಂಸಾಹಾರದಲ್ಲಿ ಅತ್ಯಂತ ಹೆಚ್ಚು ಸೇವಿಸಲ್ಪಡುವ ಆಹಾರವೆಂದರೆ ಕೋಳಿಮಾಂಸ. ಇದು ಹಲವಾರು ಮಾಂಸಾಹಾರಿ ಖಾದ್ಯಗಳಿಗೆ ಮೂಲವಾಗಿದೆ. ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದ ಪ್ರಕಾರ ಓರ್ವ ಅಮೇರಿಕನ್ ಪ್ರಜೆ ಸುಮಾರು ತೊಂಭತ್ತು ಪೌಂಡ್ ನಷ್ಟು ಕೋಳಿಮಾಂಸವನ್ನು ಪ್ರತಿವರ್ಷ ಸೇವಿಸುತ್ತಾರೆ. ಅದರಲ್ಲೂ ಕೋಳಿಯ ಕಾಲಿನ ರಸಭರಿತ ಮಾಂಸಕ್ಕೆ ಅತಿ ಹೆಚ್ಚಿನ ಆದ್ಯತೆ ದೊರಕುತ್ತದೆ.

ಇದು ರುಚಿಕರವಾಗಿರುವ ಜೊತೆಗೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತದೆ. ಪ್ರಮುಖವಾಗಿ ಪ್ರೋಟೀನ್ ನ ಆಗರವಾಗಿರುವ ಕೋಳಿಮಾಂಸದ ಈ ಭಾಗದಲ್ಲಿ ಪ್ರಮುಖ ಖನಿಜಗಳೂ ವಿಟಮಿನ್ನುಗಳೂ ಹೇರಳವಾಗಿದ್ದು ಜೀವಕೋಶಗಳ ಕಾರ್ಯವಿಧಾನಕ್ಕೆ ಹಲವು ರೀತಿಯಲ್ಲಿ ನೆರವಾಗುತ್ತವೆ.

ಆದರೆ ಇದನ್ನು ಸುತ್ತುವರೆದಿರುವ ಚರ್ಮ ಮಾತ್ರ ಅತಿ ಹೆಚ್ಚಿನ ಸಂತೃಪ್ತ ಕೊಬ್ಬನ್ನು ಹೊಂದಿರುವ ಕಾರಣ ಇದನ್ನು ಪೂರ್ಣವಾಗಿ ನಿವಾರಿಸಿ ಬಳಿಕವೇ ಅಡುಗೆಗೆ ಬಳಸುವುದು ಉತ್ತಮ. ಕೋಳಿಯ ಕಾಲಿನ ಮಾಂಸವನ್ನು ಎರಡು ಭಾಗಗಳಾಗಿ ಗುರುತಿಸಲಾಗುತ್ತದೆ. ದೊಡ್ಡದಿರುವ ಮೇಲ್ಭಾಗವನ್ನು ತೊಡೆ (thigh)ಎಂದೂ ಕೆಳಗಿರುವ ಚಿಕ್ಕ ಭಾಗವನ್ನು ಮೀನಖಂಡ (drumstick)ಎಂದೂ ಕರೆಯಲಾಗುತ್ತದೆ....

 ಪ್ರೋಟೀನ್ ಮತ್ತು ಕೊಬ್ಬು

ಪ್ರೋಟೀನ್ ಮತ್ತು ಕೊಬ್ಬು

ಕೋಳಿಯ ಕಾಲಿನ ಮಾಂಸದಲ್ಲಿ ಮಧ್ಯಮ ಪ್ರಮಾಣದ ಕ್ಯಾಲೋರಿಗಳಿವೆ. ಚರ್ಮ ನಿವಾರಿಸಿದ ಒಂದು ಮೀನಖಂಡದ ಭಾಗದ ಸೇವನೆಯಿಂದ ಸುಮಾರು 106 ಕ್ಯಾಲೋರಿಗಳು ದೊರಕುತ್ತವೆ. ಅದೇ ಚರ್ಮ ನಿವಾರಿಸಿದ ತೊಡೆಯಿಂದ 176 ಕ್ಯಾಲೋರಿಗಳು ದೊರಕುತ್ತವೆ. ಇವೆರಡೂ ಭಾಗಗಳು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಒದಗಿಸುತ್ತವೆ. ನಮ್ಮ ದೇಹದ ಪ್ರತಿ ಜೀವಕೋಶದ ಬೆಳವಣಿಗೆಗೆ ಹಾಗೂ ಸವೆದು ನಷ್ಟಗೊಂಡ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳನ್ನು ಸೃಷ್ಟಿಸಲೂ ಈ ಪ್ರೋಟೀನ್ ತುಂಬಾ ಅಗತ್ಯವಾಗಿದೆ. ವಿಶೇಷವಾಗಿ ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ.

ಪ್ರೋಟೀನ್ ಮತ್ತು ಕೊಬ್ಬು

ಪ್ರೋಟೀನ್ ಮತ್ತು ಕೊಬ್ಬು

ಪ್ರತಿ ಮೀನಖಂಡ ಹದಿನೇಳು ಗ್ರಾಂ ಪ್ರೋಟೀನ್ ಒದಗಿಸಿದರೆ ತೊಡೆಯ ಭಾಗ ಇಪ್ಪತ್ತೆಂಟು ಗ್ರಾಂ ಪ್ರೋಟೀನ್ ಒದಗಿಸುತ್ತದೆ. ಅಂದರೆ ಸಾಮಾನ್ಯ ವ್ಯಕ್ತಿಯ ದೈನಂದಿನ ಅಗತ್ಯವಾದ (ಮಹಿಳೆಯರಿಗೆ 46ಗ್ರಾಂ, ಪುರುಷರಿಗೆ 56 ಗ್ರಾಂ) ಪ್ರೋಟೀನ್ ನ ಬಹುತೇಕ ಪ್ರಮಾಣವನ್ನು ಒಂದೇ ಕೋಳಿಯ ಕಾಲಿನ ಸೇವನೆಯಿಂದ ಪಡೆಯಬಹುದು. ಚರ್ಮ ನಿವಾರಿಸಿದರೂ ಈ ಮಾಂಸದಲ್ಲಿ ಕೊಂಚ ಕೊಬ್ಬು ಇದ್ದೇ ಇರುತ್ತದೆ. ಮೀನಖಂಡದಲ್ಲಿ 3.7 ಗ್ರಾಂ ಇದ್ದರೆ ತೊಡೆಯ ಭಾಗದಲ್ಲಿ 6.2 ಗ್ರಾಂ ಇರುತ್ತದೆ. ಆದರೆ ಈ ಕೊಬ್ಬು ಒಳ್ಳೆಯ ಕೊಬ್ಬು ಆಗಿದ್ದು ದೈನಂದಿನ ಚಟುವಟಿಕೆಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ ಹಾಗೂ ವಿಟಮಿನ್ನುಗಳನ್ನು ಹೀರಿಕೊಳ್ಳಲೂ ನೆರವಾಗುತ್ತದೆ.

Most Read:ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-'ಚಿಕನ್ ಲಿವರ್‌' ಆರೋಗ್ಯಕ್ಕೆ ಒಳ್ಳೆಯದು

ಅಗತ್ಯ ಖನಿಜಗಳು

ಅಗತ್ಯ ಖನಿಜಗಳು

ಕೋಳಿಮಾಂಸದ ಸೇವನೆಯಿಂದ ದೇಹಕ್ಕೆ ಅಪಾರ ಪ್ರಮಾಣದ ಖನಿಜಗಳು ದೊರಕುತ್ತವೆ. ವಿಶೇಷವಾಗಿ ಹೆಚ್ಚಿನ ಪ್ರಮಾಣದ ಸೆಲೆನಿಯಂ ಹಾಗೂ ಗಂಧಕ ಲಭಿಸುತ್ತದೆ. ನಮ್ಮ ದೇಹದ ಪ್ರತಿ ಜೀವಕೋಶದಲ್ಲಿರುವ ಕಿಣ್ವಗಳಲ್ಲಿ ಸೆಲೆನಿಯಂ ಇರುತ್ತದೆ. ಕಿಣ್ವಗಳ ಚಟುವಟಿಕೆಯಿಂದ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆ ಉತ್ತಮಗೊಳ್ಳುತ್ತದೆ ಹಾಗೂ ನಮ್ಮ ರಕ್ತನಾಳಗಳು ಜಖಂಗೊಳ್ಳು ವುದರಿಂದ ರಕ್ಷಣೆ ಪಡೆಯುತ್ತವೆ. ಅಲ್ಲದೇ ಗಂಧಕವೂ ಕಿಣ್ವಗಳ ಚಟುವಟಿಕೆಯನ್ನು ಬೆಂಬಲಿಸುವ ಇನ್ನೊಂದು ಅಂಶವಾಗಿದೆ ಹಾಗೂ ನಮ್ಮ ಜೀವಕೋಶಗಳ ಹೊರಪದರ ಮತ್ತು ವಂಶವಾಹಿನಿ ಡಿ ಎನ್ ಎ ಗಳ ಮೂಲವಸ್ತುವೂ ಆಗಿದೆ.

ಕೋಳಿಯ ಒಂದು ತೊಡೆಯ ಸೇವನೆಯಿಂದ

ಕೋಳಿಯ ಒಂದು ತೊಡೆಯ ಸೇವನೆಯಿಂದ

ಕೋಳಿಯ ಒಂದು ತೊಡೆಯ ಸೇವನೆಯಿಂದ 30.9 ಮೈಕ್ರೋಗ್ರಾಂ ಸೆಲೆನಿಯಂ ಲಭಿಸುತ್ತದೆ .ಇದು ನಿತ್ಯದ ಅಗತ್ಯದ ಶೇಖಡಾ 56 ರಷ್ಟಿದೆ. ಅಂತೆಯೇ 265 ಮಿಲಿಗ್ರಾಂ ಗಂಧಕ ದೊರಕುತ್ತದೆ, ಇದು ನಿತ್ಯದ ಅಗತ್ಯದ 39 ಶೇಖಡಾದಷ್ಟಿದೆ. ಇದೇ ಪ್ರಕಾರ ಕೋಳಿಯ ಒಂದು ಮೀನಖಂದದ ಸೇವನೆಯಿಂದ 18.5 ಮೈಕ್ರೋಗ್ರಾಂ ಸೆಲೆನಿಯಂ ಲಭಿಸುತ್ತದೆ .ಇದು ನಿತ್ಯದ ಅಗತ್ಯದ ಶೇಖಡಾ 34 ರಷ್ಟಿದೆ. ಅಂತೆಯೇ 158 ಮಿಲಿಗ್ರಾಂ ಗಂಧಕ ದೊರಕುತ್ತದೆ, ಇದು ನಿತ್ಯದ ಅಗತ್ಯದ 23 ಶೇಖಡಾದಷ್ಟಿದೆ.

ಪ್ರಯೋಜನಕಾರಿ ವಿಟಮಿನ್ನುಗಳು

ಪ್ರಯೋಜನಕಾರಿ ವಿಟಮಿನ್ನುಗಳು

ಕೋಳಿಮಾಂಸದಲ್ಲಿರುವ ವಿಟಮಿನ್ನುಗಳ ಲಭ್ಯತೆಯೇ ಇದನ್ನೊಂದು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ಮಾಂಸಾಹಾರವಾಗಿಸಿದೆ. ವಿಶೇಷವಾಗಿ ಜೀವಕೋಶಗಳ ಬೆಳವಣಿಗೆ ಮತ್ತು ವಂಶವಾಹಿನಿಯ ಹೆಚ್ಚುವರಿ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಲು ಪ್ರಮುಖವಾಗಿ ಬೇಕಾಗಿರುವ ವಿಟಮಿನ್ B-12 ಈ ಮಾಂಸದಲ್ಲಿ ಹೇರಳವಾಗಿದೆ. ಇದರೊಂದಿಗೆ ಜೀವಕೋಶಗಳ ಚಯಾಪಚಯ ಕ್ರಿಯೆಗೆ ಅಗತ್ಯವಿರುವ ಪ್ಯಾಂಟೋಥೆನಿಕ್ ಆಮ್ಲವೂ ಉತ್ತಮ ಪ್ರಮಾಣದಲ್ಲಿದೆ.

ಪ್ರಯೋಜನಕಾರಿ ವಿಟಮಿನ್ನುಗಳು

ಪ್ರಯೋಜನಕಾರಿ ವಿಟಮಿನ್ನುಗಳು

ಪ್ರತಿ ಕಾಲಿನ ತೊಡೆಯಲ್ಲಿ 0.84ಮೈಕ್ರೋಗ್ರಾಂನಷ್ಟು ವಿಟಮಿನ್ B-12 ಇದೆ, ಇದು ನಿತ್ಯದ ಅಗತ್ಯದ 35 ಶೇಖಡಾದಷ್ಟು ಪ್ರಮಾಣವನ್ನು ಪೂರೈಸುತ್ತದೆ. ಅಲ್ಲದೇ 1.7 ಮಿಲಿಗ್ರಾಂ ಪ್ಯಾಂಟೋಥೆನಿಕ್ ಆಮ್ಲವಿದೆ, ಇದು ನಿತ್ಯದ ಅಗತ್ಯದ 34 ಶೇಖಡಾದಷ್ಟು ಪ್ರಮಾಣವನ್ನು ಪೂರೈಸುತ್ತದೆ. ಪ್ರತಿ ಕಾಲಿನ ಮೀನಖಂಡದಲ್ಲಿ 0.5 ಮೈಕ್ರೋಗ್ರಾಂನಷ್ಟು ವಿಟಮಿನ್ B-12 ಇದೆ, ಇದು ನಿತ್ಯದ ಅಗತ್ಯದ 21 ಶೇಖಡಾದಷ್ಟು ಪ್ರಮಾಣವನ್ನು ಪೂರೈಸುತ್ತದೆ. ಅಲ್ಲದೇ 1.03 ಮಿಲಿಗ್ರಾಂ ಪ್ಯಾಂಟೋಥೆನಿಕ್ ಆಮ್ಲವಿದೆ, ಇದು ನಿತ್ಯದ ಅಗತ್ಯದ 21 ಶೇಖಡಾದಷ್ಟು ಪ್ರಮಾಣವನ್ನು ಪೂರೈಸುತ್ತದೆ.

Most Read:ಚಿಕನ್ ನಿಂದ ಆರೋಗ್ಯಕ್ಕೆ ಒಂದಲ್ಲಾ, ಎರಡಲ್ಲಾ 11 ಲಾಭ!

ಸೇವನೆಯ ಪ್ರಮಾಣ ಹಾಗೂ ಸಲಹೆಗಳು

ಸೇವನೆಯ ಪ್ರಮಾಣ ಹಾಗೂ ಸಲಹೆಗಳು

ಮಾಂಸಾಹಾರ ಆರೋಗ್ಯಕರವಾಗಿರಬೇಕಾದರೆ ಮಾಂಸದ ಮೇಲಿನ ಚರ್ಮವನ್ನು ಪೂರ್ಣವಾಗಿ ನಿವಾರಿಸುವುದೇ ಮೇಲು. ಅಲ್ಲದೇ ಅಲ್ಲಲ್ಲಿ ಕೊಂಚ ಕೊಬ್ಬು ಅಂಟಿಕೊಂಡಿದ್ದರೆ ಇದನ್ನು ತೊಳೆಯುವ ಮುನ್ನ ನಿವಾರಿಸುವುದು ಅಗತ್ಯ. ಎಣ್ಣೆಯಲ್ಲಿ ಹುರಿಯುವ ವಿಧಾನಗಳನ್ನು ಆದಷ್ಟೂ ತ್ಯಜಿಸಿ, ಉದಾಹರಣೆಗೆ ನೇರವಾಗಿ ಬೆಂಕಿಯಲ್ಲಿ ಹುರಿಯುವುದು, ಕುದಿಯುವ ಎಣ್ಣೆಯಲ್ಲಿ ಬಿಟ್ಟು ಹುರಿಯುವುದು ಇತ್ಯಾದಿ, ಇದಕ್ಕಾಗಿ ಭಾರೀ ಪ್ರಮಾಣದ ಎಣ್ಣೆ ಬೇಕಾಗುತ್ತದೆ. ನೀರಿನಲ್ಲಿ ಬೇಯಿಸುವ ವಿಧಾನಗಳಿಗೆ ಹೆಚ್ಚು ಆದ್ಯತೆ ನೀಡಿ. ಖಾದ್ಯ ತಯಾರಿಸುವ ಮುನ್ನ ಮಾಂಸಕ್ಕೆ ರೋಸ್ಮರಿ ಮತ್ತು ಥೈಮ್ ಎಲೆಗಳನ್ನು ಸವರಿ ಕೊಂಚ ಹೊತ್ತು ಹೀರಿಕೊಳ್ಳಲು ಬಿಡಿ.

ಸೇವನೆಯ ಪ್ರಮಾಣ ಹಾಗೂ ಸಲಹೆಗಳು

ಸೇವನೆಯ ಪ್ರಮಾಣ ಹಾಗೂ ಸಲಹೆಗಳು

ಅಂತೆಯೇ ಖಾದ್ಯ ತಯಾರಾದ ಬಳಿಕ ಕೊಂಚ ಕಾಳು ಮೆಣಸಿನ ಪುಡಿಯನ್ನು ಚಿಮುಕಿಸಿ ಬಡಿಸಿ. ಪರ್ಯಾಯವಾಗಿ ಮಾಂಸಕ್ಕೆ ಆಲಿವ್ ಎಣ್ಣೆಯನ್ನು ಸಿರಿಂಜಿನಿಂದ ಚುಚ್ಚಿ ಬೇಯಿಸಿ. ಇದರಿಂದ ಮಾಂಸದಲ್ಲಿರುವ ಆದ್ರತೆ ಆವಿಯಾಗದೇ ಉಳಿದುಕೊಳ್ಳುತ್ತದೆ. ಬಳಿಕ ಚಿಕನ್ ಸ್ಟಾಕ್, ಆಲುಗಡ್ಡೆಯ ಚಿಕ್ಕ ಚೂರುಗಳು, ಕ್ಯಾರೆಟ್ ಚೂರುಗಳು, ಪಾರ್ಸ್ನಿಪ್ ಗಳನ್ನು ಹಾಕಿ ಕುದಿಸಿದರೆ ರುಚಿಕರ ಮತ್ತು ಆರೋಗ್ಯಕರ ಚಿಕನ್ ಸೂಪ್ ಸವಿಯಬಹುದು.

English summary

Are Chicken Legs Healthy to Eat?

Chicken legs contain a moderate number of calories -- each drumstick, with the skin removed, provides 106 calories, while a skinless chicken thigh contains 176 calories. Both cuts of chicken leg provide ample amounts of protein, a nutrient important for tissue repair and muscle growth.
X
Desktop Bottom Promotion