For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರ ತಪ್ಪಿಸಿದರೆ - ಕಾದಿದೆ ಗಂಡಾಂತರ

|

ಬೆಳಗ್ಗಿನ ಉಪಹಾರವೆಂಬುದು ಅಮೃತವಿದ್ದಂತೆ. ನಮ್ಮ ದೇಹಕ್ಕೆ ಬೇಕಾದ ಶಕ್ತಿಯೆಂಬ ಅಮೃತವನ್ನು ಒದಗಿಸುವ ಮೂಲವಾಗಿದೆ. ಬೆಳಗ್ಗಿನ ಉಪಹಾರ. ಈ ಉಪಹಾರವನ್ನು ಸೇವಿಸದೇ ಹಾಗೆಯೇ ಬರಿ ಹೊಟ್ಟೆಯಲ್ಲಿ ಕೆಲಸ ಮಾಡುವುದು ಇಲ್ಲವೇ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ನಿಮಗೆ ಗೊತ್ತೇ?

ಸಮಯದ ಅಭಾವದಿಂದಾಗಿ ನಾವು ಹೆಚ್ಚಿನ ಸಮಯಗಳಲ್ಲಿ ಉಪಹಾರವನ್ನು ಸೇವಿಸುವುದೇ ಇಲ್ಲ. ನಮ್ಮ ದೇಹಕ್ಕೆ ಈ ಆಹಾರದ ಶಕ್ತಿ ಅಗತ್ಯವಿದ್ದರೂ ನಾವು ಆ ಸಮಯದಲ್ಲಿ ಪೂರೈಸುವುದಿಲ್ಲ. ಇದರಿಂದ ಉಂಟಾಗುವ ಅಪಾಯಗಳನ್ನು ನಿಮಗೆ ಊಹಿಸಲೂ ಸಾಧ್ಯವಿಲ್ಲ ಎಂಬುದನ್ನೇ ಇಂದಿಲ್ಲಿ ನಾವು ತಿಳಿಸುತ್ತಿದ್ದೇವೆ. ನೀವು ಸೇವಿಸುವುದು ಕೊಂಚ ಕೊಂಚವೇ ಆದರೂ ಅದನ್ನು ಸಮಯಕ್ಕೆ ಸರಿಯಾಗಿ ಸೇವನೆ ಮಾಡಿ ಎಂದೇ ನಾವು ಸಲಹೆ ನೀಡುತ್ತೇವೆ. ಅದು ಏಕೆ ಇಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.....

ಮಧುಮೇಹ

ಮಧುಮೇಹ

ಉಪಾಹಾರವನ್ನು ತ್ಯಜಿಸುವ ಮಹಿಳೆಯರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಈ ತಿಂಗಳು ಪ್ರಕಟಿಸಿರುವ ನಿಯತಕಾಲಿಕೆಯಲ್ಲಿ ಮಹಿಳೆಯರು ಯಾರು ಉಪಾಹಾರವನ್ನು ತ್ಯಜಿಸುತ್ತಾರೋ, ಅವರಿಗೆ ಸಾಮಾನ್ಯವಾಗಿ ಉಪಾಹಾರವನ್ನು ಸೇವಿಸುವ ಮಹಿಳೆಯರಿಗೆ ಬರುವುದಕ್ಕಿಂತ ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಆರು ಪಟ್ಟು ಹೆಚ್ಚಂತೆ. ಅದರಲ್ಲಿಯೂ ಇವರಿಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚಂತೆ.

ಹೃದ್ರೋಗಗಳು

ಹೃದ್ರೋಗಗಳು

ಬಹುತೇಕ ಗಂಡಸರಿಗೆ ಹೃದ್ರೋಗವು ಉಪಾಹಾರವನ್ನು ತ್ಯಜಿಸುವುದರಿಂದ ಬರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅದರಲ್ಲಿಯು 45 ರಿಂದ 82 ವರ್ಷ ಒಳಗಿನವರಲ್ಲಿ ಈ ಸಾಧ್ಯತೆ ಹೆಚ್ಚು ಎಂದು ಜುಲೈ ಸ್ಟಡಿ ಜರ್ನಲ್ ತಿಳಿಸಿದೆ. ಉಪಾಹಾರವನ್ನು ಯಾರು ತ್ಯಜಿಸುತ್ತಾರೋ, ಅವರಲ್ಲಿ ರಕ್ತದೊತ್ತಡ ಅಧಿಕಗೊಳ್ಳುತ್ತದೆ, ಇನ್ಸುಲಿನ್ ಸ್ಥಿರತೆ ಇರುವುದಿಲ್ಲ ಮತ್ತು ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕಗೊಳ್ಳುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

ನೆನಪಿನ ಶಕ್ತಿ

ನೆನಪಿನ ಶಕ್ತಿ

2005 ಜರ್ನಲ್ ಆಫ್ ದಿ ಅಮೆರಿಕನ್ ಡೈಯೆಟಿಕ್ ಅಸೋಸಿಯೇಶನ್‌ರವರು ಉಪಾಹಾರಕ್ಕೆ ಸಂಬಂಧಿಸಿದಂತೆ 47 ಅಧ್ಯಯನಗಳನ್ನು ಮಾಡಿದ್ದಾರೆ. ಅದರ ಪ್ರಕಾರ ಯಾರು ಉಪಾಹಾರವನ್ನು ಸೇವಿಸುತ್ತಾರೋ, ಅವರಲ್ಲಿ ಸ್ಮರಣೆ ಶಕ್ತಿಗೆ ಸಂಬಂಧಿಸಿದ ಮನೋಜನ್ಯ ಅಂಶಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ. ಸರಳವಾಗಿ ಹೇಳಬೇಕೆಂದರೆ ಉಪಾಹಾರ ಸೇವಿಸುವವರಲ್ಲಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ!

ತೂಕ ಕಳೆದುಕೊಳ್ಳುವಿಕೆ

ತೂಕ ಕಳೆದುಕೊಳ್ಳುವಿಕೆ

ಒಂದು ಕುತೂಹಲಕಾರಿ ವರದಿಯ ಪ್ರಕಾರ ಯಾರು ಉಪಾಹಾರವನ್ನು ತಪ್ಪದೆ ಸೇವಿಸುತ್ತಾರೋ, ಅವರು ಮೂರು ತಿಂಗಳಲ್ಲಿ ಕನಿಷ್ಠ 17.8 ಪೌಂಡ್ ತೂಕವನ್ನು ಇಳಿಸಿಕೊಳ್ಳಬಹುದಂತೆ. ಈ ಅಧ್ಯಯನದಲ್ಲಿ ಉಪಾಹಾರವನ್ನು ತ್ಯಜಿಸಿದವರು ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಅಧಿಕ ಕ್ಯಾಲೋರಿಗಳನ್ನು ಸೇವಿಸಿದ್ದರಂತೆ. ಅವರು ಉಪಾಹಾರವನ್ನು ಸೇವಿಸಿದವರಿಗಿಂತ ಕಡಿಮೆ ತೂಕ ಅಂದರೆ 7.3 ಪೌಂಡ್‌ಗಳನ್ನು ಮಾತ್ರ ಕರಗಿಸಲು ಸಾಧ್ಯವಾಯಿತಂತೆ.

English summary

Scientific Reasons You Should Never Skip Breakfast

Mornings can feel rushed in almost every household, and when the clock is ticking it’s easy to focus only on the absolute necessities. Once backpacks and briefcases are packed and everyone’s out the door, you may just grab a cup of coffee and hit the road. There are compelling reasons to add breakfast to your short list of morning necessities, however; below are the top four.
X
Desktop Bottom Promotion