For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಎಲ್ಲಾ ಸಮಸ್ಯೆಗೆ ನೈಸರ್ಗಿಕ 'ಅಲೋವೆರಾದ' ಚಿಕಿತ್ಸೆ

|

ಲೋಳೆಸರ ಅಥವಾ ಆಲೋವೆರಾ ಒಂದು ಅದ್ಭುತ ಮೂಲಿಕೆಯಾಗಿದ್ದು ಇದು ಹಲವು ರೂಪದಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಕಾಪಾಡುತ್ತದೆ. ಲೋಳೆಸರದ ಕೋಡಿನಲ್ಲಿರುವ ತಿರುಳು ಒಂದು ಅದ್ಬುತವಾದ ಟಾನಿಕ್ ಆಗಿದೆ.

ನಿಮಗೆ ಆಗಾಗ ಹೊಟ್ಟೆನೋವು, ಹೊಟ್ಟೆಯುರಿ, ಎದೆಯುರಿ ಅಥವಾ ವಾಕರಿಕೆ ಎದುರಾಗುತ್ತಿದೆಯೇ? ಹೌದು ಎಂದಾದರೆ ನಿಮಗೆ ಗಹನವಾದ ಹೊಟ್ಟೆಯ ತೊಂದರೆ ಇರಬಹುದು. ಈ ತೊಂದರೆಗೆ ನಿಸರ್ಗದ ಬಳಿ ಈ ಲೋಳೆಸರ ಎಂಬ ಸಮರ್ಥವಾದ ಮೂಲಿಕೆಯಿದೆ ಹಾಗೂ ಹೊಟ್ಟೆಯ ಬಹುತೇಕ ಎಲ್ಲಾ ತೊಂದರೆಗಳನ್ನು ಸಮರ್ಥವಾಗಿ ನಿವಾರಿಸುವ ಕ್ಷಮತೆ ಹೊಂದಿದೆ. ಲೋಳೆಸರದ ತಿರುಳಿನ ಜೊತೆಗೆ ಕೊಂಚ ಜೇನು ಸೇರಿಸಿ ಸೇವಿಸುವ ಮೂಲಕ ಹೊಟ್ಟೆಯ ಸಾಮಾನ್ಯ ತೊಂದರೆಗಳು ತಕ್ಷಣವೇ ಇಲ್ಲವಾಗುತ್ತವೆ.

Aloe Vera

ಅಲೋವೆರಾ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಗಕಾರಿಯಾಗಿದೆ ಸೌಂದರ್ಯವರ್ಧಕದಿಂದ ತೊಡಗಿ ಔಷಧಿಯವರೆಗೆ ಹಲವು ರೂಪಗಳಲ್ಲಿ ಇದನ್ನು ಬಳಸಬಹುದು. ಲೋಳೆಸರದ ಹಲವಾರು ಗುಣಗಳಲ್ಲಿ ಹೊಟ್ಟೆಯ ತೊಂದರೆಗಳನ್ನು ನಿವಾರಿಸುವ ಗುಣಗಳನ್ನು ಬಳಸಿ ಒಂದು ಸೂಕ್ತ ಔಷಧಿಯನ್ನೇಕೆ ನೀವೇ ತಯಾರಿಸಿಕೊಳ್ಳಬಾರದು? ಬನ್ನಿ, ಈ ಪ್ರಶ್ನೆಗೆ ಉತ್ತರವನ್ನು ನೋಡೋಣ:

ಹೊಟ್ಟೆಯ ಸಾಮಾನ್ಯ ತೊಂದರೆಗಳು ಮತ್ತು ಇದಕ್ಕೆ ಕಾರಣಗಳು

ಹೊಟ್ಟೆಯ ಸಾಮಾನ್ಯ ತೊಂದರೆಗಳು ಮತ್ತು ಇದಕ್ಕೆ ಕಾರಣಗಳು

ಹೊಟ್ಟೆಯ ತೊಂದರೆಗಳು, ಇವು ಪ್ರಬಲವಾಗಿದ್ದರೂ ಅಲ್ಲದಿದ್ದರೂ ಸರಿ, ಜೀರ್ಣಕ್ರಿಯೆಯ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತವೆ. ಹೊಟ್ಟೆಯ ತೊಂದರೆಗಳಿಗೆ ಇವುಗಳ ಲಕ್ಷಣವನ್ನು ಅನುಸರಿಸಿ ಕಾರಣಗಳೂ ಬೇರೆಬೇರೆಯಾಗಿರುತ್ತವೆ. ಅತಿ ಸಾಮಾನ್ಯವಾದ ಕಾರಣಗಳೆಂದರೆ ದೇಹದಲ್ಲಿ ಸಂಗ್ರಹವಾದ ಅತಿರಿಕ್ತ ಪ್ರಮಾಣದ ಕರಗದ ನಾರು, ಯಾವುದೋ ಒಂದು ಸಾಮಾಗ್ರಿಗೆ ದೇಹ ಒಡ್ಡುವ ಪ್ರತಿರೋಧ ಅಥವಾ ಅನಾರೊಗ್ಯಕರ ಆಹಾರಾಭ್ಯಾಸಗಳು.

Most Read: ರಾತ್ರಿ ಮಲಗುವ ಮುನ್ನ ಇಂತಹ ಆಹಾರಗಳನ್ನು ತಿಂದರೆ, ಆರೋಗ್ಯ ವೃದ್ಧಿಯಾಗುತ್ತದೆ!

ಹೊಟ್ಟೆಯ ತೊಂದರೆಯಿಂದ ಎದುರಾಗುವ ಸಾಮಾನ್ಯ ಕಾಯಿಲೆಗಳೆಂದರೆ

ಹೊಟ್ಟೆಯ ತೊಂದರೆಯಿಂದ ಎದುರಾಗುವ ಸಾಮಾನ್ಯ ಕಾಯಿಲೆಗಳೆಂದರೆ

*ಅತಿಸಾರ

*ವಾಂತಿ

*ಮಲಬದ್ಧತೆ

*ಹೊಟ್ಟೆಯಲ್ಲಿ ನೋವು

*ಎದೆಯುರಿ

ಒಂದು ವೇಳೆ ಇವುಗಳಲ್ಲಿ ಒಂದಾದರೂ ತೊಂದರೆ ನಿಮ್ಮನ್ನು ಸತತವಾಗಿ ಬಾಧಿಸುತ್ತಿದ್ದರೆ ಮೊದಲಾಗಿ ನೀವು ವೈದ್ಯರನ್ನು ಕಂಡು ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕು. ಕಾಯಿಲೆಗೆ ಕಾರಣ ಎಷ್ಟು ಬೇಗನೇ ಬೆಳಕಿಗೆ ಬರುತ್ತದೆಯೋ ಇದಕ್ಕೆ ಚಿಕಿತ್ಸೆಯನ್ನೂ ಅಷ್ಟೇ ಬೇಗ ಪ್ರಾರಂಭಿಸಿ ಶೀಘ್ರ ಗುಣಮುಖರಾಗಬಹುದು.

ಹೊಟ್ಟೆಯ ಉರಿ

ಹೊಟ್ಟೆಯ ಉರಿ

ಹೊಟ್ಟೆಗೆ ಸಂಬಂಧಿತ ಕಾಯಿಲೆಗಳಲ್ಲಿ ಹೊಟ್ಟೆಯ ಉರಿ (Irritable Bowel Syndrome) ಯಿಂದ ತೊಡಗಿ ಕ್ಯಾನ್ಸರ್ ವರೆಗೆ ಕೆಲವಾರು ಕಾರಣಗಳಿರಬಹುದು. ಆದ್ದರಿಂದ ಈ ತೊಂದರೆ ಎದುರಾದರೆ ತಡಮಾಡದೇ ವೈದ್ಯರ ಸಲಹೆ ಪಡೆಯಬೇಕು. ನೋವು ಯಾವುದೇ ಇರಲಿ, ಇದು ಸಾಮಾನ್ಯವಂತೂ ಅಲ್ಲ, ಹಾಗಾಗಿ ನಿರ್ಲಕ್ಷ್ಯ ಸರ್ವಥಾ ಸಲ್ಲದು.

ಹೊಟ್ಟೆಯ ತೊಂದರೆಗೆ ಲೋಳೆಸರ ಹೇಗೆ ನೆರವಾಗುತ್ತದೆ ಹಾಗೂ ಇದರ ಪ್ರಯೋಜನವೇನು?

ಚಿಕ್ಕ ಪುಟ್ಟ ಗಾಯಗಳು, ಸುಟ್ಟಗಾಯ ಮೊದಲಾದವುಗಳಿಗೆ ಲೋಳೆಸರದ ತಿರುಳನ್ನು ಹೆಚ್ಚುವ ಮೂಲಕ ಶೀಘ್ರವೇ ಉಪಶಮನವನ್ನು ಪಡೆಯುವುದನ್ನು ಈಗಾಗಲೇ ನೀವು ಅರಿತಿದ್ದೀರಿ. ಇದರ ಗುಣಪಡಿಸುವ ವೇಗ ಕೇವಲ ದೇಹದ ಹೊರಭಾಗವನ್ನು ಮಾತ್ರವಲ್ಲ, ದೇಹದ ಒಳಗಿನ ಅಂಗಗಳಿಗೂ ಅದ್ಭುತ ಶಮನವನ್ನೇ ನೀಡುತ್ತದೆ.

ವಿಟಮಿನ್ ಗಳ ಆಗರ

ವಿಟಮಿನ್ ಗಳ ಆಗರ

ಲೋಳೆಸರದಲ್ಲಿರುವ ವಿಟಮಿನ್ ಎ, ಬಿ, ಸಿ, ಅಮೈನೋ ಆಮ್ಲಗಳು ಹಾಗೂ ಕೆಲವು ಕಿಣ್ವಗಳು ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸುವ ಗುಣ ಹೊಂದಿವೆ. ಕೇವಲ ಒಂದೇ ಲೋಳೆಸರದ ಕೋಡಿನಲ್ಲಿರುವ ತಿರುಳು ಒಂದು ಲೋಟ ದ್ರವವನ್ನು ತಯಾರಿಸಲು ಸಾಕಾಗುತ್ತದೆ ಹಾಗೂ ಇದರ ಸೇವನೆಯಿಂದ ಅತ್ಯುತ್ತಮ ಗುಣಪಡಿಸುವ ಗುಣಗಳು ಲಭಿಸುತ್ತವೆ.

Most Read: ಸರಿಯಾಗಿ ಊಟ-ತಿಂಡಿ ಮಾಡದೇ ಇದ್ದರೆ, ಇದೆಲ್ಲಾ ಸಮಸ್ಯೆ ಕಾಡಬಹುದು!

ಲೋಳೆಸರದ ಸೇವನೆಯಿಂದ ಪಡೆಯುವ ಪ್ರಯೋಜನಗಳು ಇಂತಿವೆ

ಲೋಳೆಸರದ ಸೇವನೆಯಿಂದ ಪಡೆಯುವ ಪ್ರಯೋಜನಗಳು ಇಂತಿವೆ

*ವಾಯುಪ್ರಕೋಪದಿಂದ ಎದುರಾದ ಉರಿಯೂತ ಅಥವಾ ಸಣ್ಣಕರುಳಿನ ಪ್ರಾರಂಭಭಾಗದಲ್ಲಿ ಎದುರಾದ *ಉರಿಯೂತ (duodenitis)ವನ್ನು ನಿವಾರಿಸುತ್ತದೆ.

*ಜಠರದ ಒಳಪದರ ನಷ್ಟವಾಗಿದ್ದರೆ ಇದನ್ನು ಮರುನಿರ್ಮಿಸಲು ನೆರವಾಗುತ್ತದೆ.

*ಹೊಟ್ಟೆಯುಬ್ಬರಿಕೆಯಿಂದ ವಪೆಯ ಮೇಲೆ ಮೇಲ್ಮುಖವಾಗಿ ಬೀಳುವ ಒತ್ತಡದಿಂದಾಗುವ ಪರಿಣಾಮ (hiatal hernia)ಗಳನ್ನು ಕಡಿಮೆ ಮಾಡುತ್ತದೆ.

*ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ.

*ಎದೆಯುರಿಯನ್ನು ಕಡಿಮೆಮಾಡುತ್ತದೆ.

*ಜೀರ್ಣಕ್ರಿಯೆ ಉತ್ತಮಗೊಳಿಸಲು ಪ್ರಚೋದನೆ ನೀಡುತ್ತದೆ.

*ರಕ್ತವನ್ನು ಶುದ್ದೀಕರಿಸುತ್ತದೆ.

*ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

*ಹೊಟ್ಟೆಯಲ್ಲಿರುವ ಪಿಎಚ್ ಅಥಮಾ ಆಮ್ಲೀಯ-ಕ್ಷಾರೀಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

*ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಿಸುತ್ತದೆ.

*ಹೊಟ್ಟೆಯಿಂದ ಅನಾರೋಗ್ಯಕರ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

*ಪರಿಪೂರ್ಣ ಜೀರ್ಣಾಂಗ ವ್ಯವಸ್ಥೆಯನ್ನು ಬಾಧಿಸುವ Crohn's disease ಎಂಬ ಕಾಯಿಲೆಯ *ಲಕ್ಷಣಗಳನ್ನು ಕಡಿಮೆಗೊಳಿ಼ಸುತ್ತದೆ.

ಹೊಟ್ಟೆಯ ತೊಂದರೆಗಳಿಗೆ ಲೋಳೆಸರದ ಬಳಕೆಯ ವಿಧಾನ

ಹೊಟ್ಟೆಯ ತೊಂದರೆಗಳಿಗೆ ಲೋಳೆಸರದ ಬಳಕೆಯ ವಿಧಾನ

ಹೊಟ್ಟೆಯ ತೊಂದರೆಗಳಿಗೆ ಎಲ್ಲಾ ವಯಸ್ಸಿನ ವ್ಯಕ್ತಿಗಳು ಈ ವಿಧಾನವನ್ನು ಯತ್ನಿಸಬಹುದು. ಆದರೆ ಗರ್ಭಿಣಿಯರು ಹಾಗೂ ಹಾಲೂಡಿಸುತ್ತಿರುವ ಬಾಣಂತಿಯರಿಗೆ ಈ ವಿಧಾನ ಸೂಕ್ತವಲ್ಲ.

ಪ್ರತಿಬಾರಿಯೂ ತಾಜಾ ಲೋಳೆಸರ ಕೋಡಿನಿಂದ ತಯಾರಿಸಲ್ಪಟ್ಟ ಪೇಯವನ್ನೇ ಕುಡಿಯಬೇಕು. ಏಕೆಂದರೆ ಸಂಗ್ರಹಿಸಿಟ್ಟ ಪೇಯ ಸಮಯದೊಂದಿಗೆ ತನ್ನ ಗುಣಗಳನ್ನು ಕಳೆದುಕೊಳ್ಳುತ್ತಾ ಬರುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಲೋಳೆಸರದ ಕೋಡು

*ಎರಡು ದೊಡ್ಡ ಚಮಚ ಜೇನು (ಐವತ್ತು ಗ್ರಾಂ)

*ಒಂದು ಕಪ್ ನೀರು (250 ಮಿಲೀ)

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಮೊದಲು ಲೋಳೆಸರದ ಕೋಡನ್ನು ಜಾಗರೂಕತೆಯಿಂದ ಸೀಳಿ ಸಿಪ್ಪೆಯನ್ನು ನಿವಾರಿಸಿ

ಬಳಿಕ ತಿರುಳನ್ನು ಕೊಂಚ ಕಾಲ ನೀರಿನಲ್ಲಿ ಮುಳುಗಿಸಿಡಿ, ಈ ಸಮಯದಲ್ಲಿ ತಿರುಳಿನಿಂದ ಹಳದಿ ಬಣ್ಣದ ದ್ರವ ಜಿನುಗುತ್ತದೆ. ಇದು ತೀರಾ ಕಹಿಯಾಗಿದ್ದು ಕಮಟು ವಾಸನೆಯನ್ನೂ ಹೊಂದಿದ್ದು ಸೇವನೆಗೆ ಸೂಕ್ತವಲ್ಲ. ಈ ಹಳದಿ ಭಾಗವನ್ನು ಜಾಗರೂಕತೆಯಿಂದ ನಿವಾರಿಸಿ.

ಸ್ವಚ್ಛವಾದ ತಿರುಳು ಮತ್ತು ಇತರ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ಗೊಟಾಯಿಸಿ ಒಂದು ಲೋಟದಲ್ಲಿ ಸಂಗ್ರಹಿಸಿ ಬಳಿಕ ಕುಡಿಯಿರಿ.

English summary

Aloe Vera Remedy For Stomach Problems

Do you often have stomach pains, heartburn, or nausea? This could be the sign that you have a chronic stomach problem. As it happens, nature has a very versatile plant which can be used to treat stomach problems: Aloe Vera. With a little honey, you can make an ideal aloe vera remedy to make those uncomfortable symptoms disappear.
X
Desktop Bottom Promotion