ವಿಶ್ವ ಆರೋಗ್ಯ ದಿನ: ತೂಕ ಇಳಿಸುವುದು ನೀರು ಕುಡಿದಷ್ಟು ಸುಲಭ!

By: Deepak
Subscribe to Boldsky

ತೂಕ ಹೆಚ್ಚಾಗುವಿಕೆ ಅಥವಾ ಸ್ಥೂಲಕಾಯದ ಸಮಸ್ಯೆ ಈಗ ಬಹುತೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ. ಜಡತ್ವದಿಂದ ಕೂಡಿದ ಜೀವನ ಶೈಲಿ, ವ್ಯಾಯಾಮ ಮಾಡದಿರುವಿಕೆ ಇದಕ್ಕೆ ಕಾರಣ. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ಮೊದಲು ಮಾಡುವ ಕೆಲಸ ಬೆಳಗಿನ ಉಪಾಹಾರವನ್ನು ತ್ಯಜಿಸುತ್ತಾರೆ.  ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಆದರೆ ಇದರಿಂದ ತೂಕ ಕಡಿಮೆಯಾಗುವ ಬದಲಿಗೆ ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಉತ್ತಮ ಉಪಾಹಾರ ಸೇವನೆಯ ಕ್ರಮಗಳನ್ನು ತಿಳಿದುಕೊಳ್ಳಬೇಕು. ತೂಕ ಕಡಿಮೆಯಾಗುವಿಕೆಯ ಸೂತ್ರ ಉತ್ತಮ ಉಪಹಾರದಲ್ಲಿ ಅಡಗಿದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ನಿಮಗೂ ಅನಿಸುತ್ತಿದ್ದಲ್ಲಿ ಈ ಲೇಖನವನ್ನು ಓದಿ ಉತ್ತಮ ಉಪಾಹಾರ ಕ್ರಮವನ್ನು ಕಲಿತುಕೊಂಡು ಅಳವಡಿಸಿಕೊಳ್ಳಿ.  ಬೆಳಗಿನ ಉಪಹಾರ ತಪ್ಪಿಸಿದರೆ - ಕಾದಿದೆ ಗಂಡಾಂತರ

ಉಪಹಾರ ಉತ್ತಮವಾಗಿ ಮಾಡುವವರು ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹಲವಾರು ಅಧ್ಯಯನಗಳು ಸಾಬೀತು ಮಾಡಿವೆ. ಹಲವಾರು ತಜ್ಞರು ಸಹ ಇದಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಬನ್ನಿ ತೂಕ ಕಡಿಮೆ ಮಾಡಿಕೊಳ್ಳಲು ಇರುವ ಉಪಾಹಾರದ ಆಯ್ಕೆಗಳನ್ನು ನಾವು ಒಮ್ಮೆ ನೋಡೋಣ....   

 ಮೊಳಕೆ ಕಾಳುಗಳು ಮತ್ತು ಅವಲಕ್ಕಿ

ಮೊಳಕೆ ಕಾಳುಗಳು ಮತ್ತು ಅವಲಕ್ಕಿ

ಅವಲಕ್ಕಿಯಲ್ಲಿ ಕಬ್ಬಿಣಾಂಶ ಹೆಚ್ಚಿಗೆ ಇರುತ್ತದೆ. ಇನ್ನೂ ಮೊಳಕೆಕಾಳುಗಳನ್ನು ಪೋಹ ಮಾಡಲು ಬೆರೆಸಿದರೆ ಉತ್ತಮ ಪೋಷಕಾಂಶದ ಪದಾರ್ಥವಾಗುತ್ತದೆ. ಬೆಳಗ್ಗೆ ಈ ಉಪಾಹಾರವನ್ನು ಒಂದು ಕಪ್ ಸೇವಿಸಿದರೆ ಉತ್ತಮ ಶಕ್ತಿ ನಿಮ್ಮ ದೇಹಕ್ಕೆ ಲಭಿಸುತ್ತದೆ. ಜೊತೆಗೆ ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.ಬರೀ ಐದೇ ನಿಮಿಷದಲ್ಲಿ ಮಾಡಿ ಸವಿಯಿರಿ-ಹುಳಿ ಅವಲಕ್ಕಿ!

ಇಡ್ಲಿಗಳು

ಇಡ್ಲಿಗಳು

ಇಡ್ಲಿಗಳನ್ನು ರವೆ, ಅಕ್ಕಿ ಹಾಗು ರಾಗಿಯಂತಹ ಪದಾರ್ಥಗಳಿಂದ ತಯಾರಿಸುತ್ತಾರೆ. ಇದು ಸಹ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಯಾವುದೇ ಹೆಚ್ಚುವರಿ ಕೊಬ್ಬು ಇರುವುದಿಲ್ಲ. ಇದನ್ನು ಹಬೆಯಲ್ಲಿ ಬೇಯಿಸುತ್ತಾರೆ, ಹಾಗಾಗಿ ಇದು ಸಹ ಆರೋಗ್ಯಕ್ಕೆ ಒಳ್ಳೆಯದು.ಬಗೆಬಗೆಯ ಇಡ್ಲಿ ರೆಸಿಪಿ-ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

ವೋಲ್ ವೀಟ್ ಬ್ರೆಡ್ ಟೋಸ್ಟ್

ವೋಲ್ ವೀಟ್ ಬ್ರೆಡ್ ಟೋಸ್ಟ್

ಒಂದು ಅಥವಾ ಎರಡು ಸ್ಲೈಸ್ ಗೋಧಿಯ ಬ್ರೇಡ್ ಅನ್ನು ನಿಮ್ಮ ಉಪಹಾರದಲ್ಲಿ ಸೇವಿಸುವುದು ಒಳ್ಳೆಯದು. ಇದರಿಂದ ಸಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ನಾರಿನಂಶ ಸಮೃದ್ಧವಾಗಿ ಇರುತ್ತದೆ. ವೋಲ್ ವೀಟ್ ಬ್ರೆಡ್ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೇಯಿಸಿದ ಮೊಟ್ಟೆ

ಬೇಯಿಸಿದ ಮೊಟ್ಟೆ

ಸಮೃದ್ಧವಾದ ಪ್ರೋಟಿನ್ ಹೊಂದಿರುವ ಮೊಟ್ಟೆಯು ತನ್ನೊಳಗೆ ಕಡಿಮೆ ಪ್ರಮಾಣದ ಗ್ಲಿಸೆಮಿಕ್ ಇಂಡೆಕ್ಸ್ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಇಡೀ ದಿನಕ್ಕೆ ಬೇಕಾಗುವಷ್ಟು ಶಕ್ತಿಯನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ ಹಾಗು ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಅವೊಕ್ಯಾಡೊ ಅಥವಾ ಬೆಣ್ಣೆ ಹಣ್ಣು

ಅವೊಕ್ಯಾಡೊ ಅಥವಾ ಬೆಣ್ಣೆ ಹಣ್ಣು

ಒಂದು ವೇಳೆ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ ಕೆಲವೊಂದು ಹಣ್ಣುಗಳನ್ನು ಸಹ ಬೆಳಗಿನ ಉಪಾಹಾರದಲ್ಲಿ ಸೇವಿಸಿ. ತಪ್ಪದೆ ಅವೊಕ್ಯಾಡೊವನ್ನು ನಿಮ್ಮ ಉಪಾಹಾರದ ಭಾಗವನ್ನಾಗಿ ಮಾಡಿಕೊಳ್ಳಿ. ಇದರಲ್ಲಿ ಕಡಿಮೆ ಪ್ರಮಾಣದ ಜಿಐ ಕಾರ್ಬೊಹೈಡ್ರೇಟ್‌ಗಳು ಹಾಗು ಸಮೃದ್ಧ ಫೋಲೆಟ್ ಹಾಗು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಇದ್ದು ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ.

ತರಕಾರಿ ಸಲಾಡ್‌ಗಳು

ತರಕಾರಿ ಸಲಾಡ್‌ಗಳು

ಇದು ಇನ್ನೊಂದು ಆರೋಗ್ಯಕರವಾದ ಉಪಾಹಾರದ ಆಯ್ಕೆಯಾಗಿರುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ತರಕಾರಿ ಸಲಾಡ್ ಅನ್ನು ಬೆಳಗ್ಗೆ ಸೇವಿಸಿ. ಇದರಲ್ಲಿರುವ ಸಮೃದ್ಧ ನಾರಿನಂಶವು ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶವನ್ನು ಒದಗಿಸುತ್ತದೆ. ಇದರ ಜೊತೆಗೆ ನಿಮ್ಮ ಹೊಟ್ಟೆ ತುಂಬಿರುವ ಅನುಭವವನ್ನು ಸಹ ನೀಡುತ್ತದೆ.

ಡಲಿಯಾ

ಡಲಿಯಾ

ಇದನ್ನು ಗೋಧಿಯ ನುಚ್ಚಿನಿಂದ ಮಾಡುತ್ತಾರೆ. ಇದರಲ್ಲಿ ಉತ್ತಮ ನಾರಿನಂಶ ಮತ್ತು ಕಡಿಮೆ ಕ್ಯಾಲೋರಿ ಇರುತ್ತದೆ. ಬೆಳಗ್ಗೆ ಒಂದು ಬಟ್ಟಲು ಡಲಿಯಾ ಸೇವಿಸಿದರೆ ತುಂಬಾ ಹೊತ್ತು ನಿಮ್ಮ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಜೊತೆಗೆ ನಿಮಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ.

 
English summary

World Health Day; Best Breakfast Options To Lose Weight

Breakfast, the first meal of the day should be healthy. Choosing the right breakfast option helps in losing weight. This article explains about a few of the best breakfast options for losing weight.
Subscribe Newsletter